10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

Date:

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು ಹ್ಯಾಕ್ ಮಾಡಲು ಬಳಸಲಾಗಿದ್ದ ಕೃತಕ ಬುದ್ಧಿಮತ್ತೆ (AI) ಆಧಾರಿತ ಅತ್ಯಾಧುನಿಕ ಚಾಟ್‌ಬಾಟ್ ಒಂದನ್ನು ಮೈಕ್ರೋಸಾಫ್ಟ್ ಸಂಸ್ಥೆ ಯಶಸ್ವಿಯಾಗಿ ಸ್ಥಗಿತಗೊಳಿಸಿದೆ. ಕೇವಲ ಕೆಲವೇ ತಿಂಗಳುಗಳಲ್ಲಿ ಸೈಬರ್ ವಂಚಕರು ಈ ಪ್ಲಾಟ್‌ಫಾರ್ಮ್ ಬಳಸಿ ಬಹುದೊಡ್ಡ ಮಟ್ಟದ ವಂಚನೆಗೆ ಯತ್ನಿಸಿದ್ದರು ಎಂದು ಸಂಸ್ಥೆ ತಿಳಿಸಿದೆ.

- Advertisement -

ಏನಿದು ‘ಈವಿಲ್ ಟೋಕನ್ಸ್’?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

‘ಈವಿಲ್ ಟೋಕನ್ಸ್’ (EvilTokens) ಎಂಬ ಹೆಸರಿನ ಈ ವಂಚಕ ವೇದಿಕೆಯು ಕಳೆದ ಫೆಬ್ರವರಿಯಲ್ಲಿ ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಕಾಣಿಸಿಕೊಂಡಿತ್ತು. ಇದು ಚಂದಾದಾರಿಕೆ ಆಧಾರಿತ ಸೇವೆಯಾಗಿದ್ದು, ಗ್ರಾಹಕರಿಂದ (ಸೈಬರ್ ಅಪರಾಧಿಗಳಿಂದ) ಆರಂಭಿಕವಾಗಿ 1,500 ಡಾಲರ್ (ಸುಮಾರು 1.25 ಲಕ್ಷ ರೂ.) ಮತ್ತು ಆ ಬಳಿಕ ಪ್ರತಿ ತಿಂಗಳು 500 ಡಾಲರ್ ಶುಲ್ಕವನ್ನು ಪಡೆಯುತ್ತಿತ್ತು.

​ಬಳಕೆದಾರರ ಇ-ಮೇಲ್ ಖಾತೆಗಳನ್ನು ಸುಲಭವಾಗಿ ಮತ್ತು ದೊಡ್ಡ ಮಟ್ಟದಲ್ಲಿ ಹ್ಯಾಕ್ ಮಾಡಲು ಬೇಕಾದ ಸಂಪೂರ್ಣ ಸೌಲಭ್ಯಗಳನ್ನು ಇದು ಒದಗಿಸುತ್ತಿತ್ತು. ಒಮ್ಮೆ ಖಾತೆಗಳಿಗೆ ಕನ್ನ ಹಾಕಿದ ನಂತರ, ಸಂತ್ರಸ್ತರ ಇನ್‌ಬಾಕ್ಸ್‌ನಲ್ಲಿರುವ ಮಾಹಿತಿಯನ್ನು ಈ ‘ಎಐ’ ತಂತ್ರಜ್ಞಾನವು ವಿಶ್ಲೇಷಿಸುತ್ತಿತ್ತು. ಬಳಿಕ, ಯಾರನ್ನು ಗುರಿಯಾಗಿಸಬೇಕು, ಹಣ ಲೂಟಿ ಮಾಡಲು ಯಾರ ಹೆಸರಿನಲ್ಲಿ ಮತ್ತು ಯಾವ ರೀತಿಯ ಇ-ಮೇಲ್ ಕಳುಹಿಸಬೇಕು ಎಂಬ ಸಂಪೂರ್ಣ ತಂತ್ರವನ್ನು ಅದೇ ರೂಪಿಸಿಕೊಡುತ್ತಿತ್ತು.

