‘ಕೇಸರೀಕರಣದ ವಿಷವರ್ತುಲ’ಕ್ಕೆ ಸಿಲುಕಿದ ಹಬ್ಬ: ‘ಬ್ಯಾಂಡ್‌ವ್ಯಾಗನ್ ಫ್ಯಾಲಸಿ’ ಚಿತ್ರಕಲಾ ಪ್ರದರ್ಶನ

Date:

ಹಬ್ಬ, ಜಾತ್ರೆ ಎಂದರೆ ವೈಭವ, ಮಿನುಗುವ ಉಡುಪುಗಳ ಸಂಭ್ರಮ. ಸುಮಾರು 20 ವರ್ಷಗಳ ಹಿಂದಿನವರೆಗೂ ಯಾವುದೇ ಹಬ್ಬಕ್ಕೂ ಬಣ್ಣಗಳ ಹಂಗಿರಲಿಲ್ಲ. ಆದರೆ ಇಂದು ಕ್ರಮೇಣ ಎಲ್ಲವೂ ಬದಲಾಗುತ್ತಿದೆ. ಬಣ್ಣಗಳ ಹಿಂದಿರುವ ರಾಜಕೀಯದ ಅರಿವಿಲ್ಲದೆ ಅದೆಷ್ಟೋ ಜನರು ತಮ್ಮದೇ ಪರಂಪರೆ ಮತ್ತು ಇತಿಹಾಸವನ್ನು ಮರೆಯುತ್ತಿದ್ದಾರೆ. ಕಣ್ಣಿಗೆ ಕಾಣದ ಈ ರಾಜಕೀಯ ತುಂಬಿದ ಸಾಂಸ್ಕೃತಿಕ ಪಲ್ಲಟವನ್ನು ತಮ್ಮ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ಚಿತ್ರ ಕಲಾವಿದ ದುಷ್ಯಂತ್ ಎಚ್‌ ಪಿ.

- Advertisement -

ಜೂನ್ 25ರಿಂದ ಜೂನ್ 30ರವರೆಗೆ 1ಶಾಂತಿರೋಡ್ ಸ್ಟುಡಿಯೋ/ಗ್ಯಾಲರಿಯಲ್ಲಿ ದುಷ್ಯಂತ ಎಚ್ ಪಿ ಅವರ ‘ಬ್ಯಾಂಡ್‌ವ್ಯಾಗನ್ ಫಾಲಸಿ’ ಚಿತ್ರಕಲಾ ಪ್ರದರ್ಶನ ನಡೆಯುತ್ತಿದೆ. ಜೂನ್ 25ರಂದು ಸಂಜೆ 5 ಗಂಟೆಗೆ ಪ್ರದರ್ಶನ ಉದ್ಘಾಟನೆಯಾಗಿದ್ದು, ಜೂನ್ 30ರವರೆಗೆ ಚಿತ್ರ ಕಲೆಯನ್ನು ನೋಡುವ ಅವಕಾಶವಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ಅಶೋಕ್ ಸಿಂಘಾಲ್ ಜನ್ಮಶತಮಾನೋತ್ಸವ: ಕೋಮುವಾದದ ರೂವಾರಿಯ ವೈಭವೀಕರಣ –...

ಬೆಂಗಳೂರಿನಿಂದ ದೆಹಲಿಯವರೆಗೆ ನಡೆಯುತ್ತಿರುವ ಅಶೋಕ್ ಸಿಂಘಾಲ್ ಅವರ ಜನ್ಮಶತಮಾನೋತ್ಸವದ ಆಚರಣೆಗಳು ಭಾರತದ ಪ್ರಜಾಸತ್ತಾತ್ಮಕ ಭವಿಷ್ಯಕ್ಕೆ ಒಡ್ಡಿರುವ ಅಪಾಯದ ಮುನ್ಸೂಚನೆಯಾಗಿವೆ. ಕೋಮು ಸೌಹಾರ್ದತೆಗೆ ಕೊಳ್ಳಿ ಇಟ್ಟ, ಹಿಂಸಾಚಾರಗಳನ್ನು ಪ್ರೇರೇಪಿಸಿದ ಮತ್ತು ದೇಶದ ಬಹುತ್ವವನ್ನು ಸದಾ...

