ದ್ರಾವಿಡ ಸಂಸ್ಕೃತಿ ಉಳಿಸಲು ಮಹಿಷಾ ದಸರಾ ಆಚರಣೆ

Date:

ಡಾ. ಬಿ.ಆರ್. ಅಂಬೇಡ್ಕರ್ ಭೀಮವಾದ ಸೇನೆ (ರಿ) ವತಿಯಿಂದ ನಾಲ್ಕನೇ ವರ್ಷದ ಮಹಿಷಾ ದಸರಾ ಕಾರ್ಯಕ್ರಮವನ್ನು ಭಾನುವಾರದಂದು ಬೆಂಗಳೂರಿನ ಕಮಲಾನಗರದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಚರಿಸಲಾಯಿತು.

- Advertisement -

ಭಾನುವಾರ ಬೆಳಗ್ಗೆ 10.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಮಹಿಷಾಸುರನ ಇತಿಹಾಸ ಮತ್ತು ಆತನ ಆಡಳಿತದ ಕುರಿತು ಮಾತನಾಡಿ, ಮಹಿಷಾ ದಸರಾವನ್ನು ಯಶಸ್ವಿಗೊಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಭೀಮವಾದ ಸೇನೆಯ ರಾಜ್ಯಾಧ್ಯಕ್ಷ ಸಿದ್ದರಾಜು ಎ. ಮಾತನಾಡಿ, ಭಾರತದ ಮೂಲನಿವಾಸಿಗಳು ದ್ರಾವಿಡರು. ದ್ರಾವಿಡ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

Advertisements

ಮಹಿಷಾಸುರನು ಮಹಿಷ ಮಂಡಲದ ಅಧಿಪತಿಯಾಗಿ ಮೈಸೂರನ್ನು ಆಳಿದ ರಾಜನಾಗಿದ್ದು, ಉತ್ತಮ ಆಡಳಿತಗಾರನಾಗಿದ್ದನೆಂಬುದು ನಮ್ಮ ಪರಂಪರೆಯಲ್ಲಿರುವ ನಂಬಿಕೆಯಾಗಿದೆ. ಆದರೆ ಆರ್ಯರ ದಬ್ಬಾಳಿಕೆ ಮತ್ತು ಪ್ರಾಬಲ್ಯದ ಪರಿಣಾಮವಾಗಿ ಮಹಿಷಾಸುರನನ್ನು ರಾಕ್ಷಸನ ರೂಪದಲ್ಲಿ ಬಿಂಬಿಸಿ, ಆತನ ಇತಿಹಾಸವನ್ನು ತಿರುಚುವ ಪ್ರಯತ್ನಗಳು ನಡೆದಿವೆ. ಇಂತಹ ಇತಿಹಾಸದ ಮರುನಿರೂಪಣೆಯ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.

ಮಹಿಷಾಸುರನ ಇತಿಹಾಸವನ್ನು ಕೇವಲ ಧಾರ್ಮಿಕ ದೃಷ್ಟಿಕೋನದಿಂದ ನೋಡದೆ, ಸ್ಥಳೀಯ ಸಂಸ್ಕೃತಿ, ಜನಪದ ಪರಂಪರೆ ಮತ್ತು ದ್ರಾವಿಡ ಅಸ್ಮಿತೆಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕಿದೆ. ನಮ್ಮ ಮೂಲ ಸಂಸ್ಕೃತಿ ಮತ್ತು ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಬೇಕು. ದ್ರಾವಿಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ತಿಳಿಸಿದರು.

ಈ ವಿಶೇಷ ಲೇಖನ ಓದಿದ್ದೀರಾ? ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ, ವಿವೇಕದ ಕಾವಲು ಕಳಚಿದಾಗ…

ಮೈಸೂರು ಭಾಗದ ಕೆಲವು ಸ್ಥಳೀಯ ಜನಪದ ಮತ್ತು ಪರ್ಯಾಯ ಇತಿಹಾಸದ ವ್ಯಾಖ್ಯಾನಗಳಲ್ಲಿ ಮಹಿಷಾಸುರನನ್ನು ಮಹಿಷ ಮಂಡಲದ ರಾಜನಾಗಿ, ಸ್ಥಳೀಯ ಸಮುದಾಯಗಳ ಸಾಂಸ್ಕೃತಿಕ ಸಂಕೇತವಾಗಿ ಸ್ಮರಿಸಲಾಗುತ್ತದೆ. ಮೈಸೂರು ಎಂಬ ಹೆಸರು ಮಹಿಷಾಸುರನ ಹೆಸರಿನಿಂದ ಬಂದಿದೆ ಎಂಬ ಜನಪ್ರಿಯ ಸ್ಥಳೀಯ ಐತಿಹ್ಯವೂ ಇದೆ. ಈ ಹಿನ್ನೆಲೆಯಲ್ಲಿ ಮಹಿಷಾ ದಸರಾವನ್ನು ಆಚರಿಸುವವರು ಮಹಿಷಾಸುರನನ್ನು ತಮ್ಮ ಮೂಲನಿವಾಸಿ ಪರಂಪರೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಸಂಕೇತವಾಗಿ ಸ್ಮರಿಸುತ್ತಾರೆ.

ಈ ವಿಶೇಷ ವರದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್ ಮಾರುಕಟ್ಟೆಯ ಕರಾಮತ್ತು!

ಕಾರ್ಯಕ್ರಮದಲ್ಲಿ ಭೀಮ್ ಜಿ, ಕುಣಿಗಲ್ ರಾಮಚಂದ್ರ, ಶಿವರಾಜ್ ಎಂ., ಮಾಜಿ ಕಾರ್ಪೊರೇಟರ್ ನಟರಾಜ್, ವಕೀಲ ಅಶೋಕ ಎಚ್.ಸಿ., ಆನಂದ್ ಕುಮಾರ್, ಸುರೇಶ್ ಎಚ್‌ಎಎಲ್, ವಿಜಯ್ ಕುಮಾರ್, ಪೊಲೀಸ್ ಇಲಾಖೆಯ ತಿಮ್ಮಯ್ಯ, ಅರೆ ತಿಮ್ಮಯ್ಯ, ಚಿಕ್ಕ ರಾಮು, ಮ್ಯಾಕ್ಸ್ ಮುಲ್ಲರ್ ಶಾಲೆಯ ಜನಾರ್ಧನ್, ಭೀಮ್ ಆರ್ಮಿಯ ಆನಂದ್ ಕುಮಾರ್ ಮತ್ತು ಪ್ರತಾಪ್, ಬಿ.ಸಿ. ರಾಮಣ್ಣ, ರಾಜಗೋಪಾಲನಗರದ ರಾಮಾಂಜಿನಪ್ಪ, ಮಹಿಳಾ ಅಧ್ಯಕ್ಷೆ ಅನಿತಾ, ರಂಗರಾಜು, ರಾಜಗೋಪಾಲ್ ಸೇರಿದಂತೆ ಹಲವು ಗಣ್ಯರು ಹಾಗೂ ಸಂಘಟನೆಯ ಕಾರ್ಯಕರ್ತರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ‘ನವೋನ್ಮೇಶ್ 2026’: ಕೆನರಾ ವಿಕಾಸ್ ಪಿಯು ಕಾಲೇಜಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ

ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ರಾಜ್ಯಮಟ್ಟದ...

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ; 99.32 ಲಕ್ಷ ಹೆಸರುಗಳು ಔಟ್‌!

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಕರ್ನಾಟಕದ ಅಂತಿಮ ಮತದಾರರ...

ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೂಲಕ ಪ್ರಗತಿಶೀಲ ಸಮಾಜ ನಿರ್ಮಾಣಕ್ಕೆ...