ಪಂಚಮಸಾಲಿ ಪೀಠಗಳ ಗೊಂದಲ- ಭಾಗ 8: ರಾಜಕೀಯ ಸ್ಥಾನಮಾನಗಳಿಗೆ ಹುಟ್ಟಿದ ಸಂಘಟನೆಗಳು ಇಡೀ ಸಮುದಾಯದ ಹಿತಾಸಕ್ತಿ ಕಾಯಲಾರವು

Date:

ಯಡಿಯೂರಪ್ಪ ಅನೇಕ ಜನ ಲಿಂಗಾಯತ ನಾಯಕರನ್ನು ಬೆಳೆಸಿದ್ದು ನಿಜ, ಆದರೆ ಬ್ರಾಹ್ಮಣರ ಪ್ರಚೋದನೆಯಿಂದ ತನಗೆ ವಿರುದ್ಧವಾದವರನ್ನು ನಿರ್ದಾಕ್ಷಿಣ್ಯವಾಗಿ ತುಳಿದದ್ದೂ ಇದೆ. ಈ ಕಾರಣದಿಂದ ಬ್ರಾಹ್ಮಣರ ಯಜಮಾನಿಕೆಯ ಬಿಜೆಪಿಯಲ್ಲಿ ಈಗ ಲಿಂಗಾಯತ ರಾಜಕಾರಣಿಗಳು ಪ್ರಲ್ಹಾದ ಜೋಶಿ ಮತ್ತು ತೇಜಸ್ವಿ ಸೂರ್ಯ ಇವರಿಬ್ಬರ ಅಣತಿಯಂತೆ ಅವರ ಗುಲಾಮಗಿರಿ ಮಾಡಿಕೊಂಡಿರುವ ಸಂದರ್ಭ ಉದ್ಭವವಾಗಿದೆ.

ಪಂಚಮಸಾಲಿ ಉಪವರ್ಗದ ಹಿರಿಯರು ಲಿಂಗಾಯತ ಧರ್ಮದ ಉನ್ನತಿಗಾಗಿ ಮಾಡಿದ ಕಾರ್ಯಗಳ ಕುರಿತು ಇಂದಿನ ಪೀಳಿಗೆಗೆ ಅರಿವಿಲ್ಲ, ಅದಕ್ಕೆ ಕಾರಣ ಆ ಉಪವರ್ಗದ ಮಠಾಧೀಶರು ಮತ್ತು ರಾಜಕಾರಣಿಗಳು. ಇಂದು ಪಂಚಮಸಾಲಿ ಉಪವರ್ಗದಲ್ಲಿ ಮೂಡಿರುವ ಗೊಂದಲ ತಿಳಿಯಾಗಬೇಕಾದರೆ, ಅವರು ತಮ್ಮ ಹಿರಿಯರನ್ನು ಮೊದಲು ತಿಳಿಯಬೇಕು. ಅದಕ್ಕಾಗಿ ನಾನು ಪಂಚಮಸಾಲಿ ಹಿರಿಯರನ್ನು ಈ ಸರಣಿಗಳಲ್ಲಿ ಪರಿಚಯಿಸಲಿದ್ದೇನೆ.

