ಕಸದ ತೊಟ್ಟಿಯಾಗುತ್ತಿದೆ ಬೆಂಗಳೂರು!

Date:

ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರನ್ನು ಕಸದ ಸಮಸ್ಯೆ ನಿರಂತರವಾಗಿ ಬಾಧಿಸುತ್ತಲೇ ಇದೆ. ನಗರ ನಿವಾಸಿಗಳು ಬ್ಲಾಕ್‌ಸ್ಪಾಟ್‌ಗಳು ಮತ್ತು ಎಲ್ಲೆಂದರಲ್ಲಿ ಕಸ ಎಸೆಯುವ ಖಯಾಲಿ ರೂಢಿಸಿಕೊಂಡಿದ್ದಾರೆ. ಈ ಬೇಜವಾಬ್ದಾರಿತನದಿಂದಾಗಿ, ಬೀದಿ-ಬೀದಿಗಳಲ್ಲಿ ಕಸದ ರಾಶಿಗಳು ಎದ್ದು ಕಾಣುತ್ತಿವೆ. ಗಬ್ಬು ನಾರುತ್ತಿವೆ.

- Advertisement -

ಮುಂಜಾನೆ ವಾಯುವಿಹಾರಕ್ಕೆ ಹೊರಡುವವರಿಂದ ಹಿಡಿದು ತಡರಾತ್ರಿ ಮನೆಗೆ ಮರಳುವವರವರೆಗೆ ಪ್ರತಿಯೊಬ್ಬರೂ ರಸ್ತೆ ಬದಿಯ ಕಸದ ರಾಶಿಗಳು ಮತ್ತು ಅದರಿಂದ ಸೂಸುವ ದುರ್ವಾಸನೆಯಿಂದ ರೂಸಿಹೋಗಿದ್ದಾರೆ. ಈ ಸಮಸ್ಯೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಬೆಂಗಳೂರಿನಲ್ಲಿ ಕಸದ ಸಮಸ್ಯೆ ಇತ್ತೀಚಿನದೇನಲ್ಲ. ಸಾರ್ವಜನಿಕ ಸ್ಥಳಗಳು ಕಸದ ‘ಬ್ಲಾಕ್‌ ಸ್ಪಾಟ್‌’ಗಳಾಗಿ ಮಾರ್ಪಡುತ್ತಿವೆ. ಹಿಂದಿನ ಬಿಬಿಎಂಪಿ ಮತ್ತು ಹಾಲಿ ಜಿಬಿಎ ಮನೆ ಮನೆಗೆ ಬಂದು ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೂ ಸಹ, ಅನೇಕರು ಮುಂಜಾನೆ ಅಥವಾ ತಡರಾತ್ರಿ ಯಾರಿಗೂ ಕಾಣದಂತೆ ರಸ್ತೆ ಬದಿ, ಖಾಲಿ ಸೈಟುಗಳು ಹಾಗೂ ಕೆರೆಗಳ ಪಕ್ಕದಲ್ಲಿ ಕಸ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಎಸೆದು ಹೋಗುತ್ತಿದ್ದಾರೆ.

ಈ ರೀತಿ ರಸ್ತೆ ಬದಿ ಕೆಸ ಎಸೆಯುವುದನ್ನು ತಡೆಯಲು ಬಿಬಿಎಂಪಿ/ಜಿಬಿಎ ನಾನಾ ರೀತಿಯಲ್ಲಿ ಪತ್ನಿಸುತ್ತಲೇ ಇದೆ. ಕಸ ಎಸೆವವರಿಗೆ ದಂಡವನ್ನೂ ವಿಧಿಸುತ್ತಿವೆ. ಅಷ್ಟು ಮಾತ್ರವಲ್ಲ, ಇತ್ತೀಚಿಗೆ, ರಸ್ತೆ ಬದಿ ಕಸ ಎಸೆಯುವವರ ಮನೆ ಮುಂದೆಯೇ ರಾಶಿ ಕಸ ಸುರಿದು ಪಾಠ ಕಲಿಸಲೂ ಅಧಿಕಾರಿಗಳು ಪ್ರಯತ್ನಿಸಿದ್ದರು. ಆದರೂ, ರಸ್ತೆ ಬದಿ ಕಸ ಎಸೆವ ಖಯಾಲಿಗೆ ಕಡಿವಾಣ ಹಾಕಲಾಗಿಲ್ಲ.

 ಇದರಲ್ಲಿ, ವ್ಯವಸ್ಥೆಯ ಲೋಪಗಳೂ ಇವೆ. ಕೆಲವು ವಾರ್ಡ್‌ಗಳಲ್ಲಿ ಕಸದ ಗಾಡಿಗಳು ಸಮಯಕ್ಕೆ ಸರಿಯಾಗಿ ಬಾರದಿರುವುದು, ಹಸಿ ಮತ್ತು ಒಣ ಕಸದ ವಿಂಗಡಣೆಯ ಗೊಂದಲದಿಂದ ಜನರು ರಸ್ತೆಗೆ ಕಸ ಎಸೆಯುವ ತಪ್ಪು ದಾರಿ ಹಿಡಿಯುತ್ತಿದ್ದಾರೆ.

