ಮಹಿಳಾ ಕ್ರಿಕೆಟ್‌ | ಭಾರತೀಯ ಮಹಿಳೆಯರ ಭಾಗವಹಿಸುವಿಕೆ ತೀವ್ರ ಏರಿಕೆ: ಬಿಬಿಸಿ ವರದಿ

Date:

ಭಾರತದಲ್ಲಿನ 15 ರಿಂದ 24 ವರ್ಷ ವಯಸ್ಸಿನ ಪ್ರತಿ ನಾಲ್ವರು ಯುವತಿಯರಲ್ಲಿ ಒಬ್ಬರು ಕ್ರೀಡೆಯನ್ನು ತಮ್ಮ ವೃತ್ತಿಜೀವನದ ಆಯ್ಕೆಯಾಗಿ ಪರಿಗಣಿಸಿದ್ದಾರೆ. 2020ರಿಂದೀಚೆಗೆ ಭಾರತದ 14 ರಾಜ್ಯಗಳಲ್ಲಿ ಕ್ರಿಕೆಟ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಎರಡರಷ್ಟು ಹೆಚ್ಚಾಗಿದೆ ಎಂದು ಬಿಬಿಸಿ ಮತ್ತು ಕಲೆಕ್ಟಿವ್ ನ್ಯೂಸ್‌ರೂಮ್ ಜಂಟಿಯಾಗಿ ನಡೆಸಿದ ಹೊಸ ಅಧ್ಯಯನವು ಹೇಳಿದೆ.

- Advertisement -

ಅಧ್ಯಯನ ನಡೆದ ರಾಜ್ಯಗಳಲ್ಲಿ, ತಾವು ಕ್ರಿಕೆಟ್ ಆಡುತ್ತೇವೆ ಎಂದು ಹೇಳುವ ಎಲ್ಲ ವಯಸ್ಸಿನ ಮಹಿಳೆಯರ ಪ್ರಮಾಣವು 2020ರಲ್ಲಿ 5% ರಷ್ಟಿತ್ತು, ಈಗ 10%ಗೆ ಏರಿಕೆಯಾಗಿದೆ. ಅಂತೆಯೇ, ತಾವು ಕ್ರಿಕೆಟ್ ಆಡುವುದಾಗಿ ಹೇಳುವ 15ರಿಂದ 24 ವರ್ಷ ವಯಸ್ಸಿನ ಯುವತಿಯರ ಸಂಖ್ಯೆ 2020ರಲ್ಲಿ 6% ಇತ್ತು. ಈಗ, 16%ಗೆ ಏರಿಕೆಯಾಗಿದೆ. ಕ್ರೀಡೆಯಲ್ಲಿ ಯುವತಿಯರ ಭಾಗವಹಿಸುವಿಕೆಯು ಇನ್ನೂ ವೇಗವಾಗಿ ಬೆಳೆಯುತ್ತಿದೆ ಎಂದು ವರದಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಸಮೀಕ್ಷೆ ನಡೆಸಲಾದ ರಾಜ್ಯಗಳಲ್ಲಿ ಮಹಿಳೆಯರು ಅತಿ ಹೆಚ್ಚು ಆಡುವ ಕ್ರೀಡೆಯಾಗಿ ಕ್ರಿಕೆಟ್ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. 2020ರಲ್ಲಿ ಇದು ಕಬಡ್ಡಿಗಿಂತ ಸ್ವಲ್ಪವೇ ಮುಂದಿತ್ತು. ಆದರೆ, ಹೊಸ ಅಂಕಿಅಂಶಗಳ ಪ್ರಕಾರ ಈಗ ಕ್ರಿಕೆಟ್ ಗಣನೀಯವಾಗಿ ಮುನ್ನಡೆ ಸಾಧಿಸಿದೆ. ಸಮೀಕ್ಷೆ ನಡೆದ 14 ರಾಜ್ಯಗಳಲ್ಲಿ ಎರಡು ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಕ್ರಿಕೆಟ್ ಆಡುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಉತ್ತರ ಪ್ರದೇಶದಲ್ಲಿ ಈ ಭಾಗವಹಿಸುವಿಕೆಯ ಮಟ್ಟವು ಹತ್ತು ಪಟ್ಟು ಹೆಚ್ಚಾಗಿದೆ.

ಅಲ್ಲದೆ, ಹಲವು ರಾಜ್ಯಗಳಲ್ಲಿ ಕ್ರಿಕೆಟ್ ಭಾಗವಹಿಸುವಿಕೆಯಲ್ಲಿನ ಲಿಂಗ ಅಸಮಾನತೆಯೂ ಕಡಿಮೆಯಾಗಿದೆ. ಈ ಹಿಂದೆ, ಕ್ರಿಕೆಟ್ ಆಡುವ ಪ್ರತಿ ಒಬ್ಬ ಮಹಿಳೆಗೆ ಐವರು ಪುರುಷರ ಅನುಪಾತವಿತ್ತು (1:5), ಆದರೆ, ಅದು 1:3ಕ್ಕೆ ಇಳಿದಿದೆ ಎಂದು ಅಧ್ಯಯನ ಹೇಳಿದೆ.

