ಬೆಂಗಳೂರು | ಕೊರೊನಾ ನಂತರ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಏರಿಕೆ

Date:

  • 2013ರ ರಸ್ತೆ ಅಪಘಾತಗಳಲ್ಲಿ 382 ಪಾದಚಾರಿಗಳು ಸಾವನ್ನಪ್ಪಿ, 1,403 ಮಂದಿಗೆ ಗಾಯ
  • 2022ರಲ್ಲಿ ನಿಯಮ ಉಲ್ಲಂಘಿಸಿದ 18,144 ಪಾದಚಾರಿಗಳ ವಿರುದ್ಧ ಪ್ರಕರಣ ದಾಖಲು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ನಂತರ ಮತ್ತೆ ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

ನಗರದಲ್ಲಿ ರಸ್ತೆ ಅಪಘಾತಗಳಿಂದ 2022ರಲ್ಲಿ ಒಟ್ಟು 248 ಪಾದಚಾರಿಗಳು ಸಾವನ್ನಪ್ಪಿ,819 ಮಂದಿ ಗಾಯಗೊಂಡಿದ್ದಾರೆ. 2019ರಲ್ಲಿ 272 ಸಾವು ಮತ್ತು 1,197 ಮಂದಿ ಗಾಯಗೊಂಡಿದ್ದರು. 2013ರಲ್ಲಿ 382 ಸಾವು ಮತ್ತು 1,403 ಮಂದಿ ಗಾಯಗೊಂಡಿದ್ದರು.

“ನಗರದಲ್ಲಿ ದ್ವಿಚಕ್ರ ವಾಹನ ಸವಾರರು ನಿರ್ಲಕ್ಷ್ಯವಾಗಿ ವಾಹನ ಚಾಲನೆ ಮಾಡುತ್ತಾರೆ. ದ್ವಿಚಕ್ರ ವಾಹನಗಳನ್ನು ಫುಟ್‌ಪಾತ್‌ಗಳಲ್ಲಿ ಪಾರ್ಕಿಂಗ್ ಮಾಡುವುದು. ಸಿಗ್ನಲ್‌ಗಳನ್ನು ಜಂಪ್‌ ಮಾಡುವುದರಿಂದ ನಗರದಲ್ಲಿರುವ ರಸ್ತೆಗಳು ಮತ್ತು ಫುಟ್‌ಪಾತ್‌ಗಳು ಪಾದಚಾರಿಗಳಿಗೆ ಅಸುರಕ್ಷಿತವಾಗಿಸಿದೆ” ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಟ್ರಾನ್ಸ್‌ಪೋರ್ಟ್ ಸಿಸ್ಟಮ್ಸ್ ಎಂಜಿನಿಯರಿಂಗ್‌ ಪ್ರೊಫೆಸರ್ ಆಶಿಶ್ ವರ್ಮಾ ಹೇಳಿದ್ದಾರೆ.

“ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಮೆಟ್ರೊ ಕಾಮಗಾರಿ ಮತ್ತು ರಸ್ತೆ ದುರಸ್ತಿ ಕಾಮಗಾರಿಗಳಿಂದಾಗಿ ಫುಟ್‌ಪಾತ್‌​ಗಳಲ್ಲಿ ಪಾದಚಾರಿಗಳು ಓಡಾಡಲು ತೊಂದರೆಯಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ನಗರದಲ್ಲಿ ಪಾದಚಾರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮೆಟ್ರೋ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಪಾದಚಾರಿಗಳು ಓಡಾಡುವುದು ಅಸಾಧ್ಯವಾಗಿದೆ. ಹೀಗಾಗಿ, ವಾಹನಕ್ಕೆ ಡಿಕ್ಕಿಯಾಗುವ ಅಪಾಯವನ್ನು ಹೆಚ್ಚಿಸಿದೆ” ಎಂದು ಆಶಿಶ್ ವರ್ಮಾ ತಿಳಿಸಿದ್ದಾರೆ.

