ಈ ದಿನ ಸಂಪಾದಕೀಯ | ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಪೌರತ್ವ ನಿಗದಿ ಆಗದಿರುವುದು ನಾಚಿಕೆಗೇಡು

Date:

ದಲಿತರು ದುರ್ಬಲರು ದಿಕ್ಕಿಲ್ಲದವರು ಮಹಿಳೆಯರು ವಲಸಿಗರು ಹಾಗೂ ರಾಜಕೀಯ ವಿರೋಧಿಗಳನ್ನು ಅವರ ಜೀವಮಾನದುದ್ದಕ್ಕೂ ದಾಖಲೆ ದಸ್ತಾವೇಜುಗಳ ಪಂಜರದಲ್ಲಿ ಕೈದು ಮಾಡಿ ಇಡುವ ಹುನ್ನಾರವಿದು. ಆಳುವ ವ್ಯವಸ್ಥೆ ಬೇಕೆಂದೇ ನಿರ್ಮಿಸಿರುವ ಅಯೋಮಯ ಸ್ಥಿತಿ.

- Advertisement -

ಭಾರತೀಯ ಪೌರತ್ವದ ನೈಜ ಪುರಾವೆ ಏನಿರಬಹುದು? ಪಾಸ್ಪೋರ್ಟ್, ಮತದಾನ ಗುರುತಿನ ಚೀಟಿ, ಕಣ್ಣಾಲಿಗಳು ಮತ್ತು ಬೆರಳಚ್ಚುಗಳು ಹಾಗೂ ವಾಸದ ವಿವರಗಳನ್ನು ಸರ್ಕಾರಕ್ಕೆ ಒಪ್ಪಿಸಿ ಪಡೆದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎಸ್ಸೆಸ್ಸೆಲ್ಸಿ ಅಂಕಪತ್ರ, ಪಡಿತರ ಚೀಟಿ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಈ ಮೇಲ್ಕಂಡ ದಾಖಲೆ ದಸ್ತಾವೇಜುಗಳ ಪೈಕಿ ಒಂದನ್ನು ಪಡೆಯಲು ಮತ್ತೊಂದನ್ನು ಲಗತ್ತಿಸಲೇಬೇಕಿದೆ. ನಿಷ್ಠುರ ವಾಸ್ತವವಿದು.

ಭಾರತೀಯ ಕಾನೂನಿನ ಪ್ರಕಾರ ಇವುಗಳಲ್ಲಿ ಯಾವುದೂ ನಾಗರಿಕತೆಯ ನಿಜ ಪುರಾವೆ ಅಲ್ಲ. ಬಾಂಬೆ ಹೈಕೋರ್ಟಿನ ತೀರ್ಪು ಮತ್ತು ವಿದೇಶಾಂಗ ವ್ಯವಹಾರಗಳ ಮಂತ್ರಾಲಯದ ಅಧಿಕೃತ ನಿಲುವಿನ ಪ್ರಕಾರ ಪಾಸ್ಪೋರ್ಟ್ ಎಂಬುದು ಕೇವಲ ಒಂದು ಪ್ರಯಾಣದ ದಸ್ತಾವೇಜು. ಆಧಾರ್ ಕಾರ್ಡ್, ಗುರುತಿನ ಪತ್ರವೇ ವಿನಾ ಪೌರತ್ವದ ಪ್ರಮಾಣ ಅಲ್ಲವೆಂದು ಅದರಲ್ಲೇ ಬರೆಯಲಾಗಿದೆ. ಮತದಾನ ಗುರುತಿನ ಚೀಟಿ ಕೇವಲ ಮತದಾನದ ಅಧಿಕಾರವನ್ನು ಸಾರುತ್ತದೆಯೇ ವಿನಾ ದೇಶದ ನಾಗರಿಕನೆಂಬ ಅಧಿಕಾರವನ್ನಲ್ಲ.

ಸ್ವಾತಂತ್ರ್ಯ ಬಂದು 79 ವರ್ಷಳು ಉರುಳಿದರೂ ಭಾರತದ ಪೌರ ಅಥವಾ ನಾಗರಿಕ ಯಾರು ಎಂಬುದಕ್ಕೆ ನೇರ ನಿರ್ದಿಷ್ಟ ಖಚಿತ ಉತ್ತರ ಇಲ್ಲ.

ಮತದಾರರಯಾದಿಗಳ ವಿಶೇಷ ತೀವ್ರ ಪರಿಷ್ಕರಣೆ ಈಗ ದೇಶಾದ್ಯಂತ ಜಾರಿಯಲ್ಲಿದೆ. ಹೀಗಾಗಿ ಪೌರತ್ವ, ಅಕ್ರಮ ವಲಸೆ ಹಾಗೂ ಮತದಾನದ ಗುರುತುಗಳ ವಿಚಾರ ಮತ್ತೆ ಸಾರ್ವಜನಿಕ ಚರ್ಚೆಗೆ ಬಂದಿದೆ. ಅಕ್ರಮ ವಲಸೆಯು ರಾಷ್ಟ್ರೀಯ ಸುರಕ್ಷತೆಗೆ ಎದುರಾಗಿರುವ ದೊಡ್ಡ ಬೆದರಿಕೆ ಎಂದು ಬಿಂಬಿಸುತ್ತ ಬರಲಾಗಿದೆ. ಆದರೆ ನಾಗರಿಕತೆಯನ್ನು ನಿರ್ಧರಿಸುವ ಅಂಶಗಳೇನೆಂಬ ಸಂಗತಿ ನೆಲೆಗೊಂಡಿಲ್ಲ. ಮತದಾರ ಯಾದಿಗಳ ಪರಿಷ್ಕರಣೆಯನ್ನು ಯಾರೂ ವಿರೋಧಿಸಲಾರರು. ಆದರೆ ಭಾರತವಾಸಿಗಳಿಂದ ತೆರಿಗೆ ವಸೂಲು ಮಾಡಲಾಗುತ್ತದೆ. ಚುನಾವಣೆಗಳಲ್ಲಿ ಅವರ ಮತಗಳನ್ನು ಪಡೆದು ಸರ್ಕಾರಗಳನ್ನು ರಚಿಸಲಾಗುತ್ತದೆ. ಪ್ರತಿಪಕ್ಷಗಳ ಸ್ಥಾನಮಾನ ನಿಗದಿಯಾಗುತ್ತದೆ.

1955ರ ಪೌರತ್ವ ಕಾಯಿದೆಯ ಪ್ರಕಾರ ನಾಗರಿಕತೆಯು ಹುಟ್ಟಿನಿಂದ ಇಲ್ಲವೇ ನಿಗದಿತ ಅವಧಿಯ ವಾಸದಿಂದ ಪ್ರಾಪ್ತವಾಗಬೇಕು. ಸಂವಿಧಾನ ರಚನಾ ಸಭೆಯು ಪೌರತ್ವದ ಕುರಿತು ಚರ್ಚೆ ನಡೆಸಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹತ್ವದ ಮಾತೊಂದನ್ನು ಹೇಳಿದ್ದರು. ನಾಗರಿಕತೆ ಅಥವಾ ಪೌರತ್ವವು ಯಾವುದೇ ವ್ಯಕ್ತಿಯ ಬಹುಮೂಲ್ಯ ಅಧಿಕಾರ. ಈ ಅಧಿಕಾರವು ಅಧಿಕಾರಗಳನ್ನು ಹೊಂದುವ ಅಧಿಕಾರದಿಂದ ಬರುತ್ತದೆ.

ಪ್ರಭುತ್ವ ವ್ಯವಸ್ಥೆಯು ಪ್ರಜೆಗಳ ಕುರಿತ ಎಲ್ಲ ಮಾಹಿತಿ ಸಂಗ್ರಹಿಸಿಕೊಳ್ಳುತ್ತದೆ. ಆದರೆ ಪ್ರಜೆಗಳನ್ನು ತನ್ನ ಅಸಲಿ ಪ್ರಭುವೆಂದು ಒಪ್ಪಲು ತಯಾರಿಲ್ಲ. ಮತದಾನ ಗುರುತಿನ ಚೀಟಿ ಜಾರಿಗೆ ಬಂದದ್ದು 1993ರಲ್ಲಿ. ಡಿಜಿಟಲ್ ಗುರುತು ವ್ಯವಸ್ಥೆಯ ಪ್ರಯೋಗ 2009ರ ನಂತರ ಶುರುವಾಯಿತು. ಆದಾಯ ತೆರಿಗೆ ಇಲಾಖೆಯು 70ರ ದಶಕದಲ್ಲಿ ಪ್ಯಾನ್ ಕಾರ್ಡ್ ಜಾರಿಗೊಳಿಸಿತು. ಈ ಮೂರರ ನಡುವೆ ಸಂಪರ್ಕ ಕಲ್ಪಿಸಲಾಯಿತು. ಆಧಾರ್ ಕಾರ್ಡ್‌ನ್ನು ಬ್ಯಾಂಕ್ ಖಾತೆಗಳು, ಕಲ್ಯಾಣ ಯೋಜನೆಗಳು, ಮೊಬೈಲ್ ಸಂಪರ್ಕಗಳು, ಆದಾಯ ತೆರಿಗೆ ದಾಖಲೆಗಳು ಮತ್ತಿತರೆ ಸರ್ಕಾರಿ ಸೇವೆಗಳೊಂದಿಗೆ ಜೋಡಿಸಲಾಯಿತು.. ಆದರೆ ಆಧಾರ್ ಕಾರ್ಡ್ ನಾಗರಿಕತೆ ಅಥವಾ ಪೌರತ್ವದ ದಾಖಲೆಯಲ್ಲ ಎಂದು ಸರ್ಕಾರ ಕಾಲ ಕಾಲಕ್ಕೆ ಸಾರುತ್ತಲೇ ಬಂದಿತು.

ಜನಪ್ರಾತಿನಿಧ್ಯ ಕಾಯಿದೆಯ ಪ್ರಕಾರ ಮತದಾನ ಗುರುತಿನ ಚೀಟಿಯು ಕೇವಲ ಮತದಾನದ ಅಧಿಕಾರಕ್ಕೆ ಸೀಮಿತವೇ ವಿನಾ ನಾಗರಿಕತೆಯ ಗುರುತು ಅಲ್ಲ. ಪ್ಯಾನ್ ಕಾರ್ಡ್ ಕೂಡ ಆದಾಯ ತೆರಿಗೆ ವಿಭಾಗ ಭಾರತವಾಸಿಗಳ ಆದಾಯದ ಮೇಲೆ ನಿಗಾ ಇಡಲು ಬಳಸಿಕೊಳ್ಳುತ್ತಿರುವ ಸಾಧನವೇ ವಿನಾ ಇನ್ನೇನೂ ಅಲ್ಲ.

ವ್ಯವಸ್ಥೆ ಬೇಕೆಂದೇ ಭಾರತವಾಸಿಗಳನ್ನು ಈ ಚಕ್ರವ್ಯೂಹದಲ್ಲಿ ಕೆಡವಿದೆ. ಇದೊಂದು ಬಗೆಯ ಕಾನೂನು ಶೂನ್ಯ ಸ್ಥಿತಿ. ಸೇವೆಗಳಿಗೆ ಮಾತ್ರವೇ ಸೀಮಿತಗೊಳಿಸಿದ ಸ್ಥಿತಿಗತಿ. ನಾಗರಿಕತೆ ಅಥವಾ ಪೌರತ್ವವು ಅಧಿಕಾರದೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ. ಆದರೆ ಸೇವೆಗಳಿಗೆ ಸೀಮಿತಗೊಳಿಸಿದರೆ, ಭಾರತವಾಸಿಗಳು ಕೇವಲ ಗ್ರಾಹಕರಾಗುತ್ತಾರೆಯೇ ವಿನಾ ನಾಗರಿಕರಲ್ಲ. ವ್ಯಕ್ತಿಯ ಸ್ವತಂತ್ರ ಗುರುತೇ ಉಳಿದಿಲ್ಲದ ಯುಗವನ್ನು ಭಾರತ ಪ್ರವೇಶಿಸಿದೆ. ಸರ್ಕಾರದ ದತ್ತಾಂಶ ನೆಲೆಯಲ್ಲಿ ಆಸ್ತಿತ್ವದಲ್ಲಿ ಇಲ್ಲದ ಭಾರತ ವಾಸಿಗಳು ನಿಜದಲ್ಲೂ ಅಸ್ತಿತ್ವದಲ್ಲಿ ಇಲ್ಲ ಎಂದು ಸರ್ಕಾರ ತೀರ್ಮಾನಿಸಿಬಿಟ್ಟಿದೆ. ಭಾರತವಾಸಿಗಳ ಸ್ಥಿತಿಗತಿಯನ್ನು ಪ್ರಜೆಗಳಿಗೆ ಇಳಿಸಲಾಗಿದೆ. ನಾಗರಿಕರೆಂದು ಪರಿಗಣಿಸಿಲ್ಲ. ಈ ದತ್ತಾಂಶ ನೆಲೆಯು ಖಾಸಗಿ ಕಾರ್ಪೊರೇಟುಗಳ ಪಾಲಾಗಿ ಹೋಗಿದೆ. ಅದನ್ನು ಅವುಗಳಿಗೆ ಮಾರಿಕೊಳ್ಳಲಾಗಿದೆ. ಸರ್ಕಾರದ ವಕ್ತಾರರು ಹೇಳುವ ಪ್ರಕಾರ ಈ ದತ್ತಾಂಶ ನೆಲೆಯ ಉದ್ದೇಶ ಜನಕಲ್ಯಾಣ ಯೋಜನೆಗಳ ದುರುಪಯೋಗ ಆಗದಂತೆ ಅವುಗಳನ್ನು ನೇರವಾಗಿ ಜನತೆಗೆ ತಲುಪಿಸುವುದೇ ಆಗಿದೆ. ನಕಲಿ ಫಲಾನುಭವಿಗಳನ್ನು ಗುರುತಿಸಿ ಹೊರದಬ್ಬಲು ದತ್ತಾಂಶ ನೆಲೆ ಸಹಾಯಕ ಆಗಿದೆ ಎಂದು ವಾದಿಸುತ್ತಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಬಿಜೆಪಿ ಭಂಡರು

ಭಾರತದ ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ (ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕ ಸಂಸ್ಥೆ-CAG) 2022ರಲ್ಲಿ ನೀಡಿದ ವರದಿಯೊಂದರ ಪ್ರಕಾರ ದತ್ತಾಂಶ ನೆಲೆಯಲ್ಲಿ ದೊಡ್ಡ ಪ್ರಮಾಣದ ನಕಲಿ ದತ್ತಾಂಶ ಉತ್ಪನ್ನವಾಗಿದೆ. ದಸ್ತಾವೇಜುಗಳನ್ನು ಪ್ರಮಾಣಿಸಿ ನೋಡದೆಯೇ ಗುರುತಿನ ಚೀಟಿಗಳನ್ನು ನೀಡಲಾಗಿದೆ ಎಂದಿತು. ನಕಲಿ ಫಲಾನುಭವಿಗಳನ್ನು ಹೊರತಳ್ಳಲೆಂದು ರೂಪು ತಳೆದ ವ್ಯವಸ್ಥೆಯೇ ತಾಂತ್ರಿಕ ದೋಷಗಳ ಕಾರಣವಾಗಿ ಸಾವಿರಾರು ಅಸಲಿ ಭಾರತವಾಸಿಗಳನ್ನು ಅವರ ಪಡಿತರ- ಪಿಂಚಣಿ ಮುಂತಾದ ಅಧಿಕಾರಗಳಿಂದ ಹೊರಹಾಕಿತು. ಅರ್ಥಶಾಸ್ತ್ರದ ಭಾಷೆಯಲ್ಲಿ ಇದನ್ನು ಹೊರಗಿರಿಸುವ ದೋಷವೆಂದು ಕರೆಯಲಾಗುತ್ತದೆ. ದಿಕ್ಕಿಲ್ಲದ ಬಡವರು, ದಲಿತರು, ಮುಸಲ್ಮಾನರು, ಆದಿವಾಸಿಗಳು, ಅಲೆಮಾರಿಗಳು, ದಿನಗೂಲಿಗಳು, ಬೀದಿ ಬದಿ ವ್ಯಾಪಾರ ಮಾಡಿ ಬದುಕುವವರು, ವಲಸಿಗರು ಮುಂತಾದವರೇ ಇದರ ಬಲಿಪಶುಗಳು. ಖಾಯಂ ವಿಳಾಸ ಮತ್ತು ಸುಸ್ಥಿರ ದಾಖಲೆ ದಸ್ತಾವೇಜುಗಳನ್ನು ಆಧರಿಸಿದ ಸರ್ಕಾರಿ ದತ್ತಾಂಶ ನೆಲೆಗಳಲ್ಲಿ (ಡೇಟಾ ಬೇಸ್) ಇವರಿಗೆ ಸ್ಥಾನ ಸಿಗುವುದಿಲ್ಲ. ಇಂತಹ ಸಮುದಾಯಗಳನ್ನು ಹೊರಗಿಡಲಾಗುತ್ತದೆ. ಕಿರುಕುಳಗಳಿಗೆ ಗುರಿ ಮಾಡಲಾಗುತ್ತದೆ. ಭಾರತವಾಸಿಗಳ ವಿವರಗಳನ್ನು ದೋಷಮುಕ್ತವಾಗಿ ಇಡಲು ಸರ್ಕಾರಗಳೇ ವಿಫಲವಾಗಿರುವಾಗ ದಲಿತರು ದಿಕ್ಕಿಲ್ಲದವರು ಅಲ್ಪಸಂಖ್ಯಾತರು ತಮ್ಮ ಹಿಂದಿನ ತಲೆಮಾರುಗಳ ದಾಖಲೆಗಳನ್ನು ತರುವಂತೆ ವಿಧಿಸುವುದು ಯಾವ ನ್ಯಾಯ?

ಎನ್.ಆರ್.ಸಿ. (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್) ಮತ್ತು ಸಿಎಎ (ಪೌರತ್ವ ತಿದ್ದುಪಡಿ ಕಾಯಿದೆ) ಇಡೀ ದೇಶದಲ್ಲಿ ಜಾರಿಯಾದಾಗ, ಭಾರತ ನಿವಾಸಿಗಳು ಈ ದೇಶದ ಪ್ರಜೆಗಳೆಂದು ಸಾಬೀತು ಮಾಡುವ ಹೊರೆಯನ್ನು ಅವರ ಮೇಲೆಯೇ ಹೇರಲಾಗುತ್ತದೆ. ನೀವು ಈ ದೇಶವಾಸಿಗಳಲ್ಲ ಎಂಬುದನ್ನು ತಾನು ರುಜುವಾತು ಮಾಡುವುದಾಗಿ ಸರ್ಕಾರ ಹೇಳುವುದಿಲ್ಲ. ತಾವು ಈ ನೆಲದ ಮಕ್ಕಳೆಂದು ಸಾಬೀತು ಮಾಡುವಂತೆ ಪ್ರಜೆಗಳಿಗೇ ಆಜ್ಞಾಪಿಸಲಾಗುತ್ತದೆ. ಮತದಾನ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಇತರೆ ಯಾವುದೇ ಗುರುತುಪತ್ರ ಪ್ರಯೋಜನಕ್ಕೆ ಬಾರದು. ಅಜ್ಜ ಮುತ್ತಜ್ಜ ಈ ನೆಲದಲ್ಲಿ ಜನಿಸಿದ ಪುರಾವೆ ತರುವಂತೆ ಆದೇಶಿಸಲಾಗುತ್ತದೆ. ಪ್ರಜೆಗಳ ಅಸ್ಮಿತೆಯ ಮರಣವಿದು. ಭಾರತವಾಸಿಗಳಿಂದ ಅವರ ಎಲ್ಲ ದತ್ತಾಂಶವನ್ನು ದೋಚಿರುವ ಸರ್ಕಾರ ಅವರಿಗೆ ನಾಗರಿಕತೆಯ ನೇರ ನೈಜ ಪಾರದರ್ಶಕ ಪುರಾವೆ ನೀಡಲು ಅಸಮರ್ಥವಾಗಿದೆ. ಜನರನ್ನು ಅವರ ಜೀವಮಾನದುದ್ದಕ್ಕೂ ದಾಖಲೆ ದಸ್ತಾವೇಜುಗಳ ಪಂಜರದಲ್ಲಿ ಕೈದು ಮಾಡಿ ಇಡುವ ಹುನ್ನಾರವಿದು. ಆಳುವ ವ್ಯವಸ್ಥೆ ಬೇಕೆಂದೇ ನಿರ್ಮಿಸಿರುವ ಅಯೋಮಯ ಸ್ಥಿತಿ.

ಎನ್.ಆರ್.ಸಿ., ಸಿ.ಎ.ಎ. ಹಾಗೂ ಎಸ್.ಐ.ಆರ್ ವಿವಾದಗಳಿಗೆ ಅಂತ್ಯವೇ ಇಲ್ಲವಾಗಿದೆ. 80 ವರ್ಷಗಳ ನಂತರವೂ ಪೌರತ್ವದ ಪ್ರಶ್ನೆಗೆ ಪರಿಹಾರ ನೀಡದೆ ಜನಸಮುದಾಯಗಳನ್ನು ನಿರಂತರ ಭೀತಿ ಮತ್ತು ಅನಿಶ್ಚಯತೆಗಳಿಗೆ ನೂಕುವುದು ಅನ್ಯಾಯ.

ಅಸ್ಸಾಮ್ ನಲ್ಲಿ ಎನ್.ಆರ್.ಸಿ.ಯಿಂದ ಹೊರಗಿಡಲಾದ 19 ಲಕ್ಷ ಮಂದಿ, ಪಶ್ಚಿಮ ಬಂಗಾಳದಲ್ಲಿ ಎಸ್.ಐ.ಆರ್. ಅಸ್ತ್ರ ಪ್ರಯೋಗಿಸಿ ಮತಾಧಿಕಾರವನ್ನು ಕಸಿದುಕೊಳ್ಳಲಾದ 90 ಲಕ್ಷ ಮಂದಿ, ತೆಲಂಗಾಣದಲ್ಲಿ ಗುರುತಿಸಲಾದ 89 ಲಕ್ಷ ಮಂದಿ ಮಾತ್ರವಲ್ಲದೆ ಸದ್ಯದಲ್ಲೇ ಈ ಸಂಖ್ಯೆಗೆ ಸೇರಲಿರುವ ಮತಾಧಿಕಾರ ವಂಚಿತರಾಗುವ ಹತ್ತಾರು ಕೋಟಿ ದಲಿತರು, ದಿಕ್ಕಿಲ್ಲದವರು, ಮಹಿಳೆಯರು ಮುಸಲ್ಮಾನರು, ವಲಸಿಗರ ಬವಣೆ ಕೊನೆಯಾಗುವುದು ಎಂದಿಗೆ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್‌ ಕುಮಾರ್‌ ಮನೆ ಮುಂದೆ ಕಾಂಗ್ರೆಸ್‌ ಪ್ರತಿಭಟನೆ; ‘ಗದ್ದಾರ್‌ ಗ್ಯಾನೇಶ್‌’ ಎಂದು ಗೋಡೆಗೆ ಬಣ್ಣ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ಅವರ ಆಗ್ರಾದ ವಿಜಯನಗರದಲ್ಲಿರುವ...

AAP ದೇಣಿಗೆಯಲ್ಲಿ ಶೇ.68 ಕುಸಿತ; ಇತರೆ ಪ್ರಾದೇಶಿಕ ಪಕ್ಷಗಳ ದೇಣಿಗೆಯಲ್ಲೂ ಭಾರೀ ಇಳಿಕೆ

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ...

‘ಇವು ಕೇವಲ ಉಪಚುನಾವಣೆಗಳು’: ನಂದಿಗ್ರಾಮ, ರೆಜಿನಗರ ‘ಎಸ್‌ಐಆರ್’ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಉಪಚುನಾವಣೆಗೂ ಮುನ್ನ ‘ವಿಶೇಷ...