ಢಾಕಾ ಕರಾಳ ದಿನ | ಪತ್ರಿಕಾ ಕಚೇರಿಗೆ ಬೆಂಕಿ: 35 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಗಿತಗೊಂಡ ‘ದಿ ಡೈಲಿ ಸ್ಟಾರ್’

Date:

35 ವರ್ಷಗಳ ಹಿಂದೆ ಪ್ರಕಟಣೆ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ, ಬಾಂಗ್ಲಾದೇಶದ ಇಂಗ್ಲಿಷ್ ಭಾಷಾ ದಿನಪತ್ರಿಕೆ ‘ದಿ ಡೈಲಿ ಸ್ಟಾರ್’ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಶನಿವಾರ, ಓದುಗರ ಕೈ ಸೇರಬೇಕಿದ್ದ ಪತ್ರಿಕೆಯ ಮುದ್ರಣ ಆವೃತ್ತಿ ಪ್ರಕಟವಾಗಿಲ್ಲ.

- Advertisement -

ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಗಲಭೆಯಲ್ಲಿ ತೊಡಗಿರುವ ಪ್ರತಿಭಟನಾಕಾರರು ಢಾಕಾದಲ್ಲಿರುವ ‘ದಿ ಡೈಲಿ ಸ್ಟಾರ್’ ಕಚೇರಿಯಿದ್ದ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಅದೇ ಕಟ್ಟಡದಲ್ಲಿ ಬಂಗಾಳಿ ದಿನಪತ್ರಿಕೆ ‘ಪ್ರೋಥೋಮ್ ಅಲೋ’ ಕೂಡ ಇತ್ತು. ಎರಡೂ ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸಿದ ದಾಳಿಕೋರರು ಇಡೀ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಎರಡೂ ಪತ್ರಿಕೆಗಳ ಕಚೇರಿಗಳಿಗೆ ಹಾನಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ದಿ ಡೈಲಿ ಸ್ಟಾರ್ ಪತ್ರಿಕೆಯು, ‘ಸ್ವತಂತ್ರ ಪತ್ರಿಕೋದ್ಯಮಕ್ಕೆ ಕರಾಳ ದಿನ’ ಎಂಬ ಶೀರ್ಷಿಕೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ. “ಇದು ಕೇವಲ ಎರಡು ಪತ್ರಿಕೆಗಳ ಮೇಲಿನ ದಾಳಿಯಲ್ಲ. ಇದು ಸ್ವತಂತ್ರ ಪತ್ರಿಕೋದ್ಯಮ, ವಾಕ್ ಸ್ವಾತಂತ್ರ್ಯ ಹಾಗೂ ಖಾಸಗಿ ಆಸ್ತಿಯ ಹಕ್ಕಿನ ಮೇಲಿನ ದಾಳಿಯಾಗಿದೆ. ಇದನ್ನು ಹಗುರವಾಗಿ ಪರಿಗಣಿಸಬಾರದು” ಎಂದು ಹೇಳಿದೆ.

dhaka

 “ನಮ್ಮ ಕಾರ್ಯಾಚರಣೆಯನ್ನು ಅಡ್ಡಿಪಡಿಸುವ ಹಿಂದಿನ ಬೆದರಿಕೆಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ಸುದ್ದಿ ಮಾಧ್ಯಮಗಳ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ಸರ್ಕಾರವು ನಿರ್ಲಕ್ಷ್ಯ ಮನೋಭಾವ ಹೊಂದಿದೆ. ದಿ ಡೈಲಿ ಸ್ಟಾರ್ ಮತ್ತು ಪ್ರೋಥೋಮ್ ಅಲೋ ಎರಡೂ ಪತ್ರಿಕೆಗಳು ವಿವಿಧ ಸಂದರ್ಭಗಳಲ್ಲಿ ಪದೇ ಪದೇ ಬೆದರಿಕೆಗಳನ್ನು ಎದುರಿಸಿವೆ. ಆದರೆ, ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ ಅಥವಾ ತನಿಖೆ ಮಾಡಲಾಗಿಲ್ಲ” ಎಂದು ಪತ್ರಿಕೆಯು ಅಸಮಾಧಾನ ವ್ಯಕ್ತಪಡಿಸಿದೆ.

ಘಟನೆಗೆ ಕಾರಣವೇನು ಮತ್ತು ಏನಾಯಿತು?

