ಪರಮಾಣು ಒಪ್ಪಂದ |ಅಮೆರಿಕ ನಿರ್ಬಂಧ ತೆರವುಗೊಳಿಸಿದರೆ ರಾಜಿ ಸಂಧಾನಕ್ಕೆ ಸಿದ್ಧ: ಇರಾನ್

Date:

ಅಮೆರಿಕವು ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವ ವಿಷಯದಲ್ಲಿ ಮುಕ್ತ ಮನಸ್ಸು ಹೊಂದಿದ್ದರೆ, ಪರಮಾಣು ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ರಾಜಿ ಮಾಡಿಕೊಳ್ಳಲು ತಾವು ಸಿದ್ಧರಿರುವುದಾಗಿ ಇರಾನ್ ತಿಳಿಸಿದೆ.

- Advertisement -

​ಈ ಕುರಿತು ಇರಾನ್‌ನ ಉಪ ವಿದೇಶಾಂಗ ಸಚಿವ ಮಜಿದ್ ತಖ್ತ್ ರವಾಂಚಿ ಅವರು ‘ಬಿಬಿಸಿ’ಗೆ ನೀಡಿದ ಸಂದರ್ಶನದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಈ ಮಾತುಕತೆ ಪ್ರಕ್ರಿಯೆಗೆ ಇರಾನ್ ಕಾರಣ ಎಂದು ಅಮೆರಿಕದ ಅಧಿಕಾರಿಗಳು ಪದೇ ಪದೇ ಆರೋಪಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೈಲ್ವೆ ಪ್ಲಾಟ್‌ಫಾರ್ಮ್‌ನಿಂದ ಜಾಗತಿಕ ಪಯಣ: ಸಣ್ಣ ಊರಿನ ಕನಸುಗಳಿಗೆ...

"ಧೋನಿ ಬರುವ ಮುನ್ನ ರಾಂಚಿಯ ಪೋಷಕರು ತಮ್ನ ಮಕ್ಕಳು ವೈದ್ಯರು, ಎಂಜಿನಿಯರ್ ಆಗಬೇಕೆಂದು ಬಯಸುತ್ತಿದ್ದರು. ಅವರು ಬಂದ ಮೇಲೆ ಎಲ್ಲರೂ ಧೋನಿಯಾಗಲು, ವಿಕೆಟ್‌ಕೀಪರ್ ಆಗಲು ಬಯಸಿದರು" ಎನ್ನುತ್ತಾರೆ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ....

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಶನಿವಾರವಷ್ಟೇ ಹೇಳಿಕೆ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, “ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿದ್ದರೂ, ಇರಾನ್ ಜೊತೆಗಿನ ವ್ಯವಹಾರ ಕಠಿಣವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದರು.

​ಇದಕ್ಕೆ ಪ್ರತ್ಯುತ್ತರ ನೀಡಿರುವ ಸಚಿವ ರವಾಂಚಿ “ಒಪ್ಪಂದ ಮಾಡಿಕೊಳ್ಳುವ ಇಚ್ಛೆಯನ್ನು ಸಾಬೀತುಪಡಿಸಬೇಕಿರುವುದು ಅಮೆರಿಕವೇ ಹೊರತು ಇರಾನ್ ಅಲ್ಲ. ಚೆಂಡು ಈಗ ಅಮೆರಿಕದ ಅಂಗಳದಲ್ಲಿದೆ. ಅವರ ನಡೆ ಪ್ರಾಮಾಣಿಕವಾಗಿದ್ದರೆ, ನಾವು ಒಪ್ಪಂದದ ಹಾದಿಗೆ ಮರಳಲಿದ್ದೇವೆ” ಎಂದು ತಿಳಿಸಿದ್ದಾರೆ.

