ಪರ್ವತಗಳು ಮತ್ತು ನದಿಗಳ ರಕ್ಷಣೆಗಾಗಿ ರಾಷ್ಟ್ರೀಯ ಸಮಾವೇಶ: 9 ನಿರ್ಣಯಗಳು

Date:

ಜಾರ್ಖಂಡ್‌ನ ಜಮ್‌ಶೆದ್‌ಪುರದಲ್ಲಿ ಪರ್ವತಗಳು ಮತ್ತು ನದಿಗಳ ರಕ್ಷಣೆಗಾಗಿ ‘ಪರ್ವತಗಳು ಮತ್ತು ನದಿಗಳ ರಾಷ್ಟ್ರೀಯ ಸಮಾವೇಶ’ (National Convention on Mountains and Rivers) ಮೇ 22 ಮತ್ತು 23ರಂದು ಯಶಸ್ವಿಯಾಗಿ ಜರುಗಿದೆ.

- Advertisement -

ದೇಶದ ಪ್ರಮುಖ ಪರಿಸರ ಸಂಸ್ಥೆಗಳು, ತಜ್ಞರು ಮತ್ತು ನಾಗರಿಕರು ಒಟ್ಟಾಗಿ ದೇಶದ ನದಿಗಳು ಮತ್ತು ಪರ್ವತ ಪರಿಸರ ವ್ಯವಸ್ಥೆಗಳ ಸುಸ್ಥಿರ ನಿರ್ವಹಣೆ ಹಾಗೂ ರಕ್ಷಣೆಗಾಗಿ ಕೈಜೋಡಿಸಲು ಈ ಸಮಾವೇಶದಲ್ಲಿ ನಿರ್ಧರಿಸಿದ್ದಾರೆ. ಈ ಬಗ್ಗೆ ಸಂಘಟಕರು ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಇದನ್ನು ಓದಿದ್ದೀರಾ? ಭಾರತದ ಅರ್ಥ ವ್ಯವಸ್ಥೆಯ 7.4% ಬೆಳವಣಿಗೆ ಅಂದಾಜು: ವಾಸ್ತವಕ್ಕೆ ಎಷ್ಟು ಹತ್ತಿರ?

ಈ ಸಮಾವೇಶದಲ್ಲಿ ತರುಣ್ ಭಾರತ ಸಂಘ (Tarun Bharat Sangh), ಐಐಟಿ (ಐಎಸ್‌ಎಂ) ಧನಬಾದ್, ಜಲ ಬಿರಾದರಿ, ಯುಗಾಂತರ ಭಾರತಿ, ನೇಚರ್ ಫೌಂಡೇಶನ್, ಸ್ವರ್ಣರೇಖಾ ಕ್ಷೇತ್ರ ವಿಕಾಸ ಟ್ರಸ್ಟ್ ಮತ್ತು ಮಿಷನ್ ವೈ (MissionY) ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಜಂಟಿ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಪ್ರಕಟಣೆಯಲ್ಲಿ 9 ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

