ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

Date:

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ ರೈತರ ಬೆನ್ನಿಗೆ ಭಾರವಾಗಿದೆ. ಇದರಿಂದಾಗಿ ಗ್ರಾಹಕರು ಮತ್ತು ರೈತರು ಇಬ್ಬರೂ ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಸರ್ಕಾರದ ನೀತಿಗಳೇ ಕಾರಣವಾಗಿವೆ.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಒಂದು ಲೀಟರ್ ಸೂರ್ಯಕಾಂತಿ ಅಥವಾ ಪಾಮ್ ತೈಲದ ಬೆಲೆ ಇತ್ತೀಚೆಗೆ ₹10-15ರಷ್ಟು ಏರಿಕೆಯಾಗಿದೆ. ಮಧ್ಯಪ್ರಾಚ್ಯ ಸಂಘರ್ಷ, ಕಚ್ಚಾ ತೈಲ ಏರಿಕೆ, ಆಮದು ಬೆಲೆ ಹೆಚ್ಚಳದಿಂದಾಗಿ ಖಾದ್ಯತೈಲದ ಬೆಲೆ ಗಗನಕ್ಕೇರುತ್ತಿದೆ. ಆದರೆ ಇದೇ ಸಮಯದಲ್ಲಿ ರಾಜ್ಯದ ಕುಸುಬೆ ಬೆಳೆಗಾರರು ಮಾತ್ರ ತಮ್ಮ ಉತ್ಪನ್ನಕ್ಕೆ ಕ್ವಿಂಟಲ್‌ಗೆ ₹4,000-5,000 ಪಡೆಯುತ್ತಿದ್ದಾರೆ. ಒಂದು ಕಡೆ ಗ್ರಾಹಕರು ತೈಲಕ್ಕೆ ಹೆಚ್ಚು ಹಣ ತೆರುತ್ತಿದ್ದರೆ, ಇನ್ನೊಂದು ಕಡೆ ಎಣ್ಣೆಕಾಳುಗಳನ್ನು ಬೆಳೆದ ರೈತರ ಕೈಗೆ ಪುಡಿಗಾಸು ಸಿಗುತ್ತಿದೆ.

- Advertisement -

ರಾಜ್ಯದ ಕಲಬುರಗಿ, ಬೀದರ್‌, ರಾಯಚೂರು, ವಿಜಯಪುರ, ಗದಗ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಿನ ರೈತರು ಕುಸುಬೆ ಬೇಸಾಯ ಮಾಡುತ್ತಾರೆ. ಕಲಬುರಗಿ ಜಿಲ್ಲೆಯೊಂದರಲ್ಲಿಯೇ 16 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕುಸುಬೆ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ. ಜತೆಗೆ ಅಡುಗೆ ಎಣ್ಣೆ ದರ ಹೆಚ್ಚಳದಿಂದ ಎಣ್ಣೆಕಾಳು ಬೆಳೆಗಳಿಗೆ ಸಹಜವಾಗಿಯೇ ಉತ್ತಮ ದರ ಸಿಗುತ್ತದೆ ಎಂಬ ನಿರೀಕ್ಷೆಯೂ ಇದೆ. ಆದರೆ ಕಲಬುರಗಿ ಎಪಿಎಂಸಿಯಲ್ಲಿ ಸದ್ಯ, ಕ್ವಿಂಟಲ್‌ ಕುಸುಬೆ ಕನಿಷ್ಠ ₹3,500 ಹಾಗೂ ಗರಿಷ್ಠ ₹4,800(ಮಾರ್ಚ್ 14)ರಂತೆ ಬಿಕರಿಯಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಕೇಂದ್ರ ಸರ್ಕಾರ 2025–26ನೇ ಸಾಲಿಗೆ ಕ್ವಿಂಟಲ್‌ ಕುಸುಬೆಗೆ ₹5,490 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ‘ಬೆಂಬಲ ಬೆಲೆಯಲ್ಲಿ ಖರೀದಿ ಆರಂಭಿಸಿ’ ಎಂದು ರೈತ ಸಂಘಗಳು ತಹಶೀಲ್ದಾರರಿಗೆ ಮನವಿ ಮಾಡುತ್ತಿದ್ದು, ಘೋಷಣೆಗಳನ್ನು ಕೂಗುತ್ತಿದ್ದಾರೆ. ಕುಸುಬೆ ಖರೀದಿಗೆ ಕೇಂದ್ರಗಳನ್ನು ತೆರೆಯಲು ಅನುಮೋದನೆ ಕೋರಿ ರಾಜ್ಯ ಸರ್ಕಾರ ಮಾರ್ಚ್ 7ರಂದು ಕೇಂದ್ರಕ್ಕೆ ಪತ್ರ ಬರೆದಿದೆ. ಆದರೂ, ಈತನಕ ಖರೀದಿ ಕೇಂದ್ರ ತೆರೆದಿಲ್ಲ.

