ವಚನ ಕಲ್ಯಾಣ | ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ!

Date:

ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.
ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ,
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ.
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ

- Advertisement -

ಕೊಟ್ಟಣದ ಸೋಮವ್ವ 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣೆ ಎಂದು ಚರಿತ್ರೆಕಾರರು ಊಹಿಸಿದ್ದಾರೆ. ಶಿವಶರಣರ ಮನೆಯಲ್ಲಿ ಭತ್ತ ಕುಟ್ಟುವುದು ಇವಳ ಕಾಯಕವಾಗಿತ್ತು. ಕೊಟ್ಟಣ ಕಾಯಕದಿಂದ ಗುರು-ಲಿಂಗ-ಜಂಗಮ ಸೇವೆ ಮಾಡುವ ಮುಖಾಂತರ ಧೈರ್ಯ, ವ್ರತ ನಿಷ್ಠೆ ಹಾಗೂ ಕಾಯಕ ನಿಷ್ಠೆಗೆ ಹೆಸರಾದವಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಸೋಮವ್ವ ಕುರಿತು ಹೆಚ್ಚಿನ ಮಾಹಿತಿ ದೊರೆತ್ತಿಲ್ಲ. ಬಸವಣ್ಣನವರ ಕಾಲದಲ್ಲಿ ನಿರ್ಲಜ್ಜ ಶಾಂತಯ್ಯ ಎಂಬ ಶರಣನಿದ್ದನು. ಸೋಮವ್ವ ಆ ಶರಣನ ಶಿಷ್ಯೆಯಾಗಿದ್ದಳು. ಗುರುವಿನ ಮೇಲಿನ ಭಕ್ತಿಯ ಕಾರಣಕ್ಕೆ ‘ನಿರ್ಲಜ್ಜೇಶ್ವರಾ’ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾಳೆ ಎಂದು ಫ.ಗು.ಹಳಕಟ್ಟಿ ಅಭಿಪ್ರಾಯಪಟ್ಟಿದ್ದರು. ಸೋಮವ್ವನ 1 ವಚನ ಮಾತ್ರ ದೊರೆತಿದೆ. ವೃತ್ತಿ ಪರಿಭಾಷೆ ಬಳಸಿ ಬರೆದ ಒಂದೇ ವಚನದಲ್ಲಿ ಜೀವನ ಮೌಲ್ಯಗಳ ಸಂದೇಶ ನೀಡಿರುವುದು ಕಾಣುತ್ತೇವೆ.

ಮನುಷ್ಯನ ವ್ಯಕ್ತಿತ್ವ ಮತ್ತು ಸಹವಾಸದ ಪರಿಣಾಮವನ್ನು ಅತ್ಯಂತ ಸರಳವಾದ ಕಾಯಕದ ಉದಾಹರಣೆಯ ಮೂಲಕ ವಿವರಿಸುವ ಈ ವಚನ ವಿಶಿಷ್ಟವಾಗಿದೆ. ಅಕ್ಕಿ ಪಡೆಯಬೇಕಾದರೆ ಭತ್ತವನ್ನು ಸರಿಯಾದ ರೀತಿಯಲ್ಲಿ ಕುಟ್ಟಬೇಕು. ಹಿಂದಿನ ಕಾಲದಲ್ಲಿ ಒರಳಿನಲ್ಲಿ ಭತ್ತ ಹಾಕಿ ಒನಕೆಯಿಂದ ಕುಟ್ಟಿ ಹೊಟ್ಟನ್ನು ಬೇರ್ಪಡಿಸಿ ಅಕ್ಕಿ ಪಡೆಯಲಾಗುತ್ತಿತ್ತು. ಭತ್ತವನ್ನು ಕುಟ್ಟುವಾಗ ಹದ ಬಹಳ ಮುಖ್ಯ. ಹದತಪ್ಪಿ ಮನಬಂದಂತೆ ಕುಟ್ಟಿದರೆ ಭತ್ತ ಅಕ್ಕಿಯಾಗದೆ ನುಚ್ಚಾಗುತ್ತದೆ. ಆಗ ನಾವು ಬಯಸಿದ ಉತ್ತಮ ಅಕ್ಕಿ ದೊರೆಯುವುದಿಲ್ಲ ಎಂದು ಕಾಯಕ ನಿಷ್ಠೆ ಕುರಿತು ವಿವರಿಸುತ್ತಾಳೆ.

ಅದೇ ರೀತಿ ಮನುಷ್ಯನ ಬದುಕಿನಲ್ಲಿಯೂ ಹದ ಮತ್ತು ಪ್ರಜ್ಞೆ ಬಹಳ ಮುಖ್ಯ. ಮೋಸ, ವಂಚಕರು, ದುರ್ಜನರ ಸಹವಾಸ ನಮ್ಮ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸದ್ಗುಣ ಮತ್ತು ಸನ್ನಡತೆಯ ಹದ ತಪ್ಪಿದರೆ ಬದುಕಿನ ಉದ್ದೇಶವೇ ಹಾಳಾಗುವ ಸಾಧ್ಯತೆಯಿದೆ. ಹದತಪ್ಪಿ ಕುಟ್ಟಿದ ಭತ್ತ ನುಚ್ಚಾಗುವಂತೆ, ಬದುಕಿನಲ್ಲಿ ಸ್ವಲ್ಪ ಎಡವಿದರೂ ಬದುಕು ವಿಕಾಸವಾಗದೆ ವಿನಾಶದತ್ತ ಸಾಗಬಹುದು. ನಮ್ಮ ಜೀವನ ಸತ್ಯ, ಶುದ್ಧ ಕಾಯಕ, ಪ್ರಾಮಾಣಿಕತೆ, ಸನ್ನಡತೆ ಮತ್ತು ಶಿಸ್ತಿನಿಂದ ಕೂಡಿರಬೇಕು ಎಂದು ಸೋಮವ್ವ ಮಾನವ ಜನಾಂಗಕ್ಕೆ ಎಚ್ಚರಿಸುತ್ತಾಳೆ.

ವ್ರತಹೀನರ ಸಂಗ ಮಾಡಿದರೆ ಮುಕ್ತಿಯ ಬದಲು ಕೆಟ್ಟ ಬದುಕು ಎದುರಾಗಬಹುದು. ಹೀಗಾಗಿ ಜೀವನದಲ್ಲಿ ಯಾರ ಸಂಗ ಮಾಡಬೇಕು, ಯಾರಿಂದ ದೂರ ಇರಬೇಕು ಎಂಬುದನ್ನು ನಾವು ವಿವೇಕದಿಂದ ನಿರ್ಧರಿಸುವುದು ಅಗತ್ಯವಾಗಿದೆ. ಇದೇ ವಿಚಾರವಾಗಿ ಬಸವಣ್ಣನವರು ʼಸಂಗವೆರಡುಂಟು, ಒಂದ ಹಿಡಿ, ಒಂದ ಬಿಡುʼ ಎಂದು ಎಚ್ಚರಿಕೆ ನೀಡುತ್ತಾರೆ. ವ್ರತವೆಂದರೆ ನೆಮ್ಮದಿ ಬದುಕು, ಪವಿತ್ರಗೊಳಿಸುವಿಕೆ ಎಂದರ್ಥ. ಬಸವಣ್ಣನವರ ʼಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ, ದೂರ ದುರ್ಜನರ ಸಂಗವದು ಭಂಗವಯ್ಯಾʼ ಎಂಬ ಆಶಯ ಸಾತ್ವಿಕ ಜೀವನದ ದಾರಿ ತೋರುತ್ತದೆ.

ವಚನದ ʼಅರಿಯದುದು ಹೋಗಲಿ, ಅರಿದು ಬೆರೆದೆನಾದಡೆʼ ಎಂಬ ಸಾಲು ಅತ್ಯಂತ ಗಂಭೀರವಾದ ಸಂದೇಶ ನೀಡುತ್ತದೆ. ತಿಳಿಯದೆ ದುರ್ಜನರ ಸಂಗ ಸೇರಿದರೆ ಅದು ಕ್ಷಮೆಗೆ ಅರ್ಹ. ಆದರೆ ಒಬ್ಬ ವ್ಯಕ್ತಿ ಕೆಟ್ಟ ನಡವಳಿಕೆಯವ ಎಂದು ತಿಳಿದ ಮೇಲೆಯೂ ಮತ್ತೆ ಆತನ ಸಂಗ ಮಾಡುವುದು ಅಪಾಯಕಾರಿ. ವ್ರತಹೀನನ ಜೊತೆಗೆ ಬೆರೆಯದೇ ಇರುವುದು ಭಕ್ತನ ಕರ್ತವ್ಯ. ಕೆಟ್ಟವರ ಸಹವಾಸ ನಮಗೂ ಅದೇ ದಾರಿಯಲ್ಲಿ ಕೊಂಡೊಯ್ಯಬಹುದು. ತಿಳಿಯದೇ ತಪ್ಪು ಮಾಡುವುದು ಸಹಜ, ತಿಳಿದ ಮೇಲೂ ತಪ್ಪು ಮಾಡುವುದು ಅಪರಾಧ ಎಂದು ಕಿವಿಮಾತು ಹೇಳುತ್ತಾರೆ.

ಕಾದ ಕತ್ತಿಯು ಎಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದನ್ನು ಮುಟ್ಟಿದರೆ ಅಪಾಯ ತಪ್ಪದು. ಅದೇ ರೀತಿ ದುಷ್ಟ, ಭ್ರಷ್ಟರ ಸಹವಾಸವೂ ನಮ್ಮ ಬದುಕಿಗೆ ಅಪಾಯ ತಂದೊಡ್ಡಬಹುದು. ಕೆಟ್ಟವರ ಸಹವಾಸದಿಂದ ಕೆಟ್ಟ ಆಲೋಚನೆಯತ್ತ ಸೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

ಮನುಷ್ಯನ ವ್ಯಕ್ತಿತ್ವ ನಿರ್ಮಾಣದಲ್ಲಿ ಸಹವಾಸಕ್ಕೆ ಮಹತ್ವದ ಪಾತ್ರವಿದೆ. ಸತ್ಯಶುದ್ಧ ಕಾಯಕ ಮಾಡುವ, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಮನೋಭಾವ ಹೊಂದಿರುವ ಸಜ್ಜನರೊಂದಿಗೆ ಬೆರೆತರೆ ನಮ್ಮಲ್ಲಿಯೂ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಮತ್ತೊಬ್ಬರ ನೋವು-ನಲಿವುಗಳಲ್ಲಿ ಭಾಗಿಯಾಗುವ, ಸಮಾಜದ ಒಳಿತನ್ನು ಬಯಸುವವರ ಸಂಗ ನಮ್ಮ ಬದುಕು ಸಾರ್ಥಕಗೊಳಿಸುತ್ತದೆ. ಇದಕ್ಕೆ ವಿರುದ್ಧವಾಗಿ ಕೊಲೆ, ಸುಲಿಗೆ, ಮೋಸ, ವಂಚನೆ ಮತ್ತು ದರೋಡೆ ಮುಂತಾದ ದುಷ್ಕೃತ್ಯಗಳಲ್ಲಿ ತೊಡಗಿರುವವರ ಸಂಗ ಬದುಕಿನ ನೆಮ್ಮದಿ ಕಸಿಯುತ್ತದೆ.

ʼಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾʼ ಎನ್ನುವ ಮುಖಾಂತರ ಸೋಮವ್ವ ತನ್ನ ದೃಢವಾದ ನಿಲುವಿನಿಂದ ಪ್ರತಿಜ್ಞೆ ಮಾಡುತ್ತಾಳೆ. ಸಜ್ಜನ ಶರಣರ ಸಂಗವನ್ನು ಒಪ್ಪಿಕೊಂಡು, ಸತ್ಯ ಮತ್ತು ಶುದ್ಧ ಕಾಯಕದ ಮಾರ್ಗದಲ್ಲಿ ನಡೆಯುವುದು ತನ್ನ ಆಯ್ಕೆ; ದುರ್ಜನರ ಸಹವಾಸ ತಾನು ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತಾಳೆ.

ಕೊಟ್ಟಣದ ಸೋಮವ್ವನ ಈ ವಚನ ಕೇವಲ ಭತ್ತ ಕುಟ್ಟುವ ಕಾಯಕದ ರೂಪಕವಲ್ಲ; ಅದು ಮನುಷ್ಯನ ವ್ಯಕ್ತಿತ್ವ ನಿರ್ಮಾಣ, ಸಹವಾಸದ ಪರಿಣಾಮ, ಸಜ್ಜನರ ಸಂಗದ ಮಹತ್ವ ಮತ್ತು ದುರ್ಜನರ ಸಂಗದಿಂದಾಗುವ ಅಪಾಯದ ಕುರಿತು ನೀಡಿರುವ ಜೀವನ ಸಂದೇಶವಾಗಿದೆ. ಹದ ಎಂದರೆ ಏಕಾಗೃತೆ, ತಾಳ್ಮೆ, ಸಮಚಿತ್ತ ಎಂಬರ್ಥ. ಏಕಾಗೃತೆ, ತಾಳ್ಮೆಯಿಂದ ಕೈಗೊಳ್ಳುವ ಕೆಲಸ ಯಶಸ್ಸಿಗೆ ಕಾರಣವಾಗುತ್ತದೆ ಎಂಬುದು ಶರಣರ ಖಚಿತ ನಿಲುವು.

ಇದನ್ನೂ ಓದಿ : ವಚನ ಕಲ್ಯಾಣ | ನುಡಿದರೆ ಗುರುವಾಗಿ ನುಡಿಯಬೇಕು!

ಕೊಟ್ಟಣ ಸೋಮವ್ವ ಸೇರಿದಂತೆ ಅನೇಕ ಶಿವಶರಣರು ವೃತ್ತಿ ಬದುಕಿನ ಅನುಭಾವಗಳನ್ನು ವಚನಗಳಲ್ಲಿ ಅಭಿವ್ಯಕ್ತಗೊಳಿಸಿದ್ದು ಕಾಣುತ್ತೇವೆ. ಕಾಯಕ ಶರಣೆ ಕೇತಲಾದೇವಿ ʼಹದ ಮಣ್ಣಲ್ಲದೆ ಮಡಕೆಯಾಗಲಾರದು. ವ್ರತಹೀನನ ಬೆರೆಯಲಾಗದುʼ ಎಂಬ ಸಾಲು ಸೋಮವ್ವ ವಚನಕ್ಕೆ ಪೂರಕವಾಗಿದೆ. ಮಡಕೆ ಸಿದ್ಧವಾಗಬೇಕಾದರೆ, ಕಸ-ಕಡ್ಡಿ ಬೇರ್ಪಡಿಸಿದ ಹದ ಮಣ್ಣು ಬೇಕು, ಇಲ್ಲದಿದ್ದರೆ ಮಡಕೆ ಒಡೆಯುತ್ತದೆ. ಹಾಗೇ ಮನುಷ್ಯನ ಮನಸ್ಸು ನಿರ್ಮಲವಾಗಿರಬೇಕು.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...