ದಾವಣಗೆರೆ | ಕರ್ನಾಟಕ ಶ್ರಮಿಕ ಶಕ್ತಿಯಿಂದ ಕಾರ್ಮಿಕ ದಿನಾಚರಣೆ, ಹಿರಿಯ ಕಾರ್ಮಿಕರಿಗೆ ಅಭಿನಂದನೆ

Date:

ಕರ್ನಾಟಕ ಶ್ರಮಿಕ ಶಕ್ತಿಯ ದಾವಣಗೆರೆ ಜಿಲ್ಲಾ ಸಮಿತಿಯು ದಾವಣಗೆರೆ ನಗರದ ರಂಗ ಮಹಲ್ ನಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಹಿರಿಯ ಕಾರ್ಮಿಕರನ್ನು ಅಭಿನಂದಿಸಿ ಗೌರವಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ”ಶ್ರಮಿಕ ವರ್ಗವು ರಾಜಕೀಯ ಶಕ್ತಿಯಾಗಬೇಕು” ಎಂದು ಕರೆ ನೀಡಿದರು.

- Advertisement -

ದಾವಣಗೆರೆ ನಗರದ ರಂಗ ಮಹಲ್‌ನಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ, “1886ರ ಚಿಕಾಗೋ ಕಾರ್ಮಿಕರ ಹೋರಾಟದ ಸ್ಮರಣಾರ್ಥವಾಗಿ ವಿಶ್ವ ಕಾರ್ಮಿಕರ ದಿನ ಆಚರಿಸಲಾಗುತ್ತಿದೆಯಾದರೂ, ಇಂದಿಗೂ ಕಾರ್ಮಿಕರ ಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಆಗಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...
1004354291

“ಇತ್ತೀಚೆಗೆ ಕೇಂದ್ರ ಸರ್ಕಾರ 44 ವಿಭಾಗಗಳಿದ್ದ ಕಾರ್ಮಿಕ ಕಾನೂನುಗಳನ್ನು ಕೇವಲ 4 ಸಂಹಿತೆಗಳಾಗಿ ಸಂಕುಚಿತಗೊಳಿಸಿ ಕಾರ್ಮಿಕರ ಶೋಷಣೆಗೆ ದಾರಿ ಮಾಡಿಕೊಟ್ಟಿದೆ. ಇಂಥವುಗಳನ್ನು ಸಂಘಟಿತರಾಗಿ ಕಾರ್ಮಿಕ ವರ್ಗ ವಿರೋಧಿಸಬೇಕು. ಹಾಗಾಗಿ ಶ್ರಮಿಕ ವರ್ಗ ಕಾರ್ಮಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಕಾರ್ಮಿಕ ಶಕ್ತಿಯಾಗಿ ಬೆಳೆದು ರಾಜಕೀಯವನ್ನು ನಿರ್ಧರಿಸುವ ಶಕ್ತಿಯಾಗಿ ಬೆಳೆಯಬೇಕು” ಎಂದು ಕರೆ ನೋಡಿದರು.

“ಕೇಂದ್ರ ಸರಕಾರವು ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿ ತಂದಿರುವುದು ಕಾರ್ಮಿಕರ ಪಾಲಿನ ಮರಣಶಾಸನವಾಗಿದೆ. ಕಾರ್ಮಿಕರಿಗೆ ಸಿಗುವ ಎಲ್ಲ ಶಾಸನಬದ್ಧ ಸವಲತ್ತುಗಳು, ಎಂಟು ಗಂಟೆಗಳ ಕೆಲಸದ ಅವಧಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ, ಹೆರಿಗೆ ಸೌಲಭ್ಯಗಳು, ಬೋನಸ್, ಭವಿಷ್ಯ ನಿಧಿ, ಇಎಸ್‌ಐ ಸೌಲಭ್ಯ ಸೇರಿದಂತೆ ಸಾಮಾಜಿಕ ಭದ್ರತಾ ಸೌಲಭ್ಯಗಳು ಹಾಗೂ ಇತರ ಸೌಲಭ್ಯಗಳು ಕಾರ್ಮಿಕ ಸಂಘಟನೆಗಳ ಸುದೀರ್ಘವಾದ ಹೋರಾಟದ ಮೂಲಕ ಪಡೆದುಕೊಂಡಿರುವುದಾಗಿದೆ. ಇದೀಗ ಕೇಂದ್ರ ಸರಕಾರವು ಬಂಡವಾಳಷಾಹಿಗಳ ಒತ್ತಡಕ್ಕೆ ಸಿಲುಕಿ ಕಾರ್ಮಿಕ ಕಾಯಿದೆಗಳನ್ನು ತಿದ್ದುಪಡಿ ತಂದಿದೆ. ಇದು ಕಾರ್ಮಿಕರ ಹಕ್ಕು ಮತ್ತು ಸೌಲಭ್ಯಗಳನ್ನು ಮೊಟಕುಗೊಳಿಸುವುದಾಗಿದೆ. ಇದರ ವಿರುದ್ಧ ಹೋರಾಡಲು ಕಾರ್ಮಿಕ ವರ್ಗ ಸಜ್ಜಾಗಬೇಕು” ಎಂದು ಅಭಿಪ್ರಾಯಪಟ್ಟರು.

1004354292

ಕರ್ನಾಟಕ ಶ್ರಮಿಕ ಶಕ್ತಿಯ ಸತೀಶ್ ಅರವಿಂದ್ ಮಾತನಾಡಿ “ಇಂದಿನ ಕಾರ್ಮಿಕರ ಸಮಸ್ಯೆಗಳಿಗೆ ನಮ್ಮ ಸರ್ಕಾರಗಳು ಸ್ಪಂದಿಸುತ್ತಿಲ್ಲ. 140 ವರ್ಷಗಳ ಹಿಂದಿನ ಹೋರಾಟವನ್ನು ನಾವುಗಳು ಸ್ಮರಿಸುವ ಜೊತೆಗೆ ಕಾರ್ಮಿಕರ ಹಕ್ಕುಗಳಿಗಾಗಿ ಮತ್ತು ಅಧಿಕಾರಕ್ಕಾಗಿ ನಮ್ಮ ಹೋರಾಟವನ್ನು ಮುನ್ನಡೆಸೋಣ. ಟೈಲರ್, ಮೆಕಾನಿಕ್, ಇತರೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ದನಿಯೆತ್ತಬೇಕು” ಎಂದು ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವೇತನ ಹಿಂಬಾಕಿ, ಬೇಡಿಕೆ ಈಡೇರಿಕೆಗಾಗಿ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಮುಷ್ಕರ

ವೇದಿಕೆಯಲ್ಲಿ ಪವಿತ್ರ, ಆದಿಲ್ ಖಾನ್, ಷಣ್ಮುಖ, ರವೀಂದ್ರ, ಸೈಯದ್ ಅಶ್ಫಾಖ್, ಕಾರ್ಯಕ್ರಮದಲ್ಲಿ ಜಾಫರ್ ಶರೀಫ್, ಸಮೀರ್, ರಾಮಾಂಜನೇಯ, ವೆಂಕಟೇಶ್, ಆಂಜನೇಯ,ಹನುಮಂತಪ್ಪ ಚಂದ್ರು, ಸಲ್ಮಾ ಬಾನು, ಪ್ಯಾರಿಜಾನ್, ರಹಮತ್ ಬೀ, ಚಾಂದಿನಿ, ಮಂಜುಳ ಮುಂತಾದ ಹಲವು ಕಾರ್ಮಿಕರು ಭಾಗವಹಿಸಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಲಸೂರ | ಗಡಿಭಾಗದ ಸರ್ಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಕಸಾಪ ಮನವಿ

ಮಹಾರಾಷ್ಟ್ರದ ಗಡಿಯೊಂದಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಉರ್ದು ಹಾಗೂ...

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಿವಮೊಗ್ಗ | ರಂಗದಸರಾ ಪ್ರಯುಕ್ತ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ಕಾರ್ಯಕ್ರಮ

ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ-2026ರ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ 15...