‘ಹಾರ್ಮುಜ್ ಜಲಸಂಧಿ ಮುಕ್ತವಾಗದಿದ್ದರೂ ಯುದ್ಧ ಕೊನೆಗೊಳಿಸಲು ಸಿದ್ಧರಿದ್ದಾರೆ ಟ್ರಂಪ್’

Date:

ಹಾರ್ಮುಜ್ ಜಲಸಂಧಿಯು ಬಹುತೇಕ ಮುಚ್ಚಲ್ಪಟ್ಟಿದ್ದರೂ ಸಹ ಇರಾನ್ ವಿರುದ್ಧd ಯುದ್ಧವನ್ನು ಕೊನೆಗೊಳಿಸಲು ತಾವು ಸಿದ್ಧರಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಹಾಯಕರಿಗೆ ತಿಳಿಸಿದ್ದಾರೆ. ಈ ಕುರಿತು ಅಮೆರಿಕದ ಅಧಿಕಾರಿಗಳು ದೃಢೀಕರಿಸಿದ್ದಾರೆ ಎಂದು ‘ದಿ ವಾಲ್‌ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

- Advertisement -

ಇಸ್ರೇಲ್ ಜೊತೆ ಸೇರಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಟ್ರಂಪ್, ಈಗ ಯುದ್ಧವನ್ನು ನಿಲ್ಲಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ತಮ್ಮ ವರ್ಚಸ್ಸಿಗೆ ಧಕ್ಕೆಯಾಗದಂತೆ ಕದನ ವಿರಾಮ ಘೋಷಿಸಲು ಪರದಾಡುತ್ತಿದ್ದಾರೆ. ಆದರೆ, ತಮ್ಮನ್ನು ಮಂಡಿಯೂರಿಸಲು ಬಂದ ಅಮೆರಿಕ-ಇಸ್ರೇಲ್‌ಗಳು ಮಂಡಿಯೂರದೆ, ಈ ಯುದ್ಧಕ್ಕೆ ಅಂತ್ಯವಾಡುವುದಿಲ್ಲವೆಂದು ಇರಾನ್ ಕಠಿಬದ್ಧವಾಗಿ ನಿಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಈವರೆಗೆ ಹಾರ್ಮುಜ್‌ ಜಲಸಂಧಿಯನ್ನು ಮುಕ್ತಸಂಚಾರಕ್ಕೆ ತೆರೆದರೆ, ಯುದ್ಧ ನಿಲ್ಲಿಸುವುದಾಗಿ ಟ್ರಂಪ್ ಹೇಳಿಕೊಂಡಿದ್ದರು. ಟ್ರಂಪ್ ಮತ್ತು ಅವರ ಸಹಾಯಕರು ಹಾರ್ಮುಜ್ ಜಲಸಂಧಿಯನ್ನು ಬಲವಂತವಾಗಿ ಮುಕ್ತಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಅದು ಫಲಿಸಿಲ್ಲ. ಮಾತ್ರವಲ್ಲ, ತಮ್ಮ ಈ ಕಾರ್ಯಾಚರಣೆಯು ತಾವು ಅಂದುಕೊಂಡಿದ್ದ ನಾಲ್ಕರಿಂದ ಆರು ವಾರಗಳ ಕಾಲಮಿತಿಗಿಂತಲೂ ಮೀರಿ ಯುದ್ಧವನ್ನು ವಿಸ್ತರಿಸಬಹುದು ಎಂಬುದೂ ಅವರ ಅಂದಾಜಿಗೆ ಬಂದಿದೆ. ಇದೀಗ, ಹಾರ್ಮುಜ್ ಜಲಸಂಧಿಯನ್ನು ತೆರೆಯದೇ ಇದ್ದರೂ ಯುದ್ಧ ಕೊನೆಗೊಳಿಸುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.

