ಗೋಲ್ಡ್‌ಮನ್‌ ಸಾಚ್ಸ್‌ ವರದಿ: ಮುಂದಿನ 50 ವರ್ಷಗಳಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆಯಂತೆ ಭಾರತ!

Date:

ಭಾರತದ ಆರ್ಥಿಕತೆಯ ವೇಗ ಕೆಲ ವರ್ಷಗಳಿಂದ ಏರುತ್ತಲೇ ಇದೆ. ಹಲವು ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಜಪಾನನ್ನು ಹಿಂದಿಕ್ಕಿ ಭಾರತ ಈಗ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಇದೇ ರೀತಿ ಮುಂದುವರೆದರೆ ಮುಂದಿನ 50 ವರ್ಷಗಳಲ್ಲಿ ಅಂದರೆ, 2075ರ ಹೊತ್ತಿಗೆ ಅಮೆರಿಕವನ್ನೂ ಹಿಂದಿಕ್ಕಿ ಭಾರತ ಬೆಳೆಯಲಿದೆ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ ನಡೆಸಿದ ದೀರ್ಘಾವಧಿ ಆರ್ಥಿಕ ಅಂದಾಜು ವರದಿ ಹೇಳುತ್ತದೆ.

- Advertisement -

ಸುಮಾರು 4.18 ಟ್ರಿಲಿಯನ್ ಡಾಲರ್‌ಗಳ ಒಟ್ಟು ದೇಶೀಯ ಉತ್ಪನ್ನ (GDP) ಹೊಂದಿರುವ ಭಾರತದ ಆರ್ಥಿಕತೆ, ಮುಂದಿನ ಎರಡು–ಮೂರು ವರ್ಷಗಳಲ್ಲಿ ಜರ್ಮನಿಯನ್ನೂ ಮೀರಿಸಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆ ಇದೆಯಂತೆ. ಆದರೆ 2ನೇ ಸ್ಥಾನಕ್ಕೇರಲು 50 ವರ್ಷಗಳು ಬೇಕಾಗಬಹುದು. 57 ಟ್ರಿಲಿಯನ್ ಜಿಡಿಪಿಯೊಂದಿಗೆ ಚೀನಾ ಎಂದಿನಂತೆ ಅಗ್ರಸ್ಥಾನದಲ್ಲಿರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಈ ವರದಿಯ ಪ್ರಕಾರ, ಏಷ್ಯಾ ಮತ್ತು ಆಫ್ರಿಕಾದ ಉದಯೋನ್ಮುಖ ದೇಶಗಳು ಜಾಗತಿಕ ಉತ್ಪಾದನೆಯಲ್ಲಿ ಹೆಚ್ಚು ಪಾಲು ಹೊಂದಲಿವೆ. ಇಂದಿನ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ವೃದ್ಧಾಪ್ಯಕ್ಕೆ ಹೋಗುವುದರಿಂದ ಮತ್ತು ಆರ್ಥಿಕ ಬೆಳವಣಿಗೆ ನಿಧಾನಗೊಳ್ಳುವುದರಿಂದ, ಕ್ರಮಾಂಕದಲ್ಲಿ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಚೀನಾ ಹಿಂದೆ ಭಾರತ 52.5 ಟ್ರಿಲಿಯನ್ ಡಾಲರ್ GDPಯೊಂದಿಗೆ 2ನೇ ಸ್ಥಾನದಲ್ಲಿರಲಿದೆ ಎಂದು ಊಹಿಸಲಾಗಿದೆ. ಅಮೆರಿಕ 51.5 ಟ್ರಿಲಿಯನ್ ಡಾಲರ್ GDPಯೊಂದಿಗೆ ಮೂರನೇ ಸ್ಥಾನದಲ್ಲಿರಲಿದೆ. ಈ ಮೂರು ದೇಶಗಳ ಆರ್ಥಿಕತೆಗಳು ಜಗತ್ತಿನಲ್ಲಿ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಇಂಡೋನೇಷ್ಯಾ 13.7 ಟ್ರಿಲಿಯನ್ ಡಾಲರ್ GDPಯೊಂದಿಗೆ ನಾಲ್ಕನೇ ಸ್ಥಾನ, ನೈಜೀರಿಯಾ (13.1 ಟ್ರಿಲಿಯನ್), ಪಾಕಿಸ್ತಾನ (12.3 ಟ್ರಿಲಿಯನ್), ಈಜಿಪ್ಟ್ (10.4 ಟ್ರಿಲಿಯನ್), ಬ್ರೆಜಿಲ್ (8.7 ಟ್ರಿಲಿಯನ್), ಜರ್ಮನಿ (8.1 ಟ್ರಿಲಿಯನ್) ಮತ್ತು ಮೆಕ್ಸಿಕೋ (7.6 ಟ್ರಿಲಿಯನ್) ಕ್ರಮವಾಗಿ ಸ್ಥಾನ ಹಂಚಿಕೊಳ್ಳಲಿವೆ ಎಂದು ವರದಿ ಹೇಳುತ್ತದೆ. ಅದೇ ಸಮಯದಲ್ಲಿ, ಬ್ರಿಟನ್ ಮತ್ತು ಜಪಾನ್ ಕ್ರಮಾಂಕದಲ್ಲಿ ಹಿಂದೆ ಸರಿಯುವ ಸಾಧ್ಯತೆ ಇದ್ದು, ಅವುಗಳ GDP ಕ್ರಮವಾಗಿ 7.6 ಟ್ರಿಲಿಯನ್ ಮತ್ತು 7.5 ಟ್ರಿಲಿಯನ್ ಗಳಷ್ಟಿರಬಹುದಂತೆ.

