ಫಿಲಿಫೈನ್ಸ್ ನಲ್ಲಿ ಇಂಧನ ತುರ್ತು ಘೋಷಣೆ. ಗಲ್ಫ್ ಸಂಘರ್ಷದಿಂದ ಸೃಷ್ಟಿಯಾಗಿರುವ ತೈಲ ಮತ್ತು ಆನಿಲ ಬಿಕ್ಕಟ್ಟು ಏಷ್ಯಾದ ರಾಷ್ಟ್ರಗಳನ್ನು ತೀವ್ರ ಸಂಕಷ್ಟಕ್ಕೆ ನೂಕಿವೆ. ಪರಿಣಾಮ ಫಿಲಿಫೈನ್ ಜಗತ್ತಿನ ಇಂಧನ ತುರ್ತು ಘೋಷಿಸಿದ ಮೊದಲ ರಾಷ್ಟ್ರವಾಗಿದೆ.
ಸದ್ಯ ಲಭ್ಯವಿರುವ ಇಂಧನವನ್ನು ಕ್ರಮವಾಗಿ ಬಳಸಲು ಹಾಗೂ ಸಂರಕ್ಷಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ಫಿಲಿಫೈನ್ ಅಧ್ಯಕ್ಷರಾದ ಫರ್ಡಿನಾಂಡ್ ಮಾಕ್ರೋಸ್ ಜೂನಿಯರ್ ಹೇಳಿಕೆ ನೀಡಿದ್ದಾರೆ.
ಅಮೆರಿಕ ,ಇಸ್ರೇಲ್ ಮತ್ತು ಇರಾನ್‌ನ ನಡುವಿನ ಸಂಘರ್ಷ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಹಡಗುಗಳಿಗೆ ನಿರ್ಬಂಧ ವಿಧಿಸಿತ್ತು. ಇದರಿಂದ ಫಿಲಿಫೈನ್ ನೇರ ದುಷ್ಪರಿಣಾಮಕ್ಕೆ ಒಳಗಾಗಿದ್ದು ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಜಗತ್ತು ತತ್ತರಿಸಿದೆ.
ಫಿಲಿಫೈನ್ಸ್ 98% ತೈಲವನ್ನು ಗಲ್ಫ್ ರಾಷ್ಟ್ರಗಳಿಂದ ಖರೀದಿಸುತ್ತಿತ್ತು. ಪ್ರಸ್ತುತ ಇಂಧನ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆಚತರಲಾಗಿದೆ ಎಂದಿದ್ದಾರೆ. ಯುದ್ಧ ಆರಂಭವಾದ ನಂತರ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹಿಂದಿಗಿಂತ ದುಪ್ಪಟ್ಟು ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಘೋಷಣೆಯಾಗಿರುವ ರಾಷ್ಟ್ರೀಯ ಇಂಧನ ತುರ್ತು ಒಂದು ವರ್ಷಗಳ ಕಾಲ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇಂಧನ ತುರ್ತಿನ ಬೆನ್ನಲ್ಲೇ ಫಿಲಿಫೈನ್ಸ್‌ನ ಅತೀ ದೊಡ್ಡ ಕಾರ್ಮಿಕ ಒಕ್ಕೂಟ ಕೆಎಮ್‌ಯು ಸರ್ಕಾರವನ್ನು ಕಟುವಾಗಿ ಟೀಕಿಸಿದ್ದುʼಎಲ್ಲವೂ ಸರಾಗವಾಗಿ ನಡೆಯುತ್ತಿದೆʼ ಎಂದು ಜನರ ದಾರಿ ತಪ್ಪಿಸುವ ಹೇಳೀಕೆ ನೀಡಿದ ಫಿಲಿಫೈನ್ ಸರ್ಕಾರ ಈಗ ತುರ್ತು ಘೋಷಿಸಿರುವುದರ ವಿರುದ್ಧ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದೆ. ಇದೇ ಮಂಗಳವಾರದಂದು ದೇಶದಲ್ಲಿ ಮುಂದಿನ 45 ದಿನಗಳಿಗೆ ಸಾಕಾಗುವಷ್ಟು ತೈಲ ದಾಸ್ತಾನಿದೆ ಎಂದು ಸರ್ಕಾರ ಹೇಳಿಕೆ ನೀಡಿತ್ತು ಈಗ ದಿಢೀರಾಗಿ ಇಂಧನ ತುರ್ತು ಘೋಷಿಸಿರುವುದು ಕಾರ್ಮಿಕರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಾರಿಗೆ ಇಲಾಖೆಯ ನೌಕರರು ಹಾಗೂ ಖಾಸಗಿ ಸಾರಿಗೆ ಸೇವೆಯಲ್ಲಿ ತೊಡಗಿದ್ದ ಚಾಲಕರು 2 ದಿನದ ಮುಷ್ಕರ ಕೈಗೊಳ್ಳಲು ನಿರ್ಧರಿಸಿವೆ.





