ಹಾವೇರಿ | ಮೇ 25ಕ್ಕೆ ರಾಜ್ಯಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನ: ಸಾಹಿತ್ಯಾಸಕ್ತರಿಗೆ ಆಮಂತ್ರಣ 

Date:

ಕರುನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿ ಬಳಗದ ವತಿಯಿಂದ ಇದೇ ಮೇ 25ಕ್ಕೆ ರಾಜ್ಯಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನವನ್ನು ಹಾವೇರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು, ಅದರ ಪ್ರಯುಕ್ತ ಹಾವೇರಿ ಜಿಲ್ಲೆಯ ಸಾಹಿತಿಗಳು ಲೇಖಕರು, ಬರಹಗಾರರು, ವಾಗ್ಮಿಗಳು, ಚಿಂತಕರು, ಕನ್ನಡ ಅಭಿಮಾನಿಗಳು ಹಾಗೂ ಸಾಹಿತ್ಯ ಆಸಕ್ತರಿಗೆ ಸಮ್ಮೇಳನದ ಆಮಂತ್ರಣ ಪತ್ರಿಕೆ ಪ್ರದರ್ಶಿಸುವ ಮೂಲಕ  ಬರಲು ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಲಾಯಿತು.

- Advertisement -

ಹಾವೇರಿ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಕಾ ಗೊಷ್ಠಿ ಉದ್ದೇಶಿಸಿ ರಾಜ್ಯಾಧ್ಯಕ್ಷರು ಎಸ್ ಡಿ ಮುಡೆಣ್ಣವರ ಮಾತನಾಡುತ್ತಾ, “ಇಂದು ಕನ್ನಡ ನಾಡು ನುಡಿಯ ಉಳಿಸುವ ಬಹುದೊಡ್ಡ ಜವಾಬ್ದಾರಿ ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರು ಮಾಡಬೇಕಾದ ಆದ್ಯ ಕರ್ತವ್ಯ ಆಗಿದೆ. ಇದೇ ರೀತಿ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ ಸುಮಾರು 10 ವರ್ಷಗಳಿಂದ ಈ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತಾ, ಕನ್ನಡ ಉಳಿವಿಗಾಗಿ ಸದಾ ಶ್ರಮಿಸುತ್ತಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

“ರಾಜ್ಯಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದು, ತಾವೆಲ್ಲರೂ ಆಗಮಿಸಿ ಈ ಸಮ್ಮೇಳನ ಯಶಸ್ಸಿಗೊಳಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ನಿಮ್ಮದಾಗಿದೆ” ಎಂದು ಹೇಳಿದರು.

“ಇದೇ ತಿಂಗಳು ಮೇ 25 ರಂದು ಹಾವೇರಿಯ ಡಾ. ಬಿ. ಆರ್ ಅಂಬೇಡ್ಕರ್ ಸಭಾಭವನದಲ್ಲಿ ರಾಜ್ಯಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದು, ಧಾರವಾಡ ಜಿಲ್ಲೆಯ ಕನ್ನಡ ಅಭಿಮಾನಿಗಳು ಸಾಹಿತಿಗಳು ಹಿರಿಯರು ಲೇಖಕರು ಬರಹಗಾರರು ಮುಂತಾದ ವಿವಿಧ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಾಹಿತ್ಯ ಅನುಭವಿಗಳನ್ನು ಈ ಸಭೆ ಮೂಲಕ ಆಗಮಿಸಬೇಕಾಗಿ ವಿ ರಾಜ್ಯಾಧ್ಯಕ್ಷರು ಎಸ್. ಡಿ ಮುಡೆಣ್ಣವರ ವಿನಂತಿಸಿದರು.

