ವಚನ ಕಲ್ಯಾಣ | ಸಮತೆಯೆಂಬುದೆ ಯೋಗದಾಗು ನೋಡಾ

Date:

ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ,
ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ.
ಈಸುವನರಿಯದೆ ವೇಷವ ಧರಿಸಿ,
ಲೋಚು ಬೋಳಾದಡೆ ಮಹಾಲಿಂಗ ಕಲ್ಲೇಶ್ವರದೇವರು ನಗುವರು.

- Advertisement -

ವಚನ ಚಳವಳಿ ಕೇವಲ ಧಾರ್ಮಿಕ ಸುಧಾರಣೆ ಚಳವಳಿಯಾಗಿರಲಿಲ್ಲ. ಅದು ಮನುಷ್ಯನ ಅಂತರಂಗವನ್ನು ಪರಿವರ್ತಿಸುವುದರ ಜೊತೆಗೆ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳನ್ನು ಬದುಕಿನ ಭಾಗವಾಗಿಸುವ ಸಾಮಾಜಿಕ ಪರಿವರ್ತನೆ ಕ್ರಾಂತಿಯಾಗಿತ್ತು. ಈ ಮಹತ್ತರ ಚಳವಳಿಯಲ್ಲಿ ಹಾವಿನಹಾಳ ಕಲ್ಲಯ್ಯನವರ ಬದುಕು-ಬರಹ ಬಹುವಿಶಿಷ್ಟ ಸ್ಥಾನ ಪಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಅಕ್ಕಸಾಲಿಗ ಮನೆತನದವರಾದ ಹಾವಿನಹಾಳ ಕಲ್ಲಯ್ಯನವರ ಊರು ವಿಜಯಪುರ ಜಿಲ್ಲೆಯ ಹಾವಿನಾಳ. ಕಲ್ಲಯ್ಯನ ತಂದೆ ಶಿವನಯ್ಯ, ತಾಯಿ ಸೋಮವ್ವೆ. ಈತ ಸೊನ್ನಲಿಗೆ ಸಿದ್ದರಾಮರ ಸಂಪರ್ಕದಿಂದ ಕಲ್ಯಾಣಕ್ಕೆ ಬಂದು ಅನುಭಾವ ಗೋಷ್ಠಿಗಳಲ್ಲಿ ಭಾಗವಹಿಸಿ ಸಕಲ ಜೀವಾತ್ಮರಿಗೆ ಲೇಸು ಬಯಸುವ ಅನುಭಾವಿ ಶರಣನಾಗಿದ್ದ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ʼಮಹಾಲಿಂಗ ಕಲ್ಲೇಶ್ವರ’ ಎಂಬ ಅಂಕಿತದಲ್ಲಿ ಕಲ್ಲಯ್ಯ ರಚಿಸಿದ 105 ವಚನಗಳು ಲಭ್ಯವಾಗಿವೆ.

ಕಲ್ಲಯ್ಯನವರ ಈ ಮೇಲಿನ ವಚನದ ಮೊದಲ ಸಾಲು ಶರಣ ತತ್ವದ ಸಾರವನ್ನು ಅತ್ಯಂತ ಸರಳವಾಗಿದೆ. ʼಅರಿವೆ ಗುರು ಆಚಾರವೇ ಶಿಷ್ಯ, ಜ್ಞಾನವೇ ಲಿಂಗʼ ಎಂಬುದು ನಮ್ಮೊಳಗಿನ ಅರಿವು ನಮ್ಮ ಗುರುವಾಗಿ ಮಾರ್ಗದರ್ಶನ ನೀಡಬೇಕು. ಆ ಅರಿವು ಎಂಬುದು ಜೀವನದಲ್ಲಿ ಆಚರಣೆಯಲ್ಲಿ ಬಂದರೆ ಅದೇ ಆಚಾರ. ಅರಿವಿನಿಂದ ಬಂದ ಜ್ಞಾನವೇ ಲಿಂಗಾನುಭವಕ್ಕೆ ದಾರಿ ತೋರಿಸುತ್ತದೆ. ಗುರು, ಶಿಷ್ಯ ಮತ್ತು ಲಿಂಗ ಎಂಬ ಪರಿಕಲ್ಪನೆಗಳನ್ನು ಹೊರಗಿನ ಆಚರಣೆಗಳಿಗಿಂತ ಅಂತರಂಗದ ಅನುಭವದೊಂದಿಗೆ ಕಲ್ಲಯ್ಯನವರು ಜೋಡಿಸಿರುವುದು ವಿಶೇಷವಾಗಿದೆ.