ಇದನ್ನೂ ಓದಿ: ಸ್ಥಿರಚಿತ್ರಕ್ಕೆ ಚಲನೆಯ ಜೀವ: ಚಿತ್ರಕಲೆ ಮತ್ತು ಸಿನಿಮಾದ ಬೆಸುಗೆ

ಏನಿದು ‘ಬ್ಯಾಂಡ್‌ವ್ಯಾಗನ್ ಫಾಲಸಿ’?

ಬ್ಯಾಂಡ್‌ವ್ಯಾಗನ್ ಫ್ಯಾಲಸಿ (Bandwagon Fallacy) ಎಂದರೆ “ಒಂದು ವಿಷಯವನ್ನು ಬಹಳಷ್ಟು ಜನರು ನಂಬುತ್ತಾರೆ ಅಥವಾ ಮಾಡುತ್ತಾರೆ ಎಂದಮಾತ್ರಕ್ಕೆ ಅದು ಸರಿಯಾಗಿಯೇ ಇರಬೇಕು” ಎಂದು ತಪ್ಪು ತೀರ್ಮಾನಕ್ಕೆ ಬರುವ ಒಂದು ತಾರ್ಕಿಕ ದೋಷ (Logical Fallacy). ಇನ್ನೂ ಸರಳವಾಗಿ ಹೇಳುವುದಾದರೆ, ಇದನ್ನು “ಕುರಿ ಹಿಂಡಿನ ಮಾನಸಿಕತೆ” ಅಥವಾ “ಬಹುಮತದ ಭ್ರಮೆ” ಎನ್ನಬಹುದು. ಒಂದು ಕುರಿ ಮುಂದೆ ಸಾಗುತ್ತಿದೆ ಎಂದ ಮಾತ್ರಕ್ಕೆ ಅದು ಸರಿ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂಬ ಅರಿವಿಲ್ಲದೆ ಉಳಿದೆಲ್ಲ ಕುರಿಗಳು ಹಿಂಬಾಲಿಸುವುದೇ ಈ ತಾರ್ಕಿಕ ದೋಷ. ಇಲ್ಲಿ ಸತ್ಯ ಅಥವಾ ಗುಣಮಟ್ಟಕ್ಕಿಂತ ಯಾವುದಕ್ಕೆ ‘ಜನಪ್ರಿಯತೆ’ ಇದೆ ಎಂಬುದು ಮುಖ್ಯವಾಗುತ್ತದೆ. ಸದ್ಯ ನಮ್ಮ ದೇಶದಲ್ಲಿ ನಡೆಯುತ್ತಿರುವುದೂ ಇದುವೇ! ಹಳ್ಳಿಯ ಹಬ್ಬದಲ್ಲಿ ಕಂಡು ಬಂದ ‘ಬ್ಯಾಂಡ್‌ವ್ಯಾಗನ್ ಫ್ಯಾಲಸಿ’ಯನ್ನು ತಮ್ಮ ಚಿತ್ರದಲ್ಲಿ ವಿವರಿಸಿದ್ದಾರೆ ದುಷ್ಯಂತ.

