ಬೆಳ್ಳಂದೂರು ಕೆರೆಯ ನೊರೆಗೆ ಕಾರಣ ಕಂಡುಹಿಡಿದ ಐಐಎಸ್‌ಸಿಯ ಸಂಶೋಧಕರು

Date:

  • ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ಕೆರೆಯ ನೀರಿನ ಮಾದರಿ ಸಂಗ್ರಹಿಸಿ ಅಧ್ಯಯನ
  • ನಿರ್ದಿಷ್ಟ ಬ್ಯಾಕ್ಟೀರಿಯಾ ಹೊಂದಿರುವ ಘನವಸ್ತುಗಳು ಕೆರೆ ಸೇರುವುದರಿಂದ ನೊರೆ ನಿರ್ಮಾಣ

ರಾಜ್ಯ ರಾಜಧಾನಿ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ 2015ರಲ್ಲಿ ನೊರೆ ಮತ್ತು ಬೆಂಕಿ ಉಂಟಾಗಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ನ್ಯಾಯಾಲಯಗಳು ಕೂಡ ಈ ಸಮಸ್ಯೆಯನ್ನು ಗಮನಿಸುವಂತೆ ಮಾಡಿತ್ತು. ಪ್ರತಿ ಮಳೆಗಾಲದಲ್ಲಿಯೂ ಈ ಕೆರೆಯು ನೊರೆಯಾಗುತ್ತಲೇ ಇರುತ್ತದೆ.

ಬೆಳ್ಳಂದೂರು ಕೆರೆಯಲ್ಲಿ ಪ್ರತಿ ವರ್ಷ ನೊರೆ ಮತ್ತು ಬೆಂಕಿ ಬರುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಗಳು ಬಂದಿದ್ದವು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯೂ ಈ ಸಮಸ್ಯೆಯನ್ನು ಪರಿಹರಿಸಲು ಸಮಿತಿಯನ್ನು ರಚಿಸಿತ್ತು.

ಈ ಕೆರೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರಿನ ವಿಜ್ಞಾನಿಗಳು ಕಳೆದ ನಾಲ್ಕು ವರ್ಷಗಳಿಂದ ಈ ಕೆರೆಯ ಬಗ್ಗೆ ಅಧ್ಯಯನ ನಡೆಸಿದ್ದು, ಕೆರೆಯಲ್ಲಿ ಉಂಟಾಗುತ್ತಿರುವ ನೊರೆಗೆ ಮೂರು ಕಾರಣಗಳನ್ನು ತಿಳಿಸಿದ್ದಾರೆ.

ಒಂದು ಅತಿಯಾದ ಮಳೆ, ಎರಡು ಕರೆಗೆ ಸೇರುವ ಸಂಸ್ಕರಿಸದ ಕೊಳಚೆ ನೀರು, ಮೂರನೇಯದು ನಿರ್ದಿಷ್ಟ ಬ್ಯಾಕ್ಟೀರಿಯಾವನ್ನು ಹೊಂದಿರುವ ಘನವಸ್ತುಗಳು ಕೆರೆ ಸೇರುವುದರಿಂದ ನೊರೆ ನಿರ್ಮಾಣವಾಗುತ್ತಿದೆ ಎಂದು ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜೀಸ್ (CST), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ಯ ಸಂಶೋಧಕರು ತಿಳಿಸಿದ್ದಾರೆ.

ಈಗಿನ ಕಾಲದಲ್ಲಿ ನಗರದಲ್ಲಿನ ಬಹುತೇಕ ಮನೆಗಳಲ್ಲಿ ಡಿಟರ್ಜೆಂಟ್‌ಗಳು ಮತ್ತು ಶಾಂಪೂಗಳನ್ನು ಬಳಸಲಾಗುತ್ತದೆ. ಇದರಿಂದ ಕೆರೆಯಲ್ಲಿ ಒಂದು ರೀತಿಯ ಸರ್ಫ್ಯಾಕ್ಟಂಟ್ ನೊರೆ ಉಂಟಾಗುತ್ತದೆ ಎಂದು ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜೀಸ್ (CST), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ಯ ಸಂಶೋಧಕರು ಹೇಳಿದ್ದಾರೆ.

