ಪೆರು | ಚಿನ್ನದ ಗಣಿಯಲ್ಲಿ ಅಗ್ನಿ ದುರಂತ; 27 ಮಂದಿ ಸಾವು

Date:

  • ಪೆರು ದೇಶದ ಎಸ್ಪೆರಾಂಜಾ ಚಿನ್ನದ ಗಣಿಯಲ್ಲಿ ಬೆಂಕಿ ಅನಾಹುತ
  • 2000ದಿಂದೀಚೆಗೆ ಅತ್ಯಂತ ಭೀಕರ ಗಣಿ ದುರಂತ ಎಂದು ವರದಿ

ಪೆರು ದೇಶದ ದಕ್ಷಿಣ ಭಾಗದ ಚಿನ್ನದ ಗಣಿಯಲ್ಲಿ ಭಾನುವಾರ (ಮೇ 7) ಭಾರೀ ಅಗ್ನಿ ದುರಂತ ಸಂಭವಿಸಿದೆ. ಪರಿಣಾಮ 27 ಕಾರ್ಮಿಕರು ಮೃತಪಟ್ಟಿದ್ದಾರೆ

ಯಾನಾಕ್ವಿಹುವಾ ಜಿಲ್ಲೆಯ ಕಾಂಡೆಸುಯೋಸ್ ಪ್ರಾಂತ್ಯದ ಚಿನ್ನದ ಗಣಿಯಲ್ಲಿ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಈ ಘಟನೆಯು ದಕ್ಷಿಣ ಅಮೆರಿಕ ದೇಶದಲ್ಲಿ 2000 ಇಸವಿಯ ನಂತರ ನಡೆದ ಅತ್ಯಂತ ಭೀಕರ ಗಣಿ ಅಪಘಾತ ಎಂದು ಪೆರು ದೇಶದ ಇಂಧನ ಮತ್ತು ಗಣಿ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅರೆಕ್ವಿಪಾ ಪ್ರದೇಶದ ಲಾ ಎಸ್ಪೆರಾಂಜಾ ಗಣಿಯಲ್ಲಿರುವ ಸುರಂಗದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಯಾಂಕ್ವಿಹುವಾ ಕಂಪನಿ ಈ ಚಿನ್ನದ ಗಣಿ ನಿರ್ವಹಿಸುತ್ತಿದೆ. ಸದ್ಯ ಈ ಘಟನೆಗೆ ಸಂಬಂಧಿಸಿ ಕಂಪನಿಯು ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಥಳೀಯ ಪ್ರಾಸಿಕ್ಯೂಟರ್ ಜಿಯೋವಾನಿ ಮ್ಯಾಟೋಸ್ ಸ್ಥಳೀಯ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದಾರೆ.

ಸಂತ್ರಸ್ತರ ಶವಗಳನ್ನು ಹೊರತೆಗೆಯುವ ಮೊದಲು ರಕ್ಷಣಾ ತಂಡಗಳು ಗಣಿ ಭದ್ರತೆಗೆ ಪ್ರಯತ್ನಿಸುತ್ತಿವೆ. ಘಟನೆಯಲ್ಲಿ ಮೃತಪಟ್ಟವರನ್ನು ಗುರುತಿಸುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ದುರಂತದಲ್ಲಿ ಬದುಕುಳಿದವರ ಬಗ್ಗೆ ಮಾಹಿತಿ ಇನ್ನೂ ದೊರೆತಿಲ್ಲ. ಗಣಿಯಲ್ಲಿ ಬೆಂಕಿ ದುರಂತ ಸಂಭವಿಸಿದಾಗ ಎಷ್ಟು ಮಂದಿ ಕಾರ್ಮಿಕರಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚಿನ ಗಣಿ ಕಾರ್ಮಿಕರು ಉಸಿರುಗಟ್ಟುವಿಕೆ ಮತ್ತು ಸುಟ್ಟಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಯಾನಾಕ್ವಿಹುವಾ ಮೇಯರ್ ಜೇಮ್ಸ್ ಕ್ಯಾಸ್ಕ್ವಿನೊ ಆಂಡಿನಾ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಅಬುಧಾಬಿ | ಗಂಟೆಗೆ 120 ಕಿಲೋಮೀಟರ್ ಕಡಿಮೆ ವೇಗದಲ್ಲಿ ಸಂಚರಿಸಿದರೆ ಭಾರಿ ದಂಡ!

ಪೆರು ವಿಶ್ವದ ಅಗ್ರ ಹಾಗೂ ಎರಡನೇ ಅತಿದೊಡ್ಡ ತಾಮ್ರ ಉತ್ಪಾದಿಸುವ ದೇಶ, ಪ್ರಕಾರ, ಇಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಅಪಘಾತಗಳು ನಡೆಯುತ್ತಲೇ ಇರುತ್ತವೆ.

ಕಳೆದ ವರ್ಷ ದೇಶಾದ್ಯಂತ ಸುಮಾರು 38 ಮಂದಿ ಸಾವನ್ನಪ್ಪಿದ್ದರು. 2002ರಲ್ಲಿ, ಪೆರುವಿನಲ್ಲಿ ವಿವಿಧ ಗಣಿಗಾರಿಕೆ ಅಪಘಾತಗಳಲ್ಲಿ ಸುಮಾರು 73 ಜನರು ಸಾವನ್ನಪ್ಪಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ | ಚುನಾವಣೆಯಿಂದ ಹಿಂದೆ ಸರಿಯಿರಿ; ಜೋ ಬೈಡನ್‌ಗೆ ಒಬಾಮಾ ಸೇರಿ ಪ್ರಮುಖ ನಾಯಕರ ಒತ್ತಾಯ

ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ...

ಬಾಂಗ್ಲಾದೇಶ | ಹಿಂಸಾಚಾರಕ್ಕೆ ತಿರುಗಿದ ಮೀಸಲಾತಿ ವಿರೋಧಿ ಪ್ರತಿಭಟನೆ; 32 ಸಾವು

ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಗುರುವಾರ ಢಾಕಾ...

ಚೀನಾ | ಶಾಪಿಂಗ್ ಸೆಂಟರ್‌ನಲ್ಲಿ ಬೆಂಕಿ ಅವಘಡ; 14 ಮಂದಿ ಸಾವು

ಚೀನಾದ ನೈಋತ್ಯ ಭಾಗದಲ್ಲಿರುವ ಸಿಚುವಾನ್ ಪ್ರಾಂತ್ಯದ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಬುಧವಾರ ಸಂಜೆ...

ಟ್ರಂಪ್ ದಾಳಿಕೋರನಿಗೆ ಅಪರಾಧ ಹಿನ್ನೆಲೆಯಿಲ್ಲ; ಸದಾ ಏಕಾಂಗಿ, ಮೌನಿಯಾಗಿರುತ್ತಿದ್ದ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ದಾಳಿ ಮಾಡಿ ಭದ್ರತಾ...