 ಇದರಿಂದಾಗಿ, ಹಾರ್ಮುಜ್ ಜಲಮಾರ್ಗದ ಮೇಲಿನ ಇರಾನ್‌ನ ಬಿಗಿ ಹಿಡಿತವು ಮತ್ತಷ್ಟು ಕಾಲ ಮುಂದುವರಿಯುವ ಸಾಧ್ಯತೆಯಿದೆ.

ಆದಾಗ್ಯೂ, ಕೊನೆಯ ಪ್ರಯತ್ನವಾಗಿ, ಮುಕ್ತ ವ್ಯಾಪಾರವನ್ನು ಪುನರಾರಂಭಿಸಲು ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಟ್ರಂಪ್ ಮತ್ತು ಅವರ ಸಹಾಯಕರು ತೀರ್ಮಾನಿಸಿದ್ದಾರೆ. ಒಂದು ವೇಳೆ, ಈ ರಾಜತಾಂತ್ರಿಕ ಪ್ರಯತ್ನವೂ ವಿಫಲವಾದರೆ, ಜಲಸಂಧಿಯನ್ನು ಮುಕ್ತಗೊಳಿಸುವ ಹೊಣೆಯನ್ನು ಯುರೋಪ್ ಮತ್ತು ಗಲ್ಫ್‌ ಮಿತ್ರರಾಷ್ಟ್ರಗಳು ವಹಿಸಿಕೊಳ್ಳುವಂತೆ ಅಮೆರಿಕ ಒತ್ತಾಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧ್ಯಕ್ಷರು ನಿರ್ಧರಿಸಬಹುದಾದ ಇತರ ಮಿಲಿಟರಿ ಆಯ್ಕೆಗಳೂ ಇವೆ. ಆದರೆ ಅವು ಸದ್ಯಕ್ಕೆ ಅವರ ಮೊದಲ ಆದ್ಯತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಹಿಂದಿ ಹೇರಿಕೆ ಅಷ್ಟೊಂದು ದೊಡ್ಡ ವಿಚಾರವಾ? ಹೌದು, ಬಹಳ ದೊಡ್ಡದು ಏಕೆಂದರೆ…

ಕಳೆದ ಒಂದು ತಿಂಗಳಲ್ಲಿ, ಹಾರ್ಮುಜ್ ಜಲಸಂಧಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಟ್ರಂಪ್ ಸಾರ್ವಜನಿಕವಾಗಿ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಯುದ್ಧದ ಒಟ್ಟಾರೆ ಗುರಿ ಮತ್ತು ಉದ್ದೇಶಗಳ ಬಗ್ಗೆ ಅವರು ನೀಡುತ್ತಿರುವ ಪರಸ್ಪರ ವಿರೋಧಾತ್ಮಕ ಹೇಳಿಕೆಗಳ ಭಾಗವೂ ಆಗಿದೆ. ಒಂದು ನಿರ್ದಿಷ್ಟ ದಿನಾಂಕದೊಳಗೆ ಜಲಮಾರ್ಗವನ್ನು ಪುನಃ ಮುಕ್ತಗೊಳಿಸದಿದ್ದರೆ ನಾಗರಿಕ ಇಂಧನ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಟ್ರಂಪ್ ಕೆಲವೊಮ್ಮೆ ಬೆದರಿಕೆ ಹಾಕಿದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ, ಅಮೆರಿಕಕ್ಕೆ ಈ ಜಲಸಂಧಿಯ ಅಗತ್ಯತೆ ಅಷ್ಟೇನೂ ಇಲ್ಲವೆಂದು ಬಿಂಬಿಸಲು ಯತ್ನಿಸಿದ್ದಾರೆ. ಜೊತೆಗೆ, ಜಲಸಂಧಿಯನ್ನು ಮುಕ್ತಗೊಳಿಸುವುದು ಇತರ ರಾಷ್ಟ್ರಗಳು ಪರಿಹರಿಸಬೇಕಾದ ಸಮಸ್ಯೆ ಎಂಬ ಹೇಳಿಕೆಗಳನ್ನೂ ನೀಡಿದ್ದಾರೆ.