art2

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಚಿಕ್ಕರಕಲಗೂಡಿನ ಗೊರೂರು ಅಣೆಕಟ್ಟು (ಹೇಮಾವತಿ ಅಣೆಕಟ್ಟು) ಬಳಿ ಮುಳುಗಡೆಯಾದ ಊರಲ್ಲಿ ಈ ಹಿಂದೆ ಮೂರು ವರ್ಷಕ್ಕೊಮ್ಮೆ ಹಬ್ಬ ನಡೆಯುತ್ತದೆ. ಅದೇ 28 ಹಳ್ಳಿಗರು ಸೇರಿ ಇಂದಿಗೂ ಮೂರು ವರ್ಷಗಳಿಗೊಮ್ಮೆ ಹಬ್ಬ ಮಾಡುತ್ತಾರೆ. ಈ ಹಬ್ಬದ ವೇಳೆ ರೈತರು ಹೆಚ್ಚಾಗಿ ಸೇರುತ್ತಿದ್ದರು. ಬಣ್ಣ ಬಣ್ಣದ ಅಂಗವಸ್ತ್ರ (ಟವೆಲ್‌)ಗಳನ್ನು ಹಿಡಿದುಕೊಂಡು ಬರುತ್ತಿದ್ದರು. ಅದನ್ನೂ ನೋಡುವುದೇ ಅದ್ಭುತವಾಗಿತ್ತು. ಆದರೆ ಇಂದು ಬಣ್ಣಗಳೆಲ್ಲವೂ ಒಂದೇ ಆಗಿ ಬದಲಾಗಿದೆ. ಕೇಸರೀಕರಣದ ವಿಷವರ್ತುಲಕ್ಕೆ ಸಿಲುಕಿದೆ. ಎಲ್ಲರ ಟವೆಲ್‌ಗಳು ಕೇಸರಿ ಬಣ್ಣಕ್ಕೆ ತಿರುಗಿವೆ!

art1

ಈ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿದ ದುಷ್ಯಂತ ಎಚ್ ಪಿ, “ಇಂದಿಗೂ ಮೂರು ವರ್ಷಕೊಮ್ಮೆ 28 ಹಳ್ಳಿಗಳ ಜನರು ಸೇರಿ ಹಬ್ಬ ಮಾಡುತ್ತಾರೆ. ಸಾಂಪ್ರದಾಯಿಕವಾಗಿ ಈ ಹಬ್ಬದ ದಿನ ರೈತರು ಟವೆಲ್‌ಗಳನ್ನು ಹಿಡಿದು ಸಾಗುತ್ತಿದ್ದರು. ಈ ಹಬ್ಬಕ್ಕೆ 20 ಸಾವಿರ ಜನ ಸೇರುತ್ತಾರೆ. ಈ ವೇಳೆ ಎಲ್ಲರ ಹೆಗಲಲ್ಲಿ ಬಣ್ಣ ಬಣ್ಣದ ಟವೆಲ್‌ಗಳನ್ನು ನೋಡುವುದೇ ಸುಂದರ. ಆದರೆ ಈಗ ಆ ಟವೆಲ್‌ಗಳು ಒಂದೇ ಬಣ್ಣದ್ದಾಗಿ ಬದಲಾಗುತ್ತಿದೆ. ಈ ಬದಲಾವಣೆಯನ್ನು ನಾನು ಚಿತ್ರಿಸಿದ್ದೇನೆ” ಎಂದಿದ್ದಾರೆ.

art3

“ವರ್ಷ ಕಳೆದಂತೆ ಇವು ಗಾಢವಾಗಿ ಕಾಣುತ್ತಿದೆ. ಕಳೆದ ಬಾರಿ ಹಲವು ಮಂದಿಯ ಭುಜದಲ್ಲಿ ಒಂದೇ ಬಣ್ಣದ ಟವೆಲ್ ಕಾಣಿಸಿಕೊಂಡಿತ್ತು. ಈ ಬಾರಿ ಎಲ್ಲ ಮನೆ-ಮನೆಗೂ ಈ ಟವೆಲ್ ಹಂಚಿಕೆ ಮಾಡಿದ್ದಾರೆ. ಆದರೆ ರೈತರಿಗೆ ಈ ಬಣ್ಣದ ಟವೆಲ್‌ ಅನ್ನೇ ಯಾಕೆ ನೀಡಲಾಗುತ್ತಿದೆ? ಇದರ ಹಿಂದಿನ ರಾಜಕೀಯವೇನು? ಎಂಬುದು ಯಾವುದೂ ಅವರಿಗೆ ತಿಳಿದಿಲ್ಲ. ಎಲ್ಲರೂ ಒಂದೇ ತರ ಹಾಕಿಕೊಳ್ಳುವುದು ಎಂದುಕೊಂಡು ಅವರೂ ಹಾಕಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಂದ್ರೆ ಟಾರ್ಕೋವ್‌ಸ್ಕಿ ಚಿತ್ರಗಳ ಶಬ್ದಲೋಕ 

