ಆಪ್ಟೋಜೆನೆಟಿಕ್ಸ್ ಸಂಶೋಧನೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ: ನರಕೋಶಗಳಿಗೆ ಸಂಜೀವಿನಿಯಾಗಲಿರುವ ಬೆಳಕು

Date:

ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಾರ್ಲ್ ಡಿಸೆರೋತ್, ಜರ್ಮನಿಯ ಬರ್ಲಿನ್ನಿನ ಹಮ್‌ಬೋಲ್ಟ್ ವಿಶ್ವವಿದ್ಯಾಲಯದ ಪೀಟರ್ ಹೆಗೆಮನ್ ಮತ್ತು ಜರ್ಮನಿಯ ವೂರ್ಜ್ಬರ್ಗ್ ವಿಶ್ವವಿದ್ಯಾಲಯದ ಜಾರ್ಜ್ ನಾಗೆಲ್ ಅವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಅಕ್ಟೋಬರ್ 5ರಂದು ಭಾರತೀಯ ಕಾಲಮಾನ ಮಧ್ಯಾಹ್ನ ಮೂರು ಗಂಟೆಗೆ ಘೋಷಿಸಲಾಯಿತು.

ಆಪ್ಟೋಜೆನೆಟಿಕ್ಸ್ (Optogenetics) ಎಂಬ ಹೊಸ ಅಧ್ಯಯನಕ್ಕೆ 2026ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ದಕ್ಕಿದೆ. ಆಪ್ಟೋ ಪದದ ಅರ್ಥ ಬೆಳಕು ಅಥವಾ ದೃಷ್ಟಿ. ಅದು ಮೂಲದಲ್ಲಿ ಕಣ್ಣಿಗೆ ಸಂಬಂಧಿಸಿದ್ದು. ಜೆನೆಟಿಕ್ಸ್ ಎಂದರೆ ತಳಿ ವಿಜ್ಞಾನ. ಆಪ್ಟೋಜೆನೆಟಿಕ್ಸ್ ಎಂದರೆ ‘ಬೆಳಕಿನ ತಳಿ ವಿಜ್ಞಾನ’ ಎನ್ನಬಹುದು. ಆಪ್ಟೋಜೆನೆಟಿಕ್ಸ್ ಪದವನ್ನು ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಾರ್ಲ್ ಡಿಸೆರೋತ್ ಅವರು ಹುಟ್ಟುಹಾಕಿ ಮೊಟ್ಟಮೊದಲ ಬಾರಿಗೆ 2006ರಲ್ಲಿ ತಮ್ಮ ಸಂಶೋಧನಾ ಲೇಖನದಲ್ಲಿ ಬಳಸಿದರು. ಇದೀಗ ಆಪ್ಟೋಜೆನೆಟಿಕ್ಸ್ ಸಂಶೋಧನೆಗೆ 2026ರ ನೊಬೆಲ್ ಪ್ರಶಸ್ತಿ ಸಂದಿದೆ.

ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಾರ್ಲ್ ಡಿಸೆರೋತ್, ಜರ್ಮನಿಯ ಬರ್ಲಿನ್ನಿನ ಹಮ್‌ಬೋಲ್ಟ್ ವಿಶ್ವವಿದ್ಯಾಲಯದ ಪೀಟರ್ ಹೆಗೆಮನ್ ಮತ್ತು ಜರ್ಮನಿಯ ವೂರ್ಜ್ಬರ್ಗ್ ವಿಶ್ವವಿದ್ಯಾಲಯದ ಜಾರ್ಜ್ ನಾಗೆಲ್ ಅವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಅಕ್ಟೋಬರ್ 5ರಂದು ಭಾರತೀಯ ಕಾಲಮಾನ ಮಧ್ಯಾಹ್ನ ಮೂರು ಗಂಟೆಗೆ ಘೋಷಿಸಲಾಯಿತು. ಅಂದಹಾಗೆ, ಅಕ್ಟೋಬರ್ ತಿಂಗಳ ಮೊದಲ ಸೋಮವಾರ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ವಿಜ್ಞಾನ (Physiology or Medicine) ಕ್ಷೇತ್ರಕ್ಕೆ ನೊಬೆಲ್ ಪ್ರಶಸ್ತಿಯನ್ನು ಘೋಷಿಸುವ ಪರಿಪಾಠವನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ.

