ಕೋಲಾರ | ರೈತರ ಅರಣ್ಯ ಭೂಮಿಗೆ ಭೂಮಾಫಿಯಾ ಹೇಳಿಕೆಗೆ ಆರ್.ಶ್ರೀನಿವಾಸನ್ ಖಂಡನೆ

Date:

ಸಾರ್ವಜನಿಕರ ಹಿತ ಕಾಯಬೇಕಾದ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ರೈತರನ್ನು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಅಪರಾಧಿಗಳಂತೆ ಬಿಂಬಿಸಿ ಭೂ ಮಾಫಿಯಾ ಕೈವಾಡವಿದೆ ಅವರನ್ನು ಜೈಲಿಗೆ ಕಳಿಸುವ ಹೇಳಿಕೆಯನ್ನು ಜಿಲ್ಲಾ ಭೂಸಂತ್ರಸ್ತರ ಹೋರಾಟ ಸಮಿತಿ ಹಾಗೂ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಆರ್ ಶ್ರೀನಿವಾಸನ್ ಖಂಡಿಸಿದ್ದಾರೆ

- Advertisement -

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮೊದಲಿನಿಂದಲೂ ತಪ್ಪು ಮಾಹಿತಿಗಳನ್ನು ನೀಡಿಕೊಂಡು ಬಂದಿದ್ದಾರೆ ಇದಕ್ಕೆ ಸಾಕ್ಷಿಯೇ ತಾಲೂಕಿನ ಹುತ್ತೂರು ಹೋಬಳಿ ಕಿರುಅರಣ್ಯ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಅಧಿಸೂಚನೆಯನ್ನು ರದ್ದುಗೊಳಿಸಿ ಸಣ್ಣ ಅರಣ್ಯಗಳಾಗಿ ಪರಿಚಯಿಸಿ ತಾತ್ಕಾಲಿಕ ಅಥವಾ ಮೂರು ವರ್ಷಗಳ ಯೋಜನೆ ಎಂದು ಜಾರಿ ಮಾಡಿದ್ದಾರೆ ಅದರಂತೆ ಅಬ್ಬಣಿ ಕಿರುಅರಣ್ಯ ಪ್ರದೇಶದ ಸರ್ಕಾರಿ ಆದೇಶ ಸಂಖ್ಯೆ ಜಿ 12815ರ ಸಂಖ್ಯೆಯಲ್ಲಿ 1931 ರಂತೆ 619 ಎಕರೆ 01 ಗುಂಟೆ ಗುರ್ತಿಸಿ ಇದು ತಾತ್ಕಾಲಿಕ ಹಾಗೂ ಮೂರು ವರ್ಷ ಮತ್ತು 5 ವರ್ಷಗಳ ಯೋಜನೆಗೆ ಒಳಪಟ್ಟಿರುತ್ತದೆ ಎಂದು ನಮೂದಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಈ ಯೋಜನೆ ಕಾರ್ಯವೈಖರಿಯ ಕುರಿತು ಅಂದಿನ ಜಿಲ್ಲಾಧಿಕಾರಿ ಮುಖ್ಯ ಸಂರಕ್ಷಣಾಧಿಕಾರಿಗಳು ವಾರ್ಷಿಕ ವರದಿ ಸಲ್ಲಿಸಬೇಕಾಗಿತ್ತು ಹಾಗೂ ಕಿರು ಅರಣ್ಯ ನಿಯಮಗಳನ್ನು ಮೈಸೂರು ಗೆಜೆಟ್ ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆರ್ ರಂಗರಾವ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ ಕೋಲಾರ ಜಿಲ್ಲೆಯಲ್ಲಿ ಇದು ಅನುಷ್ಠಾನಗೊಂಡಿರುವುದಿಲ್ಲ ಕಿರು ಅರಣ್ಯಗಳು ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 35 ಅರಣ್ಯ ಕಾಯ್ದೆ 1927 ಅಥವಾ ಹೈದರಾಬಾದ್ ಅರಣ್ಯ ಕಾಯ್ದೆ 1355 ಅಡಿಯಲ್ಲಿ ಸಂರಕ್ಷಿತ ಅರಣ್ಯ ರಕ್ಷಿತಾರಣ್ಯ ರಾಜ್ಯ ಅರಣ್ಯವಾಗಿದೆ ಇದನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸದನದಲ್ಲಿಯೇ ಹೇಳಿದ್ದಾರೆ ಎಂದು ವಿವರಿಸಿದರು

ಕೋಲಾರ ಜಿಲ್ಲೆಯಲ್ಲಿ 1941 ರಂತೆ ಫಾರೆಸ್ಟ್ ಸೆಟಲ್ಮೆಂಟ್ ಅಧಿಕಾರಿಯೊಂದಿಗೆ ಮೈಸೂರು ಜಿಲ್ಲಾಧಿಕಾರಿ ಮುಖ್ಯ ಸಂರಕ್ಷಣಾಧಿಕಾರಿಗಳು ಲ್ಯಾಂಡ್ ರೆಕಾರ್ಡ್ ಮೈಸೂರು ಜಿಲ್ಲಾಧಿಕಾರಿ ಕೋಲಾರ ಜಿಲ್ಲಾಧಿಕಾರಿ ಒಳಗೊಂಡಂತೆ 409 ಎಕರೆ 35 ಗುಂಟೆ ಗೆ ಆದೇಶ ಮಾಡಿ ಸಿ ಸ್ಟೇಟ್ಮೆಂಟ್ ಬಿ ಸ್ಟೇಟ್ಮೆಂಟ್ ಅಳವಡಿಸಿ ಬೌಂಡರಿಗಳು ಮತ್ತು ಚೈನುಗಳ ಲೆಕ್ಕಾಚಾರದಲ್ಲಿ ಆದೇಶಿಸುತ್ತಾರೆ ಅದರಂತೆ ಇಂದಿಗೂ ನೀಲಗಿರಿ ಮರಗಳು ಮತ್ತು ಬಿದಿರಿನ ಮರಗಳು ಅಲ್ಲಿ ಇದೆ ಸಾಕ್ಷಿಯಾಗಿದೆ ಅರಣ್ಯ ಇಲಾಖೆಯ ಅಧಿಕಾರಿಗಳು ನೋಟಿಫಿಕೇಶನ್ ಹೆಸರಿನಲ್ಲಿ ಸರ್ಕಾರವು 2015 ರಲ್ಲಿ ಅರಣ್ಯ ಒತ್ತುವರಿ ಭೂಮಿ ಮೂರು ಎಕರೆಗಿಂತ ಕಡಿಮೆ ಇರುವ ಒತ್ತವರಿದಾರರನ್ನು ಒಕ್ಕಲಿಬ್ಬಿಸಬಾರದು ಎಂದು ಸರ್ಕಾರದ ಕಾರ್ಯದರ್ಶಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಅವರ ಆದೇಶವನ್ನು ಧಿಕ್ಕರಿಸಿ ರೈತರ ಕಂದಾಯ ಭೂಮಿಗಳು 1923ರಲ್ಲಿ ನೀಡಿದಂತಹ ಒಂದು ಎಕರೆ ಎರಡು ಎಕರೆ ಮೂರು ಎಕರೆ ಜಮೀನುಗಳನ್ನು ದ್ವಂಸ ಮಾಡಿದ್ದಾರೆ ಎಂದು ಆರೋಪಿಸಿದರು

ರೈತರ ಬೆಳೆಗಳನ್ನ ನಾಶ ಮಾಡಿ ಅರಣ್ಯ ಇಲಾಖೆಯವರೇ 2022 -23 ರಲ್ಲಿ ಕಾರ್ಯ ಯೋಜನೆ ತಯಾರಿಸಿ ಅದರಂತೆ ಸಂದೀಪ್ ಕುಮಾರ್ ಸರ್ವೆ ಅಧಿಕಾರಿಯ ಕೈಜೋಡಿಸಿಕೊಂಡು ದಿನಾಂಕ 6-9-2024 ತಪ್ಪು ಅಂಕಿ ಅಂಶಗಳೊಂದಿಗೆ ಕಂದಾಯ ಇಲಾಖೆಯ ಯಾರ ಸಹಿಯು ಇಲ್ಲದೆ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಪೊಲೀಸ್ ನೆರವಿನೊಂದಿಗೆ ನೂರಾರು ಜನರು ರಾತ್ರಿ ಮೂರು ನಾಲ್ಕು ಗಂಟೆಯ ಸಮಯದಲ್ಲಿ ಜೆಸಿಬಿಗಳೊಂದಿಗೆ ಜಮೀನುಗಳನ್ನು ನಾಶ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಏಪ್ರಿಲ್ 2025 ರಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಜಂಟಿ ಸರ್ವೆ ನಡೆದೇ ಇಲ್ಲ ಎಂದು ಹಿಂಬರಹ ರೈತರಿಗೆ ನೀಡಿದ್ದಾರೆ ಮೇ.2025 ರಂದು ನಕ್ಷೇ ತಪ್ಪಾಗಿದ್ದು ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ ಜೂನ್ 2025 ರಂದು ರಾಜಸ್ವ ನಿರೀಕ್ಷಕರ ವರದಿಯಂತೆ ದುರಸ್ತಿಯಾದ ಹಿಡುವಳಿ ಜಮೀನುಗಳನ್ನು ನಾಶ ಮಾಡಿದ ಅರಣ್ಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಪರಿಹಾರ ಕಂಡುಕೊಳ್ಳುವಬಹುದೆಂದು ಕೋಲಾರ ತಹಶಿಲ್ದಾರ್ ರವರು ಆದೇಶ ನೀಡಿದ್ದಾರೆ

ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿ 11 ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಕೋಲಾರ ಅರಣ್ಯ ಅಧಿಕಾರಿ ಸರೀನಾ ಸಿಕ್ಕಲಿಗರ್ ಡಿಎಫ್ಓ ಮಹೇಶ್, ಎಸಿಎಫ್ ಪುಷ್ಪಲತಾ, ಆರ್.ಎಫ್.ಓ ಮಂಜುನಾಥ್ ಫಾರೆಸ್ಟ್ ನಾಗೇಂದ್ರ ಫಾರೆಸ್ಟ್ ಗಾರ್ಡ್ ರವರ ವಿರುದ್ಧ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಾ ಕೆ ಧರಣಿ ದೇವಿ ಐಪಿಎಸ್ ಅಧೀಕ್ಷಕರು ಕೇಂದ್ರ ಸ್ಥಾನ ಬೆಂಗಳೂರು ರವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅರಣ್ಯ ಜೀವಶಾಸ್ತ್ರ ಪರಿಸರ ಇಲಾಖೆಗೆ ಹೈಕೋರ್ಟ್ ನ್ಯಾಯಾಲಯ ಹಾಗೂ ಉಸ್ತುವಾರಿ ಸಚಿವರು ಜನಪ್ರತಿನಿಧಿಗಳು ಜಿಲ್ಲಾಡಳಿತ ಜಂಟಿ ಸರ್ವೆ ಮಾಡಿ ನಕ್ಷೇ ತಯಾರಿಸಿ ರೈತರ ಭೂಮಿ ಯಾವುದು ಅರಣ್ಯ ಭೂಮಿ ಯಾವುದು ಎಂಬುದನ್ನು ಗುರುತಿಸಲು ಅದರಂತೆ ಜಂಟಿ ಸರ್ವೆ ನಕ್ಷೆ ಮುಗಿದು ಸಹಿಯಾಗಿದೆ ರೈತರ ಭೂಮಿಗಳು ಅರಣ್ಯ ಭೂಮಿಗಳು ಗೊತ್ತಾಗಿದೆ ಹೀಗಿರುವಾಗ ಇದರಿಂದ ರೊಚ್ಚಿಗೆದ್ದ ಅರಣ್ಯ ಅಧಿಕಾರಿಗಳು 1923 ರಲ್ಲಿ ರೈತರಿಗೆ ಕೊಟ್ಟಂತಹ ಜಮೀನುಗಳನ್ನು ನಾಶಪಡಿಸಿದ್ದಲ್ಲದೆ ರೈತರನ್ನು ತಾಲೂಕು ಭೂಮಾಪನ ಅಧಿಕಾರಿಗಳನ್ನು ಭೂ ಮಾಫಿಯಾ ರಿಯಲ್ ಎಸ್ಟೇಟ್ ಕೇಸು ದಾಖಲಿಸಿ ಜೈಲಿಗೆ ಕಳಿಸುವುದು ಎಂಬ ಬೆದರಿಕೆಗಳು ಕೋಲಾರದಲ್ಲಿ ನಡೆಯುವುದಿಲ್ಲ ದಾಖಲೆಗಳು ಸರಿಯಾಗಿದೆ ರೈತರು ಧೈರ್ಯದಿಂದ ಇದ್ದಾರೆ ಈಗಾಗಲೇ ನಿಮ್ಮಲ್ಲಿಯೇ ಲಂಚ ತೆಗೆದುಕೊಳ್ಳುವವರು ಇದ್ದಾರೆ ಎಂಬುದು ಸಾಬೀತಾಗಿದೆ ಹಾಗೆಯೇ ಮರಗಳನ್ನು ಸಾಗಿಸುವುದನ್ನು ರೈತರೇ ಇಡಿದು ಕೊಟ್ಟಿದ್ದಾರೆ ಅರಣ್ಯವನ್ನು ರಕ್ಷಣೆ ಮಾಡಬೇಕು ಪರಿಸರವನ್ನು ಉಳಿಸಬೇಕು ಒತ್ತುವರಿ ಹೆಸರಿನಲ್ಲಿ ಮೂರು ದಿನಗಳ ಜೆಸಿಬಿಗಳಿಗೆ 41 ಲಕ್ಷ ಖರ್ಚು ಮಾಡಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿದ್ದೀರಾ..? ಗೌರಿಬಿದನೂರು | ಕನ್ನಡ ನಾಟಕ ಅಕಾಡೆಮಿ ವತಿಯಿಂದ ಜಿಲ್ಲಾ ನಾಟಕೋತ್ಸವ ಪ್ರದರ್ಶನ