- Advertisement -

ಲಿಂಗಾಯತ ಸಮಾಜವು ಶೈಕ್ಷಣಿಕವಾಗಿ ಬ್ರಾಹ್ಮಣರಿಗೆ ಸರಿಸಮನಾಗಿ ಬೆಳೆಯಬೇಕು ಎನ್ನುವ ದೂರದೃಷ್ಟಿ ಇಟ್ಟುಕೊಂಡು ಅಂದು ಲಿಂಗಾಯತ ಪಂಚಮಸಾಲಿ ನಾಯಕರು ಅನೇಕ ಉಪಕ್ರಮಗಳನ್ನು ಕೈಗೊಂಡರು. ಅವರಿಗೆ ಸಮಗ್ರ ಲಿಂಗಾಯತ ಸಮಾಜದ ಕಳಕಳಿ ಇತ್ತೇ ಹೊರತು ಕೇವಲ ಪಂಚಮಸಾಲಿ ಉಪವರ್ಗಕ್ಕೆ ತಾವು ಸಿಮಿತಗೊಳ್ಳಲಿಲ್ಲ. ಆ ಕಾರಣದಿಂದ ರಾಜಕೀಯದಲ್ಲಿ ಹಿಂದೆ ಹೆಚ್ಚಿನ ಸಂಖ್ಯೆಯ ಪಂಚಮಸಾಲಿ ಶಾಸಕ/ಸಂಸದರಿರುತ್ತಿದ್ದರು. ಯಾವಾಗ ಪಂಚಮಸಾಲಿಗಳು ಉಪವರ್ಗದ ಸಂಘಟನೆ ಹಾಗು ಪೀಠಗಳನ್ನು ಸ್ಥಾಪಿಸಿ ಜೈ ಚೆನ್ನಮ್ಮಾ ಎಂದು ಘೋಷಣೆ ಕೂಗತೊಡಗಿದರು ತಮಗೆ ತಾವೇ ಉಳಿದ ಲಿಂಗಾಯತ ಉಪವರ್ಗಗಳಿಂದ ದೂರ ಸರಿದರು. ರಾಜಕೀಯ ಸ್ಥಾನಮಾನಗಳಿಗಾಗಿ ಹುಟ್ಟಿದ ಸಂಘಟನೆಗಳು ಇಡೀ ಸಮುದಾಯದ ಹಿತಾಸಕ್ತಿ ಕಾಯಲಾರವು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಅಖಿಲ ಭಾರತ ವೀರಶೈವ ಮಹಾಸಭಾ. ರಾಜಕೀಯದಲ್ಲಿ ಕೇವಲ ಒಂದು ಉಪವರ್ಗವನ್ನು ನೆಚ್ಚಿಕೊಂಡು ಸಮಗ್ರ ಲಿಂಗಾಯತ ಸಮಾಜದ ನಾಯಕತ್ವ ರೂಪುಗೊಳ್ಳಲಾರದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದನ್ನು ಓದಿದ್ದೀರಾ? ಪಂಚಮಸಾಲಿ ಪೀಠಗಳ ಗೊಂದಲ- ಭಾಗ 1 | ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಮೂಲವಾಗಿದ್ದರು

ಯಡಿಯೂರಪ್ಪ ವಿರುದ್ಧ ಪಂಚಮಸಾಲಿಗಳನ್ನು ಎತ್ತಿ ಕಟ್ಟಿದ ಸಂಘ ಪರಿವಾರದ ಬ್ರಾಹ್ಮಣರ ಕುತಂತ್ರ ಕೇವಲ ಪಂಚಮಸಾಲಿಗಳನ್ನು ಮಾತ್ರವಲ್ಲದೆ ಇಡೀ ಲಿಂಗಾಯತರ ರಾಜಕೀಯಕ್ಕೆ ದೊಡ್ಡ ಪೆಟ್ಟನ್ನು ಕೊಟ್ಟಿತು. ಲಿಂಗಾಯತ ಕೇಂದ್ರಿತ ರಾಜಕೀಯವನ್ನು ಹಿಂದುತ್ವ ಕೇಂದ್ರಿತಗೊಳಿಸುವುದರಿಂದ ಬ್ರಾಹ್ಮಣರಿಗೆ ಲಾಭವೆ ಹೊರತು ಲಿಂಗಾಯತರಿಗಲ್ಲ. ಆ ಕಾರಣದಿಂದ ಯಡಿಯೂರಪ್ಪ ಮಾಡಿದ ಲಿಂಗಾಯತ ಮತಬ್ಯಾಂಕ್ ಕೇಂದ್ರಿತ ರಾಜಕೀಯವನ್ನು ನಾಶ ಮಾಡಿ ಬ್ರಾಹ್ಮಣರ ಒಡೆತನದ ಹಿಂದುತ್ವ ಕೇಂದ್ರಿತ ರಾಜಕೀಯ ಮುನ್ನೆಲೆಗೆ ತರಲು ಪಂಚಮಸಾಲಿಗಳನ್ನು ಯಡಿಯೂರಪ್ಪ ವಿರುದ್ಧ ಎತ್ತಿ ಕಟ್ಟಲಾಯಿತು.