ಪ್ರತಿ ಜೀವಕೋಶವೂ ಒಂದು ವಿದ್ಯುತ್ ಬ್ಯಾಟರಿ ಇದ್ದಂತೆ

ಈ ಸಾರಿಯ ವೈದ್ಯಕೀಯ ವಿಜ್ಞಾನದ ನೊಬೆಲ್ ಪ್ರಶಸ್ತಿಯ ವಿಷಯವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಯಾವುದೇ ಜೀವಿಗಳ ಪ್ರತಿ ಜೀವಕೋಶವೂ ಒಂದು ವಿದ್ಯುತ್ ಚಾಲಿತ ಬ್ಯಾಟರಿಯಂತೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿಜ್ಞಾನ ಓದುಗರು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಜೀವಕೋಶದ ಪೊರೆಯ ಒಳಗೆ ಮತ್ತು ಹೊರಗೆ ಇರುವಂತಹ ಅಯಾನ್ ಅಥವಾ ವಿದ್ಯುದಾವೇಶಿತ ಕಣಗಳು ಅದಲು ಬದಲಾಗುತ್ತಾ ಒಳ-ಹೊರಗೆ ಚಲಿಸುತ್ತಿರುತ್ತವೆ. ಅಯಾನ್‌ಗಳ ಚಲಿಸುವಿಕೆಗೆ ಜೀವಕೋಶದ ಪೊರೆಯಲ್ಲಿ ಅಯಾನ್ ನಾಲೆಗಳು ಅಥವಾ ಅಯಾನ್ ಚಾನಲ್‌ಗಳಿರುತ್ತವೆ. ಹಾಗೆ ಚಲಿಸುವುದರಿಂದ ಜೀವಕೋಶಗಳು ತಮ್ಮ ಕ್ರಿಯೆಯನ್ನು ಸುಲಲಿತವಾಗಿ ನೆರವೇರಿಸುತ್ತಿರುತ್ತವೆ. ಅಂತಹ ಅತಿ ಮುಖ್ಯ ಅಯಾನುಗಳೆಂದರೆ ಸೋಡಿಯಂ, ಪೊಟ್ಯಾಶಿಯಂ, ಕ್ಯಾಲ್ಶಿಯಂ, ಕ್ಲೋರೈಡ್ ಮತ್ತು ಮೆಗ್ನೀಶಿಯಂ. ಈ ಅಯಾನುಗಳ ಚಲನೆಯಿಂದ ಪ್ರತಿ ಜೀವಕೋಶವೂ ಬ್ಯಾಟರಿಯಂತೆ ಕಾರ್ಯ ನಿರ್ವಹಿಸುತ್ತದೆ. ಕ್ರಿಯಾತ್ಮಕವಾಗಿರುತ್ತದೆ. ಅಲ್ಲಿ ಋಣಾತ್ಮಕ (ನೆಗಟಿವ್) ಮತ್ತು ಧನಾತ್ಮಕ (ಪಾಸಿಟಿವ್) ಚಾರ್ಜ್ಗಳಿರುತ್ತವೆ. ಒಟ್ಟಾರೆ, ಅಲ್ಲಿ ಒಂದು ರೀತಿಯ ವಿದ್ಯುತ್-ರಾಸಾಯನಿಕ ಪ್ರವಹಿಸುವಿಕೆಯು ಉಂಟಾಗುತ್ತಿರುತ್ತದೆ. ಇದು ವೈದ್ಯಕೀಯ ವಿಜ್ಞಾನದ ಕೋಶ ಕ್ರಿಯಾ ವಿಜ್ಞಾನ (ಸೆಲ್ ಫಿಶಿಯಾಲಜಿ).

