ಬೆಂಗಳೂರು | ಮನೆ ಬಾಡಿಗೆ ಹಣ ಕೇಳಿದಕ್ಕೆ ಚಾಕುವಿನಿಂದ ಹಲ್ಲೆ

Date:

ಬಾಡಿಗೆ ಹಣ ಕೇಳಿದಕ್ಕೆ ಮಹಿಳೆ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಬಂಡೇಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀದೇವಿ ಹಲ್ಲೆಗೊಳಗಾದ ಮಹಿಳೆ. ಸದ್ದಾಂ ಹಲ್ಲೆ ಮಾಡಿದ ವ್ಯಕ್ತಿ. ಮುನೇಶ್ವರನಗರದಲ್ಲಿರುವ ಕಟ್ಟಡವೊಂದರಲ್ಲಿ ಹಲ್ಲೆಗೊಳಗಾದ ಮಹಿಳೆ ಬಾಡಿಗೆ ಮನೆಯಲ್ಲಿದ್ದರು. ಈ ಕಟ್ಟಡ ಮಾಲೀಕ ಫಯಾಜ್ ಹಾಗೂ ಆತನ ಕುಟುಂಬ ವಿದೇಶದಲ್ಲಿದ್ದರು. ನಗರದಲ್ಲಿರುವ ಮನೆಗಳ ಬಾಡಿಗೆ ಹಣ ಸಂಗ್ರಹಿಸಿ ಫಯಾಜ್‌ ಅವರಿಗೆ ಕಳುಹಿಸುವ ಜವಾಬ್ದಾರಿಯನ್ನು ಶ್ರೀದೇವಿ ಅವರಿಗೆ ನೀಡಲಾಗಿತ್ತು. ಅದರಂತೆಯೇ ಪ್ರತಿ ತಿಂಗಳು ಶ್ರೀದೇವಿ ಹಣ ಸಂಗ್ರಹಿಸುತ್ತಿದ್ದರು.

ಅದೇ ಕಟ್ಟಡದಲ್ಲಿ ವಾಸವಿದ್ದ ನಜೀರ್ ಎಂಬ ಕುಟುಂಬದವರು ಕಳೆದ ಮೂರು ತಿಂಗಳಿನಿಂದ ಬಾಡಿಗೆ ಹಣ ನೀಡಿರಲಿಲ್ಲ. ಹಾಗಾಗಿ ಶ್ರೀದೇವಿ ಬಾಡಿಗೆ ಹಣ ನೀಡುವಂತೆ ಜೋರು ಧ್ವನಿಯಲ್ಲಿ ಕೇಳಿದ್ದಾರೆ. ಈ ಘಟನೆಯನ್ನು ನಜೀರ್ ಅವರ ಮಗ ಸದ್ದಾಂಗೆ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದಕ್ಕೆ ಕೋಪಗೊಂಡ ಸದ್ದಾಂ ಶ್ರೀದೇವಿ ಅವರ ಮನೆ ಮುಂದೆ ಹೋಗಿ ಕೂಗಾಡಿದ್ದಾನೆ. ಅಲ್ಲದೆ, ಅವರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಘಟನೆ ನಡೆದು ಒಂದು ತಿಂಗಳು ಕಳೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಉಬರ್ ಕ್ಯಾಬ್ ಬುಕ್ ಮಾಡಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಚಾಲಕ

ಹಲ್ಲೆಗೊಳಗಾದ ಶ್ರೀದೇವಿ ಅವರು ಬಂಡೇಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಕೊಲೆಯತ್ನದ ಸೆಕ್ಷನ್ ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಮೆಟ್ರೋ | ‘ಚಾಲಕ ರಹಿತ ರೈಲು’ ಸಂಚಾರಕ್ಕೆ ಶೀಘ್ರದಲ್ಲೇ ಸಿಗ್ನಲಿಂಗ್ ಟೆಸ್ಟ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಚಾಲಕ ರಹಿತ ರೈಲು ಶೀಘ್ರದಲ್ಲಿಯೇ...

ಬೆಂಗಳೂರು | ಕೊಲೆ ಆರೋಪ; ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಇತರೆ ಆರೋಪಿಗಳು 5 ದಿನ ಪೋಲೀಸ್ ವಶಕ್ಕೆ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ...

ನಟ ದರ್ಶನ್ ಬಂಧನ | ಸಾಮಾಜಿಕ ಜಾಲತಾಣ, ನಾಗರಿಕ ಸಮಾಜ ಮತ್ತು ಕಾನೂನು ವೈಫಲ್ಯ

ಸದ್ಯ ರಾಜ್ಯದಲ್ಲಿ ನಟ ದರ್ಶನ್ ಅವರ ಬಂಧನ ಸುದ್ದಿಯಲ್ಲಿದೆ. ತಮ್ಮ ಆಪ್ತೆ...

ಆದೇಶ ಪಾಲಿಸದ ಕಲ್ಯಾಣ ಮಂಡಳಿ; ಹೈಕೋರ್ಟ್‌ ಅಸಮಾಧಾನ

ಬಡ ಕಟ್ಟಡ ಕಾರ್ಮಿಕ‌ರ ಮಕ್ಕಳಿಗೆ‌ ಧನಸಹಾಯ ನೀಡಲು ಹೈಕೋರ್ಟ್ ನೀಡಿದ್ದ ‌ಮಧ್ಯಂತರ...