ಸಂಸ್ಕರಿಸದ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಕೊಳಚೆ ನೀರಿನಲ್ಲಿರುವ ಮಾಲಿನ್ಯಕಾರಕಗಳು ಕೆರೆಯಲ್ಲಿ ಹರಡಲು ಸರಿಸುಮಾರು 15 ದಿನ ತೆಗೆದುಕೊಳ್ಳುತ್ತದೆ. ಬಳಿಕ ಹೂಳಾಗಿ ಬದಲಾಗುತ್ತದೆ. ಹೀಗಾಗಿ, ಸಂಸ್ಕರಣೆ ಮಾಡದ ಕೊಳಚೆ ನೀರನ್ನು ಕೆರೆಗೆ ಬಿಡುವುದು ನಿಲ್ಲಿಸಬೇಕು ಎಂದು ವರದಿ ಹೇಳಿದೆ.

ಸಂಸ್ಕರಣೆ ಮಾಡದ ಕೊಳಚೆ ನೀರು ಕೆರೆಗೆ ಸೇರಿ ಕೆಸರಾಗಿ ಬದಲಾಗುತ್ತದೆ. ಹೆಚ್ಚಿನ ಕೊಳಚೆ ನೀರು ಕೆರೆಗೆ ಹರಿಯುವುದರಿಂದ ಅದರ ಒಂದು ಭಾಗವೂ ಕೆಸರಿಗೆ ಸಡಿಲವಾಗಿ ಅಂಟಿಕೊಳ್ಳುತ್ತದೆ. ಪರಿಣಾಮವಾಗಿ ಇದರ ಸಾಂದ್ರತೆಯೂ ಹೆಚ್ಚಾಗುತ್ತದೆ. ಕೆಲವೊಮ್ಮೆ, ಈ ಕೆಸರಿನ ಸಾಂದ್ರತೆಯು ಕೆರೆಗೆ ಪ್ರವೇಶಿಸುವ ಮೂಲ ಸಾಂದ್ರತೆಗಿಂತ 200 ಪಟ್ಟು ಹೆಚ್ಚು ಕೆರೆಗೆ ಪ್ರವೇಶಿಸುತ್ತದೆ. ಹೆಚ್ಚಿನ ಕೊಳಚೆ ನೀರು ಕೆರೆಯನ್ನು ಪ್ರವೇಶಿಸಿದಾಗ, ಮೇಲ್ಮೈ-ಸಕ್ರಿಯ ಏಜೆಂಟ್ (ಸರ್ಫ್ಯಾಕ್ಟಂಟ್) ಕೊಳೆಯುವುದಿಲ್ಲ ಮತ್ತು ಕೆಸರು ಜೊತೆಯಲ್ಲಿ ನೆಲೆಗೊಳ್ಳುತ್ತದೆ ಎಂದು ಸಿಎಸ್‌ಟಿಯ ಮುಖ್ಯ ಸಂಶೋಧನಾ ವಿಜ್ಞಾನಿ ಚಾಣಕ್ಯ ಎಚ್‌ ಎನ್‌ ಹೇಳಿದರು.

ಭಾರೀ ಮಳೆಯಿಂದಾಗಿ ನಗರದಿಂದ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದೆ. ಮಾಲಿನ್ಯಕಾರಕಗಳು ಮಳೆ ನೀರಿನೊಂದಿಗೆ ನಗರದ ಹೊಲಸು ಕೆರೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇರಿಕ್ಕೊಳ್ಳುತ್ತಿವೆ. ನೀರಿನ ಮಟ್ಟದಲ್ಲಿನ ಏರಿಕೆಯಿಂದಾಗಿ ಕೆರೆಯಲ್ಲಿನ ನೊರೆಯು ಹೆಚ್ಚಾಗುತ್ತದೆ. ಇದು ಸರ್ಫ್ಯಾಕ್ಟಂಟ್ ಕೆಸರನ್ನು ಪುನಃ ಸಕ್ರಿಯಗೊಳಿಸುತ್ತದೆ. ನೊರೆ ಆಗಿ ಬದಲಾಗುತ್ತದೆ ಎಂದು ಸಿಎಸ್‌ಟಿಯ ಸಹ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ರಾವ್ ಹೇಳಿದರು.