- Advertisement -
Nobel 123

ಜೀವಕೋಶಗಳ ಮೇಲೆ ಬೆಳಕಿನ ಪ್ರಭಾವದ ಸಂಶೋಧನೆಯ ಆರಂಭದ ಹೆಜ್ಜೆ

ಮೊದಲಿಗೆ ಪೀಟರ್ ಹೆಗೆಮನ್‌ರವರು 1996 ರಲ್ಲಿ ಕ್ಲಮೈಡೋಮೊನಾಸ್ ಎಂಬ ಏಕ ಕೋಶಾಣು ಪಾಚಿಯು ಬೆಳಕಿನತ್ತ ಚಲಿಸುವುದನ್ನು ಕಂಡು ವಿಸ್ಮಿತರಾದರು. ನಂತರ ಪೀಟರ್ ಹೆಗೆಮನ್ ಮತ್ತು ಜಾರ್ಜ್ ನಾಗೆಲ್‌ರವರು ಪಾಚಿಯಲ್ಲಿ ಚಾನಲ್‌ರೋಡಾಪ್ಸಿನ್ ಎಂಬ ಪ್ರೋಟೀನ್ ಅನ್ನು 2002 ಮತ್ತು 2003ರಲ್ಲಿ ಪತ್ತೆ ಹಚ್ಚಿದರು. ಜಾರ್ಜ್ ನಾಗೆಲ್ ಅವರು ಚಾನಲ್‌ರೋಡಾಪ್ಸಿನ್ನಿನ ಕ್ರಿಯೆಯನ್ನು ಅಧ್ಯಯನ ಮಾಡಿದರು. ಮೂಲದಲ್ಲಿ ಚಾನಲ್‌ರೋಡಾಪ್ಸಿನ್ ಎಂಬುದೊಂದು ‘ಆಪ್ಸಿನ್’ ಎಂಬ ರಾಸಾಯನಿಕ ವಸ್ತು. ಆಪ್ಸಿನ್‌ಗಳು ಬೆಳಕನ್ನು ಸೂಕ್ಷö್ಮವಾಗಿ ಗ್ರಹಿಸುವ ಪ್ರೋಟೀನ್‌ಗಳು. ಈ ಪ್ರೋಟೀನ್‌ಗಳು ಸಣ್ಣ ಆಣ್ವಿಕ ಸ್ವಿಚ್‌ನಂತೆ ಕಾರ್ಯ ನಿರ್ವಹಿಸುತ್ತವೆ. ಚಾನಲ್‌ರೋಡಾಪ್ಸಿನ್ ನೀಲಿ ಬೆಳಕನ್ನು ಸೂಕ್ಷ್ಮವಾಗಿ ಗ್ರಹಿಸಿ ಪಾಚಿಯ ಅಯಾನ್ ಚಾನಲ್‌ಗಳನ್ನು ನಿಗ್ರಹಿಸುತ್ತದೆಯೆಂದು ಕಂಡುಕೊAಡರು. ಆ ಪ್ರಭಾವದಿಂದ ಪಾಚಿಯು ನೀಲಿ ಬೆಳಕಿನತ್ತ ಚಲಿಸುವುದನ್ನು ಅವಲೋಕಿಸಿದರು. ಆಪ್ಟೋಜೆನೆಟಿಕ್ಸ್ ಸಂಶೋಧನೆಗೆ ಹಾಗೂ ಮುಂಬರಲಿರುವ ಆಪ್ಟೋಜೆನೆಟಿಕ್ಸ್ ಚಿಕಿತ್ಸಾ ತಂತ್ರಜ್ಞಾನಕ್ಕೆ ಈ ಅವಲೋಕನವೇ ಕಾರಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ರೀಡೆ, ವ್ಯಾಪಾರ ಮತ್ತು ಮೌನ: ಲಿಯೋನೆಲ್ ಮೆಸ್ಸಿ ಎಂಬ...

2013ರ ಪ್ರವಾಸದ ವೇಳೆ ಅವರು ಇಸ್ರೇಲ್‌ನ ವೆಸ್ಟರ್ನ್ ವಾಲ್‌ನಲ್ಲಿ 'ಕಿಪ್ಪಾ' (ಯಹೂದಿಗಳ ಸಾಂಪ್ರದಾಯಿಕ ಟೋಪಿ) ಧರಿಸಿ ನಿಂತಿದ್ದ ಚಿತ್ರವು, ಅವರ ಇಸ್ರೇಲ್ ಪರ ಒಲವಿಗೆ ಅಳಿಸಲಾಗದ ಸಾಕ್ಷಿಯಾಗಿ ಉಳಿದುಕೊಂಡಿದೆ. ಶಾಂತಿ ಪ್ರವಾಸದ ಹೆಸರಿನಲ್ಲಿ...

ಶಿಕಾರಿಪುರ | ಬೀಗರೂಟ ಹಾಕಿದ್ರೆ 1 ಲಕ್ಷ, ಉಂಡ್ರೆ...

ಮದುವೆ ಅಂದರೆ ಕೇವಲ ಎರಡು ಮನಸುಗಳ ಮಿಲನ ಮಾತ್ರವಲ್ಲ, ಬಂಧು-ಬಳಗದ ಸಂಭ್ರಮ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಮತ್ತು ಆದಾದ ಬಳಿಕ ಅದ್ದೂರಿಯಾಗಿ ಹಮ್ಮಿಕೊಳ್ಳುವ 'ಬೀಗರ ಊಟ' (ಬಾಡೂಟ) ಕೇವಲ ಸಂಪ್ರದಾಯವಾಗಿ ಉಳಿಯದೆ,...

ನಾಳೆ ಜಿಎಸ್‌ಟಿ ಮಂಡಳಿ ಸಭೆ: ಅಧಿಕಾರ ಹಂಚಿಕೆಯ ಅಸಮತೋಲನ;...

ಜಿಎಸ್‌ಟಿ ಮಂಡಳಿಯು ದೇಶದ 'ಸಹಕಾರ ಒಕ್ಕೂಟ ವ್ಯವಸ್ಥೆ'ಗೆ ಒಂದು ಉದಾಹರಣೆಯಾಗಿದ್ದರೂ, ಮತದಾನದ ಪ್ರಕ್ರಿಯೆಯಲ್ಲಿ ಕೇಂದ್ರಕ್ಕಿರುವ ಮೇಲುಗೈ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುತ್ತಿದೆ ಎಂಬುದು ಸ್ಪಷ್ಟ. ಜಿಎಸ್‌ಟಿ ಜಾರಿಗೆ ಬಂದ ನಂತರ ರಾಜ್ಯಗಳು ತಮ್ಮ...
Nobel 345

ಪೀಟರ್ ಹೆಗೆಮನ್ ಮತ್ತು ಜಾರ್ಜ್ ನಾಗೆಲ್ ಅವರ ಸಂಶೋಧನೆಯನ್ನು ಮೂಲವಾಗಿಟ್ಟುಕೊಂಡ ಕಾರ್ಲ್ ಡಿಸೆರೋತ್, ಆಪ್ಸಿನ್‌ಗಳ ಮೇಲಿನ ಅಧ್ಯಯನವನ್ನು ಮುಂದುವರೆಸಿದರು. ಚಾನಲ್‌ರೋಡಾಪ್ಸಿನ್ ತಯಾರಿಕೆಯ ವಂಶವಾಹಿ (ಜೀನ್) ಯನ್ನು ಸಸ್ತನಿಗಳ ನರಕೋಶದೊಳಕ್ಕೆ ನುಗ್ಗಿಸಿ ಇಲಿಗಳಲ್ಲಿ ಸಂಶೋಧನೆ ಕೈಗೊಂಡರು. ಭಯ, ಖಿನ್ನತೆ, ಆತಂಕ, ನಿದಿರೆ ಹಾಗೂ ಎಚ್ಚರವಾಗಿರುವಿಕೆ, ಸಾಮಾಜಿಕ ವರ್ತನೆ ಮತ್ತು ಹಲವು ಭಾವನೆಗಳು ಏರುಪೇರಾಗುವುದನ್ನು ಪರಿಶೀಲಿಸಿದರು.

