ಪರ್ವತದಲ್ಲಿ ನಾಪತ್ತೆ | ಟೂತ್‌ಪೇಸ್ಟ್‌ ತಿಂದು 10 ದಿನಗಳ ಕಾಲ ಬದುಕಿ ಬಂದ ಯಾತ್ರಿಕ

Date:

ಏಕಾಂಗಿಯಾಗಿ ಪರ್ವತ ಚಾರಣಕ್ಕೆ ತೆರಳಿದ್ದ ಅಪ್ತಾಪ್ತನೊಬ್ಬ ಪರ್ವತದಲ್ಲಿ ತಪ್ಪಸಿಕೊಂಡು, ಆಹಾರವೂ ಸಿಗದೆ ಟೂತ್‌ಪೇಸ್ಟ್‌ ತಿಂದೇ 10 ದಿನಗಳ ಕಾಲ ಬದುಕಿ ಬಂದಿರುವ ಘಟನೆ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಡೆದಿದೆ.

- Advertisement -

ಶಾಂಕ್ಸಿ ಪ್ರಾಂತ್ಯದ ಸನ್ ಲಿಯಾಂಗ್ ಎಂಬ 17 ವರ್ಷದ ಬಾಲಕ ಫೆಬ್ರವರಿ 8 ರಂದು ಕ್ವಿನ್ಲಿಂಗ್ ಪರ್ವತ ಶ್ರೇಣಿಯಲ್ಲಿ ಏಕಾಂಗಿ ಚಾರಣಕ್ಕಾಗಿ ತೆರಳಿದ್ದ. ಬಾಲಕನ ಚಾರಣ ಆರಂಭವಾದ ಎರಡು ದಿನಗಳ ಬಳಿಕ, ಆತನ ಬಳಿ ಇದ್ದ ಬ್ಯಾಟರಿಗಳು ಖಾಲಿಯಾದ ಕಾರಣ ಬಾಲಕ ತನ್ನ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಎಂದು ಹೇಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಏಕಾಂಗಿಯಾಗಿದ್ದ ತೆರಳಿದ್ದ ಬಾಲಕ ಹೊರಗಿನ ಪ್ರಪಂಚವನ್ನು ಸಂಪರ್ಕಿಸಲು ಬೇರೆ ಯಾವುದೇ ಮಾರ್ಗಗಳಿಲ್ಲದೆ ಕಂಗಾಲಾಗಿದ್ದ. ತೊರೆಯೊಂದರ ಅಂಚಿನಲ್ಲಿ ನಡೆಯಲು ಪ್ರಾರಂಭಿಸಿದ್ದ. ಈ ವೇಳೆ, ಹಲವು ಬಾರಿ ಬಿದ್ದು, ಆತನಿಗೆ ಬಲಗೈ ಕೂಡ ಮುರಿದುಹೋಗಿದೆ ಎಂದು ತಿಳಿದುಬಂದಿದೆ

ಹಿಂದಿರುಗಲು ನಿರ್ದಿಷ್ಟ ದಾರಿಯೂ ಸಿಗದೆ, ತಿನ್ನಲು ಆಹಾರವೂ ಇಲ್ಲದೆ ವಿಶಾಲ ಪರ್ವತದಲ್ಲಿ ಏಕಾಂಗಿಯಾಗಿದ್ದ ಲಿಯಾಂಗ್, ನದಿ ನೀರು, ಹಿಮ ಹಾಗೂ ಟೂತ್‌ಪೇಸ್ಟ್‌ ಸೇವಿಸಿ ಬದುಕುಳಿದ್ದಿದ್ದಾನೆ. ಚಳಿಯಿಂದ ರಕ್ಷಣೆ ಪಡೆಯಲು ದೊಡ್ಡ ಬಂಡೆಯ ಹಿಂಭಾಗದಲ್ಲಿ ಒಣ ಹುಲ್ಲು ಮತ್ತು ಎಲೆಗಳನ್ನು ಬಳಸಿ ತಾತ್ಕಾಲಿಕ ಹಾಸಿಗೆಯನ್ನು ನಿರ್ಮಿಸಿಕೊಂಡಿದ್ದ ಎಂದು ವರದಿಯಾಗಿದೆ.

ಸಂಪರ್ಕಕ್ಕೆ ದೊರೆಯದ ಮಗನನ್ನು ಹುಡುಕಲು ಆತನ ಕುಟುಂಬವು ರಕ್ಷಣಾ ತಂಡದ ಮೊರೆಹೋಗಿತ್ತು. ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದ ರಕ್ಷಣಾ ತಂಡವು ಫೆಬ್ರವರಿ 17ರಂದು ಆತನನ್ನು ಪತ್ತೆ ಮಾಡಿದೆ. ಬಾಲಕನನ್ನು ರಕ್ಷಿಸಿದೆ.

“ಘಟನೆಯ ನಂತರ ನನಗೆ ಭಯವಾಗುತ್ತಿದೆ. ಈ ಪ್ರದೇಶ ಚಾರಣಕ್ಕೆ ಸೂಕ್ತವಲ್ಲ. ಜೋರಾಗಿ ಗಾಳಿ ಬೀಸುತ್ತದೆ. ನನ್ನೊಂದಿಗೆ ಎರಡು ಆಲ್ಪೆನ್‌ಸ್ಟಾಕ್‌ಗಳನ್ನು ಕೊಂಡೊಯ್ದಿದ್ದೆ. ಆದರೂ, ಚಾರಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹಿಮ ಎಷ್ಟು ದಟ್ಟವಾಗಿತ್ತೆಂದರೆ, ಕಣ್ಣುಗಳನ್ನು ತೆರೆಯುವುದೂ ಕಷ್ಟವಾಗಿತ್ತು” ಎಂದು ಲಿಯಾಂಗ್ ಹೇಳಿಕೊಂಡಿದ್ದಾನೆ.

ಕಳೆದ 20 ವರ್ಷಗಳಲ್ಲಿ ಈ ಅಪಾಯಕಾರಿ ಹಾದಿಯಲ್ಲಿ 50ಕ್ಕೂ ಹೆಚ್ಚು ಪಾದಯಾತ್ರಿಕರು ಕಾಣೆಯಾಗಿದ್ದಾರೆ ಅಥವಾ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದಲ್ಲಿ ಡೀಸೆಲ್ ರಫ್ತು ನಿಷೇಧದ ಚರ್ಚೆ; ಭಾರತದ ಮೇಲಾಗುವ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ...

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...