ಈ ಸಮ್ಮೇಳನದಲ್ಲಿ ಉದ್ಘಾಟನೆ ವಿಚಾರಗೋಷ್ಠಿ ಕವಿಗೋಷ್ಠಿ, ಸಮಾರೋಪ ಸಮಾರಂಭ ಮತ್ತು ರಾಜ್ಯದ ಸಾಧಕರಿಗೆ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಹಿತಿಗಳು, ಚಿಂತಕರು ವಾಗ್ನಿಗಳು ಆಗಮಿಸುತ್ತಿದ್ದು, ತಾವು ಕೂಡ ಈ ಸಮ್ಮೇಳನಕ್ಕೆ ಆಗಮಿಸಿ ಸಮ್ಮೇಳವನ್ನು ಯಶಸ್ಸಿಗೊಳಿಸಲು ತಮ್ಮಲ್ಲಿ ವಿನಯ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ” ಎಂದರು.

ಈ ಸಂದರ್ಭದಲ್ಲಿ ಶ್ರೀ ಎಸ್. ಫಕ್ಕಿರಪ್ಪ, ರಾಜ್ಯ ಸಂಘಟನಾ ಸಂಚಾಲಕರು, ಮುಂಡಗೋಡ, ಎಸ್. ಎಲ್. ಕಾಡದೇವರಮಠ, ಚಂಪಾ ಹುಣಸಿಕಟ್ಟಿ, ಮಂಜುಳಾ ಅಕ್ಕಿ, ಉಡಚಪ್ಪ ಮಾಳಗಿ, ಸಂಜಯಗಾಂಧಿ ಸಂಜೀವಣ್ಣವರ, ನಾಗರಾಜ ಎಚ್, ಮುತ್ತುರಾಜ ಮುಡೆಣ್ಣವರ, ವಿನಯ ಬಿ, ಮಾಳಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಘವೇಂದ್ರ ದೊಡ್ಡಮನಿ ಗದಗ ಜಿಲ್ಲಾಧ್ಯಕ್ಷರು ಕುಮಾರ್ ಎಸ್ ತಳವಾರ್ ಹಾಗೂ ದ್ಯಾಮಣ್ಣ. ಬಳಗಾನೂರ, ಮಂಜಪ್ಪ ಮರೊಳ್ ಮಾಲತೇಶ್ ಯಲ್ಲಾಪುರ್, ಜಗದೀಶ್ ಹರಿಜನ, ಸಿಡಿ ಹನುಮಂತಪ್ಪ, ಮಂಜು ದೊಡ್ಡ ಮರಿಯಮ್ಮನವರ, ಬಸವಣ್ಣಪ್ಪ, ಹನುಮಂತಪ್ಪ, ಮಹೇಶಪ್ಪ ಹರಿಜನ್ ಮಾರ್ತಾಂಡ ಹರಿಜನ ಮುಂತಾದವರು ಹಾಜರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಳಕಲ್ | SIR ರದ್ದು, ಜ್ಞಾನೇಶ್ ಕುಮಾರ್ ವಜಾಕ್ಕೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು...

ಪತ್ರಕರ್ತರ ಸಂಘದ ನೂತನ ಭವನಕ್ಕೆ ₹50 ಲಕ್ಷ ಅನುದಾನ: ಸಂಸದ ಯದುವೀರ ಘೋಷಣೆ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಭವನ ನಿರ್ಮಾಣಕ್ಕೆ ಸಂಸದರ ಪ್ರದೇಶಾಭಿವೃದ್ಧಿ...

ಗದಗ | ಮತದಾನದ ಹಕ್ಕನ್ನು‌ ಕಳೆದುಕೊಳ್ಳುವ ಆತಂಕದಲ್ಲಿ ಅನಿವಾಸಿ ಭಾರತೀಯರು: ಮುಖಂಡರು ಕಿಡಿ

"ರೋಣ ಮತಕ್ಷೇತ್ರದಲ್ಲಿ ಅನಿವಾಸಿ ಭಾರತೀಯರು 999 ಜನರಿದ್ದಾರೆಂದು ಮತದಾರರ ಯಾದಿ ಪಟ್ಟಿಯಲ್ಲಿ...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...