ಜಲಸಂಧಿಯು ಎಷ್ಟು ಹೆಚ್ಚು ಕಾಲ ಮುಚ್ಚಿರುತ್ತದೆಯೋ, ಅಷ್ಟು ಹೆಚ್ಚು ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಇಂಧನ ಮತ್ತು ಅನಿಲ ದರಗಳೂ ಹೆಚ್ಚಾಗಲಿವೆ. ಹಾರ್ಮುಜ್ ಜಲಸಂಧಿ ನಿರ್ಬಂಧದಿಂದ ಇಂಧನ ಪೂರೈಕೆಯ ಕುಸಿತ ಕಂಡಿದ್ದು, ಅಮೆರಿಕದ ಮಿತ್ರರಾಷ್ಟ್ರಗಳು ಸೇರಿದಂತೆ ಹಲವಾರು ದೇಶಗಳು ಕಂಗಾಲಾಗಿವೆ. ಆಹಾರ ಬೆಳೆಯಲು ಬೇಕಾದ ರಸಗೊಬ್ಬರ ಅಥವಾ ಕಂಪ್ಯೂಟರ್ ಚಿಪ್‌ಗಳನ್ನು ತಯಾರಿಸಲು ಅಗತ್ಯವಿರುವ ಹೀಲಿಯಂನಂತಹ ವಸ್ತುಗಳ ಮೇಲೆ ಅವಲಂಬಿತವಾಗಿರುವ ಕೈಗಾರಿಕೆಗಳು ಕೂಡ ಬಳಲುತ್ತಿವೆ. ಸುರಕ್ಷಿತ ಸಂಚಾರ ಮಾರ್ಗಗಳು ಶೀಘ್ರವಾಗಿ ಪುನರಾರಂಭವಾಗದಿದ್ದರೆ, ಅಮೆರಿಕ ಮತ್ತು ಅದರ ಪಾಲುದಾರರು ಮಾತುಕತೆಯ ಮೂಲಕ ಒಪ್ಪಂದ ಮಾಡಿಕೊಳ್ಳುವವರೆಗೆ ಬಿಕ್ಕಟ್ಟು ಮುಂದುವರೆಯಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ವಾಷಿಂಗ್ಟನ್‌ನ ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಶನ್‌ನ ಉಪಾಧ್ಯಕ್ಷೆ, ಇರಾನ್ ತಜ್ಞೆ ಸುಸೇನ್ ಮಲೋನಿ ಹೇಳುವಂತೆ; “ಜಲಸಂಧಿಯನ್ನು ಮುಕ್ತಗೊಳಿಸುವ ಮೊದಲೇ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವುದು ನಂಬಲಾಗದಷ್ಟು ಬೇಜವಾಬ್ದಾರಿತನ. ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧವನ್ನು ಒಟ್ಟಾಗಿ ಪ್ರಾರಂಭಿಸಿವೆ. ಯುದ್ಧದ ಪರಿಣಾಮಗಳಿಂದ ಈಗ ಅವರು ಹಿಂದೆ ಸರಿಯಲು ಸಾಧ್ಯವಿಲ್ಲ. ಈಗಾಗಲೇ ಸಂಭವಿಸುತ್ತಿರುವ ಆರ್ಥಿಕ ಹಾನಿಯಿಂದ ಅಮೆರಿಕವನ್ನು ಪ್ರತ್ಯೇಕಿಸಲು ಸಾಧ್ಯವೇ ಇಲ್ಲ. ಜಲಸಂಧಿಯ ಮುಚ್ಚುವಿಕೆ ಮುಂದುವರಿದರೆ ಈ ಹಾನಿಯು ಇನ್ನೂ ಹತ್ತು ಪಟ್ಟು ಕೆಟ್ಟದಾಗಲಿದೆ” ಎಂದು ಎಚ್ಚರಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಿವಮೊಗ್ಗ | ರಂಗದಸರಾ ಪ್ರಯುಕ್ತ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ಕಾರ್ಯಕ್ರಮ

ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ-2026ರ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ 15...

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...