ಆಪ್ಟೋಜೆನೆಟಿಕ್ಸ್ನಲ್ಲಿ ಆಪ್ಸಿನ್‌ಗಳ ಪಾತ್ರ

ಪಾಚಿಯಲ್ಲಿ ಕಂಡುಬAದ ಚಾನಲ್‌ರೊಡಾಪ್ಸಿನ್ ಕ್ರಿಯೆಯಿಂದಾಗಿ ಆಪ್ಟೋಜೆನೆಟಿಕ್ಸ್ ಸಂಶೋಧನೆ ಮುಂದುವರೆಯಿತು. ರೊಡಾಪ್ಸಿನ್ ಪದವು ಕಣ್ಣಿನಲ್ಲಿರುವ ರಾಡ್ಸ್ ಜೊತೆಗಿನ ಆಪ್ಸಿನ್ ಎಂಬ ಪ್ರೋಟೀನ್‌ನೊಂದಿಗೆ ಸಂಯೋಜಿತಗೊAಡು (ರಾಡ್ + ಆಪ್ಸಿನ್ = ರೊಡಾಪ್ಸಿನ್) ಬಳಕೆಗೆ ಬಂದಿದೆ. ರೊಡಾಪ್ಸಿನ್ ದೃಷ್ಟಿಗೆ ಅಗತ್ಯ. ದೇಹದಲ್ಲಿ ಹಲವಾರು ಆಪ್ಸಿನ್‌ಗಳಿವೆ. ಅವೆಂದರೆ, ಕಣ್ಣಿನಲ್ಲಿರುವ ರೊಡಾಪ್ಸಿನ್, ನೀಲಿ ಆಪ್ಸಿನ್, ಹಸಿರು ಆಪ್ಸಿನ್, ಕೆಂಪು ಅಥವಾ ಹಳದಿ ಆಪ್ಸಿನ್, ಕಣ್ಣಿನ ರೆಟಿನಾದಲ್ಲಿರುವ ಜೈವಿಕ ಗಡಿಯಾರವನ್ನು ನಿಯಂತ್ರಿಸುವ ಮೆಲನಾಪ್ಸಿನ್, ಕಣ್ಣಿನಲ್ಲಿರುವ ಪೆರಾಪ್ಸಿನ್, ನರಕೋಶಗಳಲ್ಲಿರುವ ನ್ಯೂರಾಪ್ಸಿನ್ ಹಾಗೂ ಮೆದುಳು ಮತ್ತು ಮೆದುಳು ಬಳ್ಳಿಯಲ್ಲಿರುವ ಎನ್‌ಸೆಫಲಾಪ್ಸಿನ್. ಈಗ ಆಸಕ್ತಿಯ ವಿಷಯವೆಂದರೆ ಬೆಳಕನ್ನು ಬಳಸಿ ನ್ಯೂರಾಪ್ಸಿನ್ ಹಾಗೂ ಎನ್‌ಸೆಫಲಾಪ್ಸಿನ್‌ಗಳನ್ನು ಸಕ್ರಿಯಗೊಳಿಸಿ ಹಲವು ನರರೋಗಗಳನ್ನು ವಾಸಿ ಮಾಡಬಹುದು. ಹಾಗೆಯೇ, ಬೆಳಕಿನಿಂದಲೇ ನರಕೋಶಗಳು ಅಥವಾ ಇತರೆ ಜೀವಕೋಶಗಳನ್ನು ನಿಷ್ಕಿçಯಗೊಳಿಸಿ ಹಲವು ನರರೋಗಗಳನ್ನು ಗುಣಪಡಿಸಬಹುದು. ಮುಂಬರುವ ದಿನಗಳಲ್ಲಿ ಬೆಳಕಿನ ಚಿಕಿತ್ಸೆ ಬರುತ್ತದೆ !!! ಅಬ್ಬಾ !!! ಎಷ್ಟೊಂದು ಕುತೂಹಲಕಾರಿ. ಬುದ್ದರೆಂಬ ಬೆಳಕು. ‘ಅತ್ತ ದೀಪ ಭವ್’ ಅರ್ಥಾತ್ ‘ನಿಮಗೆ ನೀವೇ ಬೆಳಕಾಗಿ’ ಎಂದು ತಾನೆ ಗೌತಮ ಬುದ್ದರು ಹೇಳಿದ್ದು.
‘ನಿಮಗೆ ನೀವೇ ಬೆಳಕಾಗಿ’ – ‘ಕರುಣಾಳು ಬಾ ಬೆಳಕೆ’

