ಬೆಂಗಳೂರು | ವಾತಾವರಣದ ವ್ಯತ್ಯಾಸದಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಳ

Date:

  • ಮಕ್ಕಳಿಗೆ ವರ್ಷಕ್ಕೆ ಒಂದು ಬಾರಿ ಇನ್ಫ್ಲುಯೆನ್ಸ ಲಸಿಕೆ ಹಾಕಿಸಿ
  • ಇನ್ಫ್ಲುಯೆನ್ಜ ಸೋಂಕು ಆರಂಭದಲ್ಲಿ ಜ್ವರ, ಕೆಮ್ಮು ಕಾಣಿಸಿಕೊಳ್ಳುತ್ತವೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲಕ್ಕೂ ಮುನ್ನವೇ ಜೋರು ಮಳೆ ಆರಂಭವಾಗಿದ್ದು, ವಾತಾವರಣದ ವ್ಯತ್ಯಾಸದಿಂದ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ. ಇತ್ತಿಚೀನ ದಿನಗಳಲ್ಲಿ ಮಕ್ಕಳಲ್ಲಿ  ‘ಇನ್ಫ್ಲುಯೆನ್ಸ’ (Influenza) ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೋಷಕರು ಮಕ್ಕಳಿಗೆ ಇನ್ಫ್ಲುಯೆನ್ಜ ಲಸಿಕೆ ಹಾಕಿಸಲು ಮುಂದಾಗಿದ್ದಾರೆ.

ಇನ್ಫ್ಲುಯೆನ್ಸ ಲಸಿಕೆಯನ್ನು ಮಕ್ಕಳಿಗೆ ವರ್ಷಕ್ಕೆ ಒಂದು ಬಾರಿ ಹಾಕಿಸಬಹುದಾಗಿದೆ. ಇದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇನ್ಫ್ಲುಯೆನ್ಜ ಸೋಂಕಿನ ಲಕ್ಷಣಗಳು

ಇನ್ಫ್ಲುಯೆನ್ಜ ಸೋಂಕು ಆರಂಭದಲ್ಲಿ ಜ್ವರ, ಕೆಮ್ಮು ಕಾಣಿಸಿಕೊಳ್ಳುತ್ತವೆ. ನಂತರ ಸೀನುವಿಕೆ ಮತ್ತು ಗಂಟಲು ಕಿರಿಕಿರಿ ಇರುತ್ತದೆ. ದಿನೇ ದಿನೇ ಜ್ವರದ ಪ್ರಮಾಣ ಹೆಚ್ಚಾಗುತ್ತಿರುತ್ತದೆ. ಸ್ನಾಯು ಸೆಳೆತ, ಚಳಿ, ಬೆವರುವಿಕೆ, ತಲೆನೋವು, ನಿರಂತರ ಒಣ ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ದೌರ್ಬಲ್ಯ, ಗಂಟಲು ಕೆರತ, ಶೀತ, ಕಣ್ಣಿನ ನೋವು, ವಾಂತಿ ಹಾಗೂ ಅತಿಸಾರದಂತಹ ಲಕ್ಷಣಗಳು ಕಂಡು ಬರುತ್ತವೆ. ಶ್ವಾಸಕೋಶದ ಮೇಲೂ ಈ ಸೋಂಕು ಹೆಚ್ಚು ಪರಿಣಾಮ ಬೀರಲಿದೆ.

ಈ ಸುದ್ದಿ ಓದಿದ್ದೀರಾ? ಶಾಲೆ ಆರಂಭದ ದಿನ | ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ಸಿಹಿ ತಿನಿಸು ಕಡ್ಡಾಯ

ಈ ರೋಗ ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆಯ ಆರಂಭಕ್ಕೂ ಮುನ್ನ ಮಳೆಯ ಆರಂಭದ ನಂತರ ಈ ಸೋಂಕು ಹೆಚ್ಚು ಕಾಣಿಸಿಕೊಳ್ಳಬಹುದಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಡಗು | ದಸರಾ ಉತ್ಸವ ಆಚರಣೆ; ಅನುದಾನ ಬಿಡುಗಡೆಗೆ ನಿಯೋಗ

ದಸರಾ ಉತ್ಸವ ಆಚರಣೆಗೆ ಸರ್ಕಾರದಿಂದ ₹2 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಮಡಿಕೇರಿ...

ವಂಚನೆ ಪ್ರಕರಣ | ಚೈತ್ರಾ ಹೆಸರಿನೊಂದಿಗೆ ‘ಕುಂದಾಪುರ’ ಬಳಕೆಗೆ ಆಕ್ಷೇಪ; ಕೋರ್ಟ್‌ನಲ್ಲಿ ದಾವೆ

ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಅವರು ಜೈಲು ಸೇರಿದ್ದಾರೆ. ಅವರ ಬಗ್ಗೆ...

ಬೆಂಗಳೂರು | ಸೆ.23 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

ತಾತಗುಣಿ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಸರ್ಕ್ಯೂಟ್ ಬ್ರೇಕರ್, ಕರೆಂಟ್...

ಬೆಂಗಳೂರು | 13ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಖಾಸಗಿ ಅಪಾರ್ಟ್‌ಮೆಂಟ್‌ ಕಟ್ಟಡವೊಂದರ 13ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ...