ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಮಹಿಳೆ ನಂಬಿ ₹34 ಲಕ್ಷ ಕಳೆದುಕೊಂಡ ಸಾಫ್ಟ್‌ವೇರ್ ಎಂಜಿನಿಯರ್

Date:

  • ಲಂಡನ್‌ನಲ್ಲಿ ವಾಸಿಸುತ್ತಿರುವುದಾಗಿ ಸುಳ್ಳು ಹೇಳಿ ವಂಚಿಸಿದ ಮಹಿಳೆ
  • ವೈಟ್​ಫೀಲ್ಟ್​ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ ಸಲ್ಮಾನ್

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ 48 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ ಮಹಿಳೆ ನಂಬಿ ಬರೋಬ್ಬರಿ ₹34 ಲಕ್ಷ ಕಳೆದುಕೊಂಡಿದ್ದಾರೆ.

ಬಾಳ ಸಂಗಾತಿಯನ್ನು ಹುಡುಕಲು ಮ್ಯಾಟ್ರಿಮೋನಿಯಲ್​ ಸೈಟ್ ಸಹಾಯವಾಗುತ್ತದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವು ವಂಚಕರು ಯುವಕರು/ಯುವತಿಯರಿಂದ ಹಣ ವಂಚಿಸುವಂತಹ ಪ್ರಕರಣಗಳು ನಡೆಯುತ್ತಿವೆ.

ಮಾರತ್ತಹಳ್ಳಿ ಸಮೀಪದ ಮುನ್ನೇಕೊಳಾಲು ನಿವಾಸಿ ಸಲ್ಮಾನ್ (ಹೆಸರು ಬದಲಿಸಲಾಗಿದೆ) ಎಂಬುವವರು ತಮ್ಮ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ತಮ್ಮ ಪ್ರೊಫೈಲ್ ಅನ್ನು ಅಪ್‌ಲೋಡ್ ಮಾಡಿದ್ದರು. ಫಾತಿಮಾ ಮುಹಮ್ಮದ್ ಎಂಬ ಪ್ರೊಫೈಲ್ ಹೆಸರಿನ ಮಹಿಳೆಯೊಬ್ಬರು ಸಲ್ಮಾನ್‌ ಅವರನ್ನು ಏಪ್ರಿಲ್ ಮೊದಲ ವಾರದಲ್ಲಿ ಸಂಪರ್ಕಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಹಿಳೆಯೂ ತಾನು ಲಂಡನ್‌ನಲ್ಲಿ ವಾಸಿಸುತ್ತಿದ್ದು, ಶೀಘ್ರದಲ್ಲೇ ಭಾರತಕ್ಕೆ ಹಿಂತಿರುಗುವುದಾಗಿ ಹೇಳಿ ಸಲ್ಮಾನ್ ಅವರ ಮೇಲೆ ಅವರಿಗೆ ಆಸಕ್ತಿ ಇದೆ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಾಳೆ.

ಏಪ್ರಿಲ್ 11 ರಂದು ಸಲ್ಮಾನ್‌ಗೆ ಮಹಿಳೆಯೊಬ್ಬರು ಕರೆ ಮಾಡಿ ತಾನು ಕಸ್ಟಮ್ಸ್ ಅಧಿಕಾರಿ ತನ್ನ ಹೆಸರು ಮನಿಶಾ ಶರ್ಮಾ ಎಂದು ಪರಿಚಯಿಸಿಕೊಂಡಿದ್ದಾರೆ ಹಾಗೂ ಫಾತಿಮಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ₹5 ಕೋಟಿಗೂ ಹೆಚ್ಚು ವಿದೇಶಿ ಕರೆನ್ಸಿ ತಂದಿದ್ದಾಳೆ. ಕಸ್ಟಮ್ಸ್ ಅಧಿಕಾರಿಗಳು ಹಣವನ್ನು ಅವರ ಕೆಲವು ದಾಖಲೆಗಳೊಂದಿಗೆ ವಶಪಡಿಸಿಕೊಂಡಿದ್ದಾರೆ ಎಂದು ಮನಿಷಾ ಸಲ್ಮಾನ್​ಗೆ ತಿಳಿಸಿದ್ದಾರೆ.

ಫಾತಿಮಾಳ ಹಣ ಮತ್ತು ಕೆಲವು ಕಾಗದಗಳನ್ನು ಬಿಡುಗಡೆ ಮಾಡಲು ತನ್ನ ಪರವಾಗಿ ಕೆಲವು ಶುಲ್ಕ ಮತ್ತು ತೆರಿಗೆಗಳನ್ನು ಪಾವತಿಸುವಂತೆ ಸಲ್ಮಾನ್‌ಗೆ ಕೇಳಿದ್ದಾಳೆ.

ಶಂಕಿತರು ನೀಡಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ₹34,40,700 ಸಲ್ಮಾನ್ ವರ್ಗಾಯಿಸಿದ್ದಾರೆ. ದುಷ್ಕರ್ಮಿಗಳು ಏಪ್ರಿಲ್ 19 ರಿಂದ ಸಲ್ಮಾನ್ ಅವರನ್ನು ಸಂಪರ್ಕಿಸುವುದನ್ನು ನಿಲ್ಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಿಟಿ ಸೆಂಟರ್ ಶಾಪ್‌ವೊಂದರಲ್ಲಿ ₹5.22 ಲಕ್ಷ ಪತ್ತೆ ; ಜಪ್ತಿ

ಫಾತಿಮಾ ಅವರನ್ನು ಸಂಪರ್ಕಿಸಲು ಸಲ್ಮಾನ್ ಅವರು ಪ್ರಯತ್ನಿಸಿದ್ದಾರೆ. ಆದರೆ, ಅವರ ಯಾವುದೇ ಪ್ರಯತ್ನಗಳು ಸಫಲವಾಗಿಲ್ಲ. ಹೀಗಾಗಿ, ತಾವು ಮೋಸ ಹೋಗಿರುವುದಾಗಿ ಅರಿತ ಸಲ್ಮಾನ್ ಅವರು ವೈಟ್​ಫೀಲ್ಡ್​ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಾನಾ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎನ್‌ಸಿಪಿಇಡಿಪಿಯಿಂದ ಬೆಂಗಳೂರು- ಕಲಬುರಗಿ ವಿಶೇಷ ಚೇತನರ ಆರೋಗ್ಯ ಸ್ಥಿತಿಗತಿ ಕುರಿತ ಅಧ್ಯಯನ ವರದಿ ಬಿಡುಗಡೆ

ಕರ್ನಾಟಕದಲ್ಲಿನ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಗಳ ವಿಶೇಷ...

ಬೆಂಗಳೂರು | ಅಪರಿಚಿತ ವಾಹನ ಡಿಕ್ಕಿ: ಫ್ಲೈ ಓವರ್‌ನಿಂದ ಬಿದ್ದು ಯುವಕ ಸಾವು

ರಾಜ್ಯದಲ್ಲಿ ಇಂದು ಸಾಲು ಸಾಲು ಅಪಘಾತ ಸಂಭವಿಸುತ್ತಿವೆ. ಇದೀಗ, ಅಪರಿಚಿತ ವಾಹನವೊಂದು...

ಲೋಕಸಭೆ ಚುನಾವಣೆ | ಏ.13ರಿಂದ ಅಂಚೆ ಮತದಾನ

ಲೋಕಸಭಾ ಚುನಾವಣೆ ಹಿನ್ನೆಲೆ, ಏಪ್ರಿಲ್ 26 ಮತ್ತು ಮೇ 7ರಂದು ಮತದಾನ...

ಬೆಂಗಳೂರು | ಕಾಲೇಜು ಯುವತಿಯೊಂದಿಗೆ ಅನುಚಿತ ವರ್ತನೆ: ಪ್ರಕರಣ ದಾಖಲು

ಬೆಂಗಳೂರಿನ ನೇರಳೆ ಮಾರ್ಗದ ಬೆನ್ನಿಗಾನಹಳ್ಳಿ ನಿಲ್ದಾಣವನ್ನು ಸಂಪರ್ಕಿಸುವ ಸ್ಕೈವಾಕ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ...