ಅಮೆರಿಕ ‘ಕೆಂಪು ಗೆರೆ’ ದಾಟಿದರೆ, ವ್ಯಾಪ್ತಿ ಮೀರಿ ಪ್ರತಿಕ್ರಿಯೆ: ಇರಾನ್ ಎಚ್ಚರಿಕೆ

Date:

ಅಮೆರಿಕದ ಪಡೆಗಳು ‘ಕೆಂಪು ರೇಖೆ’ ದಾಟಿದರೆ, ನಮ್ಮ ಪ್ರಾದೇಶಿಕ ವ್ಯಾಪ್ತಿಯನ್ನೂ ಮೀರಿ ತಿರುಗೇಟು ನೀಡುತ್ತೇವೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಕೆ ನೀಡಿದೆ.

- Advertisement -

ಗಡುವು ಮುಗಿಯುವುದರೊಳಗೆ ಅಮೆರಿಕದ ಯುದ್ಧ ಬೇಡಿಕೆಗಳಿಗೆ ಇರಾನ್ ಒಪ್ಪಿಕೊಳ್ಳಬೇಕು. ಇಲ್ಲವೇ, ಇಂದು ರಾತ್ರಿ ಇರಾನ್‌ನ ನಾಗರಿಕತೆ ನಾಶವಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇಂತಹ ಬೆದರಿಕೆಗಳಿಗೆ ಪ್ರತಿಕ್ರಿಯಿಸಿರುವ ಇರಾನ್‌ ಸೇನೆ, “ಅಮೆರಿಕದ ಭಯೋತ್ಪಾದಕ ಸೈನ್ಯವು ಒಂದು ವೇಳೆ ಕೆಂಪು ಗೆರೆಯನ್ನು ದಾಟಿದರೆ, ನಮ್ಮ ಪ್ರತಿಕ್ರಿಯೆಯು ಕೇವಲ ಈ ಪ್ರದೇಶವನ್ನೂ ದಾಟಿ ಹೊರಗಿನವರೆಗೂ ವ್ಯಾಪಿಸಲಿದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಮುಂಬರುವ ಹಲವು ವರ್ಷಗಳ ಕಾಲ ಈ ಭಾಗದ ತೈಲ ಮತ್ತು ಅನಿಲದಿಂದ ವಂಚಿತವಾಗುವಂತೆ ಮಾಡುತ್ತೇವೆ” ಎಂದು ಎಚ್ಚರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

“ಅಮೆರಿಕದ ಪ್ರಾದೇಶಿಕ ಪಾಲುದಾರ ರಾಷ್ಟ್ರಗಳು ಸಹ ಒಂದು ವಿಷಯವನ್ನು ತಿಳಿದಿರಬೇಕು; ನಾವು ಈವರೆಗೆ ನೆರೆಹೊರೆಯ ಸಂಬಂಧದ ದೃಷ್ಟಿಯಿಂದ ಸಾಕಷ್ಟು ಸಂಯಮ ಪ್ರದರ್ಶಿಸಿದ್ದೇವೆ. ಪ್ರತಿಕ್ರಿಯೆ ನೀಡುವಾಗ ಗುರಿಗಳನ್ನು ಆಯ್ಕೆ ಮಾಡುವಲ್ಲಿ ಕೆಲವು ಮಿತಿಗಳನ್ನು ಹಾಕಿಕೊಂಡಿದ್ದೇವೆ. ಆದರೆ, ಈಗ ಅಂತಹ ಎಲ್ಲ ಮಿತಿಗಳನ್ನು ನಾವು ಮೀರಲಿದ್ದೇವೆ” ಎಂದು ಇರಾನ್ ಸ್ಪಷ್ಟಪಡಿಸಿದೆ.

ಯುದ್ಧದ ಕುರಿತು ಪ್ರಕ್ರಿಯಿಸಿರುವ ಕತಾರ್, “ನಿಯಂತ್ರಣವಿಲ್ಲದ ಉದ್ವಿಗ್ನತೆಯು ನಮ್ಮನ್ನು ನಿಭಾಯಿಸಲಾಗದ ಪರಿಸ್ಥಿತಿಗೆ ತಳ್ಳಲಿದೆ ಎಂದು ನಾವು 2023 ರಿಂದಲೂ ಎಚ್ಚರಿಸುತ್ತಿದ್ದೇವೆ. ನಾವು ಈಗ ಅಂತಹ ಹಂತಕ್ಕೆ ಬಹಳ ಹತ್ತಿರದಲ್ಲಿದ್ದೇವೆ. ಪರಿಸ್ಥಿತಿ ಕೈಮೀರುವ ಮೊದಲೇ ಎಲ್ಲ ಪಕ್ಷಗಳು ಈ ಯುದ್ಧವನ್ನು ಕೊನೆಗೊಳಿಸಲು ದಾರಿಯನ್ನು ಕಂಡುಕೊಳ್ಳಬೇಕು” ಎಂದು ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...

ಧಾರವಾಡ | ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಒಗ್ಗೂಡಿದ ಪ್ರಗತಿಪರ ಧ್ವನಿಗಳು

ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೌಹಾರ್ದತೆಯ ರಕ್ಷಣೆಗಾಗಿ ಧಾರವಾಡದಲ್ಲಿ...

ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಇಬ್ಬರು ಕೇಂದ್ರ ಸಚಿವರಿಗೆ ಕೊಕ್

ಉತ್ತರ ಪ್ರದೇಶದಿಂದ ತೆರವಾಗಲಿರುವ ಎಂಟು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಸೋಮವಾರ (ಅ....