ಈ ದಿನ ಸಂಪಾದಕೀಯ | ಸರ್ಕಾರ, ಸಾರ್ವಜನಿಕ ಆರೋಗ್ಯ ಮತ್ತು ಸಚಿವ ಖಾದರ್

Date:

83 ದಿನಗಳಲ್ಲಿ 10 ಕ್ರಮಗಳತ್ತ ಗಮನ ಹರಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್, ಅಷ್ಟನ್ನೂ ಅನುಷ್ಠಾನ ಮಾಡಲಾಗಿಲ್ಲ. ಆಮೂಲಾಗ್ರ ಬದಲಾವಣೆ ಸಾಧ್ಯವೂ ಇಲ್ಲ. ಆದರೆ, ಆ ನಿಟ್ಟಿನಲ್ಲಿ ನಿಧಾನವಾಗಿ ಯಶಸ್ಸು ಗಳಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಸಂಪುಟದಲ್ಲಿರುವ ಸಚಿವರ ಪೈಕಿ ಖಾದರ್ ಕೊಂಚ ಮುಂದಿದ್ದಾರೆ, ಜನಪರ ಕೆಲಸಗಳತ್ತ ಕಾರ್ಯೋನ್ಮುಖರಾಗಿದ್ದಾರೆ. ಅದು ಆರಂಭಶೂರತ್ವವಾಗದಿರಲಿ.

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಕೆಲಸ ಕೇವಲ ರಸ್ತೆ, ಸೇತುವೆ, ವಿದ್ಯುತ್, ನೀರು ಅಥವಾ ಆರ್ಥಿಕ ಅಭಿವೃದ್ಧಿಗಾಗಿ ಮಾತ್ರ ಸೀಮಿತವಾದುದಲ್ಲ. ಜನರು ಆರೋಗ್ಯವಾಗಿ, ಗೌರವದಿಂದ ಮತ್ತು ಸುರಕ್ಷಿತವಾಗಿ ಬದುಕುವ ಪರಿಸರವನ್ನು ನಿರ್ಮಿಸುವುದು ಕೂಡ ಸರ್ಕಾರದ ಮೂಲ ಜವಾಬ್ದಾರಿಗಳಲ್ಲೊಂದು.

- Advertisement -

ಸಾರ್ವಜನಿಕ ಆಸ್ಪತ್ರೆ ಎಂದರೆ ಬಡವರ ಆಸ್ಪತ್ರೆಯಲ್ಲ. ಬಡವರಿಗೆ ಉಚಿತ ಚಿಕಿತ್ಸೆ ನೀಡುವುದು ಸರ್ಕಾರದ ಧರ್ಮದ ಕೆಲಸವಲ್ಲ. ಬಡಕುಟುಂಬದ ವ್ಯಕ್ತಿಗೆ ಗಂಭೀರ ಕಾಯಿಲೆ ಬಂದರೆ, ಚಿಕಿತ್ಸೆಯ ವೆಚ್ಚದಿಂದ ಆ ಕುಟುಂಬ ಸಾಲಕ್ಕೆ ಸಿಲುಕಬಹುದು. ಮಕ್ಕಳ ಶಿಕ್ಷಣ ನಿಲ್ಲಬಹುದು. ಒಡವೆ, ಮನೆ, ಜಮೀನು ಅಥವಾ ಆಸ್ತಿಯನ್ನು ಮಾರಬೇಕಾಗಬಹುದು. ಆರೋಗ್ಯಕ್ಕಾಗಿ ಜನರು ವ್ಯಯಿಸುವ ವಿಪರೀತ ವೆಚ್ಚಕ್ಕಿಂತ, ಸಾವೆ ವಾಸಿ ಎನಿಸಬಹುದು. ಹೀಗಾಗಿ ಸಾರ್ವಜನಿಕ ಆಸ್ಪತ್ರೆ ಕೇವಲ ಚಿಕಿತ್ಸೆ ನೀಡುವ ಸ್ಥಳವಲ್ಲ; ಅದು ಬಡ ಕುಟುಂಬವನ್ನು ಆರ್ಥಿಕವಾಗಿ ಕುಸಿಯದಂತೆ ಕಾಪಾಡುವ ಕೇಂದ್ರ ಕೂಡ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಜನ ತೆರಿಗೆ ಕಟ್ಟುತ್ತಾರೆ. ತೆರಿಗೆ ಹಣದಿಂದ ಸರ್ಕಾರ ಬಜೆಟ್ ರೂಪಿಸುತ್ತದೆ. ಆದ್ದರಿಂದ ಸಾರ್ವಜನಿಕ ಆರೋಗ್ಯ ಸೇವೆ ಜನರ ಹಕ್ಕಿನ ಭಾಗ. ಸರ್ಕಾರ ತನ್ನ ನಾಗರಿಕರಿಗೆ ನೀಡುವ ಸಾಮಾಜಿಕ ಭದ್ರತೆಯ ಭಾಗ. ಬಡವರು, ಮಧ್ಯಮ ವರ್ಗದವರು, ಮಹಿಳೆಯರು ಮತ್ತು ಮಕ್ಕಳು, ವೃದ್ಧರು, ಗ್ರಾಮೀಣ ಜನರು- ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯುವ ವ್ಯವಸ್ಥೆ ಇರಬೇಕು. ಉತ್ತಮ ಸಾರ್ವಜನಿಕ ಆಸ್ಪತ್ರೆ, ಗುಣಮಟ್ಟದ ಚಿಕಿತ್ಸೆ, ಜನ ಸುರಕ್ಷಿತವಾಗಿ ಬದುಕುವ ಭರವಸೆ ನೀಡಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು.

ಈ ನಿಟ್ಟಿನಲ್ಲಿ ಆರೋಗ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಯು.ಟಿ. ಖಾದರ್, ಜೂನ್ 3ರಿಂದ ಆಗಸ್ಟ್ 25ರವರೆಗೆ, ಕೇವಲ 83 ದಿನಗಳಲ್ಲಿ ಆರೋಗ್ಯ ಇಲಾಖೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಆ ಕ್ರಮಗಳು ಬೃಹತ್ ಯೋಜನೆಗಳಲ್ಲ, ಹಣ ಮತ್ತು ಪ್ರಚಾರ ತರುವುದಿಲ್ಲ. ಹಾಗಂತ ನಿರ್ಲಕ್ಷಿಸಿ ಸುಮ್ಮನಿರುವಂತೆಯೂ ಇಲ್ಲ. 

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋಶಾ ವಚನಭಂಗ ಕಾಕ್ರೋಚ್ ಕಿಚ್ಚು ಹೊತ್ತಿಸೀತು ಎಚ್ಚರ!

ಖಾದರ್ ಆರೋಗ್ಯ ಖಾತೆ ವಹಿಸಿಕೊಳ್ಳುತ್ತಿದ್ದಂತೆ, ಮಾಡಿದ ಮೊದಲ ಕೆಲಸವೆಂದರೆ, ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿದ್ದು. ಅದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಸಂಚಲನ ಸೃಷ್ಟಿಸಿತು. ವಿರೋಧ ಪಕ್ಷಗಳಿಂದ, ‘ಮೂರು ವರ್ಷ ಖಾಲಿ ಕುಳಿತಿದ್ದರಲ್ಲ, ಸಚಿವರಾದ ತಕ್ಷಣ ಚುರುಕಾಗಿದ್ದಾರೆ, ಪ್ರಚಾರ ಪಡೆಯುತ್ತಿದ್ದಾರೆ’ ಎಂಬ ಟೀಕೆಗೂ ಗುರಿಯಾಯಿತು, ಇರಲಿ.

ಆದರೆ ಸಚಿವರು ಆಸ್ಪತ್ರೆಗಳತ್ತ ಹೆಜ್ಜೆ ಹಾಕಿದ್ದು, ಸಾರ್ವಜನಿಕ ಆರೋಗ್ಯ ಕ್ಷೇತ್ರದ ಯಥಾವತ್ ಚಿತ್ರಣ ಕಣ್ಣಿಗೆ ಬೀಳುವಂತಾಯಿತು. ವೈದ್ಯರು ಕೆಲಸ ಕದಿಯುವುದು, ಚಿಕಿತ್ಸೆ ನಿರಾಕರಿಸುವುದು, ಔಷಧಿ ಇಲ್ಲವೆಂದು ಚೀಟಿ ಬರೆದುಕೊಡುವುದು, ಸೋಮಾರಿ ಸಿಬ್ಬಂದಿ, ಲಂಚಗುಳಿತನ- ಎಲ್ಲವನ್ನು ಖುದ್ದು ಕಾಣುವಂತಾಯಿತು. ಹಾಗಂತ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸರ್ಕಾರ ಎಲ್ಲವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ ಅಂತಲ್ಲ. ಎಷ್ಟೋ ಆಸ್ಪತ್ರೆಗಳಲ್ಲಿ ಮುಖ್ಯವಾಗಿ ವೈದ್ಯರು ಮತ್ತು ಸಿಬ್ಬಂದಿಗಳೇ ಇರುವುದಿಲ್ಲ. ಶುಚಿತ್ವವಿಲ್ಲದೆ ಆಸ್ಪತ್ರೆಯೊಳಕ್ಕೆ ಕಾಲಿಡಲಾಗುವುದಿಲ್ಲ. ನಿಯಮಿತವಾಗಿ ಆಹಾರ-ಔಷಧ ಸರಬರಾಜು ಆಗುವುದಿಲ್ಲ. ಸುಸಜ್ಜಿತ ಕಟ್ಟಡಗಳ ಸುರಕ್ಷತೆಯಿಲ್ಲ. ತುರ್ತು ಸೇವೆಯಂತೂ ಕೇಳುವಂತಿಲ್ಲ. ಈ ‘ಇಲ್ಲ’ಗಳೇ ಜನರನ್ನು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ದೂಡುತ್ತದೆ. ಅಲ್ಲಿಯ ದುಬಾರಿ ಚಿಕಿತ್ಸೆ ಅವರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಸಹಜವಾಗಿಯೇ ಅದು ಅಸಮಾನತೆಯನ್ನು ಹೆಚ್ಚಿಸುತ್ತದೆ. ಆಗ ಜನರಿಂದ ಆಯ್ಕೆಯಾದ ಸರ್ಕಾರ, ಸಚಿವರು, ಇಲಾಖೆ ಇದ್ದೂ ಸತ್ತಂತಾಗುತ್ತದೆ.

ಖಾದರ್ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿದ ಫಲವೋ ಏನೋ… ಆ ತಕ್ಷಣವೇ ವೈದ್ಯರ ನೇಮಕ, ಸಿಬ್ಬಂದಿ ನೇಮಕಕ್ಕೆ ಅನುಮೋದನೆ, ಆಸ್ಪತ್ರೆ ಮೇಲ್ವಿಚಾರಣೆ, ಆಯುಷ್ಮಾನ್ ಕರ್ನಾಟಕ, ಆಹಾರ ಸುರಕ್ಷತೆ, ನಕಲಿ ಔಷಧಿ, ಕ್ಯೂಆರ್ ಕೋಡ್ ಬಳಸಿ ದೂರು ಸಲ್ಲಿಕೆ ವ್ಯವಸ್ಥೆ, ಮಹಿಳಾ ಆರೋಗ್ಯ ನೀತಿ, ಬೈಕ್ ಆಂಬುಲೆನ್ಸ್ ಮತ್ತು ವೆನ್ಲಾಕ್ ಆಸ್ಪತ್ರೆ ಅಭಿವೃದ್ಧಿಯಂತಹ ತುರ್ತು ಕ್ರಮಗಳನ್ನು ಕೈಗೆತ್ತಿಕೊಂಡರು.