2022ರಲ್ಲಿ ಫುಟ್‌ಪಾತ್‌ಗಳಲ್ಲಿ ಸವಾರಿ ಮಾಡಿದ್ದಕ್ಕಾಗಿ 18,144 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಹಿಂದಿನ ವರ್ಷ​​ಕ್ಕಿಂತ ಶೇ. 115.4ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಸಂಖ್ಯೆ 8,422 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ನಗರದ ಹಲವೆಡೆ ವಾಹನ ಬಳಸುವವರು ಫುಟ್‌ಪಾತ್ ಮೇಲೆಯೇ ವಾಹನಗಳನ್ನು ನಿಲ್ಲಿಸುತ್ತಾರೆ. ಕಳೆದ ವರ್ಷ, ನಗರದಲ್ಲಿ ವಾಹನ ಬಳಕೆದಾರರ ವಿರುದ್ಧ 1,53,983 ಫುಟ್‌ಪಾತ್ ಪಾರ್ಕಿಂಗ್ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 74,851 ಪ್ರಕರಣಗಳಿಂದ ಶೇ. 105 ಹೆಚ್ಚಳವಾಗಿದೆ. ಇದರರ್ಥ ಪಾದಚಾರಿಗಳಿಗೆ ಅವರಿಗೆ ಮೀಸಲಾದ ಪ್ರದೇಶದಲ್ಲಿ ನಡೆದಾಡಲು ಕಡಿಮೆ ಸ್ಥಳಾವಕಾಶವಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೊಳಚೆ ನೀರಿನಿಂದ ಮೀನುಗಳ ಮಾರಣಹೋಮ

ಈ ವರ್ಷ ಈಗಾಗಲೇ ನಗರದಲ್ಲಿ ಸಿಗ್ನಲ್‌ಗಳನ್ನು ಜಂಪ್ ಮಾಡುವ ವಾಹನಗಳ ಸಂಖ್ಯೆಯಲ್ಲಿ ಆತಂಕಕಾರಿ ಹೆಚ್ಚಳ ಕಂಡುಬಂದಿದೆ. ಫೆಬ್ರವರಿ 28 ರವರೆಗೆ, ಸಿಗ್ನಲ್‌ ಜಂಪ್‌ ಮಾಡಿದ ವಾಹನ ಸವಾರರ ವಿರುದ್ಧ 1,61,352 ಪ್ರಕರಣ ದಾಖಲಿಸಲಾಗಿದೆ. 2022 ಮತ್ತು 2021ರ ಅಂಕಿಅಂಶಗಳ ಪ್ರಕಾರ ಕ್ರಮವಾಗಿ 4,20,541 ಮತ್ತು 8,22,529 ಪ್ರಕರಣಗಳನ್ನು ದಾಖಲಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಕ್ತಿ ಯೋಜನೆಗೆ ಚಾಲನೆ | ಬಿಎಂಟಿಸಿ ಬಸ್‌ಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಕಂಡಕ್ಟರ್‌

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ...

ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಬೇಕು; ಸಿಎಂ ಜೊತೆ ‘ಎದ್ದೇಳು ಕರ್ನಾಟಕ’ ನಿಯೋಗ ಚರ್ಚೆ

ನಾಡಿನ ಜನತೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಚುನಾವಣೆಯಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ....

ಬೆಂಗಳೂರು | ಕೆಐಎ ಒಂದನೇ ಟರ್ಮಿನಲ್‌ ಶೀಘ್ರ ನವೀಕರಣ

ಹದಿನೈದು ವರ್ಷಗಳಲ್ಲಿ 250 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದ ಟರ್ಮಿನಲ್...

ಬೆಂಗಳೂರು | ಸ್ನೇಹಿತನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಪ್ರಿಯಕರ

ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜೂ. 6ರಂದು ನಡೆದಿದ್ದ ಘಟನೆ...