ಜಮೆಯಾಗದ ಪಿಂಚಣಿ; 3 ಕಿ.ಮೀ ದೂರದ ಬ್ಯಾಂಕ್‌ಗೆ 90 ವರ್ಷದ ಅತ್ತೆಯನ್ನು ಹೊತ್ತು ನಡೆದ ಮಹಿಳೆ

Date:

ಕೆವೈಸಿ ಮಾಡಿಸಿಲ್ಲ ಎಂಬ ಕಾರಣದಿಂದಾಗಿ ಸುಮಾರು ನಾಲ್ಕು ತಿಂಗಳಿಂದ ಜಮೆಯಾಗದ ಪಿಂಚಣಿ ಹಣವನ್ನು ಪಡೆಯಲೆಂದು ತನ್ನ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಬುಡಕಟ್ಟು ಮಹಿಳೆಯೊಬ್ಬರು ಬ್ಯಾಂಕ್‌ಗೆ ಸುಮಾರು 3 ಕಿ.ಮೀ ನಡೆದುಕೊಂಡು ಹೋದ ಘಟನೆ ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯ ಸುರ್ಗುಜಾ ಜಿಲ್ಲೆಯಲ್ಲಿ ನಡೆದಿದೆ. ವೃದ್ಧ ಮಹಿಳೆಗೆ ನಾಲ್ಕು ತಿಂಗಳಿನಿಂದ ಮಾಸಿಕ 500 ರೂಪಾಯಿ ಪಿಂಚಣಿ ಬಂದಿರಲಿಲ್ಲ.

- Advertisement -

ಈ ಘಟನೆ ಶುಕ್ರವಾರ ಮೈನ್‌ಪತ್ ಅಭಿವೃದ್ಧಿ ಬ್ಲಾಕ್‌ನಲ್ಲಿ ನಡೆದಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ 50ರ ಮಹಿಳೆ ಸುಖ್‌ಮಾನಿಯಾ ಎಂದು ಗುರುತಿಸಲಾದ ಮಹಿಳೆ ತನ್ನ ವೃದ್ಧ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ರಸ್ತೆಯ ಉದ್ದಕ್ಕೂ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಇದನ್ನು ಓದಿದ್ದೀರಾ? ರಾಯಚೂರು | ದೇವದಾಸಿ ಮಹಿಳೆಯರ ಪಿಂಚಣಿ ಹೆಚ್ಚಳಕ್ಕೆ ಆಗ್ರಹ

ಈ ಹಿಂದೆ ‘ಬ್ಯಾಂಕ್ ಮಿತ್ರ’ ತನ್ನ ಮನೆಯಲ್ಲಿ ಮಾಸಿಕ 500 ರೂ. ಪಿಂಚಣಿಯನ್ನು ತಲುಪಿಸುತ್ತಿದ್ದರು. ಆದರೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಕಳೆದ ಮೂರರಿಂದ ನಾಲ್ಕು ತಿಂಗಳಿನಿಂದ ತನಗೆ ಪಿಂಚಣಿ ಬಂದಿಲ್ಲ ಎಂದು ವಿಡಿಯೋದಲ್ಲಿ ಮಹಿಳೆ ಹೇಳಿದ್ದಾರೆ.

ಕುನಿಯಾ ಪ್ರದೇಶದ ಜಂಗಲ್‌ಪಾರ ಗ್ರಾಮದ ನಿವಾಸಿ ಸುಖ್‌ಮಾನಿಯಾ, ಮೈನ್‌ಪತ್ ಪಟ್ಟಣದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಸುಮಾರು 3 ಕಿ.ಮೀ ನಡೆದು ತಲುಪಿದ್ದಾರೆ.

ಮೇ 22ರಂದು ಸುಖ್‌ಮಾನಿಯಾ ಯಾರಿಗೂ ತಿಳಿಸದೆ ತನ್ನ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಬ್ಯಾಂಕ್ ಶಾಖೆಗೆ ಬಂದಿದ್ದಾರೆ. ಶಾಖೆಯಲ್ಲಿ ಕೆವೈಸಿ ಪೂರ್ಣಗೊಂಡ ನಂತರ, ಬ್ಯಾಂಕ್ ತಕ್ಷಣವೇ ನಾಲ್ಕು ತಿಂಗಳವರೆಗೆ ಬಾಕಿ ಇದ್ದ 2,000 ರೂ. ಪಿಂಚಣಿ ಮೊತ್ತವನ್ನು ಬಿಡುಗಡೆ ಮಾಡಿದೆ ಎಂದು ಮೈನ್‌ಪತ್ ಜನಪತ್ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಖುಷ್ಬೂ ಶಾಸ್ತ್ರಿ ಭಾನುವಾರ ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್‌; ದುಬಾರಿ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆ?

ದೇಶದಲ್ಲಿ ದುಬಾರಿಯಾಗಿರುವ ಕೆಲವು ಕ್ಯಾನ್ಸರ್ ಔಷಧಗಳ ಬೆಲೆ ಶೀಘ್ರದಲ್ಲೇ ಭಾರಿ ಪ್ರಮಾಣದಲ್ಲಿ...