ಈ ದಿನ ಸಂಪಾದಕೀಯ | ಬಜೆಟ್ ಅಧಿವೇಶನ ಅರ್ಥಪೂರ್ಣ ಚರ್ಚೆಗಳಿಗೆ ಒತ್ತು ನೀಡಿತೇ?

Date:

ನಾಡಿನ ಹಣೆಬರಹ ಬರೆಯುವ ಬಜೆಟ್ ಕುರಿತು ಅದಕ್ಕಾಗಿಯೇ ಮೀಸಲಿಟ್ಟ ಅಧಿವೇಶನದಲ್ಲಿ ಅರ್ಥಪೂರ್ಣ ಮತ್ತು ಆರೋಗ್ಯಕರ ಚರ್ಚೆಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡಬೇಕಾದ್ದು ಸರ್ಕಾರ ಮತ್ತು ವಿರೋಧ ಪಕ್ಷಗಳಿಬ್ಬರ ಸಹಜ ಜವಾಬ್ದಾರಿ. ಜನಪ್ರತಿನಿಧಿಗಳು ಆ ಜವಾಬ್ದಾರಿಯನ್ನು ನಿಭಾಯಿಸಿದ್ದಾರಾ?

ಬಜೆಟ್ ಮೇಲಿನ ಚರ್ಚೆಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ನೀಡಿದ್ದಾರೆ. ಅಲ್ಲಿಗೆ ಬಜೆಟ್ ಅಧಿವೇಶನದ ಕಲಾಪವನ್ನು ಸ್ಪೀಕರ್ ಖಾದರ್ ಕೊನೆಗೊಳಿಸಿದ್ದಾರೆ. ಗುರುವಾರ ನಾಮ್-ಕೆ-ವಾಸ್ತೆ ಕಲಾಪ ಮುಂದುವರೆಸಿದ್ದಾರೆ.

- Advertisement -

ಹಣಕಾಸು ಸಚಿವರೂ ಆದ ಸಿದ್ದರಾಮಯ್ಯನವರು ಮಾರ್ಚ್ 6ರಂದು ದಾಖಲೆಯ 17ನೇ ಬಜೆಟ್​ ಮಂಡಿಸಿದರು. ರಾಜ್ಯದ ಆಗುಹೋಗುಗಳನ್ನು ನಿರ್ಧರಿಸುವ ಮಹತ್ವದ ಬಜೆಟ್ ಕುರಿತು ಸುದೀರ್ಘವಾಗಿ ಚರ್ಚಿಸುವ ಸಲುವಾಗಿ ಮಾ. 27ರವರೆಗೆ ಅಧಿವೇಶನ ನಡೆಸಲಾಗುವುದೆಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದರು. ಆದರೆ, ರಾಮನವಮಿ ಮತ್ತು ಉಪಚುನಾವಣೆಯ ಕಾರಣ ಮುಂದೊಡ್ಡಿ, ಒಂದು ದಿನ ಮೊಟಕುಗೊಳಿಸಿ, ಮಾ. 26ಕ್ಕೇ ಮುಕ್ತಾಯ ಹಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾದ ಕ್ರಮ. ಬಜೆಟ್ ಮಂಡನೆಯ ನಂತರ ನಡೆಯಬೇಕಾದ ಆಳವಾದ ವಿಶ್ಲೇಷಣೆ ಮತ್ತು ತರ್ಕಸಮ್ಮತ ಪ್ರಶ್ನೋತ್ತರಗಳು ಕಾಣಿಸಿಕೊಳ್ಳದೇ ಹೋದರೆ, ಶಾಸಕಾಂಗದ ಅಸ್ತಿತ್ವವೇ ಪ್ರಶ್ನೆಗೆ ಒಳಗಾಗುತ್ತದೆ.

ಇದನ್ನು ಓದಿದ್ದೀರಾ?: ಎಸ್ಟಿಗಳು ಎಸ್ಸಿಗಳ ಮೇಲೆ ದೌರ್ಜನ್ಯ ನಡೆಸುವುದು ಜಾತಿ ವ್ಯವಸ್ಥೆಯ ದಿಗ್ವಿಜಯ!

ಸರ್ಕಾರವು ಅಧಿವೇಶನದ ಅವಧಿ, ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಬಲಪಡಿಸಬೇಕು. ಚರ್ಚೆಗೆ ಅವಕಾಶ ಕಲ್ಪಿಸುವ ಮೂಲಕ ಜನತಂತ್ರದ ಆತ್ಮವನ್ನು ಕಾಪಾಡಬೇಕು. ಆ ಮೂಲಕ ಉತ್ತಮ ಆಡಳಿತ ಸಾಧ್ಯ ಎನ್ನುವುದನ್ನು ಸಾಬೀತುಪಡಿಸಬೇಕು. ಅದರಲ್ಲೂ ಆಡಳಿತ ಪಕ್ಷ- ವಿರೋಧ ಪಕ್ಷಗಳು ಪರಸ್ಪರ ತಿಳಿವಳಿಕೆಯಿಂದ ಜನೋಪಯೋಗಿ ಚರ್ಚೆಗೆ ಮುಂದಾಗಬೇಕು. ಆದರೆ, ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಪ್ರಶ್ನಿಸಿದಂತೆ ಮಾಡಿದವು; ಆಳುವ ಪಕ್ಷ ಉತ್ತರಿಸಿದಂತೆ ನಟಿಸಿತು. ಪ್ರಶ್ನೋತ್ತರಗಳಿಂದ ಸದನದ ಘನತೆ-ಗೌರವವನ್ನು ಹೆಚ್ಚಿಸಬೇಕಾದ ಜನಪ್ರತಿನಿಧಿಗಳು ಸದನವನ್ನು ಸಂತೆ ಕದನವನ್ನಾಗಿಸಿದರು. ಎದ್ದು ನಿಂತಿದ್ದು, ಕೂಗಾಡಿದ್ದು, ಹಾರಾಡಿದ್ದು ಕಡತ ಸೇರಿತು. ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದಕ್ಕಷ್ಟೇ ಸೀಮಿತವಾಯಿತು.

ಬಹುತೇಕ ಸಚಿವರು, ಶಾಸಕರು, ವಿರೋಧ ಪಕ್ಷದವರು ಬಜೆಟ್ ಮೇಲಿನ ಚರ್ಚೆಗಿಂತ ಮುಖ್ಯವಾಗಿ ಉಪಚುನಾವಣೆಯ ಉಸುಕಿನಲ್ಲಿ ಸಿಕ್ಕಿಬಿದ್ದಿದ್ದರು. ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಮತ್ತು ಗೆಲುವಿನ ಗಲಿಬಿಲಿಯಲ್ಲಿದ್ದರು. ಆಡಳಿತಾರೂಢ ಕಾಂಗ್ರೆಸ್ಸಿಗರು ಉಪಚುನಾವಣೆಗಾಗಿ; ಬಿಜೆಪಿಯವರು ರಾಮನವಮಿಗಾಗಿ ಮಹತ್ವದ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸುವ ಒಮ್ಮತದ ನಿರ್ಧಾರಕ್ಕೆ ಬಂದರು. ಅದಕ್ಕೆ ಸ್ಪೀಕರ್ ತಥಾಸ್ತು ಎಂದರು. ಇವರಿಗೆ ಉಪಚುನಾವಣೆ-ರಾಮನವಮಿ ಮುಖ್ಯವಾಯಿತೇ ಹೊರತು ನಾಡಿನ ಜನರ ಹಣೆಬರಹ ಬರೆಯುವ ಬಜೆಟ್ ಮುಖ್ಯವೆನಿಸಲಿಲ್ಲ, ಇರಲಿ.

ಹಾಗೆ ನೋಡಿದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಅಧಿವೇಶನ ಕಡಿತಗೊಳಿಸುವುದಕ್ಕೆ ಅವಕಾಶವಿದೆ. ಕಡಿತಗೊಳಿಸುವುದಕ್ಕೆ ಸರ್ಕಾರವು ಸಮಯಾಭಾವ, ತುರ್ತು ಪರಿಸ್ಥಿತಿಗಳು ಅಥವಾ ಆಡಳಿತಾತ್ಮಕ ಕಾರಣಗಳನ್ನು ಮುಂದಿಡಬೇಕಿದೆ. ಆದರೆ, ಈ ಕಾರಣಗಳು ಜನತಂತ್ರದ ಮೂಲಭೂತ ಮೌಲ್ಯಗಳಿಗಿಂತ ಮೇಲುಗೈ ಸಾಧಿಸಬಾರದು. ಬಜೆಟ್ ಮೇಲೆ ಸಮಗ್ರ ಚರ್ಚೆ ನಡೆಯದೇ ಹೋದರೆ, ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸಮಸ್ಯೆಗಳು, ಅಗತ್ಯತೆಗಳು ಮತ್ತು ಆಕ್ಷೇಪಣೆಗಳನ್ನು ಮಂಡಿಸಲು ಅವಕಾಶ ಕಳೆದುಕೊಳ್ಳುತ್ತಾರೆ. ಇದು ಸರ್ಕಾರದ ಜವಾಬ್ದಾರಿಯನ್ನು ಕುಗ್ಗಿಸುವುದರ ಜೊತೆಗೆ, ಶಾಸಕಾಂಗದ ಪಾತ್ರವನ್ನೇ ದುರ್ಬಲಗೊಳಿಸುತ್ತದೆ.