ಶರಣ ಪರಂಪರೆಯಲ್ಲಿ ʼಅರಿವೇ ಗುರುʼ ಮತ್ತು ʼಕಾಯಕವೇ ಕೈಲಾಸʼ ಎಂಬ ನುಡಿಗಟ್ಟು ಜನಪ್ರಿಯ ತಾತ್ವಿಕ ಸಂದೇಶಗಳು. ಅರಿವೆ ಗುರು ಎಂಬ ನುಡಿ ಮುಕ್ತಾಯಕ್ಕ ಹಾಗೂ ಹಾವಿನಹಾಳ ಕಲ್ಲಯ್ಯನವರ ವಚನದಲ್ಲಿ ಬರುತ್ತದೆ. ಬದುಕಿನಲ್ಲಿ ಅರಿವು ಮತ್ತು ಕಾಯಕಕ್ಕೆ ಬಹುಮುಖ್ಯ ಸ್ಥಾನವಿದೆ. ಹೊರಗಿನಿಂದ ಯಾರೋ ಬಂದು ನಮ್ಮನ್ನು ಪರಿವರ್ತಿಸುವುದಕ್ಕಿಂತ ನಮ್ಮೊಳಗಿನ ಅರಿವೆ ತೆರೆದುಕೊಂಡರೆ ಅದುವೇ ನಿಜವಾದ ಗುರು. ಅದೇ ರೀತಿ ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡುವ ಪ್ರತಿಯೊಂದು ಕಾಯಕ ಬದುಕಿಗೆ ಕೈಲಾಸದ ಮಾರ್ಗ ತೋರಿಸುತ್ತದೆ ಎಂದು ಹೇಳುತ್ತಾರೆ ಕಲ್ಲಯ್ಯ.

ಅರಿವು ಗುರುವಾದಾಗ ಅದನ್ನು ಜೀವನದಲ್ಲಿ ಆಚರಣೆಗೆ ತರುವುದು ಶಿಷ್ಯನ ಕರ್ತವ್ಯ. ಸದಾಚಾರ ಹೊಂದಿರುವವರ ಮನಸ್ಸಿನಲ್ಲಿ ಜ್ಞಾನದ ಬೆಳಕು ಮೂಡುತ್ತದೆ. ದೇಹದ ಮೇಲೆ ಲಿಂಗ ಧರಿಸುವುದಷ್ಟೇ ಸಾಲದು, ಆ ಲಿಂಗದ ಮಹತ್ವವನ್ನು ಅರಿತುಕೊಂಡು ಬದುಕಿನಲ್ಲಿ ಜ್ಞಾನ ಮತ್ತು ಸದಾಚಾರವನ್ನು ರೂಢಿಸಿಕೊಳ್ಳಬೇಕು. ಅಂತರಂಗದ ಪರಿವರ್ತನೆಯೇ ನಿಜವಾದ ಲಿಂಗಾನುಭವ ಎಂಬುದು ವಚನಕಾರರ ಆಶಯ.

ಕಲ್ಲಯ್ಯನವರು ʼಪರಿಣಾಮವೆ ತಪʼ ಎಂದು ಹೇಳುವ ಮೂಲಕ ತಪಸ್ಸಿನ ಅರ್ಥವನ್ನು ಹೊಸದಾಗಿ ವ್ಯಾಖ್ಯಾನಿಸುತ್ತಾರೆ. ತಪಸ್ಸು ಎಂದರೆ ಸಂಸಾರ ತೊರೆದು ಗುಹೆಯಲ್ಲಿ ಕುಳಿತುಕೊಳ್ಳುವುದು ಮಾತ್ರವಲ್ಲ. ನಡೆ-ನುಡಿ ಮತ್ತು ಸಿದ್ಧಾಂತಗಳಲ್ಲಿ ದೃಢವಾದ ನಂಬಿಕೆ, ಬದ್ಧತೆಯಿಂದ ಧರ್ಮದ ತತ್ವಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ತಪಸ್ಸು. ತನ್ನೊಳಗಿನ ದುಶ್ಚಟ, ದುರ್ಗುಣ ಗೆದ್ದು ಸನ್ಮಾರ್ಗದಲ್ಲಿ ನಡೆಯುವ ಪ್ರಯತ್ನವೇ ತಪಸ್ಸಿನ ನಿಜವಾದ ರೂಪ ಎಂಬರ್ಥದಲ್ಲಿ ಕಲ್ಲಯ್ಯ ವಿಶ್ಲೇಷಿಸುತ್ತಾರೆ.

ಯೋಗ ಎಂದರೆ ಕೇವಲ ಕಣ್ಣು ಮುಚ್ಚಿ ಧ್ಯಾನಿಸುವುದಲ್ಲ. ತನು-ಮನ ಹಾಗೂ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು, ಸಕಲ ಜೀವಿಗಳನ್ನು ಒಳಿತು ಕೋರುವ ಮನೋಭಾವ ಬೆಳೆಸಿಕೊಳ್ಳುವುದು ಯೋಗ. ʼಸಮತೆಯೆಂಬುದೆ ಯೋಗʼ ಎಂಬ ಶರಣರ ಸಾಲು ಸಾಮಾಜಿಕ ದೃಷ್ಟಿಕೋನ ಸ್ಪಷ್ಟವಾಗಿ ತೆರೆದಿಡುತ್ತದೆ. ಸಕಲ ಜೀವಾತ್ಮರಿಗೆ ಲೇಸು ಬಯಸು ಎಂಬ ವಚನಕಾರರ ಮನುಷ್ಯತ್ವದ ಪರಿಕಲ್ಪನೆಯೇ ನಿಜವಾದ ಯೋಗ. ಸಮತೆ ಎಂದರೆ ಕೇವಲ ಜಾತಿ ಸಮಾನತೆ ಮಾತ್ರವಲ್ಲ. ಆರ್ಥಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಸಮಾನತೆ ಕೂಡ ಸಮತೆಯ ಭಾಗವಾಗಿದೆ ಎಂದು ಹೇಳುತ್ತಾರೆ.

ಅಂತರಂಗದಲ್ಲಿ ಅರಿವು, ಆಚಾರ ಮತ್ತು ಜ್ಞಾನವಿಲ್ಲದೆ ಕೇವಲ ಬಾಹ್ಯ ವೇಷವನ್ನು ಧರಿಸುವುದರಿಂದ ಯಾವ ಪ್ರಯೋಜನವಿಲ್ಲ. ವೇಷ ಧರಿಸಿ, ತಲೆಯ ಕೂದಲು ತೆಗೆದು ಬೋಳಾಗಿಸಿಕೊಂಡ ಮಾತ್ರಕ್ಕೆ ಆಧ್ಯಾತ್ಮಿಕತೆ ಬರುವುದಿಲ್ಲ, ಆಧ್ಯಾತ್ಮ ಗುರು ಎನಿಸಿಕೊಳ್ಳುವುದಿಲ್ಲ. ಅರಿವು-ಆಚಾರದಿಂದ ಅಂತರಂಗ ಶುದ್ಧವಾಗಿರಬೇಕು. ಬಹಿರಂಗದಲ್ಲಿ ವೇಷ ಬದಲಿಸಿಕೊಂಡರೆ ತಿರುಗಾಡಿದರೆ ದೇವರು ನೋಡು ನಗುವನು ಎಂದು ಅವರು ವ್ಯಂಗ್ಯವಾಗಿ ಎಚ್ಚರಿಸುತ್ತಾರೆ. ವೇಷ ತೊಟ್ಟವರೆಲ್ಲರೂ ಆಧ್ಯಾತ್ಮ ಬೋಧಕರಲ್ಲ, ಜ್ಞಾನದ ಹಸಿವಿನ ಮುಖಾಂತರ ಸಮಾಜದ ನೋವುಗಳಿಗೆ ಸ್ಪಂದಿಸುವ ಮನಸ್ಸಿನವರು ನಿಜವಾದ ಆಧ್ಯಾತ್ಮ ಗುರು.