ಕೆಲವು ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಬೇಡವಾದ ಘನವಸ್ತಗಳು ನೊರೆಗೆ ಕಾರಣವಾಗಿರಬಹುದು. ನೊರೆ ರಚನೆಯನ್ನು ಅಧ್ಯಯನಿಸಲು ಸಂಶೋಧಕರು ಆಯಾ ಕಾಲದಲ್ಲಿ ನೀರು ಮತ್ತು ನೊರೆಯನ್ನು ಸಂಗ್ರಹಿಸಿದ್ದಾರೆ ಎಂದರು.

ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ತಿಂಗಳು ಕೆರೆಯ ನೀರಿನ ಮಾದರಿಗಳನ್ನು ಅಧ್ಯಯನ ಮಾಡಲಾಗಿದೆ. ಇದು ಕೆರೆಯ ನಾನಾ ಪ್ರದೇಶಗಳಲ್ಲಿನ ಸರ್ಫ್ಯಾಕ್ಟಂಟ್‌ಗಳ ರಾಸಾಯನಿಕ ಸಂಯೋಜನೆಯಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ಲ್ಯಾಬ್ ಮಾದರಿಯನ್ನು ಮಾಡಲಾಯಿತು. ನೀರು ಮತ್ತು ನೊರೆ ಮಾದರಿಗಳನ್ನು ಸಂಗ್ರಹಿಸಲು ಮತ್ತು ಪ್ರಯೋಗಗಳನ್ನು ನಡೆಸಲು ನಾನು ಪ್ರತಿ ತಿಂಗಳು ಕೆರೆಗೆ ಹೋಗಬೇಕಾಗಿತ್ತು ಎಂದು ಸಿಎಸ್‌ಟಿಯ ಪಿಎಚ್‌ಡಿ ವಿದ್ಯಾರ್ಥಿ ರೇಶ್ಮಿ ದಾಸ್ ಹೇಳಿದರು.

ಈ ಸುದ್ದಿ ಓದಿದ್ದೀರಾ? ತಿಂಗಳಿಗೆ ₹6 ಕೋಟಿ ಲಾಭ ಗಳಿಸುತ್ತಿರುವ ಬಿಎಂಆರ್‌ಸಿಎಲ್‌ : ಡಿಸಿಎಂ ಡಿಕೆ ಶಿವಕುಮಾರ್

ಕೆರೆಗೆ ಸಂಸ್ಕರಿಸದ ಕೊಳಚೆ ನೀರು ಪ್ರವೇಶಿಸುವುದನ್ನು ನಿಲ್ಲಿಸಬೇಕು. ಕೆರೆಯಲ್ಲಿ ಕೆಸರು ನಿರ್ಮಾಣವಾಗುವುದನ್ನು ತಡೆಯಬೇಕು. ಅಲ್ಲದೆ ಮಳೆಗಾಲ ಆರಂಭಕ್ಕೂ ಮುನ್ನ ಕೆರೆಯಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯಲು ಕ್ರಮಕೈಗೊಳ್ಳಬೇಕು ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಬಂದ್ | ನಾಳೆ ಎಂದಿನಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಸಂಘ-ಸಂಸ್ಥೆಗಳು ಸೇರಿದಂತೆ ನೂರಾರು...

ಬೆಂಗಳೂರು | ಸಾಲು ಸಾಲು ರಜೆ; ಮೂರು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್‌ನಲ್ಲಿ ಸಿಲುಕಿದ ಜನ

ರಾಜ್ಯ ರಾಜಧಾನಿ ಬೆಂಗಳೂರಿಗೆ ಹಲವಾರು ಜನ ಕೆಲಸ ಅರಸಿ ಬಂದು ನಗರದಲ್ಲಿರುವ...

ಬೆಂಗಳೂರು | ಪ್ರತಿಭಟನೆ ಹೆಸರಿನಲ್ಲಿ ಹೋಟೆಲ್‌ಗೆ ನುಗ್ಗಿ ದಾಂಧಲೆ; ಬಿಜೆಪಿ ಕಾರ್ಯಕರ್ತರ ಬಂಧನ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಸೆ.26 ರಂದು ಹಲವಾರು...

ಬೆಂಗಳೂರು | ಹಳೆ ದ್ವೇಷಕ್ಕೆ ಸಂಗಡಿಗನ ಹತ್ಯೆ; ನಾಲ್ವರ ಬಂಧನ

ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಾಗ ತಮ್ಮ ಹೆಸರು ಬಾಯಿಬಿಟ್ಟ ಎಂಬ ದ್ವೇಷದಿಂದ...