ಈ ದಿನ ಸಂಪಾದಕೀಯ | ಸಿಡಿದೆದ್ದ ಅಮೆರಿಕ- ತಿಕ್ಕಲು ಟ್ರಂಪ್‌ನ ಬೆನ್ನಟ್ಟಿ ಕಾಡಲಿವೆ ಕೆಟ್ಟ ಕನಸುಗಳು!

Date:

ಟ್ರಂಪ್ ಮತ್ತು ಆತನ ನೀತಿನಿರ್ಧಾರಗಳ ಬಗ್ಗೆ ಕುದಿದು ರಸ್ತೆಗೆ ಹಬ್ಬಿದ ಆಕ್ರೋಶವಿದು. ಪ್ರತಿಪಕ್ಷಗಳ ಕುರಿತ ಟ್ರಂಪ್ ತಿರಸ್ಕಾರ, ಅಹಂಕಾರ ಖಂಡನೆಗೆ ಗುರಿಯಾಗಿದೆ. ಜನತಂತ್ರ ಬೇಕು, ಫ್ಯಾಸಿಸಮ್ ಬೇಡ ಎಂಬ ಫಲಕಗಳನ್ನು ಹೊತ್ತ ಜನರ ಅಹಿಂಸಾತ್ಮಕ ಪ್ರದರ್ಶನ.

- Advertisement -

ಅಮೆರಿಕದಲ್ಲಿ 80 ಲಕ್ಷಕ್ಕೂ ಅಧಿಕ ಜನ ಮಧ್ಯಪ್ರಾಚ್ಯ ಯುದ್ಧ ಮತ್ತು ಅಮಾನುಷ- ಆಕ್ರಮಣಕಾರಿ ವಲಸೆ ವಿರೋಧಿ ನೀತಿಯನ್ನು ವಿರೋಧಿಸಿ ಬೀದಿಗಳಿಗೆ ಇಳಿದಿರುವ ವರದಿಗಳು ಜನತೆಯ ಮನಸ್ಸಾಕ್ಷಿಯನ್ನು ಅಷ್ಟು ಸಲೀಸಾಗಿ ಅಪಹರಿಸಲು ಬರುವುದಿಲ್ಲವೆಂಬ ಸತ್ಯವನ್ನು ಎತ್ತಿ ತೋರಿವೆ. ಜನತಂತ್ರ ವ್ಯವಸ್ಥೆ ನೆಲೆಗೊಂಡಿರುವ ಅಮೆರಿಕದಲ್ಲಿ ‘ಸ್ವಯಂಘೋಷಿತ ರಾಜರು ಚಕ್ರವರ್ತಿ’ಗಳಿಗೆ ಅವಕಾಶವಿಲ್ಲ ಎಂದೂ ಸಾರಿವೆ. ಇತ್ತೀಚಿನ ವರ್ಷಗಳಲ್ಲಿ ಜರುಗಿದ ಅಭೂತಪೂರ್ವ ಜನಮತ ಪ್ರದರ್ಶನಗಳಿವು. ಅಮೆರಿಕದ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರದರ್ಶನ ನಡೆದಿಲ್ಲವೆಂದು ಸಂಘಟಕರು ಹೇಳಿಕೊಂಡಿದ್ದಾರೆ. NO ICE (ಇಮಿಗ್ರೇಶನ್ ಅಂಡ್ ಕಸ್ಟಮ್ಸ್ ಎನ್ಫೋರ್ಸಮೆಂಟ್), NO WARS, NO LIES, NO KINGS  ಘೋಷಣಾ ಫಲಕಗಳ ಜೊತೆ ಅಮೆರಿಕದ ರಾಷ್ಟ್ರಧ್ವಜವನ್ನು ತಿರುವುಮುರುವುಗೊಳಿಸಿ ಪ್ರದರ್ಶಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಎಪ್ಸ್ಟೀನ್ ಫೈಲ್ಸ್ ನ್ನು ಪೂರ್ಣವಾಗಿ ಬಿಡುಗಡೆ ಮಾಡದೆ ಅದುಮಿಟ್ಟಿರುವುದು, ಕ್ರೂರ ಮತ್ತು ಹಿಂಸಾತ್ಮಕ ವಲಸೆ ವಿರೋಧಿ ಕಾರ್ಯಾಚರಣೆ- ಹತ್ಯೆಗಳು, ಮಕ್ಕಳನ್ನು ಪೋಷಕರಿಂದ ಪ್ರತ್ಯೇಕಗೊಳಿಸಿರುವ ಅಮಾನವೀಯ ಕೃತ್ಯಗಳು, ಇರಾನ್ ವಿರುದ್ಧದ ಯುದ್ಧ ಮತ್ತು ಪರಿಣಾಮವಾಗಿ ಏರಿರುವ ಜೀವನವೆಚ್ಚ ಹಾಗೂ ಪ್ರಜಾತಂತ್ರವನ್ನು ಪತನದ ಹಾದಿ ಹಿಡಿಸಿರುವ ಟ್ರಂಪ್ ಸರ್ಕಾರದ ವಿರುದ್ಧದ ಅಸಮಾಧಾನ ಈ ಪ್ರದರ್ಶನಗಳಲ್ಲಿ ಸ್ಫೋಟಗೊಂಡಿದೆ. ಈ ಪ್ರದರ್ಶನಗಳು ನಡೆದಿರುವ ಅರ್ಧಕ್ಕರ್ಧ ಸೀಮೆಗಳು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳು! ಬೆಂಬಲಿಗ ಪ್ರದೇಶಗಳಲ್ಲಿ ಪ್ರತಿಭಟನೆಗಳು ಸಿಡಿದಿರುವ ಪರಿ ರಾಜಕೀಯ ವಿಶ್ಲೇಷಕರನ್ನು ಮಾತ್ರವಲ್ಲದೆ, ಖುದ್ದು ರಿಪಬ್ಲಿಕನ್ ಪಕ್ಷವನ್ನೂ ದಂಗುಬಡಿಸಿದೆ. ಟ್ರಂಪ್ ಅವರನ್ನು ಮುಂಬರುವ ದಿನಗಳಲ್ಲಿ ಕೆಟ್ಟಕನಸುಗಳು ಬೆನ್ನಟ್ಟಿ ಕಾಡುವುದು ಬಹುತೇಕ ಖಚಿತ.

