ಎರಡನೇ ದಿನವೂ ‘ಚಿನ್ನದ ಬೆಲೆ’ ಕುಸಿತ; ಮಾರಾಟ 15% ಇಳಿಯಲಿದೆ ಎಂದಿದೆ ಕ್ರಿಸಿಲ್ ವರದಿ

Date:

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳು ಮತ್ತು ಆರ್ಥಿಕ ಅನಿಶ್ಚಿತತೆಗಳು ಭಾರತೀಯ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರುತ್ತಲೇ ಇದ್ದು, ಹಣದುಬ್ಬರದ ಭೀತಿ ಹೆಚ್ಚಾಗಿದೆ. ಈ ಆರ್ಥಿಕ ಒತ್ತಡದ ನಡುವೆ, ಸತತ ಎರಡನೇ ದಿನವೂ ‘ಚಿನ್ನದ ಬೆಲೆ’ಯಲ್ಲಿ ಇಳಿಕೆ ಕಂಡುಬಂದಿದೆ. ಬೆಳ್ಳಿ ದರವು ಯಾವುದೇ ಬದಲಾವಣೆಯಿಲ್ಲದೆ ತಟಸ್ಥವಾಗಿದೆ.

- Advertisement -

ಶನಿವಾರ (ಮೇ 23) 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 430 ರೂ. ರಷ್ಟು ಇಳಿಕೆಯಾಗಿದೆ. ಒಟ್ಟು ದರ 1,59,060 ರೂ.ಗೆ ತಲುಪಿದೆ. ಇನ್ನು 1 ಗ್ರಾಂ ಚಿನ್ನದ ಬೆಲೆಯು 43 ಇಳಿಕೆಯಾಗಿ 15,906 ರೂ.ಗೆ ದಾಖಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ...

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ ಕಾಮಗಾರಿ ಬರೋಬ್ಬರಿ 12 ವರ್ಷದಿಂದ ತೆವಳುತ್ತಿದೆ. 65 ಮೀಟರ್ ಅಗಲದ ಹೈವೇ 45 ಮೀ.ಗೆ ಕುಗ್ಗಿದೆ. ಸಂಚಾರ ಇಕ್ಕಟ್ಟಾಗಿ 27...

22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ 400 ರೂ. ಕುಸಿತ ಕಂಡಿದೆ. ಪ್ರಸ್ತುತ 1,45,800 ರೂ.ಗೆ ತಲುಪಿದೆ. ಅಂತೆಯೇ, 1 ಗ್ರಾಂ ಬೆಲೆಯಲ್ಲಿ 40 ರೂ. ಇಳಿಕೆಯಾಗಿ 14,580 ರೂ. ಇದೆ.

ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದರೂ ಬೆಳ್ಳಿಯ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಗುರುವಾರ ದಾಖಲಾಗಿದ್ದ ದರವೇ ಇಂದೂ ಮುಂದುವರಿದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ 285 ರೂ. ಆಗಿದ್ದು, ಪ್ರತಿ ಕೆಜಿ ಬೆಳ್ಳಿಯ ದರ 2.85 ಲಕ್ಷ ರೂ. ಇದೆ.

ಚಿನ್ನಾಭರಣ ಮಾರಾಟದಲ್ಲಿ ಶೇ. 15ರಷ್ಟು ಕುಸಿತ ಸಾಧ್ಯತೆ ಎಂದಿದೆ ಕ್ರಿಸೆಲ್ ವರದಿ

ದೇಶದ ಪ್ರಮುಖ ರೇಟಿಂಗ್ಸ್ ಸಂಸ್ಥೆಯಾದ ‘ಕ್ರಿಸಿಲ್’ (CRISIL Ratings) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯು ಚಿನ್ನದ ಮಾರುಕಟ್ಟೆಯಲ್ಲಿನ ತಲ್ಲಣಗಳ ಕುರಿತು ವಿವರ ನೀಡಿದೆ. ಗಗನಕ್ಕೇರುತ್ತಿರುವ ಚಿನ್ನದ ದರ ಮತ್ತು ಕೇಂದ್ರ ಸರ್ಕಾರ ಇತ್ತೀಚೆಗೆ ಹಳದಿ ಲೋಹದ ಆಮದು ಮೇಲಿನ ಸುಂಕವನ್ನು ಹೆಚ್ಚಿಸಿರುವ ಕಾರಣ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿನ್ನಾಭರಣಗಳ ರಿಟೇಲ್ ಮಾರಾಟದ ಪ್ರಮಾಣವು ದೇಶದಲ್ಲಿ 13%ರಿಂದ 15%ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಕಳೆದ 2024–25ರ ಹಣಕಾಸು ವರ್ಷದಲ್ಲೂ ಚಿನ್ನಾಭರಣಗಳ ಒಟ್ಟಾರೆ ಮಾರಾಟದ ಪ್ರಮಾಣವು 8% ರಷ್ಟು ಇಳಿಕೆ ಕಂಡಿತ್ತು ಎಂದು ವರದಿ ವಿವರಿಸಿದೆ.

ಈ ಲೇಖನ ಓದಿದ್ದೀರಾ?: ಜೆನ್ ಝೀ’ಗಳ CJPಗೆ ಬಿಜೆಪಿ ಬೆದರಿದ್ದೇಕೆ? ಸಂಶೋಧನೆಗಳು ಹೇಳುವುದೇನು?

ಮಾರಾಟದ ಪ್ರಮಾಣ ಕಡಿಮೆಯಾಗುತ್ತಿದ್ದರೂ, ಚಿನ್ನದ ದರದಲ್ಲಿ ಭಾರಿ ಏರಿಕೆಯಾಗಿರುವುದರಿಂದ ಆಭರಣ ಉದ್ಯಮದ ಒಟ್ಟಾರೆ ವರಮಾನವು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ 20%ನಿಂದ 25%ರಷ್ಟು ಬೆಳವಣಿಗೆ ಕಾಣಲಿದೆ ಎಂದು ವರದಿ ಹೇಳಿದೆ.

ಆಭರಣಕ್ಕಿಂತ ‘ಹೂಡಿಕೆ’ಗೆ ಹೆಚ್ಚಿದ ಆದ್ಯತೆ!

ಕಳೆದ ಎರಡು ಆರ್ಥಿಕ ವರ್ಷಗಳ ಮಾರುಕಟ್ಟೆ ಸ್ಥಿತಿಯನ್ನು ವಿಶ್ಲೇಷಿಸಿದರೆ, ಭಾರತೀಯರಲ್ಲಿ ಆಭರಣ ಧರಿಸುವ ಆಸೆಗಿಂತ ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಬಳಸುವ ಪ್ರವೃತ್ತಿ ಹೆಚ್ಚಾಗಿದೆ. ಆಭರಣಗಳ ರೂಪದಲ್ಲಿ ಚಿನ್ನದ ಮಾರಾಟವು 25%ರಷ್ಟು ಕುಸಿದಿದ್ದರೆ, ಭವಿಷ್ಯದ ಹೂಡಿಕೆಗಾಗಿ ಕೊಳ್ಳುವ ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಮಾರಾಟವು 50%ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಆಮದು ಸುಂಕ ಹೆಚ್ಚಳದ ಬರೆ

ಕೇಂದ್ರ ಸರ್ಕಾರವು ಇತ್ತೀಚೆಗೆ ಚಿನ್ನದ ಆಮದು ಮೇಲಿನ ಸುಂಕವನ್ನು 6%ನಿಂದ ನೇರವಾಗಿ 15%ಗೆಹೆಚ್ಚಿಸಿದೆ. ಈ ನಿರ್ಧಾರವೇ ಸದ್ಯ ಮಾರುಕಟ್ಟೆಗೆ ದೊಡ್ಡ ಹೊಡೆತ ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಚಿನ್ನದ ಮೇಲಿನ ಹೆಚ್ಚಿನ ಆಮದು ಸುಂಕದ ನಿರ್ಧಾರವು ಗ್ರಾಹಕರ ಖರೀದಿಸುವ ಸಾಮರ್ಥ್ಯಕ್ಕೆ ಅಡ್ಡಿಯಾಗಲಿದೆ. ಇದರ ನೇರ ಪರಿಣಾಮವಾಗಿ, ಚಿನ್ನಾಭರಣಗಳ ರಿಟೇಲ್‌ ಮಾರಾಟವು ಈ ಆರ್ಥಿಕ ವರ್ಷದಲ್ಲಿ ಭಾರಿ ಕುಸಿತ ಕಂಡು ಕೇವಲ 620 ರಿಂದ 640 ಟನ್‌ಗಳಿಗೆ ತಲುಪಬಹುದು” ಎಂದು ಕ್ರಿಸಿಲ್ ರೇಟಿಂಗ್ಸ್ ಸಂಸ್ಥೆಯ ನಿರ್ದೇಶಕ ಹೀಮಾಂಕ್ ಶರ್ಮಾ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

ಇಳಕಲ್ | SIR ರದ್ದು, ಜ್ಞಾನೇಶ್ ಕುಮಾರ್ ವಜಾಕ್ಕೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು...

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...