Nobel 234

ಬುದ್ದರ ಜ್ಞಾನೋದಯದ ಅಂತಿಮ ಸಂದೇಶವೇ ‘ನಿಮಗೆ ನೀವೇ ಬೆಳಕಾಗಿ’ ಎಂಬುದು. ಸಾಹಿತಿಗಳಾದ ಮುಲ್ಕ್ ರಾಜ್ ಆನಂದ್‌ರವರು ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್‌ರವರನ್ನು 1950ರಲ್ಲಿ ನಡೆಸಿದ ತಮ್ಮ ಸಂದರ್ಶನದ ಮಾತುಕತೆಯ ಕೊನೆಯಲ್ಲಿ ‘ಶೋಷಿತರಿಗೆ ತಮ್ಮ ಅಂತಿಮ ಸಂದೇಶವೇನು?’ ಎಂದು ಕೇಳುತ್ತಾರೆ. ಆಗ ಡಾ. ಅಂಬೇಡ್ಕರರು ಹೇಳುವುದೂ ಕೂಡ ‘ನಿಮಗೆ ನೀವೇ ಬೆಳಕಾಗಿ’ ಎಂದು. ಮುಂದುವರೆದು ಆಧುನಿಕ ಸಾಹಿತ್ಯದ ಜೊತೆಗೆ ಮುಂಬರಲಿರುವ ಆಪ್ಟೋಜೆನೆಟಿಕ್ಸ್ ಎಂಬ ಬೆಳಕಿನ ಚಿಕಿತ್ಸೆಯನ್ನು ತಳುಕು ಹಾಕಿ ನೋಡುವುದಾದರೆ, ಜಾನ್ ಹೆನ್ರಿ ನ್ಯೂಮನ್ ರಚಿಸಿರುವ ‘ಲೀಡ್, ಕೈಂಡ್ಲಿ ಲೈಟ್’ ಎಂಬ ಆಂಗ್ಲ ಕವಿತೆಯನ್ನು ಕನ್ನಡದ ಪ್ರಖ್ಯಾತ ಲೇಖಕರಾದ ಬಿ. ಎಂ. ಶ್ರೀಕಂಠಯ್ಯನವರು ಕನ್ನಡಕ್ಕೆ ಪರಿಣಾಮಕಾರಿಯಾಗಿ ಅನುವಾದಿಸಿ ‘ಕರುಣಾಳು ಬಾ ಬೆಳಕೆ, ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ಎಂಬ ಜನಪ್ರಿಯ ಹಾಡಾಗಿಸಿದ್ದಾರೆ. ಈಗ ಆಪ್ಟೋಜೆನೆಟಿಕ್ಸ್ ಎಂಬ ಬೆಳಕಿನ ಚಿಕಿತ್ಸೆಯನ್ನು ನಿರೀಕ್ಷಿಸುತ್ತಾ ‘ಕರುಣಾಳು ಬಾ ಬೆಳಕೆ’ ಎಂಬ ಹಾಡನ್ನು ಗುನುಗಿಕೊಳ್ಳೋಣ.

ಕಣ್ಣಿನ ದೃಷ್ಟಿಗೆ ಬೇಕು ಆಪ್ಸಿನ್‌ಗಳು

ಕಣ್ಣಿನ ದೃಷ್ಟಿಗೆ ಜೀವಸತ್ವ ಎ ಬೇಕೆನ್ನುವುದೊಂದು ವಿಜ್ಞಾನದ ಪ್ರಾಥಮಿಕ ಪಾಠ. ಜೀವಸತ್ವ ಎ ನಿಂದ ರೂಪಿತವಾದ ರಾಸಾಯನಿಕ ವಸ್ತುವನ್ನು ಬಳಸಿಕೊಂಡು ರೊಡಾಪ್ಸಿನ್ ಮತ್ತು ಅಯೋಡಾಪ್ಸಿನ್ ತಯಾರಾಗುತ್ತವೆ. ಕಪ್ಪು ಬಿಳುಪಿನ ದೃಶ್ಯವನ್ನು ಗ್ರಹಿಸಲು ರೊಡಾಪ್ಸಿನ್ ಅಗತ್ಯವಾದರೆ ಬಣ್ಣದ ದೃಶ್ಯವನ್ನು ಗ್ರಹಿಸಲು ಅಯೋಡಾಪ್ಸಿನ್ ಅಗತ್ಯ. ಈ ವರ್ಷದ ನೊಬೆಲ್ ಪ್ರಶಸ್ತಿಯ ಸಂಶೋಧನಾ ವಿಷಯದಲ್ಲಿ ಆಪ್ಸಿನ್‌ಗಳಿಗೇ ಪ್ರಮುಖ ಆಧ್ಯತೆ.