ದುಷ್ಯಂತ ಹೆಚ್‌ ಪಿ ಯಾರು?

ದುಷ್ಯಂತ ಎಚ್ ಪಿ ಬೆಂಗಳೂರಿನಲ್ಲಿ ನೆಲೆಸಿರುವ ಚಿತ್ರ ಕಲಾವಿದ. ವಿಶ್ವ-ಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನದಿಂದ ಎಂಎಫ್‌ಎ ಪದವಿ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲೆ ವಿಭಾಗದಿಂದ ಬಿವಿಎ ಪದವಿ ಪಡೆದಿವರು ದುಷ್ಯಂತ. ಸದ್ಯ ಬೆಂಗಳೂರು ದೃಶ್ಯ ಕಲೆಗಳ ಶಾಲೆ, ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

art4

ದೇಶದ ಅತಿದೊಡ್ಡ ಸಮಕಾಲೀನ ಕಲಾ ಉತ್ಸವ ಬಿನಾಲೆ, ಕೋಲ್ಕತ್ತಾ ಲಲಿತ ಕಲಾ ಅಕಾಡೆಮಿ ಮತ್ತು ಕರ್ನಾಟಕದ ಚಿತ್ರಕಲಾ ಪರಿಷತ್ತಿನಲ್ಲಿ ಹಲವು ಬಾರಿ ದುಷ್ಯಂತ ಅವರ ಚಿತ್ರಕಲೆ ಪ್ರದರ್ಶನಗೊಂಡಿದೆ. ಇತ್ತೀಚೆಗೆ ಪ್ರತಿಷ್ಠಿತ ಎ.ಡಿ. ಡಿಸೈನ್ ಶೋನಲ್ಲಿ ನಿರ್ಮಿಸಲಾಗಿದ್ದ ಜಿಯೋಫ್ರಿ ಬಾವಾ ಪೆವಿಲಿಯನ್‍ನಲ್ಲಿ ಮರದ ಮೇಲಿನ ಚಿತ್ರಕಲೆಯನ್ನು ರಚಿಸಿ ಮೆಚ್ಚುಗೆ ಪಡೆದಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಭಗತ್‌ ಸಿಂಗ್‌ ಜಯಂತಿ : ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಣೆ

ಭಗತ್‌ ಸಿಂಗ್‌ ಅವರು ಕೇವಲ 23ನೇ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ...

ಬೀದರ್‌ | ಬರ : ಪ್ರತಿ ಎಕರೆಗೆ ₹50 ಸಾವಿರ ಪರಿಹಾರ, ರೈತರ ಸಾಲ ಮನ್ನಾಗೆ ಆಗ್ರಹಿಸಿ ರೈತರಿಂದ ಬೈಕ್‌ ರ‍್ಯಾಲಿ

ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕಾನೂನುಬದ್ಧ...

22 ನಿಮಿಷದ ಜಾಹೀರಾತು, 75 ಸಾವಿರ ದಂಡ! ಸಿನಿಪ್ಲೆಕ್ಸ್‌ ಕಿವಿಹಿಂಡಿದ ಗ್ರಾಹಕ ವೇದಿಕೆ

ಸಿನಿಮಾ ಶುರುವಾಗುವ ಮುನ್ನ 22 ನಿಮಿಷಗಳ ಕಾಲ ವಾಣಿಜ್ಯ ಜಾಹೀರಾತುಗಳು ಮತ್ತು...