ಹಾಗೆಂದು ಯಡಿಯೂರಪ್ಪ ಮಹಾನ್ ಲಿಂಗಾಯತ ನಾಯಕ ಎಂದು ಅರ್ಥವಲ್ಲ. ಅವರು ತನ್ನ ಸ್ವಾರ್ಥಕ್ಕೆ ಅನೇಕ ಲಿಂಗಾಯತ ನಾಯಕರನ್ನು ತುಳಿದಿರುವುದು ಅಲ್ಲಗಳೆಯಲಾಗದು. ಆದರೆ ಯಡಿಯೂರಪ್ಪ ಬ್ರಾಹ್ಮಣರ ಯಜಮಾನಿಕೆಯ ಹಿಂದುತ್ವ ಕೇಂದ್ರಿತ ರಾಜಕಾರಣದ ವಿರುದ್ಧದ ಹೋರಾಟಗಾರ. ಹಾಗೆಂದು ಕೋಮುವಾದಿ ನಾಯಕ ಖಂಡಿತ ಅಲ್ಲ. ಯಡಿಯೂರಪ್ಪ ಅನೇಕ ಜನ ಲಿಂಗಾಯತ ನಾಯಕರನ್ನು ಬೆಳೆಸಿದ್ದು ನಿಜ, ಆದರೆ ಬ್ರಾಹ್ಮಣರ ಪ್ರಚೋದನೆಯಿಂದ ತನಗೆ ವಿರುದ್ಧವಾದವರನ್ನು ನಿರ್ದಾಕ್ಷಿಣ್ಯವಾಗಿ ತುಳಿದದ್ದೂ ಇದೆ. ಈ ಕಾರಣದಿಂದ ಬ್ರಾಹ್ಮಣರ ಯಜಮಾನಿಕೆಯ ಬಿಜೆಪಿಯಲ್ಲಿ ಈಗ ಲಿಂಗಾಯತ ರಾಜಕಾರಣಿಗಳು ಪ್ರಲ್ಹಾದ ಜೋಶಿ ಮತ್ತು ತೇಜಸ್ವಿ ಸೂರ್ಯ ಇವರಿಬ್ಬರ ಅಣತಿಯಂತೆ ಅವರ ಗುಲಾಮಗಿರಿ ಮಾಡಿಕೊಂಡಿರುವ ಸಂದರ್ಭ ಉದ್ಭವವಾಗಿದೆ.

ಇದನ್ನು ಓದಿದ್ದೀರಾ? ಪಂಚಮಸಾಲಿ ಪೀಠಗಳ ಗೊಂದಲ- ಭಾಗ 2 | ಪಂಚಮಸಾಲಿಗಳ ಪ್ರತ್ಯೇಕ ಪೀಠಕ್ಕೆ ಮೂಲ ಪ್ರೇರಣೆ ಲಿಂಗೈಕ್ಯ ಡಾ. ಕಲಬುರ್ಗಿ

