ಚರ್ಚ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ಪೂಜೆ ನಡೆಸಲು ಆಗ್ರಹಿಸಿ ಮಾ.28ಕ್ಕೆ ಪ್ರತಿಭಟನೆ

Date:

ದ್ವಿತೀಯ ವಾಟಿಕನ್ ಕೌನ್ಸಿಲ್ ನೀಡಿದ ಮಾರ್ಗದರ್ಶನದ ಪ್ರಕಾರ ಚರ್ಚ್‌ಗಳಲ್ಲಿ ಸ್ಥಳೀಯ ಭಾಷೆ ಕನ್ನಡದಲ್ಲಿ ಪೂಜೆ ನಡೆಸಬೇಕೆಂದು ಆಗ್ರಹಿಸಿ ಮಾರ್ಚ್ 28ಕ್ಕೆ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘವು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

- Advertisement -

ಈ ಬಗ್ಗೆ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಸಂಘ, “ರಾಜ್ಯದಲ್ಲಿ ದಶಕಗಳಾದರೂ ಕನ್ನಡದಲ್ಲಿ ನಿಯಮಿತ ಮತ್ತು ಗೌರವಪೂರ್ಣ ಪೂಜೆಗಳು ನಡೆಯುತ್ತಿಲ್ಲ. ಕರ್ನಾಟಕ ಚರ್ಚ್‌ಗಳಲ್ಲಿ ಕನ್ನಡವನ್ನು ಸಾಮಾನ್ಯ ವರ್ಣಾಕ್ಯುಲರ್ ಪ್ರಾಂತೀಯ ಭಾಷೆಯಾಗಿ ಪರಿಗಣಿಸಿ ನಿಯಮಿತವಾಗಿ ಕನ್ನಡ ಪೂಜೆಗಳನನ್ನು ನಡೆಸಬೇಕು” ಎಂದು ಆಗ್ರಹಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಇದನ್ನು ಓದಿದ್ದೀರಾ? ರಾಜ್ಯದ ಎಲ್ಲ ಚರ್ಚ್‌ಗಳಲ್ಲಿಯೂ ಕೊಂಕಣಿ ಗುಂಪುಗಳ ಅಧಿಪತ್ಯ: ಕನ್ನಡ ಭಾಷೆ ಕಡೆಗಣಿಸುತ್ತಿರುವುದಾಗಿ ಆರೋಪ

“ಸೇಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನಾರಿಯ ಆಡಳಿತದ ವಿಷಯಕ್ಕೆ ಸಂಬಂಧಿಸಿದಂತೆ 1929ರಲ್ಲಿ ಮೈಸೂರಿ ಮಜಾರಾಜರು ಅನುದಾನವಾಗಿ ನೀಡಿದ ಜಮೀನಿನಲ್ಲಿ, ಕರ್ನಾಟಕದಲ್ಲಿರುವ ಸಂಸ್ಥೆಯ ಆಡಳಿತವನ್ನು ತಮಿಳುನಾಡು ಬಿಷಪ್‌ಗಳು ನಿರ್ವಹಿಸುತ್ತಿರುವುದು ನ್ಯಾಯಸಮ್ಮತವಲ್ಲ. ಅದನ್ನು ಕರ್ನಾಟಕದ ಬಿಷಪ್‌ಗಳಿಗೆ ಹಸ್ತಾಂತರಿಸಬೇಕು. ರಾಜ್ಯದ ಜನರು ತಮ್ಮ ನೆಲದ ಮೇಲೆ ಇರುವ ಸಂಸ್ಥೆಯ ಮೇಲಿನ ಹೊರಗಿನ ನಿಯಂತ್ರಣವನ್ನು ಇನ್ನು ಮುಂದೆ ಒಪ್ಪುವುದಿಲ್ಲ” ಎಂದು ಹೇಳಿದೆ.

“ಹಲವು ದಶಕಗಳಿಂದ ಕನ್ನಡೇತರ ಗುಂಪುಗಳ ಬಿಷಪ್‌ಗಳು ಕರ್ನಾಟಕದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಕನ್ನಡ ಭಾಷೆ, ಸಂಸ್ಕೃತಿ, ಪಾದ್ರಿಗಳನ್ನು ಕಡೆಗಣಿಸಿದ್ದಾರೆ. ಆದ್ದರಿಂದ ಕರ್ನಾಟಕದ ಧರ್ಮಪ್ರಾಂತಗಳಲ್ಲಿ ಕನ್ನಡ ಪಾದ್ರಿಗಳನ್ನು ಬಿಷಪ್‌ಗಳಾಗಿ ನೇಮಕ ಮಾಡಬೇಕು ಮತ್ತು ಸ್ಥಳೀಯ ಪರಿಸ್ಥಿತಿಯನ್ನು ಅರಿತ ನಾಯಕತ್ವಕ್ಕೆ ಆದ್ಯತೆ ನೀಡಬೇಕು” ಎಂದು ಐಸಾಕ್ ಆಗ್ರಹಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಬೀದರ್‌ ಜಿಲ್ಲಾದ್ಯಂತ ಮತದಾರರ ಹೆಸರು ತೆಗೆಸಲು 6,101 ಫಾರಂ-7 ಅರ್ಜಿ ಸಲ್ಲಿಕೆ!

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮುಂದುವರಿದಿದ್ದು,...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ನನ್ನನ್ನು ಬಂಧಿಸಿರಲಿಲ್ಲ, ಕಿಡ್ನಾಪ್ ಮಾಡಲಾಗಿತ್ತು: ಧೃವ್ ರಾಠಿ ಆರೋಪ

ಸಿಜೆಪಿ ಪ್ರತಿಭಟನೆಗೂ ಮುನ್ನ ಶನಿವಾರ ಮುಂಜಾನೆ ಖ್ಯಾತ ಯೂಟ್ಯೂಬರ್‌ ಧೃವ್ ರಾಠಿ...

ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುತ್ತಿದೆ. ಹಿಂಗಾರು ಮಳೆಯೂ ಆರಂಭವಾಗುತ್ತಿದೆ. ಪರಿಣಾಮ, ಮುಂದಿನ 4...