ಜವಾಬ್ದಾರಿ ಸ್ಥಾನದಲ್ಲಿ ಇರುವ ಅಧಿಕಾರಿ ಈ ರೀತಿ ಹೇಳಿಕೆಗಳು ನೀಡುವುದು ಸಮಂಜಸವಲ್ಲ ಕೋಲಾರ ಜಿಲ್ಲೆಯಲ್ಲಿ ಎಲ್ಲಿಯೂ ಸಹ ಕಿರು ಅರಣ್ಯಗಳು ಇರುವುದಿಲ್ಲ ತಾವುಗಳು ನೋಟಿಫಿಕೇಶನ್ ಹೆಸರಿನಲ್ಲಿ ಯಾವುದೇ ಕಂದಾಯ ಭೂಮಿಗಳನ್ನು ಒತ್ತುವರಿ ಹೆಸರಿನಲ್ಲಿ ತೆರವುಗೊಳಿಸುವ ಆಲೋಚನೆ ಇದ್ದರೆ ತಾವು ಕೈ ಬಿಡಬೇಕೆಂದು ಮತ್ತೊಮ್ಮೆ ಭೂ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ರೈತರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಆರ್.ಶ್ರೀನಿವಾಸನ್ ಎಚ್ಚರಿಕೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಶಾರ್ಜಾದಲ್ಲಿ ಹತ್ಯೆಗೀಡಾದ ಅಲ್ವಿನ್ ಪ್ರಕಾಶ್ ಕುಂದರ್‌ಗೆ ಹುಟ್ಟೂರಿನಲ್ಲಿ ಅಂತಿಮ ನಮನ

ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ನಿಗೂಢವಾಗಿ ಹತ್ಯೆಗೀಡಾದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ...

ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್ 

ಹಾಸನ ಜಿಲ್ಲೆಯ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ‘ಆಸ್ತಿಕತೆ ಮತ್ತು ನಾಸ್ತಿಕತೆ ವೈಯಕ್ತಿಕ ವಿಚಾರವೇ...

ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ: ವಿರೋಧಿಸಿ ಬೃಹತ್ ಪಾದಯಾತ್ರೆ 

ಮಲೆನಾಡಿನ ಜನರ ಪಾಲಿಗೆ 'ಮರಣಶಾಸನ'ವಾಗಿ ಪರಿಣಮಿಸಿರುವ ಅರಣ್ಯ ಕಾಯ್ದೆಗಳಲ್ಲೊಂದಾದ ಕಸ್ತೂರಿ ರಂಗನ್...

ಬಾಗಲಕೋಟೆ | ಸವಿತಾ ಸಮಾಜ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಬಾಗಲಕೋಟೆಯ ಸವಿತಾ ಸಮಾಜ ಹಾಗೂ ಅದರ ಉಪಜಾತಿಗಳಿಗೆ ಸೇರಿದ ನಿರುದ್ಯೋಗಿಗಳು ಮತ್ತು...