ಬಿಜೆಪಿಯಲ್ಲಿರುವ ಲಿಂಗಾಯತರು ಈ ಸತ್ಯವನ್ನು ಎಲ್ಲಿಯವರೆಗೆ ಅರ್ಥಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇವರಿಗೆ ರಾಜಕೀಯ ನಿರ್ಧಾರದ ಸ್ವಾತಂತ್ರ್ಯ ಹೋಗಲಿ ಹಣೆಯ ಮೇಲೆ ವಿಭೂತಿ ಧರಿಸುವ ಸ್ವಾತಂತ್ರ್ಯವೂ ಇಲ್ಲ. ಬ್ರಿಟೀಷರು ಮೆಕಾಲೆ ಶಿಕ್ಷಣ ನೀತಿಯ ಅನುಷ್ಠಾನದ ಮೂಲಕ ಭಾರತದಲ್ಲಿ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಿದಾಗ ಕರ್ನಾಟಕದಲ್ಲಿ ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳು ಲಿಂಗಾಯತರನ್ನು ಒಳಗೊಂಡಂತೆ ಬ್ರಾಹ್ಮಣೇತರರಿಗೆ ಶಿಕ್ಷಣದ ಬಾಗಿಲನ್ನು ತೆರೆದವು, ಅದರಲ್ಲಿ ಪಂಚಮಸಾಲಿ ಲಿಂಗಾಯತ ನಾಯಕರ ಪಾತ್ರ ಬಹಳ ದೊಡ್ಡದಿದೆ. ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆಯಲ್ಲಿ ಅರಟಾಳ್ ರುದ್ರಗೌಡರು ಮತ್ತು ಸರ್ ಸಿದ್ದಪ್ಪ ಕಂಬ್ಳಿಯವರ ಪಾತ್ರ, ಕರ್ನಾಟಕ ವಿವಿ ಸ್ಥಾಪನೆಯಲ್ಲಿ ಮತ್ತು ಕರ್ನಾಟಕ ಕಾಲೇಜನ್ನು ಉಳಿಸುವಲ್ಲಿ ಸರ್ ಸಿದ್ದಪ್ಪ ಕಂಬಳಿಯವರ ಪಾತ್ರ ಅವಿಸ್ಮರಣೀಯವಾದದ್ದು. ಅಂದಿನ ಮಠಗಳಲ್ಲಿ ಪ್ರಸಾದ ನಿಲಯ ಹಾಗು ಕೆ.ಎಲ್.ಇ. ಮೊದಲ್ಗೊಂಡು ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ಪಂಚಮಸಾಲಿ ಉಪವರ್ಗದ ಹಿರಿಯರು ನಿಸ್ವಾರ್ಥದಿಂದ ದುಡಿದಿದ್ದಾರೆ. ಎರಡನೆಯ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಲಿಂಗಾಯತ ರೆಜಿಮೆಂಟ್ ಮತ್ತು ಬೆಟಾಲಿಯನ್ ಸ್ಥಾಪನೆಗೆ ಚಚಡಿಯ ದೇಸಾಯಿಯವರು ಮತ್ತು ಎಕ್ಸಂಬದ ಚೆನ್ನಬಸಪ್ಪ ಕರಾಳೆಯವರು ನೀಡಿದ ಕೊಡುಗೆ ಅನನ್ಯವಾದದ್ದು. ಬಡತನದ ಕುಟುಂಬದಲ್ಲಿ ಹುಟ್ಟಿದ ಸರ್ ಸಿದ್ಧಪ್ಪ ಕಂಬಳಿಯವರು ಅಂದು ಉನ್ನತ ಶಿಕ್ಷಣ ಪಡೆದು ವಕೀಲಿ ವೃತ್ತಿ ಆರಂಭಿಸಿದಾಗ ಧಾರವಾಡದ ಬ್ರಾಹ್ಮಣರಿಂದ ಎದುರಿಸಿದ ಸವಾಲುಗಳು ಇಂದಿನ ಪಂಚಮಸಾಲಿ ಲಿಂಗಾಯತರಿಗೆ ತಿಳಿದಿಲ್ಲ.

ಇದನ್ನು ಓದಿದ್ದೀರಾ? ಪಂಚಮಸಾಲಿ ಪೀಠಗಳ ಗೊಂದಲ ಭಾಗ-3 |ಪಂಚಮಸಾಲಿಗಳು ಪಂಚಪೀಠಗಳ ಜಾತಿ ಜಂಗಮರ ಅಡ್ಡ ಪಲ್ಲಕ್ಕಿ ಹೊರುವುದು ನಿಲ್ಲಿಸಿದರೆ?