ಜೊತೆಗೆ, ಹೋಟೆಲ್‌ಗಳು, ಜ್ಯೂಸ್ ಸೆಂಟರ್‌ಗಳು ಹಾಗೂ ಬೀದಿ ಬದಿಯ ವ್ಯಾಪಾರಿಗಳು ತಡರಾತ್ರಿ ತಮ್ಮ ವ್ಯಾಪಾರ ಮುಗಿದ ನಂತರ ಇಡೀ ದಿನದ ತ್ಯಾಜ್ಯವನ್ನು ರಸ್ತೆ ಬದಿಯೇ ಸುರಿದು ಹೋಗುವುದು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ಈ ಲೇಖನ ಓದಿದ್ದೀರಾ?: ನೆಹರೂ ನಿಂದನೆ ಎಂಬುದು ಸೆರಗಿಗೆ ಕಟ್ಟಿಕೊಂಡ ಕೆಂಡ! ಪರಮವಿಕೃತಿಯ ಈ ಪ್ರಾಜೆಕ್ಟು ಫಲಿಸುವುದಿಲ್ಲ

ಈ ದುಸ್ಥಿತಿಯ ವಿರುದ್ಧ ಬೆಂಗಳೂರಿಗರು ಸಾಮಾಜಿಕ ಜಾಲತಾಣಗಳಲ್ಲಿ, ಬಿಬಿಎಂಪಿ ಮತ್ತು ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ನಾಗರಿಕರು ತಮ್ಮ ತಮ್ಮ ಏರಿಯಾಗಳಲ್ಲಿ ಕಸದ ರಾಶಿ ಬಿದ್ದಿರುವ ಫೋಟೋ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡಿ, ಅಧಿಕಾರಿಗಳನ್ನು ಟ್ಯಾಗ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ನಾವು ತೆರಿಗೆ ಪಾವತಿಸಿದರೂ ನಮಗೆ ಸಿಗುತ್ತಿರುವುದು ಕಸದ ರಸ್ತೆಗಳು ಮತ್ತು ರೋಗರುಜಿನಗಳು ಮಾತ್ರವೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ ಬದಿಯ ಕಸದ ರಾಶಿಗಳು ಸೊಳ್ಳೆಗಳು, ನೊಣಗಳು ಮತ್ತು ಇಲಿಗಳ ಸಂತಾನೋತ್ಪತ್ತಿ ಕೇಂದ್ರಗಳಾಗಿ ಮಾರ್ಪಡುತ್ತಿದ್ದು, ಆಯಾ ಪ್ರದೇಶಗಳಲ್ಲಿ ಡೆಂಗ್ಯೂ, ಮಲೇರಿಯಾ ಹಾಗೂ ಕಾಲರಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಳ್ಳು ಅಫಿಡವಿಟ್‌ ವಿರುದ್ಧ ಮತದಾರರೇ ದೂರು ಸಲ್ಲಿಸಬಹುದು, ಇಸಿ ಅನುಮತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದರೆ,...

ಬೀದರ್‌ | ಜಾತಿರಹಿತ, ಶೋಷಣೆರಹಿತ ಲಿಂಗಾಯತ ಧರ್ಮ : ಎಂ.ಬಿ.ಪಾಟೀಲ್

ವಿಶ್ವಗುರು ಬಸವಣ್ಣನವರ ವಿಚಾರಧಾರೆ, ಶರಣರ ವಚನ ಸಾಹಿತ್ಯ ಹಾಗೂ ಸಮಾನತೆಯ ಆಶಯಗಳಿಗೆ...

ರಾಮನಗರ | ಡಾ. ಬಂಜಗೆರೆ ಜಯಪ್ರಕಾಶ್‌ ಅವರಿಗೆ ಪ್ರಶಸ್ತಿ ಗೌರವ: ‘ಜನಮುಖಿ ಜೆಪಿ’ ಕಾರ್ಯಕ್ರಮ ಸಫಲ

ಹಿರಿಯ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ (ಜೆ.ಪಿ) ಅವರಿಗೆ ಕರ್ನಾಟಕ ಸಾಹಿತ್ಯ...

ಕಲಬುರಗಿ | ಪ್ರಾಧ್ಯಾಪಕ ಶಿವಾನಂದ ಬಂಟನೂರಗೆ ಡಾ.ಪ್ರತಿಭಾ ಚಿಣ್ಣಪ್ಪ ಸ್ಮರಣಾರ್ಥ ಪ್ರಶಸ್ತಿ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತ ಕಲಾ ವಿಭಾಗದ ಸಹಾಯಕ...