ಯೂರೋಪ್, ಲ್ಯಾಟಿನ್ ಅಮೆರಿಕ ಹಾಗೂ ಆಸ್ಟ್ರೇಲಿಯಾ ತನಕ ಹನ್ನೆರಡಕ್ಕೂ ಹೆಚ್ಚು ದೇಶಗಳಲ್ಲಿ ಈ ಚಳವಳಿ ನಡೆದಿರುವುದು ಗಮನಾರ್ಹ ವಿದ್ಯಮಾನ.

ಹುಚ್ಚು ಉನ್ಮಾದ ತಿಕ್ಕಲುತನ ಮೂರ್ಖತೆಯು ಮೈ ಹೊಕ್ಕಿರುವವನಂತೆ ನಡೆದುಕೊಳ್ಳುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2025ರಲ್ಲಿ ತಮ್ಮನ್ನು ತಾವು ‘ದೊರೆ’ ಎಂದು ಬಿಂಬಿಸಿಕೊಂಡಿದ್ದುಂಟು. ‘ದೊರೆ ಚಿರಾಯುವಾಗಲಿ’ ಎಂಬ ಪೋಸ್ಟ್ ಅನ್ನು ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಧ್ಯಕ್ಷರಿಗೆ ಹೆಚ್ಚು ಅಧಿಕಾರ ನೀಡುವ ಮತ್ತು ಅಧ್ಯಕ್ಷನ ಅಧಿಕಾರಗಳಿಗೆ ಅಂಕುಶದ ಕ್ರಮಗಳನ್ನು ದುರ್ಬಲಗೊಳಿಸುವ ಮಸೂದೆಯನ್ನು ಅಮೆರಿಕದ ಸಂಸತ್ತಿನ ಕೆಳಮನೆಯಲ್ಲಿ ಅಂಗೀಕರಿಸಲಾಗಿತ್ತು. ಜೂನ್ ಹೊತ್ತಿಗೆಲ್ಲ ‘ದೊರೆತನ ನಡೆಯುವುದಿಲ್ಲ’  (No Kings) ಚಳವಳಿ ಶುರುವಾಗಿತ್ತು. ಕಳೆದ ಐದು ತಿಂಗಳುಗಳಲ್ಲಿ ಟ್ರಂಪ್ ಅವರ ಕನಿಷ್ಠ 80 ಕ್ರಮಗಳು ಸಂವಿಧಾನಬಾಹಿರವೆಂದು ಅಮೆರಿಕದ ನ್ಯಾಯಾಂಗ ತಡೆಯೊಡ್ಡಿದೆ. ಪರಿಣಾಮವಾಗಿ ನ್ಯಾಯಾಲಯಗಳ ಸಿಂಧುತ್ವವನ್ನೇ ಪ್ರಶ್ನಿಸತೊಡಗಿದ್ದಾರೆ ಟ್ರಂಪ್. ತಾವು ಆಯ್ಕೆಯಾದ ಕಳೆದ ಅಮೆರಿಕನ್ ಚುನಾವಣೆಗಳ ಜನಾದೇಶವು ಅಮೆರಿಕವನ್ನು ಮತ್ತೊಮ್ಮೆ ಮಹಾನ್ ಆಗಿಸಲು ನಮಗೆ ಅಧಿಕಾರ ನೀಡಿದೆ ಎಂಬುದು ಟ್ರಂಪ್ ವಾದ. ತನ್ನ ದೇಶವನ್ನು ಉಳಿಸುವವನು, ಕಾನೂನನ್ನು ಉಲ್ಲಂಘಿಸುತ್ತಾನೆ ಎಂಬ ಆಪಾದನೆಗೆ ಅರ್ಥವಿಲ್ಲ ಎನ್ನುತ್ತಾರೆ. ಟ್ರಂಪ್ ಅವರ ಎಲ್ಲ ನಡೆನುಡಿಗಳ ನ್ಯಾಯಾಂಗದ ಮಾದರಿಯಲ್ಲಿ ಕಾರ್ಯಾಂಗದ ಅತಿರೇಕಗಳಿಗೆ ಅಂಕುಶ ಹಾಕುವ ಅಧಿಕಾರವನ್ನು ಅಮೆರಿಕದ ಶಾಸಕಾಂಗವೂ ಹೊಂದಿದೆ. ಕಾರ್ಯಾಂಗ ಮಾಡುತ್ತಿರುವ ವೆಚ್ಚಗಳನ್ನು ತಡೆಹಿಡಿಯಬಲ್ಲದಾಗಿದೆ. ಟ್ರಂಪ್ ಆಡಳಿತದ ಪ್ರಸಕ್ತ ಅಮೆರಿಕ, ಸಂವಿಧಾನದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದು ರಾಜಕೀಯ ನಿರೀಕ್ಷಕರ ಅಭಿಪ್ರಾಯ. ಶಾಸಕಾಂಗ ಮತ್ತು ನ್ಯಾಯಾಂಗದ ಅಂಕೆಶಂಕೆಯಿಲ್ಲದೆ ನಡೆದುಕೊಳ್ಳುತ್ತಿದ್ದಾರೆ ಟ್ರಂಪ್. ಮುಕುಟವಿಲ್ಲದ ಕಿರೀಟವಿಲ್ಲದ ರಾಜನಂತೆ ಮೆರೆಯುತ್ತಿದ್ದಾರೆ.