ಪ್ರಜಾಪ್ರಭುತ್ವದಲ್ಲಿ ವಾದ-ವಿವಾದಗಳು ಕೇವಲ ರಾಜಕೀಯದ ಭಾಗವಲ್ಲ; ಅವು ನೀತಿ ನಿರೂಪಣೆಯ ಗುಣಮಟ್ಟವನ್ನು ಹೆಚ್ಚಿಸುವ ಸಾಧನಗಳಾಗಿವೆ. ಅಧಿವೇಶನವನ್ನು ಮೊಟಕುಗೊಳಿಸುವುದು ಎಂದರೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಕುಗ್ಗಿಸುವುದು ಎಂದರ್ಥ. ಪ್ರಜಾಪ್ರಭುತ್ವದ ಕಗ್ಗೊಲೆಗೆ ಆಳುವ-ಕೇಳುವ ಪಕ್ಷಗಳೆರಡೂ ಕೈಜೋಡಿಸಿವೆ.

ಬಜೆಟ್ ಅಧಿವೇಶನವೆಂದರೆ ಕೇವಲ ಹಣಕಾಸಿನ ಲೆಕ್ಕಾಚಾರಗಳ ಪ್ರದರ್ಶನವಲ್ಲ; ಅದು ಪ್ರಜಾಪ್ರಭುತ್ವವನ್ನು ಪರೀಕ್ಷೆಗೊಡ್ಡುವ ವೇದಿಕೆ. ಸರ್ಕಾರವು ತನ್ನ ಆದಾಯ-ವೆಚ್ಚಗಳ ವಿವರವನ್ನು ಮಂಡಿಸುವಾಗ, ಅದು ಜನತೆಗೆ ನೀಡುವ ಉತ್ತರದಾಯಿತ್ವವಾಗಿದೆ. ಬಜೆಟ್‌ ಅಧಿವೇಶನವು ಸರ್ಕಾರದ ಹಣಕಾಸಿನ ಶಿಸ್ತಿನ ಮೇಲೆ ಸಾರ್ವಜನಿಕ ನಿಗಾ ಸಾಧಿಸುವ ಸಾಧನವಾಗಿದೆ. ಪ್ರತಿ ಅನುದಾನ, ಪ್ರತಿ ವೆಚ್ಚದ ಬಗೆಗಿನ ಪ್ರಶ್ನೆಗಳು ಮತ್ತು ಸಮರ್ಥನೆಗಳು ತೆರಿಗೆದಾರರ ಹಣದ ಸದುಪಯೋಗವನ್ನು ಸಾರುತ್ತವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಜೆಟ್ ಅಧಿವೇಶನಗಳ ಗುಣಮಟ್ಟ; ಅವುಗಳಿಗೆ ನೀಡಲಾಗುತ್ತಿರುವ ಸಮಯ ಮತ್ತು ಚರ್ಚೆಯ ಗಂಭೀರತೆ ಎಲ್ಲವೂ ಪ್ರಶ್ನಾರ್ಹವಾಗುತ್ತಿದೆ.