ಈ ಬೆಳವಣಿಗೆಗೆ ಜನಸಂಖ್ಯೆಯ ಸ್ವರೂಪ (demography) ಪ್ರಮುಖ ಪಾತ್ರ ವಹಿಸಲಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ತಿಳಿಸಿದೆ. ಯುವ ಮತ್ತು ವಿಸ್ತರಿಸುತ್ತಿರುವ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾ, ನೈಜೀರಿಯಾ, ಪಾಕಿಸ್ತಾನ, ಈಜಿಪ್ಟ್ ಮತ್ತು ಎಥಿಯೋಪಿಯಾ ಮೊದಲಾದ ದೇಶಗಳು, ಸರಿಯಾದ ನೀತಿಗಳನ್ನು ಅನುಸರಿಸಿ, ಆಡಳಿತ ವ್ಯವಸ್ಥೆಯನ್ನು ಬಲಪಡಿಸಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ ವೇಗವಾಗಿ ಆರ್ಥಿಕವಾಗಿ ಬೆಳೆಯಬಹುದು. ಇತ್ತ ಜಪಾನ್, ಜರ್ಮನಿ, ಬ್ರಿಟನ್ ಮತ್ತು ಫ್ರಾನ್ಸ್ ಮೊದಲಾದ ವೃದ್ಧಾಪ್ಯ ಸಮಾಜಗಳು ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಅನುಭವಿಸಬಹುದು.

ಇದನ್ನೂ ಓದಿ: ಉದ್ಯೋಗ ಕಡಿತಕ್ಕೆ AI ಕಾರಣವಾಗುತ್ತಿದೆಯೇ? ಗೋಲ್ಡ್‌ಮನ್‌ ಸ್ಯಾಚ್ಸ್‌ ವರದಿ ಹೇಳುವುದೇನು?

ಈ ಅಂದಾಜುಗಳು ಭವಿಷ್ಯದಲ್ಲಿ ಯುವ ಕಾರ್ಮಿಕ ಶಕ್ತಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಿರಂತರ ನೀತಿ ಸುಧಾರಣೆಗಳ ನೆರವಿನಿಂದ, ಭಾರತ 2075ರ ವೇಳೆಗೆ ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಬಹುದು ಎಂದು ಸೂಚಿಸುತ್ತವೆ. ಚೀನಾಗಿಂತ ಸ್ವಲ್ಪ ಹಿಂದೆ ಉಳಿದರೂ, ಈ ಬೆಳವಣಿಗೆ ಹೆಚ್ಚು ಉದ್ಯೋಗಾವಕಾಶಗಳು, ಹೆಚ್ಚಿದ ಆದಾಯ ಮತ್ತು ಉತ್ತಮ ಆರ್ಥಿಕ ಅವಕಾಶಗಳಿಗೆ ದಾರಿ ಮಾಡಿಕೊಡಬಹುದು. ಆದರೆ, ಇಂತಹ ದೀರ್ಘಾವಧಿ ಅಂದಾಜುಗಳು ಕಾಲಕ್ರಮೇಣ ಬದಲಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ಗೋಲ್ಡ್‌ಮನ್ ಸ್ಯಾಕ್ಸ್ ಈ ಅಂದಾಜುಗಳನ್ನು ಮೊದಲ ಬಾರಿಗೆ 2022ರಲ್ಲಿ ಪ್ರಕಟಿಸಿತ್ತು, ಮತ್ತು ಇತರೆ ಅಂತಾರಾಷ್ಟ್ರೀಯ ಆರ್ಥಿಕ ವರದಿಗಳಲ್ಲೂ ಇದೇ ರೀತಿಯ ನಿರ್ಣಯಗಳು ಕಾಣಿಸಿಕೊಂಡಿದ್ದವು. 2025ನೇ ವರ್ಷ ಮುಗಿದಿರುವ ಈ ಹೊತ್ತಿನಲ್ಲಿ ಈ ವರದಿ ಪುನಃ ಜಾಗತಿಕವಾಗಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಆದರೆ, ಮುಂದಿನ ದಶಕಗಳಲ್ಲಿ ಜಾಗತಿಕ ಹಾಗೂ ದೇಶೀಯ ಪರಿಸ್ಥಿತಿಗಳು ಹೇಗೆ ರೂಪುಗೊಳ್ಳುತ್ತವೆಯೋ ಅದರ ಮೇಲೆ ಈ ಅಂಕಿಅಂಶಗಳು ಬಹಳ ಮಟ್ಟಿಗೆ ಅವಲಂಬಿತವಾಗಿರುತ್ತವೆ ಎಂದು ಅರ್ಥಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

CJP ಪ್ರೊಟೆಸ್ಟ್‌ ಎಫೆಕ್ಟ್ | ಅ.10ರಂದು ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು

ದೆಹಲಿಯಲ್ಲಿ ಅಕ್ಟೋಬರ್‌ 10ರಂದು ನಡೆಯಲಿರುವ ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆಯ...

ಸಿಜೆಪಿ ಪ್ರತಿಭಟನೆ ತಡೆಯಲು ಮೆಟ್ರೋ, ರೈಲು ಬಂದ್: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಪಿಐಎಂ ನಾಯಕ ಎಂ ಎ ಬೇಬಿ

ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ವಿವಿಧ ಪ್ರತಿಪಕ್ಷಗಳು...

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...