ಅಮೆರಿಕದಿಂದ ಭಾರತಕ್ಕೆ ನೌಕಾ ರೈಲು ಮಾರ್ಗದ ಚರ್ಚಿಸಿದ ಅಜಿತ್‌ ದೋವಲ್‌

Date:

  • ಅಮೆರಿಕ, ಸೌದಿ ಅರೆಬಿಯ, ಅರಬ್ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಅಜಿತ್‌ ದೋವಲ್‌ ಚರ್ಚೆ
  • ಅಮೆರಿಕದಿಂದ ಪಶ್ಚಿಮ ಏಷ್ಯಾ ಮೂಲಕ ದಕ್ಷಿಣ ಏಷ್ಯಾಗೆ ಜಲ ರೈಲು ಮಾರ್ಗ ಸಂಪರ್ಕ ನಿರ್ಮಾಣ

ಸೌದಿ ಅರೆಬಿಯ ಪ್ರವಾಸದಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಗಿರುವ ಅಜಿತ್‌ ದೋವಲ್‌ ಅವರು ಪ್ರಮುಖ ದೇಶಗಳ ಭದ್ರತಾ ಸಲಹೆಗಾರರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

ಈ ವೇಳೆ ದೋವಲ್‌ ಅವರು ಭಾನುವಾರ (ಮೇ 7) ಅಮೆರಿಕ, ಸೌದಿ ಅರೆಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು. ಅಜಿತ್‌ ದೋವಲ್‌ ಅವರನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲ್ಲಿವನ್ ಅವರು ಈ ತಿಂಗಳ ಅಂತ್ಯದಲ್ಲಿ ಆಸ್ಟ್ರೇಲಿಯ ಕ್ವಾಡ್ ಶೃಂಗಸಭೆಯಲ್ಲಿ ಮತ್ತೊಮ್ಮೆ ಭೇಟಿಯಾಗಲಿದ್ದಾರೆ.

ಜನವರಿಯಲ್ಲಿ ಮಹತ್ವಾಕಾಂಕ್ಷೆಯ ಭಾರತ ಅಮೆರಿಕ ಐಸಿಇಟಿ (ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜಿ) ಸಂವಾದವನ್ನು ಪ್ರಾರಂಭಿಸಿದ ನಂತರ ದೋವಲ್ ಮತ್ತು ಸುಲ್ಲಿವಾನ್ ನಡುವಿನ ಮೊದಲ ಸಭೆ ಇದಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಜಿತ್ ದೋವಲ್‌ ಅವರು ಜ್ಯಾಕ್ ಸುಲ್ಲಿವಾನ್, ಸೌದಿ ಪ್ರಧಾನಿ ರಾಜಕುವರ ಮೊಹಮ್ಮದ್ ಬಿನ್ ಸಲ್ಮಾನ್, ಯುಎಇ ರಾಷ್ಟ್ರೀಯ ಭದ್ರತಾ ಸಲಹೆಗಾರ ಶೇಖ್ ತಹ್ನೂನ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭಾನುವಾರ ಸೌದಿ ಅರೆಬಿಯದಲ್ಲಿ ಭೇಟಿಯಾದರು.

ಈ ವೇಳೆ ಪಶ್ಚಿಮ ಏಷ್ಯಾ ರಾಷ್ಟ್ರಗಳ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಸಮುದ್ರ ಮಾರ್ಗಗಳ ಮೂಲಕ ರೈಲು ಸಂಪರ್ಕ ಕಲ್ಪಿಸುವ ಅಮೆರಿಕ ಪ್ರಸ್ತಾಪದ ಕುರಿತು ಚರ್ಚಿಸಲಾಯಿತು ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಜಿತ್ ದೋವಲ್‌ ಅವರೊಂದಿಗೆ ಪ್ರಾದೇಶಿಕ ವಿಷಯಗಳ ಕುರಿತು ಚರ್ಚಿಸಲು ಶೇಖ್ ತಹ್ನೂನ್ ಮತ್ತು ಸುಲ್ಲಿವಾನ್ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಕ್ರಿಯವಾಗಿರುವ ಚೀನಾ ನೌಕಾಪಡೆ ಮೇಲೆ ನಿಗಾ

ಅಜಿತ್‌ ದೋವಲ್ ಹಾಗೂ ಇತರ ಮೂವರು ನಿಯಮಿತ ಸಮಾಲೋಚನೆಗಳನ್ನು ನಡೆಸಲು ಸಮ್ಮತಿಸಿದ್ದಾರೆ.

ಉಭಯ ದೇಶಗಳು ಪರಸ್ಪರ ಸಹಾಯ ನೀಡಲು ಬದ್ಧರಾಗಿರಬೇಕು. ಯಾವುದೇ ಸಮಸ್ಯೆಗೆ ಸ್ಪಂದಿಸಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್ ಮೇಲೆ ಶೀಘ್ರ ಇರಾನ್ ದಾಳಿ ಸಾಧ್ಯತೆ: ಬೈಡನ್ ಎಚ್ಚರಿಕೆ

ಸಿರಿಯಾದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಇರಾನ್ ಶೀಘ್ರವೇ ಇಸ್ರೇಲ್ ಮೇಲೆ ದಾಳಿ...

ವಂಚನೆ ಪ್ರಕರಣದಲ್ಲಿ ವಿಯೆಟ್ನಾಂ ಶತ ಕೋಟ್ಯಾಧೀಶೆಗೆ ಮರಣ ದಂಡನೆ

ದೇಶದ ಅತೀ ದೊಡ್ಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಯೆಟ್ನಾಂ ನ ರಿಯಲ್‌...

ಇಂಗ್ಲೆಂಡ್‌ನಲ್ಲಿ 12 ಮಂದಿ ಭಾರತೀಯರ ಬಂಧನ

ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 11 ಮಂದಿ ಪುರುಷರು ಮತ್ತು...

‘ಹಿಗ್ಸ್ ಬೋಸಾನ್’ ಕಂಡುಹಿಡಿದ ಭೌತಶಾಸ್ತ್ರಜ್ಞ ಪೀಟರ್ ಹಿಗ್ಸ್ ನಿಧನ

ಹಿಗ್ಸ್ ಬೋಸಾನ್ ಎಂದು ಕರೆಯಲ್ಪಡುವ ಸೃಷ್ಟಿಯ ಮೂಲ ಧಾತು (ಗಾಡ್ ಪಾರ್ಟಿಕಲ್...