ಬಜೆಟ್ ಅಧಿವೇಶನದಲ್ಲಿ ಪ್ರತಿಯೊಂದು ಅನುದಾನ, ಪ್ರತಿಯೊಂದು ಯೋಜನೆ, ಪ್ರತಿಯೊಂದು ತೆರಿಗೆ ನಿರ್ಧಾರವೂ ಮಾಪನಕ್ಕೆ ಒಳಗಾಗಬೇಕು. ಇದು ಕೇವಲ ವಿರೋಧ ಪಕ್ಷದ ಹೊಣೆಗಾರಿಕೆ ಮಾತ್ರವಲ್ಲ; ಆಡಳಿತ ಪಕ್ಷವೂ ಸಮರ್ಥನೆ ನೀಡುವ ಮೂಲಕ ಸಾರ್ವಜನಿಕ ನಂಬಿಕೆಯನ್ನು ಗಟ್ಟಿಗೊಳಿಸಬೇಕಾದ ಸಂದರ್ಭ. ಆದರೆ ವಾಸ್ತವದಲ್ಲಿ ನಡೆಯುತ್ತಿರುವುದು ಇದಕ್ಕೆ ವಿರುದ್ಧ. ಚರ್ಚೆಗೆ ಮೀಸಲಾದ ಸಮಯ ಕಡಿಮೆಯಾಗುತ್ತಿದೆ, ವಾದ-ವಿವಾದಗಳು ರಾಜಕೀಯ ಕೆಸರೆರಚಾಟಕ್ಕೆ ವ್ಯಯವಾಗುತ್ತಿವೆ. ಗಂಭೀರ ವಿಚಾರಗಳು ಗಟಾರ ಸೇರುತ್ತಿವೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರ ರಾಜಕಾರಣದಲ್ಲಿ ಮುಸ್ಲಿಮರು ಎಲ್ಲಿದ್ದಾರೆ?

ಇನ್ನು ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನಕ್ಕೆ ಆಗುವ ಖರ್ಚು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಶಾಸಕರ ಭತ್ಯೆ, ದಿನ ಭತ್ಯೆ; ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವೆಚ್ಚ; ಭದ್ರತಾ ವ್ಯವಸ್ಥೆ; ಆಡಳಿತಾತ್ಮಕ ವ್ಯವಸ್ಥೆಗಳು (ವಿದ್ಯುತ್, ತಾಂತ್ರಿಕ ಸೌಲಭ್ಯಗಳು); ದಾಖಲೆ ಮುದ್ರಣ, ಭಾಷಾಂತರ, ಪ್ರಸಾರ ವ್ಯವಸ್ಥೆ ಎಲ್ಲ ಸೇರಿ ಅಂದಾಜು ದಿನವೊಂದಕ್ಕೆ 80 ಲಕ್ಷದಿಂದ 1 ಕೋಟಿಯವರೆಗೆ ಖರ್ಚಾಗುತ್ತದೆ. ಅಂದರೆ, 20 ದಿನಗಳ ಬಜೆಟ್ ಅಧಿವೇಶನಕ್ಕೆ ಸುಮಾರು 20ರಿಂದ 25 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತದೆ. ಇದು ಶಾಸಕರ, ಸಚಿವರ ಸ್ವಂತದ ಹಣವಲ್ಲ. ನಾಡಿನ ಪ್ರತಿಯೊಬ್ಬ ಪ್ರಜೆಯ ತೆರಿಗೆಯ ಹಣ. ಇದರ ಸದ್ವಿನಿಯೋಗವಾಗಬೇಕಾದ್ದು ಪ್ರಜೆಗಳಿಗಲ್ಲವೇ?

ನಾಡಿನ ಹಣೆಬರಹ ಬರೆಯುವ ಬಜೆಟ್ ಕುರಿತು ಅದಕ್ಕಾಗಿಯೇ ಮೀಸಲಿಟ್ಟ ಅಧಿವೇಶನದಲ್ಲಿ ಅರ್ಥಪೂರ್ಣ ಮತ್ತು ಆರೋಗ್ಯಕರ ಚರ್ಚೆಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡಬೇಕಾದ್ದು ಸರ್ಕಾರ ಮತ್ತು ವಿರೋಧ ಪಕ್ಷಗಳಿಬ್ಬರ ಸಹಜ ಜವಾಬ್ದಾರಿ. ಜನಪ್ರತಿನಿಧಿಗಳು ಆ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆಯೇ? ರಾಮನವಮಿ ಮತ್ತು ಉಪಚುನಾವಣೆ ಎಂಬ ಕಾರಣಗಳನ್ನು ಮುಂದಿಟ್ಟು ಅಧಿವೇಶನವನ್ನು ಮೊಟಕುಗೊಳಿಸಿದ್ದು ನಾಡಿನ ಜನತೆಗೆ ಬಗೆದ ಬಹುದೊಡ್ಡ ದ್ರೋಹವಲ್ಲವೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...