ಮಿನೆಸೋಟದ ರಾಜಧಾನಿ ಸೇಂಟ್ ಪಾಲ್ ನಲ್ಲಿ 50 ಸಾವಿರ ಜನ ನೆರೆದಿದ್ದಾರೆ. ಸೆನೇಟರ್ ಬರ್ನಿ ಸ್ಯಾಂಡರ್ಸ್, ಹಿರಿಯ ನಟಿ ಜೇನ್ ಫಾಂಡ ಮುಂತಾದವರು ಜನಸ್ತೋಮವನ್ನು ಉದ್ದೇಶಿಸಿ ಮಾತಾಡಿದ್ದಾರೆ. ಬ್ರೂಸ್ ಸ್ಪ್ರಿಂಗ್ಸ್ಟೀನ್ ಬರೆದ ‘ಮಿನೆಪೊಲಿಸ್ ಬೀದಿಗಳು’ ಎಂಬ ಹಾಡನ್ನು ಪ್ರಹಸನ ರೂಪದಲ್ಲಿ ಪ್ರದರ್ಶಿಸಿದರು. ಇಮಿಗ್ರೇಷನ್ ಪೊಲೀಸರು ‘ವಲಸೆಗಾರ’ರ ಮೇಲೆ ಗುಂಡು ಹಾರಿ ಕೊಂದದ್ದು ಮತ್ತು ಈ ಕೃತ್ಯದ ವಿರುದ್ದ ದೇಶಾದ್ಯಂತ ಪ್ರಕಟವಾದ ಆಕ್ರೋಶ ಕುರಿತು ರಚಿಸಲಾಗಿದ್ದ ಹಾಡು ಇದು. ನ್ಯೂಯಾರ್ಕ್ ನಲ್ಲಿ ಹತ್ತಾರು ಸಾವಿರ ಮಂದಿ ಪ್ರತಿಭಟನೆ ನಡೆಸಿದರು. ಮ್ಯಾನ್ ಹಟನ್ ನ ಸೆವೆಂತ್ ಅವೆನ್ಯೂದಲ್ಲಿ ನಡೆದ ಅತಿದೊಡ್ಡ ಸಭೆಯಲ್ಲಿ ಚರಿತ್ರಾರ್ಹ ಚಲನಚಿತ್ರ ನಟ ರಾಬರ್ಟ್ ಡಿ ನೀರೊ, ನಾಗರಿಕ ಹಕ್ಕುಗಳ ಹೋರಾಟಗಾರ ರೆವರೆಂಡ್ ಶಾರ್ಪ್ಟನ್ ಮುಂತಾದವರು ಮಾತಾಡಿದ್ದಾರೆ. ಸಮಾನತೆ, ನ್ಯಾಯ, ಸಭ್ಯತೆ ಹಾಗೂ ಕರುಣೆ ಅಮೆರಿಕದ ಅಂತಸ್ಸತ್ವವನ್ನು ಪ್ರತಿನಿಧಿಸುವ ಮೌಲ್ಯಗಳು. ಈ ಮೌಲ್ಯಗಳಲ್ಲಿ ನಮ್ಮ ನಂಬಿಕೆ ಅಚಲ. ಚಕ್ರವರ್ತಿ-ರಾಜನ ಗೊಡವೆಯಿಲ್ಲದ ದೇಶಕ್ಕಾಗಿ ದಾವೆ ಹೂಡಿದ್ದೇವೆ. ಅದನ್ನು ಮತ್ತೆ ಸ್ಥಾಪಿಸುತ್ತೇವೆ ಎಂದಿದ್ದಾರೆ ರಾಬರ್ಟ್ ಡಿ ನೀರೊ. ಮತದಾನದ ನಿಯಮಗಳಲ್ಲಿ ಬದಲಾವಣೆ, ಪರಿಸರ ಕುರಿತ ನಿರ್ಲಕ್ಷ್ಯದಂತಹ ವಿಷಯಗಳೂ ಈ ಸಭೆಗಳಲ್ಲಿ ಪ್ರಸ್ತಾಪವಾಗಿವೆ. ಸಂವಿಧಾನವನ್ನು ಟ್ರಂಪ್ ವಿರೂಪಗೊಳಿಸುತ್ತಿರುವ ಕುರಿತ ಪ್ರತಿಕೃತಿಯ ಪ್ರದರ್ಶನವಾಗಿದೆ.

“NO KINGS” ಚಳವಳಿಯ ಮೂರನೆಯ ಸುತ್ತು ಇದು. 50 ರಾಜ್ಯಗಳ ಉದ್ದಗಲಕ್ಕೆ 3,200 ಪ್ರತಿಭಟನಾ ಪ್ರದರ್ಶನಗಳು ವಿಧವಿಧವಾಗಿ ನಡೆದಿವೆ. ಈ ಹಿಂದೆ ನಡೆದ ‘NO KINGS’ ಪ್ರದರ್ಶನಗಳೂ ಹತ್ತಾರು ಲಕ್ಷ ಪ್ರತಿಭಟನಾಕಾರರನ್ನು ಸೆಳೆದಿದ್ದವು. 2025ರ ಜೂನ್ 14 ಟ್ರಂಪ್ ಹುಟ್ಟಿದ ದಿನ. ಅಂದು ನಡೆದ ಮೊದಲ ಸುತ್ತಿನ ಪ್ರತಿಭಟನೆ 40 ಲಕ್ಷದಿಂದ 60 ಲಕ್ಷ ಪ್ರದರ್ಶನಕಾರರನ್ನು ಕಂಡಿತ್ತು. 2,700 ಪಟ್ಟಣಗಳಲ್ಲಿ ನಡೆದ ಎರಡನೆಯ ಸುತ್ತಿನಲ್ಲಿ 70 ಲಕ್ಷ ಮಂದಿ ಭಾಗವಹಿಸಿ ಪ್ರತಿಭಟಿಸಿದ್ದರು. ಜನದಟ್ಟಣೆಯ ಈ ಅಂದಾಜುಗಳನ್ನು ಮಾಡಿರುವವರು ಅಮೆರಿಕೆಯ ಹೆಸರಾಂತ ದತ್ತಾಂಶ ಪತ್ರಕರ್ತ ಜಿ.ಎಲಿಯಟ್ ಮಾರಿಸ್.

