ಭವಾನಿ ರೇವಣ್ಣ ವರ್ತನೆ ಮಾಜಿ ಪ್ರಧಾನಿ ಕುಟುಂಬಕ್ಕೆ ಶೋಭೆ ತರುವಂತದಲ್ಲ: ಬಿ.ಟಿ.ನಾಗಣ್ಣ

Date:

ಅಪಘಾತಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಶಾಸಕ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ವರ್ತನೆ ದರ್ಪ ಮತ್ತು ದುರಹಂಕಾರದಿಂದ ಕೂಡಿದೆ. ಶಾಸಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಗಳನ್ನು ಕೊಟ್ಟಿರುವ ದೇವೇಗೌಡರ ಕುಟುಂಬಕ್ಕೆ ಈ ವರ್ತನೆ ಶೋಭೆ ತರುವಂತದ್ದಲ್ಲ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಆಕ್ಷೇಪ ವ್ಯಕ್ತಪಡಿಸಿದರು.

- Advertisement -

ಅಪಘಾತಕ್ಕೆ ಸಂಬಂಧಿಸಿ ಭವಾನಿ ರೇವಣ್ಣ ಅವರು ಬೈಕ್‌ ಸವಾರನಿಗೆ ಅವಾಚ್ಯವಾಗಿ ನಿಂದಿಸಿದ ವಿಡಿಯೋಗೆ ಸಂಬಂಧಿಸಿ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿ.ಟಿ.ನಾಗಣ್ಣ ಅವರು, “ಅಪಘಾತದ ಬಳಿಕ ಬೈಕ್‌ ಸವಾರನ ಆರೋಗ್ಯ ವಿಚಾರಿಸಬೇಕಿತ್ತು. ಆದರೆ, ಭವಾನಿ ಅವರು ತಮ್ಮ ಕಾರಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಬಡವ ಸತ್ತರೂ ಚಿಂತೆಯಿಲ್ಲ, ತಮ್ಮ ₹1.50 ಕೋಟಿ ಗಾಡಿಗೆ ಡ್ಯಾಮೇಜ್‌ ಮಾಡಿದ್ದಾರೆ ಎಂಬುದೇ ಅವರಿಗೆ ದೊಡ್ಡ ಸಂಗತಿಯಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನಾನು, ರಸ್ತೆ ಹಾಗೂ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ "ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ" ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ...

ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ...

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ ಹೆಸರಾಂತ ಗಜಾನನ ಬಸ್ ಸಂಸ್ಥೆ ಒಂದು ಕಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳ ಮೂಲಕ ಜನಪ್ರಿಯತೆ ಗಳಿಸಿತ್ತು. ಸಂಸ್ಥೆಯ ಬೆಳವಣಿಗೆಯಲ್ಲಿ...

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

“ಅವನು ಸತ್ತುಹೋಗುತ್ತಾನೆ ಅಂತ ಯೋಚನೆ ಮಾಡುತ್ತಿದ್ದೀರಲ್ಲಾ, ಒಂದೂವರೆ ಕೋಟಿ ರೂಪಾಯಿಯ ಗಾಡಿಗೆ ಆಗಿರುವ ಡ್ಯಾಮೇಜ್‌ ಯಾರು ಕಟ್ಟಿಕೊಡುತ್ತಾರೆ ಎಂದು ಅವಿವೇಕದಿಂದ ಪ್ರಶ್ನಿಸುತ್ತಿದ್ದೀರಲ್ಲಾ, ಜಿಲ್ಲೆಯ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಹಾಸನ ಜಿಲ್ಲೆಯ ಜನರು ಭವಾನಿ ಅವರನ್ನು ಅಮ್ಮ ಎಂದೇ ಕರೆಯುತ್ತಾರೆ. ಆದರೆ, ಭವಾನಿ ಅವರಿಗೆ ಅಂತಃಕರಣವೇ ಇಲ್ಲವಾಗಿದೆ. ದೇವೇಗೌಡರ ಕುಟುಂಬದ ಎಲ್ಲ ಸದಸ್ಯರು ಮಣ್ಣಿನ ಮಕ್ಕಳು ಎಂದೇ ಬಿಂಬಿಸಿಕೊಳ್ಳುತ್ತಾರೆ. ವಾಸ್ತವದಲ್ಲಿ ಸಾಮಾನ್ಯ ಕೃಷಿಕರ ಬಗ್ಗೆ, ಕ್ಷೇತ್ರದ ಜನತೆಯ ಬಗ್ಗೆ ಎಂತಹ ಧೋರಣೆಯನ್ನು ಹೊಂದಿದ್ದಾರೆ ಎಂಬುದು ಭವಾನಿ ರೇವಣ್ಣ ಅವರ ವರ್ತನೆಯಿಂದ ಬಹಿರಂಗವಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಿವೃತ್ತ ಐಎಎಸ್‌ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು

“ಬೈಕ್‌ ಸವಾರನೊಬ್ಬ ಆಕಸ್ಮಿಕವಾಗಿ ಕಾರಿಗೆ ಅಡ್ಡ ಬಂದು ಅಪಘಾತಕ್ಕೆ ಕಾರಣವಾದ ಎಂಬುದಕ್ಕೆ ‘ಸಾಯುವುದಾದರೆ ಬಸ್ಸಿನಡಿಗೆ ಬಿದ್ದು ಸಾಯಬೇಕಿತ್ತು’ ಎಂದಿದ್ದಾರೆ. ಸಾಕಷ್ಟು ಅವಾಚ್ಯ ಮಾತುಗಳಿಂದ ನಿಂದಿಸಿದ್ದಾರೆ. ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಸ್ಥಳೀಯರಿಗೂ ‘ರಿಪೇರಿಗೆ 50 ಲಕ್ಷ ರೂ. ಕೊಡುವ ಹಾಗಿದ್ದರೆ ಮಾತಾಡಿ’ ಎಂದು ಬೆದರಿಕೆ ಹಾಕಿದ್ದಾರೆ. ಭವಾನಿ ರೇವಣ್ಣ ಅವರು ಈ ಬಾರಿ ಶಾಸಕಿಯಾಗುವ ಸಮೀಪದಲ್ಲಿದ್ದವರು. ಮುಂದೊಂದು ದಿನ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿದವರೂ ಹೌದು. ಆದರೆ, ಇಂತಹ ಕ್ಷುಲ್ಲಕ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ನಾಳೆ ವಿಧಾನಸಭೆ ಮೆಟ್ಟಿಲು ಹತ್ತುವಂತೆ ಆಗಬಾರದು. ಜನರು ಇಂತವರ ದುರ್ವರ್ತನೆಗಳಿಗೆ ಬೆಲೆ ನೀಡಬಾರದು. ಖಡಾಖಂಡಿತವಾಗಿ ತಿರಸ್ಕರಿಸಬೇಕು. ಭವಾನಿ ಅವರ ವರ್ತನೆಗೆ ಸಂಬಂಧಿಸಿ ದೇವೇಗೌಡರಿಂದ ಸಂಸದ ಪ್ರಜ್ವಲ್ ರೇವಣ್ಣವರೆಗೆ ಎಲ್ಲರೂ ರಾಜ್ಯದ ಜನತೆಯ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.

“ಭವಾನಿ ರೇವಣ್ಣ ಅವರು ವಾಹನಕ್ಕೆ ವಿಮೆ ಕ್ಲೈಮ್‌ ಮಾಡಬಹುದು. ಬೈಕ್‌ ಸವಾರನ ಪ್ರಾಣಕ್ಕೆ ಏನಾದರೂ ಆದರೆ ಯಾರು ಹೊಣೆ? ಪದೇ ಪದೆ ಒಂದೂವರೆ ಕೋಟಿ ಕಾರು ಎನ್ನುತ್ತಿದ್ದಾರೆ. ಇವರೇನು ಸ್ವತಃ ದುಡಿದು ಇಷ್ಟು ದುಬಾರಿಯ ಕಾರನ್ನು ಕೊಂಡಿದ್ದಾರೆಯೇ?” ಎಂದು ಪ್ರಶ್ನಿಸಿದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ: ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ

ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು ವಿಶ್ವಶಾಂತಿಯ ಆಶಯದೊಂದಿಗೆ 73ನೇ ಅಖಿಲ...

ಬಾಗೇಪಲ್ಲಿ | ಪೂಲವಾರಿಪಲ್ಲಿ ಭೂಹಗರಣ ತಹಸೀಲ್ದಾರ್‌ನ್ನು ಸೇವೆಯಿಂದ ವಜಾಗೊಳಿಸಿ ಸಿಬಿಐ ತನಿಖೆ ದಸಂಸ ಆಗ್ರಹ

ತಾಲೂಕಿನ ಪರಗೋಡು ಗ್ರಾಪಂ ವ್ಯಾಪ್ತಿಯ ಪೂಲವಾರಿಪಲ್ಲಿ ಗ್ರಾಮದ ನಡೆದ ಭೂಹಗರಣದಲ್ಲಿ ತಹಸೀಲ್ದಾರ್...

ಕೋಲಾರ| ಕ್ರೀಡೆ ಮಕ್ಕಳ ಭವಿಷ್ಯದ ಅವಿಭಾಜ್ಯ ಅಂಗವಾಗಲಿ: ಸಿಎಂಆರ್ ಶ್ರೀನಾಥ್

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದಷ್ಟೇ ಕ್ರೀಡೆಗೂ ಪೋಷಕರು ಆದ್ಯತೆ ನೀಡಬೇಕು. ಕ್ರೀಡೆ...

ರಾಯಚೂರು | ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ: ರವಿಹಂಜ ಬಂಧನಕ್ಕೆ ಲಿಂಗಾಯತ ಮಹಾಸಭಾ ಆಗ್ರಹ

ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಅನಿವಾಸಿ ಭಾರತೀಯ...