ಕಂಬಳಿಯವರು ಕೊಲ್ಹಾಪುರದ ಶಾಹು ಮಹಾರಾಜ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಜೊತೆ ಸೇರಿ ಬ್ರಾಹ್ಮಣೇತರ ಚಳುವಳಿ ಕಟ್ಟಿದ ಮಹಾನ್ ನಾಯಕ. ಸರ್ ಕಂಬ್ಳಿ ಸಿದ್ಧಪ್ಪನವರು ೧೯೨೦ ರಲ್ಲಿ ಹುಬ್ಬಳ್ಳಿಯಲ್ಲಿ ಶಾಹು ಮಹಾರಾಜ್ ಮತ್ತು ಅಂಬೇಡ್ಕರ್ ಜೊತೆ ಸೇರಿ ಪ್ರಥಮ ಬ್ರಾಹ್ಮಣೇತರ ಚಳುವಳಿಯ ಸಮಾವೇಶ ಮಾಡಿದಾಗ ಸಿದ್ಧಾರೂಢರು ಭಾಗವಹಿಸಿದ್ದರು. ಆಗ ಪುಣೆಯ ಚಿತ್ಪಾವನ ಬ್ರಾಹ್ಮಣ ಬಾಲಗಂಗಾಧರ ತಿಲಕ್ ಸಿದ್ಧಾರೂಢರು ಆ ಸಮಾವೇಶದಲ್ಲಿ ಭಾಗವಹಿಸಬಾರದೆಂದು ಒತ್ತಡ ಹಾಕಿದ ಘಟನೆ ನಡೆದಿತ್ತು. ಜೀವನದುದ್ದಕ್ಕೂ ಶಿಸ್ತು, ಪ್ರಾಮಾಣಿಕತೆ, ಜಾತ್ಯಾತೀತ ತತ್ವಗಳ ಅನುಸರಣೆ, ಬಹುಜನರ, ಮತ್ತು ತುಳಿತಕ್ಕೊಳಗಾದವರ ಒಳಿತಿಗಾಗಿ ಕಾರ್ಯ, ಹಾಗು ಬ್ರಾಹ್ಮಣ್ಯದ ಕೆಡುಕುಗಳ ವಿರುದ್ಧ ಹೋರಾಡಿದವರು. ಅವರ ದೂರದೃಷ್ಟಿಯ ಫಲದಿಂದ ಧಾರವಾಡದಲ್ಲಿ ಮುಂದೆ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಮುಂಬೈ ಪ್ರಾಂತ್ಯದ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿ ಮುಂಬೈ-ಪುಣೆಯ ಚಿತ್ಪಾವನ ಬ್ರಾಹ್ಮಣರು ತಡೆಯೊಡ್ಡಿದ್ದ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಕಾಲೇಜು ಸ್ಥಾಪನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಅಂದು ಆರ್ಥಿಕ ಮಿತವ್ಯಯದ ಕಾರಣದಿಂದ ಸರ್ಕಾರ ಧಾರವಾಡದ ಕರ್ನಾಟಕ ಕಾಲೇಜು ಮುಚ್ಚುವ ನಿರ್ಧಾರ ಮಾಡಿದಾಗ, ಉಪಾಯವಾಗಿ ಗುಜರಾತಿನ ಒಂದು ನಿಷ್ಪ್ರಯೋಜಕ ಕಾಲೇಜು ಮುಚ್ಚಿ ಅದರ ಎಲ್ಲಾ ಸಲಕರಣೆಗಳನ್ನು ಧಾರವಾಡಕ್ಕೆ ಸ್ಥಳಾಂತರಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದರು. ಬ್ರಿಟೀಷರ ಆಡಳಿತದಲ್ಲಿ ಮುಂಬೈ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದು ಜನಪರ ಕಾರ್ಯಗಳನ್ನು ಮಾಡಿದರು.

