ಅಲ್ಲಮನ ಅನನ್ಯ ಪದಪ್ರಯೋಗಗಳು | ಒಂದು-ಮೂರು-ಐದು-ಒಂಬತ್ತು-ಹತ್ತು

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಒಂದು-ಮೂರು-ಐದು-ಒಂಬತ್ತು-ಹತ್ತು
ಗಗನದ ಮೇಘಂಗಳು ಸುರಿದಲ್ಲಿ
ಒಂದು ಹಿರಿಯ ಕೆರೆ ತುಂಬಿತ್ತು.
ಆ ಕೆರೆಗೆ ಏರಿ ಮೂರು,
ಅಲ್ಲಿ ಒಳಗೆ ಹತ್ತು ಬಾವಿ,
ಹೊರಗೆ ಐದು ಬಾವಿ!
ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ ಆಕಾಶವೆಲ್ಲ ಜಲಮಯವಾಗಿತ್ತು!
ತುಂಬಿದ ಜಲವನುಂಡು ಬಂದು
ಅಂಜದೆ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ 

- Advertisement -

ವಚನಾರ್ಥ:
ಮೇಲೆ ಅನಂತವಾದ ಆಕಾಶ. ಅಲ್ಲಿ ಮೋಡಗಳ ರಾಶಿ. ಕೆಳಗೆ ವಿಸ್ತಾರವಾದ ಭೂಮಿ. ಅದರ ವಿಸ್ತಾರತೆ ಒಂದು ವಿಶಾಲವಾದ ಕೆರೆಯನ್ನು ಹೋಲುವಂತಿದೆ. ಅದು ಹಿರಿಯ ಕೆರೆ. ಆಕಾಶದ ಮೋಡಗಳು ಮಳೆ ಸುರಿಸಿ ಸುರಿಸಿ ಕೆರೆ ತುಂಬುತ್ತದೆ. ಆಕಾಶವೇ ಸೃಷ್ಟಿಕರ್ತನ ದಿವ್ಯ ಸ್ವರೂಪದ ಆವಾಸ ಸ್ಥಾನ. ಕೆಳಗಿರುವುದು ಆತನೇ ಸೃಷ್ಟಿಸಿರುವ ಜೀವ ಜಗತ್ತು. ಆಕಾಶದಿಂದ ಸುರಿಯುವ ಮಳೆಯೇ ಕಾಮನೆಗಳು. ಅವು ಜೀವ ಜಗತ್ತೆಂಬ ಅತೀ ದೊಡ್ಡದಾದ ಕೆರೆಯನ್ನು ತುಂಬಿಸುತ್ತವೆ. ಕಾಮನೆಗಳು ಎಂಬ ಜಲದಿಂದ ತುಂಬಿದ ಕೆರೆಯ ಭಾಗವಾಗಿ ಮನುಷ್ಯ. ಅಂತಹ ಮನುಷ್ಯ ದೇಹಕ್ಕೆ ಮೂರು ಲಕ್ಷಣಗಳು. ಸೂಕ್ಷ್ಮ, ಸ್ತುಲ, ಸಶರೀರ. ಇಂತಹ ಲಕ್ಷಣಗಳನ್ನು ಒಳಗೊಂಡು ರಚಿತವಾದ ದೇಹದಲ್ಲಿ ಪಂಚೇಂದ್ರೀಯಗಳು, ಪಂಚರಸಗಳ ಹತ್ತು ಭಾವಿ. ಇವೆಲ್ಲವನ್ನೂ  ಪಂಚಭೂತಗಳೆಂಬ ಭಾವಿಗಳು ಹೊರಗಿನಿಂದ ನಿಯಂತ್ರಿಸುತ್ತವೆ. ಮನುಷ್ಯ ದೇಹದ ಒಂಬತ್ತು ರಂದ್ರಗಳಿಂದ ಹೊಮ್ಮವ ಕಾಮಾದಿ ಬಯಕೆಗಳ ಜಲಧಾರೆಯ ರಭಸ ಮುಗಿಲೆತ್ತರೆಕ್ಕೆ ಮುಟ್ಟುವಂತಹುದು. ಅಂತಹ ಕಾಮಾದಿ ಬಯಕೆಗಳ ಜಲದಲ್ಲಿ ಮಿಂದುಂಡು ಅಂಜದೆ ಅಳುಕದೆ ನಾಚದೆ ಬದುಕುವವರು ಭಂಡಯೋಗಿಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ಅಶೋಕ್ ಸಿಂಘಾಲ್ ಜನ್ಮಶತಮಾನೋತ್ಸವ: ಕೋಮುವಾದದ ರೂವಾರಿಯ ವೈಭವೀಕರಣ –...

ಬೆಂಗಳೂರಿನಿಂದ ದೆಹಲಿಯವರೆಗೆ ನಡೆಯುತ್ತಿರುವ ಅಶೋಕ್ ಸಿಂಘಾಲ್ ಅವರ ಜನ್ಮಶತಮಾನೋತ್ಸವದ ಆಚರಣೆಗಳು ಭಾರತದ ಪ್ರಜಾಸತ್ತಾತ್ಮಕ ಭವಿಷ್ಯಕ್ಕೆ ಒಡ್ಡಿರುವ ಅಪಾಯದ ಮುನ್ಸೂಚನೆಯಾಗಿವೆ. ಕೋಮು ಸೌಹಾರ್ದತೆಗೆ ಕೊಳ್ಳಿ ಇಟ್ಟ, ಹಿಂಸಾಚಾರಗಳನ್ನು ಪ್ರೇರೇಪಿಸಿದ ಮತ್ತು ದೇಶದ ಬಹುತ್ವವನ್ನು ಸದಾ...

ಪದಪ್ರಯೋಗಾರ್ಥ:
ಒಂದು-ಮೂರು-ಐದು-ಒಂಬತ್ತು-ಹತ್ತು. ಇವು ಅಲ್ಲಮನು ವಚನ ರಚನೆಯಲ್ಲಿ ಅಳವಡಿಸಿಕೊಂಡಿರುವ ಸಂಖ್ಯೆಗಳು. ಅಲ್ಲಮನು ಸಂಖ್ಯೆಗಳನ್ನು ಬಳಸಿ ಆ ಸಂಖ್ಯೆಗಳ ಮೂಲಕ ಆಧ್ಯಾತ್ಮಿಕ ವಿಚಾರ ಮಂಡನೆ ಮಾಡಿದ ಹಲವಾರು ವಚನಗಳಿವೆ. ಆದ್ದರಿಂದ ಅಲ್ಲಮಪ್ರಭು ಸಂಖ್ಯಾಶಾಸ್ತ್ರ ನಿಪುಣನಾಗಿದ್ದಿರಬಹುದು ಎಂಬುದಕ್ಕೆ ಆಧಾರ ಸಿಗುತ್ತದೆ. ಸಂಖ್ಯಾಶಾಸ್ತ್ರವು ಪ್ರಾಚೀನ ವಿಜ್ಞಾನವಾಗಿದ್ದು, ವಿಷಯವನ್ನು ಪ್ರತಿಪಾದಿಸಲು ಮತ್ತು ಜ್ಯೋತಿಷ್ಯ ಭವಿಷ್ಯ ನುಡಿಯಲು ಸಂಖ್ಯೆಗಳು ಮತ್ತು ಅವುಗಳ ಶಕ್ತಿಯನ್ನು ಬಳಸುವ ಅಭ್ಯಾಸವಾಗಿ ನಡೆದು ಬಂದಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಖ್ಯೆಯು ವ್ಯಕ್ತಿಯ ವ್ಯಕ್ತಿತ್ವದ ಲಕ್ಷಣಗಳು ಮತ್ತು ಘಟನೆಗಳ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿರುತ್ತದೆ ಎನ್ನಲಾಗಿದೆ. ಕನ್ನಡ ಕವಿಗಳಲ್ಲಿ ಬೇಂದ್ರೆಯವರು ಸಂಖ್ಯಾಶಾಸ್ತ್ರ ನಿಪುಣನಾಗಿದ್ದರು. “ಶಬ್ದ ಮೋಸ ಮಾಡ್ತಾವ, ಆದರೆ ಸಂಖ್ಯಾ ಮೋಸಾ ಮಾಡೂದಿಲ್ಲ. ಸಂಖ್ಯಾ ಯಾವಾಗಲೂ ನಿಖರವಾಗಿರುತ್ತದೆ ಅಲ್ಲದೆ, ಎಲ್ಲರಿಗೂ ಒಂದೇ ರೀತಿಯಲ್ಲಿರುತ್ತದೆ. ಎರಡು ಅಂದರೆ ಅದು ಎರಡೇ. ಮೂರಾಗೋಕೆ ಸಾಧ್ಯವಿಲ್ಲ” ಎನ್ನುತ್ತಿದ್ದರು. ಬೇಂದ್ರೆಯವರು ಸಂಖ್ಯೆಗಳನ್ನು ಆಧರಿಸಿ ಬರೆದ ಕೆಲವು ಕವಿತೆಗಳಿವೆ. ಅಲ್ಲಮನ ವಚನಗಳಲ್ಲಿ ಬರುವ ಸಂಖ್ಯಾಧಾರಿತ ಪದಪ್ರಯೋಗಗಳು ಅನನ್ಯವಾದವು ಮತ್ತು ಅಧ್ಯಯನ ಯೋಗ್ಯವಾದವು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು....

ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...

ಅವಳ ಕಣ್ಣೋಟ | ‘ಗಾಂಧಾರಿ’: ಕಣ್ಣು ಕಳೆದುಕೊಂಡವಳು, ಕುರುಡಳಂತೆ ನಟಿಸಿದವಳು

ಮಕ್ಕಳ ಕಳ್ಳಸಾಗಣೆಯ ಜಾಲವನ್ನು ಚಿತ್ರದ ಕೇಂದ್ರ ಸಮಸ್ಯೆಯಾಗಿ ಇಟ್ಟಿರುವುದು ಮಹತ್ವದ ಸಂಗತಿ....