ಡೇ ಕೇರ್ ಸೆಂಟರ್‌ | ಚಿಕ್ಕ ಮಗು ಮೇಲೆ ಪದೇ ಪದೆ ಹಲ್ಲೆ ನಡೆಸಿದ ದೊಡ್ಡ ಮಗು

ಮಗು
ಮಗು
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ
  • ಸುಮಾರು ಐದು ನಿಮಿಷಗಳ ವರೆಗೆ ಮಗುವಿಗೆ ಹೊಡೆತ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ದಂಪತಿ ಕೆಲಸಕ್ಕೆ ತೆರಳುತ್ತಾರೆ. ಹಾಗಾಗಿ, ಮಕ್ಕಳನ್ನು ನೋಡಿಕೊಳ್ಳಲು ಜತೆಗೆ ಯಾರು ಇಲ್ಲದಿರುವ ಕಾರಣ ತಮ್ಮ ಮಕ್ಕಳನ್ನ ಡೇ ಕೇರ್‌ಗೆ ಸೇರಿಸುತ್ತಾರೆ. ಇದೀಗ ನಗರದ ಡೇ ಕೇರ್ ಸೆಂಟರ್‌ವೊಂದರಲ್ಲಿ ಮಕ್ಕಳನ್ನು ಒಂದು ಕೋಣೆಯಲ್ಲಿ ಇರಿಸಲಾಗಿದೆ. ಇಲ್ಲಿ ಒಂದು ಚಿಕ್ಕ ಮಗುವಿಗೆ ದೊಡ್ಡ ಮಗು ಪದೇ ಪದೆ ಹೊಡೆದಿದೆ.

ನಗರದ ಚಿಕ್ಕಲಸಂದ್ರದಲ್ಲಿರುವ ಡೇ ಕೇರ್ ಸೆಂಟರ್​ನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

ಡೇ ಕೇರ್ ಸೆಂಟರ್‌ನಲ್ಲಿ ಮಗುವನ್ನು ನೋಡಿಕೊಳ್ಳುತ್ತಿದ್ದ ಆಯಾ ಕೋಣೆಯಿಂದ ಒಂದು ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಬಳಿಕ ಈ ಕೋಣೆಯಲ್ಲಿ ಎಂಟು ಮಕ್ಕಳಿದ್ದರು. ಈ ವೇಳೆ, ಸುಮಾರು ಐದು ನಿಮಿಷಗಳ ವರೆಗೆ ದೊಡ್ಡ ಮಗುವೊಂದು ಚಿಕ್ಕ ಮಗುವಿಗೆ ಪದೇ ಪದೆ ಹೊಡೆದಿದೆ. ಆದರೆ, ಮಕ್ಕಳನ್ನು ನೋಡಲು ಯಾವ ಸಿಬ್ಬಂದಿಯೂ ಕೂಡ ಕೋಣೆಗೆ ಬಂದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬಗ್ಗೆ ಮಗುವಿನ ಪೋಷಕರು ಟ್ವೀಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದು, ಟ್ವೀಟರ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೆಟ್ರೋ ಪಿಲ್ಲರ್ ಕುಸಿದು ಸಾವು; ಐದು ತಿಂಗಳ ಬಳಿಕ ಚಾರ್ಜ್‌ಶೀಟ್ ಸಲ್ಲಿಸಿದ ಪೊಲೀಸರು

ಸುಬ್ರಹ್ಮಣ್ಯಪುರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾಂಟೆಸ್ಸರಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿದ್ದಾರೆ.

LEAVE A REPLY

Please enter your comment!
Please enter your name here