ಮಣಿಪುರ ರಾಜ್ಯದಲ್ಲಿ ಇಂದು (ಏ.21) ಮುಂಜಾನೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ ಸುಮಾರು 5:59ರ ವೇಳೆಗೆ ಈ ಕಂಪನ ಸಂಭವಿಸಿದ್ದು, ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯಲ್ಲಿ ಇದರ ಕೇಂದ್ರಬಿಂದು ಇತ್ತು ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ (NCS) ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 62 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಕಾಮ್‌ಜಾಂಗ್ ಜಿಲ್ಲೆಯಲ್ಲಿ ತೀವ್ರತೆ ಹೆಚ್ಚಿದ್ದರೂ, ಇದರ ಕಂಪನದ ಅನುಭವವು ನೆರೆಯ ಉಕ್ರುಲ್ ಜಿಲ್ಲೆ ಹಾಗೂ ರಾಜ್ಯದ ರಾಜಧಾನಿ ಇಂಫಾಲ ನಗರದಲ್ಲಿಯೂ ಕಂಡುಬಂದಿದೆ. ಅಲ್ಲದೆ, ಗಡಿ ರಾಜ್ಯ ಮೇಘಾಲಯದ ಕೆಲವು ಭಾಗಗಳಲ್ಲಿಯೂ ಲಘು ಭೂಕಂಪನವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನಾರಿ ಶಕ್ತಿ Vs ನೇತಾರ ಶಕ್ತಿ: ಮಹಿಳಾ ಮೀಸಲಾತಿ ಮಸೂದೆ ರಾಜಕೀಯದಾಟ
ಸದ್ಯದ ಮಾಹಿತಿ ಪ್ರಕಾರ ಈವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲ ಮತ್ತು ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.




