ಈ ದಿನ ಸಂಪಾದಕೀಯ | ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಬಿಜೆಪಿ ಭಂಡರು

Date:

ಮೂರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು, 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಬರಿದಾಗಿದ್ದರ ಬಗ್ಗೆ ಬಾಯಿ ಬಿಡದಿರುವುದು ಸೋಗಲಾಡಿತನವಲ್ಲವೇ? ಬಿಜೆಪಿಗರು ಆಡುವುದು ಒಂದು, ಮಾಡುವುದು ಇನ್ನೊಂದು. ಅವರ ಪಕ್ಷದ ಚಿಹ್ನೆಯಂತೆಯೇ, ಮೇಲೆ ಕಾಣುವುದು ಕಮಲ, ಒಳಗಿರುವುದು ಮಲ.   

ಕಳೆದ ಭಾನುವಾರ ನಡೆದ ನೀಟ್ ಯುಜಿ-2026 ಮರುಪರೀಕ್ಷೆ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳು ತಡವಾಗಿ ಬಂದಿದ್ದಕ್ಕೆ ಪ್ರವೇಶ ನಿರಾಕರಿಸಲಾಯಿತು. ಆ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ತಡವಾಗಿ ಬಂದರು, ಮತ್ತೊಬ್ಬರು ಹಳೆಯ ಪರೀಕ್ಷಾ ಪ್ರವೇಶ ಪತ್ರ ತಂದಿದ್ದರು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ಮುಂಚಿತವಾಗಿಯೇ ಸಂಚಾರ ಸಲಹೆ ಹಾಗೂ ಸಹಾಯವಾಣಿಯನ್ನು ಬಿಡುಗಡೆ ಮಾಡಿತ್ತು.

- Advertisement -

ಆದರೆ, ಸರ್ಕಾರದ ಈ ಸಮಜಾಯಿಷಿಗೆ ತೃಪ್ತರಾಗದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಆ ಅವಘಡಕ್ಕೆ ಕಾಂಗ್ರೆಸ್ ರ್‍ಯಾಲಿಯಿಂದಾದ ಟ್ರಾಫಿಕ್ ಜಾಮ್ ಕಾರಣ ಎಂದು ದೂರಿದರು. ಅಷ್ಟೇ ಅಲ್ಲ, ‘ಕಳೆದ ಹಲವು ವಾರಗಳಿಂದ ರಾಹುಲ್ ಗಾಂಧಿ ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ರಾಜಕೀಯ ನಾಟಕವಲ್ಲ, ಸಂವೇದನಾಶೀಲತೆ ಬೇಕು. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ದೆಹಲಿಯಲ್ಲಿ ಕೇವಲ ಘೋಷಣೆಯಾಗಿದ್ದು, ಬೆಂಗಳೂರಿನಲ್ಲಿ ತೊಂದರೆಯಾಗಿ ಪರಿಣಮಿಸಬಾರದು’ ಎಂದು ಕುಟುಕಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ತೇಜಸ್ವಿ ಸೂರ್ಯ, ಬಿಜೆಪಿ ಸಂಸದ. ಆತ ರಾಜ್ಯ ಸರ್ಕಾರದ ವಿರುದ್ಧ ಟೀಕಿಸುತ್ತಿದ್ದಂತೆ, ಸಂಜೆಯೊಳಗೆ ಅದು ಇಡೀ ದೇಶವನ್ನು ವ್ಯಾಪಿಸಿತು. ಬಿಜೆಪಿಯ ಹಿರಿ-ಮರಿ-ಕಿರಿ ನಾಯಕರೆಲ್ಲ ತೇಜಸ್ವಿ ಸೂರ್ಯರೊಂದಿಗೆ ಸ್ವರ ಸೇರಿಸಿದರು. ಸಂಜೆಯ ವೇಳೆಗೆ ಸುದ್ದಿ ಸಂಚಲನ ಸೃಷ್ಟಿಸಿತು. ಅದಕ್ಕೇ ಕಾಯ್ದು ಕುಳಿದಿದ್ದ ಮಾರಿಕೊಂಡ ಮಾಧ್ಯಮಗಳು, ಸಾಕಷ್ಟು ಪ್ರಚಾರ ನೀಡಿ, ಜ್ವಲಂತ ಸಮಸ್ಯೆಯನ್ನಾಗಿಸಿದವು.  

