ವಿಮಾನ ಅಫಘಾತ: ಮಲಾವಿ ದೇಶದ ಉಪಾಧ್ಯಕ್ಷ ಸೇರಿ 9 ಮಂದಿ ಸಾವು

Date:

ವಿಮಾನ ಅಪಘಾತದಲ್ಲಿ ಆಫ್ರಿಕಾ ಖಂಡದ ಮಲಾವಿ ದೇಶದ ಉಪಾಧ್ಯಕ್ಷ ಸೇರಿ 9 ಮಂದಿ ಮೃತರಾಗಿದ್ದಾರೆ ಎಂದು ಇಂದು ರಾಷ್ಟ್ರಧ್ಯಕ್ಷ ತಿಳಿಸಿದ್ದಾರೆ.

ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಅವರು ಮಿಲಿಟರಿ ವಿಮಾನದಲ್ಲಿ ಮಲಾವಿಯ ರಾಜಧಾನಿ ಲಿಲೋಗ್ವಿಯಿಂದ 370 ಕಿಮೀ ದೂರದಲ್ಲಿರುವ ಮುಜುಜುಗೆ ಇಂದು ಬೆಳಿಗ್ಗೆ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್‌ಆಫ್‌ ಆದ 45 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿದ್ದು, ಅಪಘಾತವಾದ ವಿಮಾನ ಕಣಿವೆ ಪ್ರದೇಶಗಳಲ್ಲಿ ಪತ್ತೆಯಾಗಿದೆ.

ಪತ್ತೆ ಕಾರ್ಯದಲ್ಲಿ ನೂರಾರು ಸೈನಿಕರು, ಪೊಲೀಸ್‌ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿ ಪಾಲ್ಗೊಂಡಿದ್ದರು. ಘಟನೆಯಲ್ಲಿ ಯಾರೊಬ್ಬರು ಬದುಕುಳಿದಿಲ್ಲ ಎಂದು ಅಧ್ಯಕ್ಷರಾದ ಲಜಾರಸ್‌ ಚಕ್ವೇರಾ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ

ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ ಸೌಲೋಸ್ ಚಿಲಿಮಾ ಅವರು ವಿಮಾನ ಕೆಟ್ಟ ಹವಾಮಾನ ಹಾಗೂ ಕಳಪೆ ಗೋಚರತೆ ಕಾರಣದಿಂದ ರಾಜಧಾನಿ ಮುಜುಜು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಗ್‌ ಮಾಡಲು ಸಾಧ್ಯವಾಗಲಿಲ್ಲ. ನಂತರದಲ್ಲಿ ವಿಮಾನದ ಸಂಪರ್ಕವನ್ನು ಕಳೆದುಕೊಳ್ಳಬೇಕಾಯಿತು.

ವಿಮಾನದಲ್ಲಿ 7 ಪ್ರಯಾಣಿಕರು ಹಾಗೂ ಮೂವರು ಮಿಲಿಟರಿ ಸಿಬ್ಬಂದಿ ಇದ್ದರು. ಸೌಲೋಸ್ ಚಿಲಿಮಾ  ಅವರು ಮಲಾವಿಯಲ್ಲಿ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಪರಾಭವಗೊಂಡಿದ್ದರು. ಕೆಲ ತಿಂಗಳ ಹಿಂದ ಚಿಲಿಮಾ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತಾದರೂ ನ್ಯಾಯಾಲಯದಲ್ಲಿ ಸಾಬೀತಾಗಿರಲಿಲ್ಲ

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಕ್ಸಿಟ್ ಪೋಲ್‌ನಲ್ಲಿ ಯೂರೋಪಿಯನ್ ಒಕ್ಕೂಟದ ಬಲ ಪಂಥೀಯ ಪಕ್ಷಗಳ ಮುನ್ನಡೆ: ಸಂಸತ್ ವಿಸರ್ಜಿಸಿದ ಫ್ರಾನ್ಸ್ ಅಧ್ಯಕ್ಷ

ಎಕ್ಸಿಟ್‌ ಪೋಲ್‌ನಲ್ಲಿ ಯೂರೋಪಿಯನ್‌ ಒಕ್ಕೂಟದ ಬಲಪಂಥೀಯ ಪಕ್ಷಗಳಿಗೆ ಮುನ್ನಡೆಯಾದ ನಂತರ ಫ್ರಾನ್ಸ್‌...

ಪಂಜಾಬಿನ ಯುವಕ ಕೆನಡಾದಲ್ಲಿ ಗುಂಡಿಕ್ಕಿ ಹತ್ಯೆ

ಭಾರತ ಮೂಲದ ಪಂಜಾಬ್‌ ಲೂಧಿಯಾನದ ಯುವಕನೊಬ್ಬನನ್ನು ಕೆನಡಾ ದ ಸರ್ರೆಯಲ್ಲಿ ಗುಂಡಿಕ್ಕಿ...

ಕೆನಡಾ | ಟೇಕಾಫ್ ಆಗುತ್ತಿದ್ದಂತೆಯೇ 389 ಪ್ರಯಾಣಿಕರಿದ್ದ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ; ವಿಡಿಯೋ ವೈರಲ್

389 ಪ್ರಯಾಣಿಕರು ಮತ್ತು 13 ಸಿಬ್ಬಂದಿಗಳೊಂದಿಗೆ ಪ್ಯಾರಿಸ್‌ಗೆ ತೆರಳುತ್ತಿದ್ದ ಕೆನಡಾದ ವಿಮಾನವೊಂದು...

ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝುಗೆ ಆಹ್ವಾನ

ಮೂರನೇ ಅವಧಿಗೆ ಪ್ರಧಾನಿಯಾಗಿ ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲು...