ರಷ್ಯಾ | ಭಾರತಕ್ಕೆ ತೈಲ ಮಾರಾಟ 22 ಪಟ್ಟು ಹೆಚ್ಚಳ

Date:

  • ರಷ್ಯಾ ಇಂಧನ ಪೂರೈಕೆ ನಿರ್ಬಂಧಿಸಿರುವ ಐರೋಪ್ಯ ರಾಷ್ಟ್ರಗಳು
  • ಕಳೆದ ವರ್ಷ ಭಾರತ, ಚೀನಾಗೆ ಹೆಚ್ಚು ತೈಲ ರಫ್ತು ಮಾಡಿರುವ ರಷ್ಯಾ

ಕಳೆದ ವರ್ಷ ರಷ್ಯಾದಿಂದ ಭಾರತಕ್ಕೆ ತೈಲ ಮಾರಾಟವು 22 ಪಟ್ಟು ಹೆಚ್ಚಳವಾಗಿದೆ ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್‌ ನೋವಾಕ್‌ ಮಂಗಳವಾರ (ಮಾರ್ಚ್‌ 28) ಹೇಳಿದ್ದಾರೆ.

ಉಕ್ರೇನ್‌ ಜೊತೆಗಿನ ರಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಐರೋಪ್ಯ ರಾಷ್ಟ್ರಗಳ ಇತರ ಖರೀದಿದಾರರು ಇತರ ಮಾರುಕಟ್ಟೆಗಳತ್ತ ಮುಖ ಮಾಡಿದ್ದರಿಂದ ಭಾರತಕ್ಕೆ ತೈಲ ಮಾರಾಟ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ರಷ್ಯಾದ ಸುದ್ದಿಸಂಸ್ಥೆಗಳಿಗೆ ಅಲೆಕ್ಸಾಂಡರ್‌ ನೀಡಿದ ಹೇಳಿಕೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. “ದೇಶದ ಹೆಚ್ಚಿನ ಇಂಧನ ಮೂಲಗಳನ್ನು ಇತರ ಮಾರುಕಟ್ಟೆಗಳು ಹಾಗೂ ಮಿತ್ರ ರಾಷ್ಟ್ರಗಳ ಮಾರುಕಟ್ಟೆಗಳಿಗೆ ಬಿಕರಿ ಮಾಡಲು ಮರುನಿರ್ದೇಶಿಸಲಾಗಿದೆ. ಕಳೆದ ವರ್ಷ ಭಾರತಕ್ಕೆ ಮಾಡಲಾದ ತೈಲ ಪೂರೈಕೆಯು 22 ಪಟ್ಟು ಹೆಚ್ಚಾಗಿದೆ” ಎಂದು ಅಲೆಕ್ಸಾಂಡರ್ ನೋವಾಕ್‌ ಹೇಳಿದರು.

ರಷ್ಯಾದ ಮಾಸ್ಕೊ ಯುದ್ಧದ ಭಾಗವಾಗಿ ನೆರೆಯ ಉಕ್ರೇನ್‌ಗೆ ತನ್ನ ಸೇನೆಯನ್ನು ಕಳುಹಿಸಿದ ನಂತರ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಇಂಧನ ಪೂರೈಕೆಯ ಮೇಲೆ ರಷ್ಯಾ ಮೇಲಿನ ಅವಲಂಬನೆ ಕೊನೆಗೊಳಿಸಲು ನಿರ್ಧರಿಸಿದವು. ಈ ಹಿನ್ನೆಲೆಯಲ್ಲಿ ರಷ್ಯಾ ತನ್ನ ತೈಲ ರಫ್ತುಗಳನ್ನು ಕಳೆದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಭಾರತ ಮತ್ತು ಚೀನಾಗೆ ನೀಡಿದೆ.

ಕಳೆದ ಡಿಸೆಂಬರ್‌ನಲ್ಲಿ ಐರೋಪ್ಯ ಒಕ್ಕೂಟವು ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ವಿಧಿಸಿತು. ಅಲ್ಲದೆ ರಷ್ಯಾದ ಕಚ್ಚಾ ತೈಲದ ಮೇಲಿನ ಬೆಲೆಯ ಮಿತಿಯ ಬಗ್ಗೆ ಏಳು ಕೈಗಾರಿಕಾ ಒಕ್ಕೂಟಗಳ ಜೊತೆ ಒಪ್ಪಂದ ಮಾಡಿಕೊಂಡಿತು. ರಷ್ಯಾ ತನ್ನ ಮಿತ್ರ ರಾಷ್ಟ್ರಗಳಿಗೆ ಅಗ್ಗದ ದರದಲ್ಲಿ ಕಚ್ಚಾ ತೈಲ ರಫ್ತು ಮಾಡಿದೆ.

ಒಪೆಕ್‌ ಕಚ್ಚಾ ತೈಲದ ಪ್ರಮುಖ ಉತ್ಪಾದಕ ಸಂಸ್ಥೆಯಾಗಿದೆ. ಪಾಶ್ಚಿಮಾತ್ಯ ನಿರ್ಬಂಧಗಳ ಪರಿಣಾಮ ಈ ತಿಂಗಳು ದಿನಕ್ಕೆ 5 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ಉತ್ಪಾದನೆಯನ್ನು ಕಡಿತಗೊಳಿಸಿದೆ. ಶೇ 5ರಷ್ಟು ದೈನಂದಿನ ತೈಲ ಉತ್ಪಾದನೆಯ ಕಡಿತವು ಜೂನ್‌ವರೆಗೆ ಮುಂದುವರಿಯುತ್ತದೆ ಎಂದು ಪ್ರಧಾನಿ ಅಲೆಕ್ಸಾಂಡರ್‌ ನೋವಾಕ್ ಪ್ರಕಟಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಫೆಬ್ರವರಿಯಲ್ಲಿ ರಷ್ಯಾದ ತೈಲ ರಫ್ತು ಆದಾಯವು ಅರ್ಧದಷ್ಟು ಕುಸಿದಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯು ಹೇಳಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕದನ ವಿರಾಮಕ್ಕಾಗಿ ಇಸ್ರೇಲ್ ಜೊತೆ ಮಾತುಕತೆಗೆ ಹತ್ತಿರವಾಗುತ್ತಿದ್ದೇವೆ: ಹಮಾಸ್

ಇಸ್ರೇಲ್‌ ಹಾಗೂ ಹಮಾಸ್ ನಡುವೆ ಕಳೆದ ಅಕ್ಟೋಬರ್ 7ರಿಂದ ನಡೆಯುತ್ತಿರುವ ಸಂಘರ್ಷವು...

ವಿಶ್ವ ಶೌಚಾಲಯ ದಿನದಂದು ಒಳಚರಂಡಿಗೆ ಇಳಿದ ಬಿಲ್ ಗೇಟ್ಸ್

ನವೆಂಬರ್‌ 19ರ ವಿಶ್ವ ಶೌಚಾಲಯ ದಿನದ ಅಂಗವಾಗಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌...

ವಿಶ್ವಕಪ್ ಫೈನಲ್‌ಗೂ ತಟ್ಟಿದ ಪ್ಯಾಲೆಸ್ತೀನ್ ಪರ ಹೋರಾಟ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿಕೊಂಡ ಯುವಕ

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ ನಡುವೆ ನಡೆಯುತ್ತಿರುವ ಸಂಘರ್ಷದ ಬಿಸಿ ಗುಜರಾತಿನ ಅಹ್ಮದಾಬಾದ್‌ನ...

ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಶೆನ್ನಿಸ್ ಪಲಾಸಿಯೋಸ್

ನಿಕರಾಗುವಾ ದೇಶದ ಶೆನ್ನಿಸ್ ಪಲಾಸಿಯೋಸ್ ಅವರು ಮಿಸ್ ಯೂನಿವರ್ಸ್ 2023 ಆಗಿ...