ಗುರುವಾರ ರಾತ್ರಿ, ವಿದ್ಯಾರ್ಥಿ ಪ್ರತಿಭಟನಾ ವೇದಿಕೆ ‘ಇಂಕಿಲಾಬ್ ಮಂಚ’ದ ಹಿರಿಯ ನಾಯಕ ಹಾದಿಯನ್ನು ಢಾಕಾದ ಮಸೀದಿಯ ಹೊರಗೆ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಆತನ ಸಾವಿನ ಬಳಿಕ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಅಂದು ರಾತ್ರಿ, ನೂರಾರು ಪ್ರತಿಭಟನಾಕಾರರು ಶಹಬಾಗ್‌ನಿಂದ ಕಾರ್ವಾನ್ ಬಜಾರ್‌ನಲ್ಲಿರುವ ಪ್ರೋಥೋಮ್ ಅಲೋ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕಚೇರಿ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ಆದರೆ, ಅವರನ್ನು ಪೊಲೀಸರು ತಡೆದರು. ದಾಳಿ ವಿಫಲಗೊಂಡು, ಪ್ರತಿಭಟನಾಕಾರರು ಕಚೇರಿಯ ಹೊರಗೆ ನಿಂತು, ‘ಪ್ರೋಥೋಮ್ ಅಲೋ ಕಚೇ ಸುಟ್ಟುಹಾಕುವುದು’, ‘ಪ್ರೋಥೋಮ್ ಅಲೋದ ಯಾರಾದರೂ ಕಂಡುಬಂದರೆ ಅವರ ಮೇಲೆ ದಾಳಿ ಮಾಡುವುದು’ ಸೇರಿದಂತೆ ನಾನಾ ರೀತಿಯ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದರು ಎಂದು ವರದಿಯಾಗಿದೆ.

ಅಂದು ರಾತ್ರಿ ಮತ್ತು ಮರುದಿನ, ಪತ್ರಿಕಾ ಕಚೇರಿಯ ಮಾರುಕಟ್ಟೆ ಪ್ರದೇಶದಲ್ಲಿದ್ದ ವ್ಯಾಪಾರಿಗಳ ಮೇಲೆ ಪ್ರತಿಭಟನಾನಿರತ ದಾಳಿಕೋರರು ದಾಳಿ ಮಾಡಿದರು. ಈ ವೇಳೆ, ವಿದೇಶದಲ್ಲಿರುವ ಬಾಂಗ್ಲಾ ಪ್ರಜೆಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ‘ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ಮಾಡುವಂತೆ’ ಪ್ರಚೋದಿಸಲು ಪ್ರಾರಂಭಿಸಿದರು. ಪರಿಣಾಮ, ಮತ್ತಷ್ಟು ಮಂದಿ ಶಹಬಾಗ್‌ನಿಂದ ಪತ್ರಿಕಾ ಕಚೇರಿಯ ಬಳಿಗೆ ಧಾವಿಸಿ ಬಂದರು ಎಂದು ಆರೋಪಿಸಲಾಗಿದೆ.

ಈ ಲೇಖನ ಓದಿದ್ದೀರಾ?: ದೇಶದ ಮುಸ್ಲಿಮರ ಮೇಲೆ ಇಲ್ಲದ ಪ್ರೀತಿ, ವಿದೇಶಿ ಮುಸ್ಲಿಮರ ಮೇಲ್ಯಾಕೆ ಮೋದೀಜಿ?

ಶುಕ್ರವಾರ ಮಧ್ಯಹ್ನದ 12:15ರ ಸುಮಾರಿಗೆ ಪತ್ರಿಕಾ ಕಚೇರಿಯ ಮೇಲೆ ದಾಳಿ ಪ್ರಾರಂಭವಾಯಿತು. ದಾಳಿಕೋರರು ಇಟ್ಟಿಗೆಗಳನ್ನು ಎಸೆದು ಕಟ್ಟಡದ ಗಾಜನ್ನು ಒಡೆದು, ನಂತರ ಮುಖ್ಯ ದ್ವಾರವನ್ನು ಮುರಿದು ಕಟ್ಟಡದೊಳಗೆ ನುಗ್ಗಲಾರಂಭಿಸಿದರು. ಪೀಠೋಪಕರಣಗಳು, ಉಪಕರಣಗಳು ಹಾಗೂ ದಾಖಲೆಗಳನ್ನು ಕೆಡವಿ ಬೆಂಕಿ ಹಚ್ಚಿದರು.

dhaka1

ಗಾಳಿಗಾಗಿ ಏದುಸಿರು ಬಿಟ್ಟ ಸಿಬ್ಬಂದಿ

“ಪ್ರತಿಭಟನಾಕಾರರು ಕಟ್ಟಡ ಮತ್ತು ಕಚೇರಿಯ ಮಹಡಿಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದಾಗ, ದಿ ಡೈಲಿ ಸ್ಟಾರ್ ಪತ್ರಿಕೆಯ 28 ಸಿಬ್ಬಂದಿಗಳು ಕಚೇರಿಯ ಮೇಲ್ಛಾವಣಿಯಲ್ಲಿ ಸಿಲುಕಿಕೊಂಡಿದ್ದರು. ಕಚೇರಿಯು ಹೊಗೆಯಿಂದ ಆವರಿಸಿತ್ತು. ತಾಜಾ ಗಾಳಿಗಾಗಿ ಸಿಬ್ಬಂದಿಗಳು ಏದುಸಿರು ಬಿಡುತ್ತಿದ್ದರು” ಎಂದು ದಿ ಡೈಲಿ ಸ್ಟಾರ್ ಪತ್ರಿಕೆಯ ಸಂಪಾದಕ ಕಮಲ್ ಅಹ್ಮದ್ ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.

“ಸೇನಾ ಪಡೆಗಳು ಸ್ಥಳಕ್ಕೆ ಬಂದ ಬಳಿಕವೇ ನಮ್ಮ ಸಿಬ್ಬಂದಿಗಳನ್ನು ರಕ್ಷಿಸಲಾಯಿತು. ಶುಕ್ರವಾರ ಪತ್ರಿಕೆ ತನ್ನ ಮುದ್ರಣ ಆವೃತ್ತಿಯನ್ನು ಪ್ರಕಟಿಸಲು ಸಾಧ್ಯವಾಗಲಿಲ್ಲ. ಇನ್ನೂ ಕೆಲ ದಿನಗಳ ಕಾಲ ಪತ್ರಿಕೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯ ಮತ್ತು ಚುನಾವಣಾ ವಾತಾವರಣ

ಕೆಲವು ಬಲಾಢ್ಯ ಗುಂಪುಗಳು ಪರಿಸ್ಥಿತಿ ಮತ್ತು ಸಾರ್ವಜನಿಕ ಆಕ್ರೋಶವನ್ನು ದುರುಪಯೋಗ ಮಾಡಿಕೊಳ್ಳಲು ನಿರಂತರವಾಗಿ ಯತ್ನಿಸುತ್ತಿವೆ. ಆ ಗುಂಪುಗಳು ವಸ್ತುನಿಷ್ಠ ಪತ್ರಿಕೋದ್ಯಮ ನಡೆಸುವವರ ವಿರುದ್ಧ ಸಾರ್ವಜನಿಕರನ್ನು ಪ್ರಚೋದಿಸುತ್ತಿವೆ. ಪರಿಣಾಮವಾಗಿ, ಎರಡು ಪತ್ರಿಕೆಗಳ ವಿರುದ್ಧ ಈ ದಾಳಿ ನಡೆದಿದೆ. ಮುಂಬರುವ ಚುನಾವಣೆಯಲ್ಲಿ ಜನರನ್ನು ಹಾದಿ ತಪ್ಪಿಸಲು ದೇಶದಲ್ಲಿ ಅಸ್ಥಿರತೆಯ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ ಎಂದು ದಿ ಡೈಲಿ ಸ್ಟಾರ್ ಪತ್ರಿಕೆ ಆರೋಪಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ ಆಶ್ರಮ’

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ಗಾಂಧಿ ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು...

ಎಐ ಸೃಷ್ಟಿಸುವ ಕೃತಕ ಪ್ರೋಟೀನ್‌ಗಳಿಗೆ ಗೂಗಲ್‌ನಿಂದ ‘ಡಿಜಿಟಲ್ ಮುದ್ರೆ’: ಜೈವಿಕ ಅಪಾಯ ತಡೆಯಲು ಹೊಸ ಅಸ್ತ್ರ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಲ್ಯಾಬ್‌‌ಗಳಲ್ಲಿ ಹೊಸ ಬಗೆಯ ಪ್ರೋಟೀನ್‌ಗಳನ್ನು...