ಪ್ರಸ್ತುತ ಸಮಾಜದಲ್ಲಿ ದೇವರು, ಧರ್ಮದ ಹೆಸರಿನಲ್ಲಿ ಆಚರಣೆಗಳು ಹೆಚ್ಚಾಗುತ್ತಿದ್ದರೂ, ಮಾನವೀಯತೆ, ದಯೆ, ಸಮಾನತೆ ಮತ್ತು ಪರಸ್ಪರ ಸಂಬಂಧ, ಗೌರವ ಕಡಿಮೆಯಾಗುತ್ತಿದ್ದರೆ ಆ ಧರ್ಮದ ಅರ್ಥವೇನು ಎಂಬ ಪ್ರಶ್ನೆಯನ್ನು ಕಲ್ಲಯ್ಯನವರ ವಚನ ನಮ್ಮ ಮುಂದಿಡುತ್ತದೆ. ಕಲ್ಲಯ್ಯನವರ ವಚನಗಳಲ್ಲಿ ಲಿಂಗಾಂಗ ಸಾಮರಸ್ಯ. ಆಚಾರ-ವಿಚಾರ ಹಾಗೂ ಡಾಂಭಿಕತೆ ಕಟುವಾಗಿ ಟೀಕಿಸುತ್ತಾರೆ. ನಡೆ-ನುಡಿ ಸಿದ್ಧಾಂತದಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಬಗ್ಗೆ ಮಾರ್ಮಿಕವಾಗಿ ತಿಳಿಸಿದ್ದಾರೆ.

‘ದಯವೇ ಧರ್ಮದ ಮೂಲ’ ಎಂಬ ಜನಪರ ಹಾಗೂ ಜೀವಪರ ಸೈದ್ಧಾಂತಿಕ ತತ್ವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಧರ್ಮವೆಂದರೆ ಕೇವಲ ಆಚರಣೆ ಮತ್ತು ಬಾಹ್ಯ ವೇಷವಲ್ಲ; ಅದು ಮನುಷ್ಯನನ್ನು ಮತ್ತಷ್ಟು ಮಾನವೀಯನನ್ನಾಗಿ ಮಾಡುವ ಜೀವನ ವಿಧಾನ. ಶರಣರ ಆಶಯದಂತೆ ಅರಿವು ಗುರುವಾಗಿಸಿಕೊಂಡು, ಆಚಾರ ಬದುಕಿನ ಭಾಗವನ್ನಾಗಿಸಿಕೊಂಡು, ಜ್ಞಾನ ಲಿಂಗಾನುಭವವಾಗಿ ಬೆಳೆಸಿಕೊಂಡು, ಸಮತೆಯನ್ನು ಯೋಗವನ್ನಾಗಿ ಸ್ವೀಕರಿಸಿದಾಗ ಮಾತ್ರ ನಿಜವಾದ ಸಾಮಾಜಿಕ ಪರಿವರ್ತನೆ ಸಾಧ್ಯ.

ಶರಣರಿಗೆ ಪಾಪ-ಪುಣ್ಯ, ಸ್ವರ್ಗ-ನರಕ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇರಲಿಲ್ಲ. ಅದರ ಬದಲಾಗಿ ಕಾಯಕದಲ್ಲೇ ಬದುಕಿನ ಸೌಂದರ್ಯವನ್ನು ಕಂಡುಕೊಂಡವರು. ಅದಕ್ಕೆ ಹೋಲುವಂತಹ ಕಲ್ಲಯ್ಯನವರ ಎರಡು ವಚನಗಳು ಇಲ್ಲಿವೆ.

ಅರ್ಥವೆಂಬುದೆ ಪಾಪ, ಬೇರೆ ಪಾಪವಿಲ್ಲ ಕಂಡನಯ್ಯಾ. ಪರಿಣಾಮವೆಂಬುದೆ ಪುಣ್ಯ, ಬೇರೆ ಪುಣ್ಯವಿಲ್ಲ ಕಂಡಯ್ಯಾ. ಪಾಪಪುಣ್ಯಗಳನತಿಗಳೆದ ಉಳುಮೆ, ಶಿವಯೋಗ. ಮಹಾಲಿಂಗ ಕಲ್ಲೇಶ್ವರನು ಬಲ್ಲ ಸಿದ್ಧರಾಮನ ಪರಿಯ.

ಪಾಪ ಎಂಬುದು ಬೇರೆ ಯಾವುದು ಅಲ್ಲ, ದುರಾಸೆ, ಅಧಿಕ ಸಂಪತ್ತು ಗಳಿಸುವ ವ್ಯಾಮೋಹವೇ ಪಾಪವಾಗಿದೆ. ಸತ್ಯ, ಶುದ್ಧವಾಗಿ ನಿಷ್ಠೆಯ ಕಾಯಕದಿಂದ ಬರುವ ಫಲವೇ ನಿಜವಾದ ಪುಣ್ಯ. ಸಮಚಿತ್ತದಿಂದ ದುಡಿಮೆಯಲ್ಲಿ ಏಕಾಗೃತೆ, ಸಮಧಾನ, ಶಾಂತಿ, ಸಂತೃಪ್ತಿ ಸಿಗುವುದು, ಅದರಲ್ಲಿಯೇ ಬದುಕಿನ ಸುಖ-ದುಃಖ ಕಂಡುಕೊಳ್ಳುವುದು ಪುಣ್ಯಕ್ಕೆ ಸಮವಾಗಿದೆ. ಪಾಪ-ಪುಣ್ಯ ಎಂಬುದು ತೊರೆದು ಸಾಧನೆ ಮಾಡುವುದು ಶಿವಯೋಗ ಎನಿಸಿಕೊಳ್ಳುತ್ತದೆ. ʼಅತ್ಯಾಶೆಯೆಂಬುದೆ ಪಾಪ, ಬೇರೆ ಪಾಪೆಂಬುದಿಲ್ಲ, ಕಂಡಿರೆ ಅಯ್ಯಾ! ಪರಿಣಾಮವೆಂಬುದೆ ಪರಮಾನಂದ, ಬೇರೆ ಪರಲೋಕವಿಲ್ಲ, ಕಂಡಿರೆ ಅಯ್ಯಾ! ಇಹಪರದಾಶೆಯಿಲ್ಲದಿಹುದೆ ಶಿವಯೋಗʼ ಎಂಬ ಮತ್ತೊಂದು ವಚನ ಅನುಭಾವ ಇದೇ ಆಗಿದೆ.

ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ, ರುದ್ರಪದವಿಯನೊಲ್ಲೆ. ನಾನು ಮತ್ತಾವ ಪದವಿಯನೊಲ್ಲೆನಯ್ಯಾ. ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಪ್ಪ ಮಹಾಪದವಿಯಕರುಣಿಸಯ್ಯಾ

ಬಸವಣ್ಣನವರ ಈ ಮೇಲಿನ ವಚನಕ್ಕೆ ಪೂರಕ ಎಂಬಂತೆ ಹಾವಿನಹಾಳ ಕಲ್ಲಯ್ಯನವರು “ಪರಮಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ. ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ. ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು, ಮಹಾಲಿಂಗ ಕಲ್ಲೇಶ್ವರಾ” ಎಂದು ಪದವಿಗಳನ್ನು ನಿರಾಕರಿಸುತ್ತಾರೆ. ಸರಳತೆಯ ಜೀವನ ಭಾವ ವ್ಯಕ್ತಪಡಿಸುತ್ತಾರೆ.

ಶರಣರಿಗೆ ಪದವಿ, ಪುರಸ್ಕಾರ, ಅಧಿಕಾರ ಸೇರಿದಂತೆ ಲೋಕದ ಯಾವ ಆಸೆಗಳೂ ಇರಲಿಲ್ಲ. ಅವರಿಗೆ ನಿಷ್ಠೆಯ ಕಾಯಕವೇ ಅತ್ಯಂತ ಶ್ರೇಷ್ಠ ಪದವಿಯಾಗಿತ್ತು. ಮೇಲು-ಕೀಳು, ಹಿರಿಯ-ಕಿರಿಯ, ಬಡವ-ಶ್ರೀಮಂತ ಎಂಬ ಭೇದ-ಭಾವ ಎನ್ನದೆ ಸಕಲ ಜೀವಾತ್ಮರಿಗೆ ಲೇಸು ಬಯಸಿದರು. ಅಷ್ಟೇ ಅಲ್ಲ ʼಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲʼ ಎಂದು ಹೇಳುವ ಶರಣರು ಎಲ್ಲರಿಗಿಂತ ಸಣ್ಣವ ನಾನೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಯಾವ ಪದವಿಗಳಿಗೂ ಆಸೆಪಡದ ಶರಣರು ಸಮಾಜ ಸೇವೆಯೇ ಶ್ರೇಷ್ಠ ಎಂದರಿತು ಸಂತೃಪ್ತಿ ಬದುಕು ನಡೆಸಿದರು. ವರ್ತಮಾನದ ಬದುಕಿನಲ್ಲಿ ʼಎನಗಿಂತ ಕಿರಿಯರಿಲ್ಲʼ ಅನುಷ್ಠಾನಗೊಂಡರೆ ಸಮ-ಸಮಾಜ ನಿರ್ಮಾಣ ಸಾಧ್ಯ.

ಇದನ್ನೂ ಓದಿ : ವಚನ ಕಲ್ಯಾಣ | ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದು ಅದೇತರ ಪೂಜೆ?

ಹಾವಿನಹಾಳ ಕಲ್ಲಯ್ಯನವರ ಕೆಲ ವಚನಗಳು ದೀರ್ಘವಾಗಿದ್ದರೂ, ರೂಪಕ, ಉಪಮೆಗಳಿಂದ ಕೂಡಿವೆ. ಅರಿವು ಗುರು, ಬದುಕಿನಲ್ಲಿ ತತ್ವಾಚರಣೆ, ಜ್ಞಾನವೇ ಲಿಂಗ ಎಂದು ಭಾವಿಸಬೇಕು. ಗುರು-ಲಿಂಗ-ಜಂಗಮ ಸೇವೆ ಮಾಡುವುದೇ ಬದುಕಿನ ತಪಸ್ಸು. ಜಂಗಮ ಸೇವೆ ಎಂದು ಸಮಾಜದ ಏಳಿಗೆಯ ದಾರಿ, ಅದರಿಂದ ಸಮಾಜ ಪರಿವರ್ತನೆಯ ಆಶಯವೂ ಇದೆ. ಸಮಾನತೆ ಸಮಾಜ ಕಟ್ಟುವುದು ನಮ್ಮ ಯೋಗವಾದರೆ ವಚನಕಾರರು ಕಂಡ ಆಶಯಗಳು ನನಸಾಗಲು ಸಾಧ್ಯ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2026 08 14 at 11.58.13 AM 8
ಜಾಹೀರಾತು
WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...