ಒಂದು ವೇಳೆ ಪರಮಾಣು ಕಾರ್ಯಕ್ರಮವನ್ನು ತಡೆಯುವ ಒಪ್ಪಂದ ವಿಫಲವಾದರೆ, ಇರಾನ್ ಮೇಲೆ ದಾಳಿ ನಡೆಸುವುದಾಗಿ ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕೊಲ್ಲಿ ಪ್ರಾಂತ್ಯದಲ್ಲಿ ಅಮೆರಿಕ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುತ್ತಿದೆ. ಕಳೆದ ತಿಂಗಳು ಇರಾನ್‌ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಬಲವಂತವಾಗಿ ಹತ್ತಿಕ್ಕಲಾಗಿತ್ತು ಮತ್ತು ಇದರಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ವರದಿ ಮಾಡಿವೆ. ಈ ಉದ್ವಿಗ್ನತೆಯ ನಡುವೆಯೂ ಮಾತುಕತೆ ಮುಂದುವರಿದಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!

​ಫೆಬ್ರವರಿ ಆರಂಭದಲ್ಲಿ ಒಮನ್‌ನಲ್ಲಿ ಉಭಯ ದೇಶಗಳ ನಡುವೆ ಪರೋಕ್ಷ ಮಾತುಕತೆ ನಡೆದಿತ್ತು. ಮಂಗಳವಾರ ಜಿನೀವಾದಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದ್ದು, ಪ್ರಕ್ರಿಯೆ ಸಕಾರಾತ್ಮಕ ದಿಕ್ಕಿನಲ್ಲಿದೆ ಎಂದು ರವಾಂಚಿ ತಿಳಿಸಿದ್ದಾರೆ.

ಶೇ. 60ರಷ್ಟು ಶುದ್ಧೀಕರಿಸಿದ ಯುರೇನಿಯಂ ದಾಸ್ತಾನನ್ನು ಕಡಿಮೆ ಮಾಡಲು ಇರಾನ್ ಮುಂದಾಗಿರುವುದು ರಾಜಿ ಸಂಧಾನಕ್ಕೆ ಅದು ಸಿದ್ಧವಿರುವುದರ ಸಂಕೇತವಾಗಿದೆ. ಈ ಮಟ್ಟದ ಶುದ್ಧೀಕರಣವು ಅಣ್ವಸ್ತ್ರ ತಯಾರಿಕೆಗೆ ಅತ್ಯಂತ ಹತ್ತಿರವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಸೃಷ್ಟಿಸಿತ್ತು.

​ಆದರೆ, “ನಿರ್ಬಂಧಗಳ ಬಗ್ಗೆ ಚರ್ಚಿಸಲು ಅವರು ಸಿದ್ಧರಿದ್ದರೆ ಮಾತ್ರ ನಾವು ನಮ್ಮ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತೇವೆ,” ಎಂದು ರವಾಂಚಿ ಷರತ್ತು ವಿಧಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಂಗ್ಲಾ ಗಾರ್ಮೆಂಟ್ಸ್ ಬಿಕ್ಕಟ್ಟು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ; 150ಕ್ಕೂ ಹೆಚ್ಚು ಕಾರ್ಖಾನೆಗಳು ಬಂದ್!

ಬಾಂಗ್ಲಾದೇಶದ ಪ್ರಮುಖ ಸಿದ್ಧ ಉಡುಪು (ಗಾರ್ಮೆಂಟ್ಸ್) ಉತ್ಪಾದನಾ ಕೇಂದ್ರಗಳಲ್ಲಿ ಕನಿಷ್ಠ ವೇತನ...

ಭಾರತದ ಸರಕುಗಳಿಗೆ ಅಮೆರಿಕ ಮಾರುಕಟ್ಟೆಯಲ್ಲಿ ಆದ್ಯತೆ; ಸುಂಕ ಕಡಿತದ ಒಪ್ಪಂದಕ್ಕೆ ಒಪ್ಪಿಗೆ

ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಸರಕುಗಳಿಗೆ ಆದ್ಯತೆ ನೀಡಿ, ಬೇರೆ ರಾಷ್ಟ್ರಗಳ ಸರಕುಗಳಿಗೆ...

IND vs NZ | 3-1 ಅಂತರದಲ್ಲಿ ಏಕದಿನ ಸರಣಿ ಗೆದ್ದ ಭಾರತ; ಕೊನೆಯ ಪಂದ್ಯದಲ್ಲಿ 22 ರನ್‌ಗಳ ರೋಚಕ ಜಯ!

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ ತಂಡ...