  1. ಪರ್ವತ ಪರಿಸರ ವ್ಯವಸ್ಥೆಗಳು ದೇಶದ ನೀರಿನ ಭದ್ರತೆ, ನದಿಗಳ ಪುನಶ್ಚೇತನ, ಜೀವವೈವಿಧ್ಯತೆ ಮತ್ತು ಲಕ್ಷಾಂತರ ಜನರ ಜೀವನೋಪಾಯಕ್ಕೆ ಅತ್ಯಗತ್ಯ.
  2. ಕೆಳಹಂತದ ಪ್ರದೇಶಗಳಿಗೆ ನೀರು ಮತ್ತು ಅಂತರ್ಜಲವನ್ನು ಪೂರೈಸುವ ಪರ್ವತ ಜಲಾನಯನ ಪ್ರದೇಶಗಳನ್ನು ರಕ್ಷಿಸಲು ಬದ್ಧತೆ
  3. ಪರ್ವತ ಪ್ರದೇಶದ ಮೂಲ ನಿವಾಸಿಗಳು ಮತ್ತು ಸ್ಥಳೀಯ ಸಮುದಾಯಗಳನ್ನು ಪರಿಸರದ ಪ್ರಾಥಮಿಕ ರಕ್ಷಕರು ಎಂದು ಗುರುತಿಸಲಾಗಿದ್ದು, ಅವರ ಸಾಂಪ್ರದಾಯಿಕ ಜ್ಞಾನವನ್ನು ಗೌರವಿಸಲು ನಿರ್ಧರಿಸಲಾಗಿದೆ.
  4. ಪರ್ವತ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳನ್ನು ದೀರ್ಘಾವಧಿಯಲ್ಲಿ ನಿಯಂತ್ರಿಸಲು ಪರಿಸರ-ಆಧಾರಿತ ಮತ್ತು ಹಕ್ಕುಗಳನ್ನು ಗೌರವಿಸುವ ಸಮಗ್ರ ಕಾನೂನು ಚೌಕಟ್ಟನ್ನು ಅಭಿವೃದ್ಧಿಪಡಿಸುವುದು.
  5. ನದಿಗಳು ಮತ್ತು ಪರ್ವತಗಳ ಹಕ್ಕುಗಳನ್ನು ಖಚಿತಪಡಿಸುವುದು ಹಾಗೂ ಅವುಗಳ ಆಡಳಿತಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಸ್ಥಾಪಿಸುವುದು.
  6. ದೇಶದ ಪರ್ವತ ಪರಿಸರ ವ್ಯವಸ್ಥೆಗಳ ಕಾನೂನು ಚೌಕಟ್ಟನ್ನು ರೂಪಿಸಲು ಅಖಿಲ ಭಾರತ ಮಟ್ಟದ ಸಮಾಲೋಚನಾ ಸಭೆಗಳನ್ನು ಆಯೋಜಿಸುವುದು.
  7. ಈ ಪ್ರಕಟಣೆ ಹೊರಬಂದ ಒಂದು ವರ್ಷದ ಅವಧಿಯೊಳಗೆ ಕಾನೂನು ಚೌಕಟ್ಟನ್ನು ಸಿದ್ಧಪಡಿಸುವ ಕೆಲಸವನ್ನು ಪೂರ್ಣಗೊಳಿಸಲು ಪ್ರತಿಜ್ಞೆ ಮಾಡಲಾಗಿದೆ.
  8. ಈ ಕಾನೂನು ಚೌಕಟ್ಟನ್ನು ಸಿದ್ಧಪಡಿಸಲು ನಾಗರಿಕ ಸಮಾಜ ಸಂಸ್ಥೆಗಳು, ಶಿಕ್ಷಣ ತಜ್ಞರು, ಪರಿಸರ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ಕಾನೂನು ತಜ್ಞರು ಮತ್ತು ಸ್ಥಳೀಯ ಸಮುದಾಯದ ಮುಖ್ಯಸ್ಥರನ್ನು ಆಹ್ವಾನಿಸಬೇಕು.
  9. ಸಿದ್ಧಪಡಿಸಲಾದ ಕಾನೂನು ಚೌಕಟ್ಟನ್ನು ಪರಿಗಣಿಸಿ, ಅದನ್ನು ‘ಪರ್ವತ ಸಂರಕ್ಷಣಾ ಕಾಯ್ದೆ’ (Mountain Protection Act) ಮಸೂದೆಯ ರೂಪದಲ್ಲಿ ರಾಜ್ಯ ವಿಧಾನಸಭೆಗಳು ಹಾಗೂ ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಅಂಗೀಕಾರಕ್ಕಾಗಿ ಮಂಡಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಲಾಗುತ್ತದೆ.

ಈ ಅಭಿಯಾನದ ನೇತೃತ್ವವನ್ನು ಭಾರತದ ಪ್ರಸಿದ್ಧ ಪರಿಸರವಾದಿ, ‘ಭಾರತದ ಜಲಪುರುಷ’ (Waterman of India) ಎಂದೇ ಖ್ಯಾತರಾದ ತರುಣ್ ಭಾರತ ಸಂಘದ ಅಧ್ಯಕ್ಷರು ರಾಜೇಂದ್ರ ಸಿಂಗ್ ಮತ್ತು ದಾಮೋದರ್ ಬಚಾವೋ ಅಭಿಯಾನದ ಸಂಚಾಲಕರು ಸರಯೂ ರಾಯ್ ವಹಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್‌ಘಾಟ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಮೌನ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು...

ಬಾಗಲಕೋಟೆ | ಪ್ರಜಾಪ್ರಭುತ್ವದ ಕರಾಳ ದಿನ: ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಸಂಕಲ್ಪದೊಂದಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...