Nobel 456

ಆಪ್ಟೋಜೆನೆಟಿಕ್ಸ್ ಮೂಲಕ ಹಲವು ರೋಗಗಳಿಗೆ ಚಿಕಿತ್ಸೆ

ಆಪ್ಟೋಜೆನೆಟಿಕ್ಸ್ ಎಂಬ ಬೆಳಕಿನ ಚಿಕಿತ್ಸೆಯ ಮೂಲಕ ಹಲವು ಕಾಯಿಲೆಗಳನ್ನು ಗುಣಪಡಿಸಬಹುದು ಎಂಬುದನ್ನು ಕಂಡುಕೊಳ್ಳಲಾಗುತ್ತಿದೆ. ಚಿಕಿತ್ಸಾ ಸಂಶೋಧನೆ ಮುಂದುವರೆದಿದೆ. ಕಣ್ಣಿನ ಕೋಶಗಳಿಗೆ ಬೆಳಕಿನ ಚಿಕಿತ್ಸೆ ನೀಡಿ ಅಂಧತ್ವವನ್ನು ಗುರುತಿಸಿ ಗುಣಪಡಿಸಬಹುದು. ಮೆದುಳಿನ ನರಕೋಶಗಳಿಗೆ ಬೆಳಕಿನ ಚಿಕಿತ್ಸೆ ನೀಡಿ ಭಾವನೆಗಳನ್ನು ನಿಗ್ರಹಿಸಬಹುದು. ನರಗಳ ಪ್ರಚೋದನೆಯನ್ನು ನಿಯಂತ್ರಿಸಬಹುದು. ಭಯ, ವ್ಯಸನ ಮತ್ತು ಖಿನ್ನತೆಯನ್ನು ದೂರ ಮಾಡಬಹುದು. ಕಲಿಕೆಯನ್ನು ಉದ್ದೀಪನಗೊಳಿಸಬಹುದು. ಜ್ಞಾಪಕ ಶಕ್ತಿಯನ್ನು ಸುಧಾರಿಸಬಹುದು. ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಾದ ಪಾರ್ಕಿನ್‌ಸನ್ ಕಾಯಿಲೆ, ಮರೆಗುಳಿ ಕಾಯಿಲೆಯಾದ ಆಲ್ಜೀಮರನ ಕಾಯಿಲೆಯನ್ನು ತಹಬಂದಿಯಲ್ಲಿಡಬಹುದು. ಮೂರ್ಚೆ ರೋಗವನ್ನು ಗುಣಪಡಿಸಬಹುದು. ನರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು. ಮನುಷ್ಯನ ವರ್ತನೆಗಳನ್ನು ನಿಗ್ರಹಿಸಬಹುದು. ವಾಹ್! ಸಮಾಜ ಸುಧಾರಣೆಯೊಂದಿಗೆ ಶೋಷಣಾ ಮುಕ್ತ ಸಮಾಜವನ್ನು ನಿರ್ಮಿಸಬಹುದು !!!!!

————-

(ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನವನ್ನು 34 ವರ್ಷಗಳ ಕಾಲ ಬೋಧಿಸಿದ ಅನುಭವವಿರುವ ಹಾಗೂ ವಿಜ್ಞಾನ ಲೇಖಕರಾಗಿರುವ ಪ್ರೊ. ಎಂ. ನಾರಾಯಣ ಸ್ವಾಮಿಯವರು 2014ರಿಂದ ಪ್ರತಿ ವರ್ಷವೂ ನಿಯಮಿತವಾಗಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ಕುರಿತು ಸಾರ್ವಜನಿಕರಿಗೆ ಸರಳವಾಗಿ ಅರ್ಥವಾಗುವಂತೆ ‘ಜನಪ್ರಿಯ ವಿಜ್ಞಾನ ಲೇಖನ’ವನ್ನು ಬರೆಯುತ್ತಿದ್ದಾರೆ. ಇದು ವೈದ್ಯಕೀಯ ನೊಬೆಲ್ ಪ್ರಶಸ್ತಿ ಲೇಖನಗಳ ಸರಣಿಯ 13ನೇ ಲೇಖನ.)

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ: ಜನಸಾಮಾನ್ಯರ ನಿರೀಕ್ಷೆಗಳೇನು?–ಭಾಗ 3

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ,...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಮಾಂತ್ರಿಕ ಸಿಂಗೀತಂ ಶ್ರೀನಿವಾಸರಾವ್

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧನೆ‌

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ...

ಆಗ್ನೇಯ ಪದವೀಧರ ಕ್ಷೇತ್ರ: ಕಾಂಗ್ರೆಸ್-ಬಿಜೆಪಿ ನಡುವೆ ಬಿರುಸಿನ ಸ್ಪರ್ಧೆ!

ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಕಾವು ಪಡೆದುಕೊಂಡಿದ್ದು,...