Advertisements

ಭಾರತ ಸೇರಿ ಹಲವು ದೇಶಗಳಲ್ಲಿ ವಂಚನೆ ಜಾಲ:

ಭಾರತ, ಅಮೆರಿಕ, ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಹಾಗೂ ಫ್ರಾನ್ಸ್ ದೇಶಗಳಲ್ಲಿ ಈ ವಂಚನೆಯ ಜಾಲ ಅತಿ ಹೆಚ್ಚು ಸಕ್ರಿಯವಾಗಿತ್ತು ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ಆರ್ಥಿಕ ಸೇವೆಗಳು, ರಿಯಲ್ ಎಸ್ಟೇಟ್, ಉನ್ನತ ಶಿಕ್ಷಣ, ಆರೋಗ್ಯ ಮತ್ತು ನಿರ್ಮಾಣ ವಲಯ ಸೇರಿದಂತೆ ಹಲವು ವಲಯಗಳ ಸಂಸ್ಥೆಗಳು ಈ ಹ್ಯಾಕಿಂಗ್‌ಗೆ ತುತ್ತಾಗಿವೆ.

​ಸೈಬರ್ ಭದ್ರತಾ ಪಾಲುದಾರರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಮೈಕ್ರೋಸಾಫ್ಟ್, ಈ ಸೇವೆಗೆ ಬಳಸುತ್ತಿದ್ದ 50 ವೆಬ್‌ಸೈಟ್‌ಗಳನ್ನು ವಶಪಡಿಸಿಕೊಂಡಿದೆ ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದ 150ಕ್ಕೂ ಹೆಚ್ಚು ಡೊಮೇನ್‌ಗಳನ್ನು ನಿಷ್ಕ್ರಿಯಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್‌ನ ಮೆಟ್ರೋಪಾಲಿಟನ್ ಪೊಲೀಸರ ಸೈಬರ್ ಕ್ರೈಂ ತಂಡ ಇಬ್ಬರು ಶಂಕಿತರನ್ನು ಬಂಧಿಸಿದೆ.

ವಂಚನೆ ನಡೆಯುತ್ತಿದ್ದುದು ಹೇಗೆ?

ಈ ಹ್ಯಾಕಿಂಗ್ ಜಾಲದ ಪ್ರಮುಖ ಅಸ್ತ್ರವೇ ಎಐ (AI) ಚಾಟ್‌ಬಾಟ್ ಆಗಿತ್ತು. ಇದು ಸಂತ್ರಸ್ತರ ಇನ್‌ಬಾಕ್ಸ್ ಅನ್ನು ವಿಶ್ಲೇಷಿಸಿ, ಅವರ ಆರ್ಥಿಕ ವ್ಯವಹಾರಗಳ ಜವಾಬ್ದಾರಿಗಳು, ಪಾವತಿ ಅನುಮೋದಿಸುವ ಅಧಿಕಾರಿಗಳು ಮತ್ತು ನಂಬಿಕಸ್ಥರ ಮಾಹಿತಿಯನ್ನು ಕಲೆಹಾಕುತ್ತಿತ್ತು. ನಂತರ, ಆ ನಂಬಿಕಸ್ಥರಂತೆಯೇ (ಉದಾಹರಣೆಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು) ಸಂದೇಶಗಳನ್ನು ನಿರ್ಮಿಸಿ, ಹಣ ವರ್ಗಾವಣೆ ಮಾಡುವಂತೆ ನೌಕರರನ್ನು ವಂಚಿಸುತ್ತಿತ್ತು.