ಅಧ್ಯಯನವು ಇನ್ನೂ ಕೆಲವು ವ್ಯಾಪಕ ಬದಲಾವಣೆಗಳನ್ನು ಸೂಚಿಸಿದೆ; ಸಮೀಕ್ಷೆಯಲ್ಲಿ ಭಾಗವಹಿಸಿದ 15 ರಿಂದ 24 ವರ್ಷದ 26% ಯುವತಿಯರು ಕ್ರೀಡೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಬಗ್ಗೆ ಯೋಚಿಸಿದ್ದೇವೆ ಎಂದು ಹೇಳಿದ್ದಾರೆ. ಇದು 2020ರಲ್ಲಿ 16% ರಷ್ಟಿತ್ತು. ಈ ವಿಷಯದಲ್ಲಿ ತಮಿಳುನಾಡು (27%), ಮಧ್ಯಪ್ರದೇಶ (19%) ಮತ್ತು ಮೇಘಾಲಯ (19%) ಅಗ್ರಸ್ಥಾನದಲ್ಲಿವೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಳೆಯರಲ್ಲಿ 51%ರಷ್ಟು ಮಂದಿ ತಾವು ಕಳೆದ ಆರು ತಿಂಗಳಲ್ಲಿ ಮಹಿಳಾ ಕ್ರೀಡೆಗಳ ಪ್ರಸಾರವನ್ನು ವೀಕ್ಷಿಸುತ್ತಿರುವುದಾಗಿಯೂ, ಮಹಿಳಾ ಕ್ರೀಡೆಯನ್ನು ‘ಫಾಲೋ’ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ. ಇದು ಈಗ ಪುರುಷರ ಕ್ರೀಡಾ ಪ್ರಸಾರಕ್ಕಿಂತ ಕೇವಲ 10% ಮಾತ್ರವೇ ಕಡಿಮೆ ಇದೆ. ಪುರುಷರ ಕ್ರೀಡೆ ವೀಕ್ಷಿಸುವವರ ಸಂಖ್ಯೆ 61% ಇದೆ.

ಮಹಿಳಾ ಪ್ರೀಮಿಯರ್ ಲೀಗ್ (WPL)

ಮಹಿಳಾ ಪ್ರೀಮಿಯರ್ ಲೀಗ್‌ನ ಪೂರ್ವಗಾಮಿಯಾಗಿದ್ದ ‘T20 ಚಾಲೆಂಜ್’ ವೀಕ್ಷಕರ ಮಟ್ಟವು 2020ರಲ್ಲಿ 15% ಇತ್ತು. ಈಗ ಡಬ್ಲ್ಯೂಪಿಎಲ್‌ ವೀಕ್ಷಿಸುವ ಮಹಿಳೆಯರ ಸಂಖ್ಯೆ 28%ಗೆ ಏರಿಕೆಯಾಗಿದೆ. ಈ ಮಟ್ಟವು ಪುರುಷರ ಐಪಿಎಲ್‌ ವೀಕ್ಷಕರ ಸಂಖ್ಯೆಗೆ ಹತ್ತಿರವಾಗುತ್ತಿದೆ. ಭಾರತೀಯ ಕ್ರೀಡಾಪಟುಗಳ ಇತ್ತೀಚಿನ ಯಶಸ್ಸುಗಳು ಈ ಬೆಳವಣಿಗೆಗೆ ಕಾರಣವಾಗಿರಬಹುದು ಎಂದು ಅಧ್ಯಯನ ಸೂಚಿಸುತ್ತದೆ.

ಇತರ ಕ್ರೀಡೆಗಳು

ಸಮೀಕ್ಷೆಗೆ ಒಳಪಟ್ಟ ಮಹಿಳೆಯರಲ್ಲಿ ಬ್ಯಾಡ್ಮಿಂಟನ್‌ನಲ್ಲಿನ ಭಾಗವಹಿಸುವಿಕೆಯೂ ಹೆಚ್ಚಾಗಿದೆ. ವಿಶೇಷವಾಗಿ ಪಂಜಾಬ್, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಯುವತಿಯರು ಬ್ಯಾಡ್ಮಿಂಟನ್‌ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಅಧ್ಯಯನ ಗುರಿತಿಸಿದ ಸವಾಲುಗಳು

