ನ್ಯಾಷನಲ್ ಫೆಡರೇಷನ್ ಆಫ್ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಫೆಡರೇಷನ್(NEGIO) ವತಿಯಿಂದ “Embracing Femininity ಎಂಬ ಶೀರ್ಷಿಕೆಯಡಿ ಒಂದು ತಿಂಗಳ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಇಂದು ಬೆಂಗಳೂರು ನಗರದಲ್ಲಿ ಚಾಲನೆ ನೀಡಲಾಯಿತು. ಈ ಅಭಿಯಾನವು 2026ರ ಆಗಸ್ಟ್ 1ರಿಂದ 31ರವರೆಗೆ ದೇಶಾದ್ಯಂತ ನಡೆಯಲಿದೆ.
ರಾಷ್ಟ್ರೀಯ GIO ಫೆಡರೇಷನ್ ಅಧ್ಯಕ್ಷೆ ಅಡ್ವಕೇಟ್ ಸುಮಯ್ಯಾ ರೋಷನ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, “ಇಂದು ಅನೇಕ ಯುವತಿಯರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಅಸ್ತಿತ್ವವನ್ನು ತೋರಿಸುತ್ತಿದ್ದರೂ, ನಿರಂತರವಾಗಿ ತಮ್ಮನ್ನು ತಾವು ಸಾಬೀತುಪಡಿಸಬೇಕೆಂಬ ಒತ್ತಡದಿಂದ ಮೌನವಾಗಿ ಬಳಲುತ್ತಿದ್ದಾರೆ. Embracing Femininity ಎಂಬ ಈ ಅಭಿಯಾನವು ಈ ಎರಡೂ ಅತಿರೇಕಗಳನ್ನು ಮೀರಿ, ಸಮಗ್ರತೆ, ಸಮತೋಲನ ಮತ್ತು ಸಹಜತೆಯತ್ತ ಮರಳುವ ನಮ್ಮ ಆಹ್ವಾನವಾಗಿದೆ” ಎಂದು ತಿಳಿಸಿದರು.
“ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್(GIO) ಭಾರತದಲ್ಲಿನ ಪ್ರಮುಖ ಯುವತಿಯರ ಸಂಘಟನೆಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಯುವತಿಯರ, ವಿಶೇಷವಾಗಿ ಮುಸ್ಲಿಂ ಮಹಿಳೆಯರ ಸಮಗ್ರ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿನಿಯರು ತಮ್ಮ ಸಾಮರ್ಥ್ಯವನ್ನು ಅರಿತು ಸಮಾಜದ ಅಭಿವೃದ್ಧಿ ಮತ್ತು ಉನ್ನತಿಗೆ ಅರ್ಥಪೂರ್ಣ ಕೊಡುಗೆ ನೀಡುವಂತೆ ಅವರನ್ನು ಸಜ್ಜುಗೊಳಿಸುವುದು ಇದರ ಪ್ರಮುಖ ಧೈಯವಾಗಿದೆ” ಎಂದರು.
ಅಭಿಯಾನದ ಕುರಿತು
“Embracing femininity” ಎಂಬುದು ಪ್ರಸ್ತುತ ಯುವತಿಯರು ಎದುರಿಸುತ್ತಿರುವ ಹೆಚ್ಚುತ್ತಿರುವ ಒತ್ತಡಗಳ ನಡುವೆ ಘನತೆ, ಸಮತೋಲನ ಮತ್ತು ಆತ್ಮಗೌರವದೊಂದಿಗೆ ಕ್ಷೇತ್ರವನ್ನು ಮರು ಅನ್ವೇಷಿಸಿಕೊಳ್ಳುವ ಒಂದು ಕರೆ.
ಇಸ್ಲಾಮಿನ `ಫಿತ್ರತ್’ (ಮಾನವನು ಸೃಷ್ಟಿಸಲ್ಪಟ್ಟಿರುವ ಸಹಜ ಸ್ವಭಾವ) ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು, ಈ ಅಭಿಯಾನವು ಅಗತ್ಯ ಮಾರ್ಗದರ್ಶನವನ್ನು ಪ್ರಸ್ತಾಪಿಸುತ್ತದೆ. ಇದು ಒಂದು ಕಡೆ ಸಾಂಸ್ಕೃತಿಕ ಬಂಧನಗಳ ಅತಿರೇಕಕ್ಕೂ, ಮತ್ತೊಂದು ಕಡೆ ನಿರಂತರ ಸ್ಪರ್ಧಾತ್ಮಕ ಒತ್ತಡ ಮತ್ತು ಭಾವನಾತ್ಮಕ ದೂರಾವಸ್ಥೆಯ ಅತಿರೇಕಕ್ಕೂ ಪರ್ಯಾಯವಾಗಿದೆ. ಸ್ತ್ರೀತ್ವವು ದುರ್ಬಲತೆ ಅಥವಾ ಮಿತಿಯಲ್ಲ, ಅದು ಮಾನವ ಜೀವನದ ಅವಿಭಾಜ್ಯ ಮತ್ತು ಅಮೂಲ್ಯ ಆಯಾಮವಾಗಿದೆ ಎಂಬುದನ್ನು ಈ ಅಭಿಯಾನ ಒತ್ತಿ ಹೇಳುತ್ತದೆ. ಮಹಿಳೆಯರು ತಮ್ಮ ಸಹಜ ಕ್ಷೇತ್ರವನ್ನು ಹತ್ತಿಕ್ಕದೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದಾಗ ಸಮಾಜವು ಇನ್ನಷ್ಟು ಸಮೃದ್ಧವಾಗುತ್ತದೆ ಎಂಬುದನ್ನೂ ಇದು ಪ್ರತಿವಾದಿಸುತ್ತದೆ.
ಅಭಿಯಾನದ ಉದ್ದೇಶಗಳು:
- ಯುವತಿಯರು ತಮ್ಮ ಫಿತ್ರತ್(ಸಹಜ ಸ್ವಭಾವ) ಭಾಗವಾಗಿರುವ ಸ್ತ್ರೀತ್ವವನ್ನು ಅರಿತು, ಸಮಗ್ರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಕ್ಷೇಮಕ್ಕಾಗಿ ಆದರೊಂದಿಗೆ ಮರುಸಂಪರ್ಕ ಸಾಧಿಸಲು ಸಹಾಯ ಮಾಡವುದು.
- ಮಹಿಳೆಯರ ವಿಶಿಷ್ಟ ಸಾಮರ್ಥ್ಯಗಳನ್ನು ದೃಢೀಕರಿಸಿ, ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮತ್ತು ಸಮಾಜದಲ್ಲಿ ಅವರಿಗೆ ಸಲ್ಲಬೇಕಾದ ಗೌರವಯುತ ಸ್ಥಾನವನ್ನು ಸ್ಪಷ್ಟಪಡಿಸುವುದು.
- ಯುವತಿಯರು ಪಾಶ್ಚಾತ್ಯ ಉದಾರವಾದಿ(Western Liberal) ಚಿಂತನೆಗಳು ಮತ್ತು ಸಮಾಜದೊಳಗಿನ ಪಿತೃಪ್ರಧಾನ(Patriarchal) ಮನೋಭಾವಗಳನ್ನು ವಿವೇಕಪೂರ್ಣವಾಗಿ ವಿಶ್ಲೇಷಿಸುವಂತೆ ಸಜ್ಜುಗೊಳಿಸಿ, ಈ ಎರಡು ತೀವ್ರತೆಗಳ ನಡುವೆ ಸಮತೋಲಿತ ಮೂರನೇ ಮಾರ್ಗ(Third Space)ವನ್ನು ನಿರ್ಮಿಸಲು ಪ್ರೇರೇಪಿಸುವುದು.
- ಭಾವನಾತ್ಮಕ ದೃಢತೆ, ಪರಸ್ಪರ ಬೆಂಬಲ, ಗುಣಮುಖತೆ(Healing) ಹಾಗೂ ಸಾಮೂಹಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಹಾಯಕ ಜಾಲ(Supportive Network)ದ ಜತೆಗೆ ಅಗತ್ಯ ಸಂಪನ್ಮೂಲ ಕೇಂದ್ರಗಳನ್ನು(Resource Huhs) ನಿರ್ಮಿಸುವುದು ಅಭಿಯಾನದ ಉದ್ದೇಶವಾಗಿದೆ.
ಪ್ರಮುಖ ಚಟುವಟಿಕೆಗಳು: 2026ರ ಆಗಸ್ಟ್ ತಿಂಗಳ ಅವಧಿಯಲ್ಲಿ ದೇಶಾದ್ಯಂತ GIO ಘಟಕಗಳು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು,
ಸಮ್ಮೇಳನಗಳು, ಕ್ಯಾಂಪಸ್ ಸಭೆಗಳು, ಪ್ಯಾನಲ್ ಚರ್ಚೆಗಳು ಹಾಗೂ ವಿಚಾರ ಸಂಕೀರ್ಣಗಳು.
ಕಲಾ ಪ್ರದರ್ಶನಗಳು, ಕವನ ಹಾಗೂ ಸೃಜನಾತ್ಮಕ ಸ್ಪರ್ಧೆಗಳು.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ : #EmbracingFemininity | #ThatIsMyFemininity
7 ದಿನಗಳ “Femininity Journal” ಮತ್ತು ಆನ್‌ಲೈನ್ ವಿಡಿಯೋ ಸರಣಿ.
ಮಹಿಳೆಯರ ಬೆಂಬಲ ವಲಯಗಳು ಮತ್ತು ಸಮಾಲೋಚನಾ ಕಾರ್ಯಕ್ರಮಗಳು.
ಸ್ಥಳೀಯ ಸಮುದಾಯಗಳಲ್ಲಿನ ಗುರುತಿಸಲ್ಪಡದ ಸಾಧಕ ಮಹಿಳೆಯರಿಗೆ ಸನ್ಮಾನ.
2026ರ ಆಗಸ್ಟ್ 16ರಂದು ಆನ್‌ಲೈನ್ ಅಂತಾರಾಷ್ಟ್ರೀಯ ಸಮ್ಮೇಳನಗಳು ನಡೆಯುತ್ತವೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಸ್‌ಐಆರ್: ಎಎಸ್‌ಡಿಡಿಒ ಅಡಿ 2.54 ಲಕ್ಷ ಮಂದಿ ಮತದಾರರ ಹೆಸರಿಗೆ ಕತ್ತರಿ ಭೀತಿ
ಈ ವೇಳೆ NFGIO ಉಪಾಧ್ಯಕ್ಷೆ ಅಫೀಭಾ ಪತ್ನಿಯತ್, ಅಭಿಯಾನದ ರಾಷ್ಟ್ರೀಯ ಸಂಯೋಜಕಿ, ಆರ್ಕಿಟೆಕ್ಟ್ ಸಮೀನ್ ಮೊಮಿನ್, ಹಾಗೂ ಕರ್ನಾಟಕದ ವಲಯ ಸಲಹಾ ಸಮಿತಿ ಸದಸ್ಯೆ ಬಸೀರಾ ಬಾನು ಇದ್ದರು.