​ಇದಕ್ಕಾಗಿ ಹ್ಯಾಕರ್‌ಗಳು ‘ಡಿವೈಸ್ ಕೋಡ್ ಅಥೆಂಟಿಕೇಶನ್’ (Device code authentication – ಸ್ಮಾರ್ಟ್‌ಟಿವಿಗಳಂತಹ ಸಾಧನಗಳಿಗೆ ಲಾಗಿನ್ ಆಗಲು ಬಳಸುವ ವಿಧಾನ) ಎಂಬ ಮೈಕ್ರೋಸಾಫ್ಟ್‌ನ ಅಧಿಕೃತ ಲಾಗಿನ್ ಪ್ರಕ್ರಿಯೆಯನ್ನೇ ದುರ್ಬಳಕೆ ಮಾಡಿಕೊಂಡಿದ್ದರು. ಸೈಬರ್ ವಂಚಕರು ಕಳುಹಿಸುತ್ತಿದ್ದ ನಕಲಿ ಇ-ಮೇಲ್ (Spam) ಲಿಂಕ್‌ಗಳನ್ನು ಕ್ಲಿಕ್ ಮಾಡಿದಾಗ, ಹಿನ್ನೆಲೆಯಲ್ಲಿ ಸ್ಕ್ರಿಪ್ಟ್ ಒಂದು ರನ್ ಆಗಿ ಹ್ಯಾಕರ್‌ಗಳ ಸಾಧನದ ‘ಡಿವೈಸ್ ಕೋಡ್’ ಸೃಷ್ಟಿಯಾಗುತ್ತಿತ್ತು.

​ಸಂತ್ರಸ್ತರು ಆ ಕೋಡ್ ಅನ್ನು ಮೈಕ್ರೋಸಾಫ್ಟ್‌ನ ಅಧಿಕೃತ ಲಾಗಿನ್ ಪೋರ್ಟಲ್‌ನಲ್ಲಿ ನಮೂದಿಸಿದ ತಕ್ಷಣ ಅವರ ಖಾತೆಯ ಸಂಪೂರ್ಣ ನಿಯಂತ್ರಣ ಹ್ಯಾಕರ್‌ಗಳ ಕೈ ಸೇರುತ್ತಿತ್ತು. ಇದು ಅತ್ಯಂತ ಸಂಕೀರ್ಣವಾದ ತಂತ್ರಜ್ಞಾನವಾಗಿದ್ದು, ಸಾಂಪ್ರದಾಯಿಕ ಭದ್ರತಾ ವ್ಯವಸ್ಥೆಗಳ ಕಣ್ತಪ್ಪಿಸಿ ವಂಚನೆ ಎಸಗಲು ‘ಎಐ’ ಬಳಕೆಯಾದ ಮಹತ್ವದ ಮತ್ತು ಆತಂಕಕಾರಿ ಪ್ರಕರಣ ಇದಾಗಿದೆ ಎಂದು ಮೈಕ್ರೋಸಾಫ್ಟ್ ವಿವರಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶ ಚುನಾವಣೆ: ಬಿಜೆಪಿಯಿಂದ ₹529 ಕೋಟಿ ವೆಚ್ಚ, ಬಂಗಾಳದಲ್ಲೇ ಶೇ.54ರಷ್ಟು ಖರ್ಚು!

ಕಳೆದ ಚುನಾವಣಾ ಚಕ್ರದಲ್ಲಿ ನಡೆದ ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ...

ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ನಾಳೆ ʼಕಲಬುರಗಿ ಚಲೋʼ

ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಸೆ.27ರಂದು ಕಲಬುರಗಿಯಲ್ಲಿ...

ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ದುರಂತ: ಸ್ಲೀಪರ್ ಬಸ್‌ಗೆ ಬೆಂಕಿ ಬಿದ್ದು 9 ಮಂದಿ ಸಜೀವ ದಹನ

ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಒಂದಕ್ಕೆ ದಿಢೀರ್ ಬೆಂಕಿ ಹೊತ್ತಿಕೊಂಡ ಪರಿಣಾಮ...

ಬೀದರ್‌ | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ದಲಿತರ ಯುವಕರ ಮೇಲೆ ಹಲ್ಲೆ, 8 ಜನರ ವಿರುದ್ಧ ಎಫ್‌ಐಆರ್

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ನಡೆದ ಗಲಾಟೆಯಲ್ಲಿ ಮೇಲ್ಜಾತಿ ಯುವಕರು ದಲಿತರ ಸಮುದಾಯದವರ...