Advertisements

ಇದು ಕೇವಲ ಕುಸುಬೆಯ ಸಮಸ್ಯೆಯಲ್ಲ. ಭಾರತದ ಶೇ.60ಕ್ಕಿಂತ ಅಧಿಕ ಖಾದ್ಯತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಪಾಮ್ ಆಯಿಲ್, ಸೋಯಾ, ಸನ್‌ಫ್ಲವರ್ ಆಯಿಲ್ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಏರಿದಾಗ ದೇಶೀಯ ತೈಲ ಬೆಲೆಯೂ ಏರುತ್ತದೆ. ಆದರೆ ದೇಶೀಯ ಎಣ್ಣೆಬೀಜಗಳಾದ ಕುಸುಬೆ, ಸೂರ್ಯಕಾಂತಿ, ಶೇಂಗಾ ಬೆಳೆಗಾರರಿಗೆ ಮಾರುಕಟ್ಟೆ ಬೆಲೆ ಕಡಿಮೆಯಾಗುತ್ತದೆ ಏಕೆ? ಆಮದು ಸುಲಭ, ಸ್ಥಳೀಯ ಸಂಸ್ಕರಣಾ ಘಟಕಗಳ ಕೊರತೆ, ಸರ್ಕಾರದ ಖರೀದಿ ಯಂತ್ರದ ಅಸಮರ್ಥತೆಯೇ ಬೆಲೆ ಕುಸಿತಕ್ಕೆ ಕಾರಣವಾಗುತ್ತದೆ. ಕುಸುಬೆ ತೈಲ ಆರೋಗ್ಯಕರ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ರೈತರು ಉತ್ಪಾದಿಸಿದರೂ ಅದು ಮಾರುಕಟ್ಟೆಯನ್ನು ತಲುಪುವುದಿಲ್ಲ. ತಲುಪಿದರೂ ಉತ್ತಮ ಬೆಲೆ ಸಿಗುವುದಿಲ್ಲ.

ಬಿತ್ತನೆ ವೇಳೆ ಕ್ವಿಂಟಲ್‌ ಕುಸುಬೆ ದರ ₹10 ಸಾವಿರದ ಆಸುಪಾಸಿನಲ್ಲಿದ್ದು, ಇದೀಗ ಅದರ ಅರ್ಧಕ್ಕೆ ಬೆಲೆ ಕುಸಿತವಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಉತ್ತಮ ದರ ಸಿಗುವ ತನಕ ಕಾಯುವುದು ಅನಿವಾರ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಲಬುರಗಿ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಕೆಲವು ರೈತರು ಎಕರೆಗೆ 5 ಕ್ವಿಂಟಲ್ ಕುಸುಬೆ ಬೆಳೆದಿದ್ದಾರೆ. ಎಕರೆಗೆ ₹25,000 ವೆಚ್ಚವಾಗಿದೆ. ಬೆಲೆ ಕಡಿಮೆಯಾದರೆ 10,000ಕ್ಕಿಂತಲೂ ಅಧಿಕ ನಷ್ಟ ಉಂಟಾಗುತ್ತದೆ. ಬಹುತೇಕರು ಮುಂದಿನ ದಿನಗಳಲ್ಲಿ ಕುಸುಬೆ ಬೆಳೆಯುವುದನ್ನು ಬಿಡಬೇಕು. ಬದಲಿಗೆ ಹತ್ತಿ ಅಥವಾ ಜೋಳ ಬೆಳೆಗೆ ಬದಲಾಗಬೇಕು. ಇದರಿಂದಾಗಿ ಸಾಲ, ಆತ್ಮಹತ್ಯೆಯ ಭೀತಿ ಹೆಚ್ಚುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಸರ್ಕಾರ MSP ನಿಗದಿಪಡಿಸುತ್ತದೆ. ಆದರೆ ಖರೀದಿ ಕೇಂದ್ರವಿಲ್ಲದಿದ್ದರೆ ಅದು ಕಾಗದಕ್ಕೆ, ಪತ್ರಿಕಾ ಹೇಳಿಕೆಗೆ ಮಾತ್ರ ಸೀಮಿತವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಕೂಡಲೇ ಕುಸುಬೆ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು. ರಾಜ್ಯ ಸರ್ಕಾರ ತನ್ನದೇ ಆದ ಬೆಂಬಲ ಬೆಲೆ ಘೋಷಿಸಿ ಖರೀದಿ ಮಾಡಬೇಕು. ಜತೆಗೆ ಸ್ಥಳೀಯ ತೈಲ ಸಂಸ್ಕರಣಾ ಘಟಕಗಳನ್ನು ಪ್ರೋತ್ಸಾಹಿಸಬೇಕು. ಕುಸುಬೆ ತೈಲಕ್ಕೆ ಬ್ರ್ಯಾಂಡಿಂಗ್ ಮಾಡಿ, ಆರೋಗ್ಯಕರ ತೈಲವೆಂದು ಮಾರಾಟ ಮಾಡಿದರೆ ಬೆಲೆ ಏರುತ್ತದೆ. ಆಮದು ತೆರಿಗೆ ಹೆಚ್ಚಿಸಿ ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕು” ಎಂದು ಆಗ್ರಹಿಸಿದರು.

ಭಾರತದ ಆಹಾರ ಭದ್ರತೆಗೆ ರೈತರು ಮೂಲ. ಆದರೆ ಅವರ ನಷ್ಟವನ್ನು ಗ್ರಾಹಕರ ಏರಿಕೆಯೊಂದಿಗೆ ಸರಿದೂಗಿಸುವುದು ತಪ್ಪು. ಕುಸುಬೆ ಬೆಳೆಗಾರರಿಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ಮುಂದಿನ ಸೀಸನ್‌ನಲ್ಲಿ ಎಣ್ಣೆಬೀಜ ಬೆಳೆ ಬೆಳೆಯುವುದೇ ಕುಂಠಿತವಾಗುತ್ತದೆ. ಆಗ ಆಮದು ಬೆಲೆ ಇನ್ನೂ ಏರುತ್ತದೆ. ಇದು ದೀರ್ಘಕಾಲೀನ ಸಮಸ್ಯೆ. ಹಾಗಾಗಿ ಸರ್ಕಾರ, ವಿರೋಧ ಪಕ್ಷಗಳು, ರೈತ ಸಂಘಗಳು ಒಟ್ಟಾಗಿ ಚಿಂತಿಸಬೇಕು.

ಇದನ್ನೂ ಓದಿದ್ದೀರಾ? ಯುದ್ಧ | ರಸಗೊಬ್ಬರ ಕೊರತೆ: ಭಾರತೀಯ ಕೃಷಿ ಮತ್ತು ಕೃಷಿಕರ ಮೇಲೆ ದುಷ್ಪರಿಣಾಮ ಬೀರಲಿದೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ ರೈತರ ಬೆನ್ನಿಗೆ ಭಾರವಾಗಿದೆ. ಇದರಿಂದಾಗಿ ಗ್ರಾಹಕರು ಮತ್ತು ರೈತರು ಇಬ್ಬರೂ ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಸರ್ಕಾರದ ನೀತಿಗಳ ವೈಫಲ್ಯವೇ ಕಾರಣವಾಗಿದೆ. ರೈತರಿಗೆ ನ್ಯಾಯ, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಖಾದ್ಯ ತೈಲ ದೊರೆಯುವಂತೆ ಮಾಡಿದಾಗ ಮಾತ್ರ ನಿಜವಾದ ‘ಆತ್ಮನಿರ್ಭರ ಭಾರತ’ದ ಗುರಿ ಸಾಧಿಸಿದಂತಾಗಬಹುದು.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...