ಪತ್ರಕರ್ತರಿಗೆ ಹಣ ಕೊಟ್ಟು ಈ ಪ್ರದರ್ಶನಗಳ ವರದಿಗಳನ್ನು ಅತಿಶಯವಾಗಿ ಬಿಂಬಿಸಲಾಗುತ್ತಿದೆ ಎಂದು ಶ್ವೇತಭವನದ ವಕ್ತಾರರು ನೀಡಿರುವ ಪ್ರತಿಕ್ರಿಯೆ ಹಾಸ್ಯಾಸ್ಪದ. ಅಮೆರಿಕದ ಸೋಲನ್ನು ಕುರಿತು ಬರೆಯುತ್ತಿದ್ದಾರೆಂದು ಪತ್ರಕರ್ತರನ್ನು ಹೀನಾಮಾನ ಬೈಯ್ಯತೊಡಗಿದ್ದಾರೆ ಟ್ರಂಪ್. ಸುದ್ದಿವಾಹಿನಿಗಳ ಲೈಸೆನ್ಸ್ ರದ್ದು ಮಾಡುವುದಾಗಿ ಧಮಕಿ ಹಾಕಿದ್ದಾರೆ. 

ಟ್ರಂಪ್ ಮತ್ತು ಆತನ ನೀತಿನಿರ್ಧಾರಗಳ ಬಗ್ಗೆ ಕುದಿದು ರಸ್ತೆಗೆ ಹಬ್ಬಿದ ಆಕ್ರೋಶವಿದು. ಪ್ರತಿಪಕ್ಷಗಳ ಕುರಿತ ಟ್ರಂಪ್ ತಿರಸ್ಕಾರ, ಅಹಂಕಾರ ಖಂಡನೆಗೆ ಗುರಿಯಾಗಿದೆ. ಜನತಂತ್ರ ಬೇಕು, ಫ್ಯಾಸಿಸಮ್ ಬೇಡ ಎಂಬ ಫಲಕಗಳನ್ನು ಹೊತ್ತ ಜನರ ಅಹಿಂಸಾತ್ಮಕ ಪ್ರದರ್ಶನ.

ಇರಾನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಬೇಕು, ಅಮೆರಿಕದಲ್ಲಿ ಮಾಡಲಾಗಿರುವ ಸಾಮೂಹಿಕ ಬಂಧನಗಳು ನಿಲ್ಲಬೇಕು ಹಾಗೂ ಚುನಾವಣೆಗಳು ನ್ಯಾಯಯುತವಾಗಿ ನಡೆಯಬೇಕು ಎಂದು ಆಗ್ರಹಿಸಲಾಯಿತು.

ಸ್ಯಾನ್ ಫ್ರಾನ್ಸಿಸ್ಕೋ ಕಡಲ ಕಿನಾರೆಯಲ್ಲಿ ‘ಟ್ರಂಪ್ ತೊಲಗಬೇಕು ಈಗಿಂದೀಗಲೇ’ ಎಂಬ ಅಕ್ಷರಗಳ ಆಕಾರದಲ್ಲಿ ಮಾನವ ಫಲಕ ರೂಪಗೊಂಡಿತ್ತು.

ಈ ಚಳವಳಿಯು ಅಮೆರಿಕದ ಯುವಜನರನ್ನು ಸೆಳೆದಿದೆ. ಅಕ್ಟೋಬರ್ ನಲ್ಲಿ ಎದುರಾಗಲಿರುವ ಮಧ್ಯಂತರ ಚುನಾವಣೆಗಳ ಹಿನ್ನೆಲೆಯಲ್ಲಿ ಡೆಮೊಕ್ರಾಟ್ ಪಕ್ಷವು ಯುದ್ಧವಿರೋಧಿ ಭಾವನೆಗಳನ್ನು ಬಿತ್ತಿ ಬೆಳೆದು ಕಟಾವು ಮಾಡುವ ಇರಾದೆ ಹೊಂದಿದೆ.

ಜಗತ್ತಿನ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಸರ್ವಾಧಿಕಾರಿಗಳು ಮತ್ತು ಕಟ್ಟರ್ ವಾದಿಗಳ ಪತನಕ್ಕೆ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮಗಳು ನಾಂದಿಯಾಗಬೇಕು. ಕಾಲವೇ ಹೇಳುವ ತೀರ್ಮಾನವಿದು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

"ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು...

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...