ವಿದ್ಯಾರ್ಥಿಗಳ ಬಗೆಗಿನ ಸಂಸದ ತೇಜಸ್ವಿ ಸೂರ್ಯ ಅವರ ಕಳಕಳಿ, ಕಾಳಜಿ ಪ್ರಶಂಸನೀಯ. ಆದರೆ, ಅದೇ ಕೆಲಸ- ಮೇ 3ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾದ ಅವಘಡಕ್ಕೆ, ನೊಂದ ವಿದ್ಯಾರ್ಥಿಗಳ ಪರ ನಿಂತ ರಾಹುಲ್ ಗಾಂಧಿ, ಸಹಾನುಭೂತಿ ವ್ಯಕ್ತಪಡಿಸಿ ಅವರಿಗೆ ನೈತಿಕ ಸ್ಥೈರ್ಯ ತುಂಬಿದರು. ಆಶ್ಚರ್ಯವೆಂದರೆ, ತೇಜಸ್ವಿ ಸೂರ್ಯರಿಗೆ ಅದು ಮೊಸಳೆ ಕಣ್ಣೀರು ಹಾಗೂ ರಾಜಕೀಯ ನಾಟಕದಂತೆ ಕಾಣಿಸಿತು!

ಇದನ್ನು ಓದಿದ್ದೀರಾ?: ಆರ್‌ಟಿಐನಿಂದ ಬಯಲಾಯ್ತು ಮೋದಿ ಮತ್ತು ಗೋದಿ ಮೀಡಿಯಾದ ಅಸಲಿ ಬಣ್ಣ!

ಕೇವಲ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯದಿರುವುದಕ್ಕೆ ಇಲ್ಲಿನ ಕಾಂಗ್ರೆಸ್ ಸರ್ಕಾರವನ್ನು ದೂಷಿಸಿದ, ಅದನ್ನು ರಾಷ್ಟ್ರೀಯ ಸುದ್ದಿಯನ್ನಾಗಿಸಿದ ತೇಜಸ್ವಿ ಸೂರ್ಯ; ಬಿಜೆಪಿ ಸರ್ಕಾರವಿರುವ ದೆಹಲಿ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲೂ ವಿದ್ಯಾರ್ಥಿಗಳು ಪರೀಕ್ಷೆಗೆ ತಡವಾಗಿ ಬಂದದ್ದರ ಬಗ್ಗೆ ತುಟಿಕ್ ಪಿಟಿಕ್ ಎನ್ನಲಿಲ್ಲ. ಅವರು ಅವಕಾಶವಂಚಿತ ವಿದ್ಯಾರ್ಥಿಗಳಲ್ಲವೇ, ಅವರ ಭವಿಷ್ಯ ಹಾಳಾಗಿಲ್ಲವೇ?

ಕೇಂದ್ರ ಸರ್ಕಾರದ ಮೂಗಿನ ಕೆಳಗೆ ಮೇ 3ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ದೇಶದಾದ್ಯಂತ ವೈದ್ಯರಾಗುವ ಕನಸು ಕಾಣುತ್ತಿದ್ದ ಸುಮಾರು 23 ಲಕ್ಷ ವಿದ್ಯಾರ್ಥಿಗಳು ತೊಂದರೆಗೆ ಒಳಗಾದರು. ಅವರ ಅಪಾರ ಶ್ರಮ, ಸಮಯ, ಹಣ- ಒಂದೇ ದಿನದಲ್ಲಿ ವ್ಯರ್ಥವಾಯಿತು. ಅಂದಿನಿಂದ ಇಂದಿನವರೆಗೆ ಸುಮಾರು 12 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಆದರೆ ನೀಟ್‌ನ ಸಂಪೂರ್ಣ ಜವಾಬ್ದಾರಿ ಹೊತ್ತ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(NTA)ಯ ಅಧ್ಯಕ್ಷರಾಗಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ರಾಗಲಿ ರಾಜೀನಾಮೆ ಕೊಡಲಿಲ್ಲ. 50 ದಿನಗಳಾದರೂ ಪ್ರಧಾನಿ ಮೋದಿಯವರು ಬಾಯಿ ಬಿಡಲಿಲ್ಲ. ಇದು ಘನಘೋರ ಅಪರಾಧವಲ್ಲವೇ? ಆದ ಅವಘಡ ಕುರಿತು ದೇಶದ ಜನರ ಕ್ಷಮೆ ಕೇಳಬೇಕಲ್ಲವೇ? ಮೂರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು, 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಬರಿದಾಗಿದ್ದರ ಬಗ್ಗೆ ಬಾಯಿ ಬಿಡದಿರುವುದು ಸೋಗಲಾಡಿತನವಲ್ಲವೇ? ಇರಲಿ.