83 ದಿನಗಳಲ್ಲಿ 10 ಕ್ರಮಗಳತ್ತ ಗಮನ ಹರಿಸಿದ ಖಾದರ್, ಅಷ್ಟನ್ನೂ ಅನುಷ್ಠಾನ ಮಾಡಲಾಗಿಲ್ಲ. ಆಮೂಲಾಗ್ರ ಬದಲಾವಣೆ ಸಾಧ್ಯವೂ ಇಲ್ಲ. ಆದರೆ, ಆ ನಿಟ್ಟಿನಲ್ಲಿ ನಿಧಾನವಾಗಿ ಯಶಸ್ಸು ಗಳಿಸುತ್ತಿದ್ದಾರೆ. ಮೊದಲಿಗೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿದ್ದ ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ, 200 ಎಂಬಿಬಿಎಸ್ ವೈದ್ಯರ ನೇರ ನೇಮಕಾತಿ ಆಗಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಸಚಿವ ಖಾದರ್ ಸೂಚನೆ ಮೇರೆಗೆ ಕಾರ್ಯಾಚರಣೆ ಆರಂಭಿಸಿದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಸುಮಾರು 70ಕ್ಕೂ ಹೆಚ್ಚು ಹೋಟೆಲ್, ರೆಸ್ಟೋರೆಂಟ್​, ಡಾಬಾಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಕಳಪೆ ಆಹಾರ ಗುಣಮಟ್ಟ, ಸ್ವಚ್ಛತೆ ಕೊರತೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಕೇಸು ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಸರ್ಕಾರ ಒಂದು ಕಡೆ ಆಸ್ಪತ್ರೆಗಳನ್ನು ನಿರ್ಮಿಸಿ, ಮತ್ತೊಂದು ಕಡೆ ಜನರಲ್ಲಿ ಕಾಯಿಲೆ ಹೆಚ್ಚಿಸುವ ಉತ್ಪನ್ನಗಳ ಸುಲಭ ಲಭ್ಯತೆಯನ್ನು ನಿಯಂತ್ರಿಸಲು ವಿಫಲವಾದರೆ ಅದು ಅಪೂರ್ಣ ಆರೋಗ್ಯ ನೀತಿ ಎನಿಸಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಕೃತಕ ಪನ್ನೀರ್, ಚೀಸ್, ಬೆಣ್ಣೆ, ಫುಡ್ ಕಲರ್, ಅಜಿನಮೊಟೊ ಬಳಕೆಯನ್ನು ನಿಷೇಧಿಸಿರುವುದು ಶ್ಲಾಘನೀಯ ಕ್ರಮ.  

ಆಹಾರ ಸುರಕ್ಷತಾ ನಿಯಮಾವಳಿ ಪ್ರಕಾರ, ಪನ್ನೀರ್ ಎಂಬುದು ಕೇವಲ ಹಾಲಿನಿಂದ ಮಾತ್ರ ತಯಾರಾಗುವ ಶುದ್ಧ ಉತ್ಪನ್ನ. ಆದರೆ, ಹಾಲಿನ ಉತ್ಪನ್ನದ ಬದಲಿಗೆ ಸಸ್ಯಜನ್ಯ ಎಣ್ಣೆ, ಕೊಬ್ಬು ಬಳಸಿ ತಯಾರಿಸುವ ‘ಅನಲಾಗ್ ಪನ್ನೀರ್’ ಅನ್ನು ‘ಪನ್ನೀರ್’ ಹೆಸರಿನಲ್ಲಿ ಮಾರಾಟ ಮಾಡುತ್ತಿದರು. ಅದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದುದರಿಂದ ನಕಲಿ ಪನ್ನೀರ್ ಬಳಕೆಯನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲ, ನಕಲಿ ಉತ್ಪನ್ನಗಳ ಉತ್ಪಾದನೆ, ದಾಸ್ತಾನು, ಮಾರಾಟ, ಬಳಕೆ, ಪ್ರದರ್ಶನ ಸಹ ಕಾನೂನುಬಾಹಿರ ಎಂದು ತಿಳಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

ಇನ್ನು ನಕಲಿ ಔಷಧಗಳ ತಯಾರಿಕೆ, ಸಾಗಾಟ ಮತ್ತು ಮಾರಾಟಗಳ ಸುತ್ತಲಿನ ದಾಳಿಯಂತೂ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ. ತಾಂಡ್ಯಾ ಗ್ರಾಮದ ಫಾರ್ಮ್‌ಹೌಸ್ ಒಂದರಲ್ಲಿ ನಡೆಯುತ್ತಿದ್ದ ಬೃಹತ್ ನಕಲಿ ಔಷಧ ಲೇಬಲ್ ದಂಧೆಯನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜಂಟಿ ತಂಡ ಭೇದಿಸಿದೆ. ಹೊರದೇಶ ಮತ್ತು ರಾಜ್ಯಗಳಿಂದ ತರಿಸಲಾಗುತ್ತಿದ್ದ ಕಡಿಮೆ ಬೆಲೆಯ ಹಾಗೂ ಅವಧಿ ಮುಗಿದ ಔಷಧಗಳಿಗೆ, ಬಹುರಾಷ್ಟ್ರೀಯ ಕಂಪನಿಗಳ ನಕಲಿ ಲೇಬಲ್ ಅಂಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ದಾಳಿಯ ವೇಳೆ 6 ಕೋಟಿ ಮೌಲ್ಯದ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಲಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ನಕಲಿ ಔಷಧಿ ಹಾವಳಿ; ದಾಳಿಯಷ್ಟೇ ಸಾಲದು, ಸರ್ಕಾರ ಕಠಿಣ ಕ್ರಮ ಜರುಗಿಸಲಿ

ಹಾಗಂತ ಎಲ್ಲವೂ ಸರಿ ಇದೆ, ಸಚಿವರು ಕೈಗೊಂಡ ಕ್ರಮಗಳೆಲ್ಲವೂ ಅದ್ಭುತ ಅಂತಲ್ಲ. ಈಗಲೂ ಸಾರ್ವಜನಿಕ ಆಸ್ಪತ್ರೆಗಳ ಸ್ಥಿತಿ ಹಾಗೆಯೇ ಇದೆ. ಗುತ್ತಿಗೆ ಆಧಾರದ ಮೇಲೆ 1000 ವೈದ್ಯರ ನೇಮಕ ಕುಂಟುತ್ತಾ ಸಾಗಿದೆ. ಸಿಬ್ಬಂದಿ ನೇಮಕವಾಗಿಲ್ಲ, ಆಸ್ಪತ್ರೆ ಮೇಲ್ವಿಚಾರಣೆ ಕ್ರಮ ಆರಂಭವಾಗಿಲ್ಲ, ಆಯುಷ್ಮಾನ್ ಕರ್ನಾಟಕ ಜಾರಿಗೆ ಒತ್ತು ನೀಡಲಾಗಿಲ್ಲ, ಕ್ಯೂಆರ್ ದೂರು ವ್ಯವಸ್ಥೆ ಇನ್ನೂ ಜನಕ್ಕೆ ತಲುಪಿಲ್ಲ, ಮಹಿಳಾ ಆರೋಗ್ಯ ನೀತಿಗೆ ಚಾಲನೆ ಸಿಕ್ಕಿಲ್ಲ, ಬೈಕ್ ಆಂಬುಲೆನ್ಸ್ ಬೀದಿಗಿಳಿದಿಲ್ಲ, ವೆನ್ಲಾಕ್ ಅಭಿವೃದ್ಧಿ ಘೋಷಣೆಯ ಹಂತ ದಾಟಿ ಹೊರಬಂದಿಲ್ಲ.

ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಇರುವುದೇ ಜನಹಿತ ನಿರ್ಧಾರ ತೆಗೆದುಕೊಳ್ಳುವುದರಲ್ಲಿ. ಜನರಿಗೆ ಅಗತ್ಯವಾದುದನ್ನು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಕೈಗೊಳ್ಳುವುದರಲ್ಲಿ. ಆ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿರುವ ಸಚಿವರ ಪೈಕಿ ಖಾದರ್ ಕೊಂಚ ಮುಂದಿದ್ದಾರೆ, ಜನಪರ ಕೆಲಸಗಳತ್ತ ಕಾರ್ಯೋನ್ಮುಖರಾಗಿದ್ದಾರೆ. ಅದು ಆರಂಭಶೂರತ್ವವಾಗದಿರಲಿ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಈ ದಿನ ಸಂಪಾದಕೀಯ | ರಾಜಧಾನಿ ದೆಹಲಿಗೆ ದಿಗ್ಬಂಧನ- ಸಹಸ್ರಾರು ಯುವಜನರ ಬಂಧನ, ಇದೇನು ತುರ್ತುಪರಿಸ್ಥಿತಿಯೇ?

ದೇಶದ ರಾಜಧಾನಿಗೇ ದಿಗ್ಬಂಧನ ಹಾಕಲಾಗಿದೆ. ಇದೇನು ತುರ್ತುಪರಿಸ್ಥಿತಿಯೇ? ಯುದ್ಧದ ಭೀತಿಯೇ? ಏನೂ...

ಉಪಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ಟಿವಿಕೆ, ಬಂಗಾಳದಲ್ಲಿ ಬಿಜೆಪಿಗೆ ಜಯ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು...

ಇಳಕಲ್‌ | ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ SYM ಒತ್ತಾಯ; ಹೋರಾಟ ತೀವ್ರಗೊಳಿಸುವ ಎಚ್ಚರಿಕೆ!

ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಮೂಲಕ ಸಂವಿಧಾನಬದ್ಧ ಮತದಾನದ...