ಮುಂಗಾರು ಮಳೆಯಿಂದಾಗುವ ಸಮಸ್ಯೆ ನಿಭಾಯಿಸಲು ಸಂಪೂರ್ಣ ಸನ್ನದ್ಧ : ತುಷಾರ್ ಗಿರಿನಾಥ್

Date:

  • ಬೆಂಗಳೂರು ದಕ್ಷಿಣ ಒಂದರಲ್ಲೇ 50 ಬೋರ್‌ವೆಲ್‌ ಕೊರೆಸಲು ಬೇಡಿಕೆ
  • ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಬಿಲ್‌ ಶೀಘ್ರವೇ ಪಾವತಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ವರ್ಷ ಮುಂಗಾರು ಮಳೆಯಿಂದಾಗುವ ಸಮಸ್ಯೆ ನಿಭಾಯಿಸಲು ಸಂಪೂರ್ಣ ಸನ್ನದ್ಧವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ, ಸೋಮವಾರ ವಲಯ ಆಯುಕ್ತರೊಂದಿಗೆ ಸಮನ್ವಯ ಸಮಿತಿ ಸಭೆ ನಡೆಸಿ ಮುಂಗಾರು ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.

“ನಗರದ ಕೆಲವೆಡೆ ಚರಂಡಿ ಹೂಳು ತೆಗೆಯುವುದು ಹಾಗೂ ಇತರ ಸಿವಿಲ್ ಕಾಮಗಾರಿಗಳು ನಡೆಯುತ್ತಿವೆ. ಈ ಬಾರಿ ಮಳೆಯಿಂದ ಹೆಚ್ಚಿನ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ), ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ಬಿಬಿಎಂಪಿ ಮತ್ತು ಇತರ ಇಲಾಖೆಗಳು ಸೇರಿದಂತೆ ವಾಟ್ಸ್‌ಆಪ್ ಗ್ರೂಪ್‌ ಮಾಡಲಾಗಿದೆ. ಪ್ರವಾಹ ಮತ್ತು ಇನ್ನಿತರ ತುರ್ತು ಸಂದರ್ಭಗಳಲ್ಲಿ ಸ್ಥಳಕ್ಕೆ ಧಾವಿಸಲು ಈ ವಾಟ್ಸಾಪ್ ಗ್ರೂಪ್ ಸಹಕಾರಿಯಾಗಲಿದೆ” ಎಂದು ಗಿರಿನಾಥ್ ಹೇಳಿದರು.

“ವಾರ್ಡ್‌ ಮರುವಿಂಗಡಣೆಯ ಬಳಿಕ ಬಿಬಿಎಂಪಿಗೆ ವಿಲೀನಗೊಂಡ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಬಗ್ಗೆ ಹೆಚ್ಚುತ್ತಿರುವ ಸಮಸ್ಯೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುವುದು. ಮನವಿಗಳ ಮೇರೆಗೆ ಬೋರ್‌ವೆಲ್‌ ಕೊರೆಸಲಾಗುವುದು” ಎಂದು ತಿಳಿಸಿದರು.

“ಮಹದೇವಪುರ, ಯಲಹಂಕ, ಬೆಂಗಳೂರು ದಕ್ಷಿಣ ಮತ್ತು ಆರ್‌ಆರ್‌ನಗರದಂತಹ 110 ಹಳ್ಳಿಗಳಿಗೆ ನೀರಿನ ಕೊರತೆಯಿದ್ದಲ್ಲಿ ಬಿಬಿಎಂಪಿಯಿಂದ ನೀರು ಒದಗಿಸಲಾಗುವುದು. ಬೆಂಗಳೂರು ದಕ್ಷಿಣ ಒಂದರಲ್ಲೇ 50 ಬೋರ್‌ವೆಲ್‌ಗಳನ್ನು ಅಳವಡಿಸಲು ಬೇಡಿಕೆ ಇದೆ” ಎಂದರು.