  • ಸುರಕ್ಷತೆ: ಯಾವುದೇ ಕ್ರೀಡೆಯನ್ನು ಆಡದ ಮಹಿಳೆಯರಲ್ಲಿ 13% ಯುವತಿಯರು ಸುರಕ್ಷತೆಯ ಕಾಳಜಿಯನ್ನು ಒಂದು ಅಡ್ಡಿಯಾಗಿ ಉಲ್ಲೇಖಿಸಿದ್ದಾರೆ.
  • ರೂಢಿಗತ ಮಾದರಿಗಳು: ಪ್ರತಿಕ್ರಿಯಿಸಿದವರಲ್ಲಿ 43%ರಷ್ಟು ಯುವತಿಯರು ಮಹಿಳಾ ಕ್ರೀಡೆಯು ಪುರುಷರ ಕ್ರೀಡೆಗಿಂತ ಕಡಿಮೆ ಮನೋರಂಜನೆಯನ್ನು ನೀಡುತ್ತದೆ ಎಂದಿದ್ದಾರೆ. 46% ಮಂದಿ ಮಹಿಳಾ ಕ್ರೀಡಾಪಟುಗಳು ಆಕರ್ಷಕವಾಗಿರಬೇಕು ಎಂದು ನಂಬುತ್ತಾರೆ.
  • ಸಮಯದ ಒತ್ತಡ: ಕ್ರೀಡೆ ಆಡದವರಲ್ಲಿ 65% ಮಹಿಳೆಯರು ಸಮಯದ ಅಭಾವವೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

“2020 ಕ್ಕೆ ಹೋಲಿಸಿದರೆ ಹೆಚ್ಚಿನ ಭಾರತೀಯ ಮಹಿಳೆಯರು ಕ್ರೀಡೆಗಳನ್ನು ಆಡುತ್ತಿರುವುದು ಮತ್ತು ವೀಕ್ಷಿಸುತ್ತಿರುವುದು ಉತ್ತೇಜನಕಾರಿಯಾಗಿದೆ. ನಮ್ಮ ವೇದಿಕೆಗಳ ಮೂಲಕ ಮಹಿಳಾ ಕ್ರೀಡಾಪಟುಗಳ ಪ್ರಖ್ಯಾತಿಯನ್ನು ಹೆಚ್ಚಿಸಲು ಬಿಬಿಸಿ ಹೆಮ್ಮೆಪಡುತ್ತದೆ. ಅವರ ಕಥೆಗಳನ್ನು ಜಗತ್ತಿಗೆ ತಿಳಿಸಲು ನಾವು ಬದ್ಧರಾಗಿದ್ದೇವೆ” ಎಂದು ಬಿಬಿಸಿ ನ್ಯೂಸ್ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಟಿಮ್ ಆಫೋರ್ಡ್ ಹೇಳಿದ್ದಾರೆ.

“ಈ ಅಧ್ಯಯನವು ಪ್ರಗತಿ ಮತ್ತು ಮುಂದುವರಿದ ಅಡೆತಡೆಗಳೆರಡನ್ನೂ ತೋರಿಸುತ್ತದೆ. ಭಾಗವಹಿಸುವಿಕೆ ಮತ್ತು ವೀಕ್ಷಕರ ಸಂಖ್ಯೆ ವೇಗವಾಗಿ ಏರುತ್ತಿದ್ದರೂ, ರೂಢಿಗತ ಮಾದರಿಗಳು ಮತ್ತು ಪ್ರಾಯೋಗಿಕ ಸವಾಲುಗಳು ಹಾಗೆಯೇ ಉಳಿದಿವೆ. ಈ ದತ್ತಾಂಶವು ಮಹಿಳಾ ಕ್ರೀಡಾಪಟುಗಳನ್ನು ಬೆಂಬಲಿಸಲು ಹೆಚ್ಚಿನ ಚರ್ಚೆ ಮತ್ತು ಕ್ರಮಗಳಿಗೆ ಪ್ರೇರಣೆ ನೀಡುತ್ತದೆಯೆಂದು ನಾವು ಭಾವಿಸುತ್ತೇವೆ,” ಎಂದು ಕಲೆಕ್ಟಿವ್ ನ್ಯೂಸ್‌ರೂಮ್‌ನ ಮುಖ್ಯ ಸಂಪಾದಕಿ, ಸಹ-ಸಂಸ್ಥಾಪಕಿ ರೂಪಾ ಝಾ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವರ್ಷಗಳಿಂದ ನೀರಿಲ್ಲದೆ ಸೊರಗಿದ ಗ್ರಾಮ; ಹತಾಶೆಯಿಂದ ಊರನ್ನೇ ಬಿಕರಿಗಿಟ್ಟ ನಿವಾಸಿಗಳು

ಒಂದೆಡೆ ನೀರಾವರಿ ಯೋಜನೆ, ಇನ್ನೊಂದೆಡೆ ನೀರಿಗಾಗಿ ಪರದಾಡುವ ರೈತರು. ಯೋಜನೆ ಆರಂಭವಾಗಿ...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ...

ಬೆಂಗಳೂರು | ಆನೆ ದಾಳಿಗೆ ವಾಕಿಂಗ್ ತೆರಳಿದ್ದ ವ್ಯಕ್ತಿ ಬಲಿ

ಇಂದು ಮುಂಜಾನೆ ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟಿರುವ ಘಟನೆ...

ಅಮೆರಿಕದಲ್ಲಿ ಡೀಸೆಲ್ ರಫ್ತು ನಿಷೇಧದ ಚರ್ಚೆ; ಭಾರತದ ಮೇಲಾಗುವ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ...