ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಯುವಕನೊಬ್ಬ ಕಬ್ಬಿಣದ ಸರಳುಗಳ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿ ನಡೆದಿದೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಗಾಯಗೊಂಡಿರುವ ಯುವಕ ಗಾರೆ ಕೆಲಸ ಮಾಡುತ್ತಿದ್ದು, ಕೆಲಸದ ವೇಳೆ ಯುವಕ ಆಯತಪ್ಪಿ ಕಬ್ಬಿಣದ ಸರಳುಗಳ ಮೇಲೆ ಬಿದ್ದಿದ್ದಾನೆ. ಈ ವೇಳೆ, ಎರಡು ಕಬ್ಬಿಣದ ಕಂಬಿಗಳು ಯುವಕನ ಹೊಟ್ಟೆಯ ಭಾಗದಿಂದ ತೂರಿ ಬೆನ್ನಿನ ಭಾಗದಿಂದ ಹೊರಗಡೆ ಬಂದಿವೆ. ಅದೇ ಸ್ಥಿತಿಯಲ್ಲಿ ಯುವಕ ಕಬ್ಬಿಣದ ಸರಳುಗಳ ಮೇಲೆ ಸಿಲುಕಿ ಒದ್ದಾಡಿದ್ದಾನೆ.
ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ದೇಹದಲ್ಲಿದ್ದ ಕಬ್ಬಿಣದ ಸರಳುಗಳನ್ನು ಕಟ್ ಮಾಡಿ ಹೊರ ತೆಗೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗೋವಿಂದ ಬಾಬು ಪೂಜಾರಿ ವಿರುದ್ಧವೇ ಇಡಿಗೆ ದೂರು ನೀಡಿದ್ದ ಆರೋಪಿ ಚೈತ್ರಾ ಕುಂದಾಪುರ
ಸದ್ಯ ಖಾಸಗಿ ಆಸ್ಪತ್ರೆಗೆ ಯುವಕನನ್ನು ದಾಖಲು ಮಾಡಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.