“ಪಾಲಿಕೆಗೆ ಗ್ರಾಮಗಳಿಂದ ಸುಮಾರು 100 ಬೋರ್‌ವೆಲ್‌ಗಾಗಿ ಮನವಿ ಬಂದಿದ್ದು, ಪ್ರತಿ ಬೋರ್‌ವೆಲ್‌ಗೆ ತಲಾ 8 ಲಕ್ಷ ಬೇಕಾಗುತ್ತದೆ. ಪ್ರಸ್ತುತ ಹೊಸದಾಗಿ ವಿಲೀನಗೊಂಡ ಗ್ರಾಮಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಲು 10 ಕೋಟಿ ಬೇಕಾಗುತ್ತದೆ” ಎಂದು ಹೇಳಿದರು.

“ಬಿಬಿಎಂಪಿ ಕಾಮಗಾರಿಗಳಲ್ಲಿ ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ (ಕೆಆರ್‌ಐಡಿಎಲ್) ಹಗರಣದ ಕುರಿತು, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ಮತ್ತು ವರದಿ ನೀಡಲು ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರನ್ನು ನೇಮಿಸಲಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ

ಗುತ್ತಿಗೆದಾರರಿಗೆ ಬಾಕಿ ಇರುವ ಬಿಲ್

“ಕರ್ನಾಟಕ ಸರ್ಕಾರದ ಅನುದಾನದಡಿ ತೆಗೆದುಕೊಳ್ಳಲಾದ ಮಳೆನೀರು ಚರಂಡಿ ಕಾಮಗಾರಿಯ ಬಿಲ್‌ಗಳನ್ನು ಫೆಬ್ರವರಿಯಲ್ಲಿ ಇತ್ಯರ್ಥಪಡಿಸಲಾಗಿದೆ. ಗುತ್ತಿಗೆದಾರರಿಗೆ ಉಳಿದಿರುವ ಬಾಕಿಯನ್ನು ಶೀಘ್ರವೇ ಬಿಬಿಎಂಪಿ ತೆರವುಗೊಳಿಸಲಿದೆ” ಎಂದು ಅವರು ಹೇಳಿದರು.

“₹100 ಕೋಟಿ ವರೆಗಿನ ಬಿಲ್‌ಗಳನ್ನು ಈ ವರ್ಷದ ಏಪ್ರಿಲ್‌ನಲ್ಲಿ ತೆರವುಗೊಳಿಸಲಾಗಿದೆ. ಮೇ 2021 ಮತ್ತು ಜೂನ್ 2021ರ ನಡುವಿನ ₹300 ಕೋಟಿ ಬಿಲ್ ಮೊತ್ತವನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸಲಾಗುವುದು” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆ: ಸಿಎಂ ಸಿದ್ದರಾಮಯ್ಯ

ಕರ್ನಾಟಕ ರಾಜ್ಯ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆಯಾಗಿದೆ ಎಂದು...

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಗಡುವು ವಿಧಿಸಿದ ಡಿಸಿಎಂ ಡಿ ಕೆ ಶಿವಕುಮಾರ್

ಹದಿನೈದು ದಿನಗಳಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚಲೇಬೇಕು. ಮುಚ್ಚಿಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇನೆ. ಸಾರ್ವಜನಿಕರಿಂದ...

ಬಿಜೆಪಿಯವರ ಒಂದು ಕೋಟಿ ಸದಸ್ಯತ್ವ ಅಭಿಯಾನ ಸುಳ್ಳಿನ ನಾಟಕ: ರಮೇಶ್ ಬಾಬು

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಕೋಟಿ ನಲವತ್ತು ಲಕ್ಷ...

ಬೆಂಗಳೂರು | ಮಹಿಳೆ ಮೇಲೆ ಆಟೋ ಚಾಲಕನಿಂದ ಹಲ್ಲೆ; ವಿಡಿಯೋ ವೈರಲ್

ರೈಡ್ ಹೇಲಿಂಗ್ ಆ್ಯಪ್ ಮೂಲಕ ಬುಕ್ ಮಾಡಿದ್ದ 'ಆಟೋ ರೈಡ್'ಅನ್ನು ಕ್ಯಾನ್ಸಲ್...