ಇದೇ ಜೂನ್ 25ರಂದು ಮೈಸೂರು, ಹುಬ್ಬಳ್ಳಿ ಹಾಗೂ ಬೆಂಗಳೂರು ವಿಭಾಗಗಳ ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT) ಜರುಗಲಿದೆ. ಆ ಪರೀಕ್ಷೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ನಡೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಈ ಹಿಂದೆ, ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಸೆ. 25, 2025ರಂದು ಗೂಡ್ಸ್ ಟ್ರೇನ್ ಮ್ಯಾನೇಜರ್ 194 ಹುದ್ದೆ ಹಾಗೂ ನ. 5, 2025ರಂದು ಹುಬ್ಬಳ್ಳಿ ವಿಭಾಗದಲ್ಲಿ 101 ಮುಂಬಡ್ತಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಈ ಪರೀಕ್ಷೆ ಮಾ. 17, 2026ರಂದು ನಿಗದಿಯಾಗಿತ್ತು. ಪರೀಕ್ಷೆ ಕೇವಲ 4 ದಿನ ಇರುವಾಗ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ರೈಲ್ವೆ ಮಂಡಳಿ ತಿಳಿಸಿತು. ಆಗ ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆಗಿಳಿದವು. ವಿರೋಧ ಮತ್ತು ಎಚ್ಚರಿಕೆಗೆ ಮಣಿದ ರೈಲ್ವೆ ಇಲಾಖೆ ಪರೀಕ್ಷೆಯನ್ನೇ ರದ್ದುಗೊಳಿಸಿತು.

ಆ ಸಂದರ್ಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರು ‘ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಪರೀಕ್ಷೆ ನಡೆಸಲು ಸಮ್ಮತಿಸಿದ್ದಾರೆ’ ಎಂದರು.  ಮತ್ತೊಬ್ಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮೋದಿಯವರನ್ನು ಬಾಯ್ತುಂಬ ಹಾಡಿ ಹೊಗಳಿದರು. ಆದರೆ, ಅದೇ ರೈಲ್ವೆ ಇಲಾಖೆ, ಕೇವಲ ಮೂರು ತಿಂಗಳ ಅಂತರದಲ್ಲಿ ಕನ್ನಡವನ್ನು ಮತ್ತೆ ತಿರಸ್ಕರಿಸಿ, ಅದೇ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸಲು ಜೂ. 25ಕ್ಕೆ ದಿನಾಂಕ ನಿಗದಿಪಡಿಸಿದೆ. ಪ್ರಧಾನಿ ಮೋದಿಯವರ ಸೂಚನೆಯನ್ನು, ಸಚಿವರ ಸಲಹೆಗಳನ್ನು ಕಸದ ಬುಟ್ಟಿಗೆ ಹಾಕಿದೆ.  

ಭಾರತವು ಬಹುಭಾಷಾ ಮತ್ತು ಬಹುಸಂಸ್ಕೃತಿಗಳ ದೇಶ. ಭಾರತೀಯ ಸಂವಿಧಾನವು ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡುವುದನ್ನು ಒತ್ತಿಹೇಳುತ್ತದೆ. ಆ ಸಂವಿಧಾನಕ್ಕೆ ಹಣೆಹಚ್ಚಿ ನಮಸ್ಕರಿಸುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ, ರೈಲ್ವೆ ನೇಮಕಾತಿಯಲ್ಲಿ ಕನ್ನಡವನ್ನು ಕಡೆಗಣಿಸುತ್ತಿದೆ.

ವಿದ್ಯಾವಂತ ಯುವಜನತೆ ಉದ್ಯೋಗಕ್ಕಾಗಿ ಕೆಲವು ತಿಂಗಳಗಳ ಹಿಂದೆ ಬೀದಿಗಿಳಿದಿದ್ದರು. ಮಡುಗಟ್ಟಿದ ಆಕ್ರೋಶವನ್ನು ಹೊರಹಾಕಿದ್ದರು. ಈಗ ಕೇಂದ್ರ ಸರ್ಕಾರ ಉದ್ಯೋಗ ಕೊಡುವುದಿರಲಿ, ಕನ್ನಡದಲ್ಲಿ ಪರೀಕ್ಷೆ ಬರೆಯಲು ಕೂಡ ಅವಕಾಶ ಕೊಡದೆ ವಂಚಿಸುತ್ತಿದೆ. ಇದು ಕೇಂದ್ರ ಸರ್ಕಾರದ ತಾರತಮ್ಯ ನೀತಿಯಲ್ಲವೇ, ಕನ್ನಡಿಗರನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ಕಾಣುತ್ತಿಲ್ಲವೇ, ಕನ್ನಡಕ್ಕೆ ದ್ರೋಹ ಬಗೆಯುತ್ತಿಲ್ಲವೇ?

ಇದನ್ನು ಓದಿದ್ದೀರಾ?: ನೀಟ್‌ ಪರೀಕ್ಷಾ ಅಕ್ರಮ-ವಿದ್ಯಾರ್ಥಿಗಳ ಆತ್ಮಹತ್ಯೆ, ಚಿಂತೆಯೇ ಇಲ್ಲದ ಪ್ರಧಾನಿ!

ಕೇಂದ್ರದಲ್ಲಿ ಸಚಿವರಾಗಿರುವ ಪ್ರಲ್ಹಾದ ಜೋಷಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣನವರು ಯಾರಿಂದ ಗೆದ್ದು ಸಚಿವರಾಗಿದ್ದಾರೆ, ಸಂಸದರು ಯಾವ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ? ಇದು ಕೇವಲ ಪರೀಕ್ಷೆ ಬರೆಯುವ, ಉದ್ಯೋಗ ಗಿಟ್ಟಿಸುವ ಪ್ರಶ್ನೆಯಲ್ಲ; ಭಾಷಾ ಗೌರವ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ. ಸಂವಿಧಾನದ ಮೂಲ ತತ್ವಗಳನ್ನು ಹಾಗೂ ವಿಶೇಷವಾಗಿ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿ ಬೆಳೆಸುವ ಪ್ರಶ್ನೆ. 

ಪ್ರಜಾಪ್ರಭುತ್ವದ ಈ ಮೂಲಮಂತ್ರವನ್ನೇ ಅರಿಯದ, ಅರಿತಿದ್ದರು ನಿರ್ಲಕ್ಷಿಸುವ ಬಿಜೆಪಿಯ ಈ ಭಂಡತನ ದಿನದಿಂದ ದಿನಕ್ಕೆ ಮೇರೆ ಮೀರುತ್ತಿದೆ. ಕೇವಲ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದಕ್ಕೆ ರಾಹುಲ್ ಗಾಂಧಿಯವರನ್ನು ಎಳೆದು ತರುವ, ರಾಜಕಾರಣ ಬೆರೆಸುವ ಬಿಜೆಪಿಗರು, ತಮ್ಮದೇ ಪಕ್ಷದ ಹತ್ತು ಹಲವು ಹಳವಂಡಗಳ ಕುರಿತು ಏಕೆ ಮಾತನಾಡುವುದಿಲ್ಲ?

ಬಿಜೆಪಿಗರು ಆಡುವುದು ಒಂದು, ಮಾಡುವುದು ಇನ್ನೊಂದು. ಅವರ ಪಕ್ಷದ ಚಿಹ್ನೆಯಂತೆಯೇ, ಮೇಲೆ ಕಾಣುವುದು ಕಮಲ, ಒಳಗಿರುವುದು ಮಲ.   

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...

ಈ ದಿನ ಸಂಪಾದಕೀಯ | ಐಫೆಲ್ ಟವರ್‌ ಎದುರು ಭಾರತದ ಮಾನ ಕಳೆದ ಧಾರ್ಮಿಕ ಪಿತೃಸತ್ತೆ!

ಒಬ್ಬ ಧರ್ಮಗುರು ತನ್ನ ಕಣ್ಣಿಗೆ ಮಹಿಳೆ ಕಾಣಬಾರದು ಎಂದುಕೊಂಡರೆ ಆತ ತನ್ನ...

ಈ ದಿನ ಸಂಪಾದಕೀಯ | ಮಾರುವುದಿಲ್ಲ ಎಂದು ಮಾರುವ ಮೋದಿ… ಈಗ ಇಸ್ರೋ ಸರದಿ?

ಇಸ್ರೋ ಸಂಸ್ಥೆಯನ್ನು ಭಾರತದ ಸಾರ್ವಜನಿಕ ಹಣದಿಂದ ಕಟ್ಟಲಾಗಿದೆ. ಇಂತಹ ಸದೃಢ ಇಸ್ರೋ...