ಇದನ್ನು ಓದಿದ್ದೀರಾ? ಪಂಚಮಸಾಲಿ ಪೀಠಗಳ ಗೊಂದಲ- ಭಾಗ 7 | ಟ್ರಸ್ಟ್‌ ಸದಸ್ಯರ ಸರ್ವಾಧಿಕಾರಿ ಧೋರಣೆ

ಕಿತ್ತೂರು ಚೆನ್ನಮ್ಮ ತಾಯಿ ತನ್ನ ಸಂಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣನಂತಹ ತಳವರ್ಗದ ಸಾಹಸಿ ಯುವಕರಿಗೆ ಸ್ಥಾನಮಾನ ನೀಡಿದ ಮಹಾನ್ ಸಾಹಸಿ, ದೇಶಭಕ್ತ ಮಹಿಳೆ. ಲಿಂಗಾಯತ ಸಂಸ್ಥಾನವೊಂದು ಪ್ರವರ್ಧಮಾನಕ್ಕೆ ಬರುವುದನ್ನು ಸಹಿಸದ ಪುಣೆಯ ಪೇಶ್ವೆ ಚಿತ್ಪಾವನ ಬ್ರಾಹ್ಮಣರು ಮಲ್ಲಸರ್ಜ ದೇಸಾಯಿಯನ್ನು ಅಕ್ರಮವಾಗಿ ಬಂಧಿಸಿ ಪುಣೆಯ ಕಾರಾಗೃಹದಲ್ಲಿ ಇಟ್ಟು ಸಾಯುವಂತೆ ಮಾಡಿದರು. ಇದಕ್ಕೆ ಕುಮ್ಮಕ್ಕು ಕೊಟ್ಟವರು ಸಾಂಗ್ಲಿ, ತಾಸಗಾಂವ್‌ನ ಬ್ರಾಹ್ಮಣ ಸಂಸ್ಥಾನಿಕರಾಗಿದ್ದ ಫಟವರ್ಧನರು. ಬ್ರಿಟೀಷರು ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವ ಕಾನೂನು ತಂದಾಗ, ಕಿತ್ತೂರು ಸಂಸ್ಥಾನವನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದ ಬ್ರಾಹ್ಮಣರಿಗೆ ಹಾಲು ಕುಡಿದಷ್ಟು ಸಂತೋಷವಾಗಿತ್ತು. ಇದನ್ನೆ ನೆಪವಾಗಿಟ್ಟುಕೊಂಡು ಧಾರವಾಡದ ಥಾಕರೆ ಕಚೇರಿಯಲ್ಲಿ ಅಧಿಕಾರಿಯಾಗಿದ್ದ ವೆಂಕಟರಾವ್ ಹಾವೇರಿ ಎನ್ನುವ ಬ್ರಾಹ್ಮಣ ಬ್ರಿಟೀಷರಿಗೆ ಕಿತ್ತೂರು ಸಂಸ್ಥಾನದ ಬಗ್ಗೆ ಅನೇಕ ಸುಳ್ಳು ಹಾಗು ತಪ್ಪು ಮಾಹಿತಿಗಳನ್ನು ನೀಡುತ್ತಾನೆ. ಕಿತ್ತೂರು ಸಂಸ್ಥಾನದ ಮೇಲುಸ್ತುವಾರಿಯಾಗಿ ಬ್ರಿಟೀಷರಿಂದ ನಿಯುಕ್ತಿಯಾಗಿ, ಮಲ್ಲಪ್ಪ ಶೆಟ್ಟಿಯ ಮನಸ್ಸು ಕೆಡಿಸಿ, ಕಿತ್ತೂರು ಕೋಟೆಯ ಎಲ್ಲಾ ರಹಸ್ಯಗಳನ್ನು ಬ್ರಿಟಿಷ್ ಆಡಳಿತಕ್ಕೆ ತಿಳಿಸಿ ಚೆನ್ನಮ್ಮ ತಾಯಿ ಸೋಲುವಂತೆ ಮಾಡುತ್ತಾನೆ. ಅಮಟೂರು ಬಾಳಪ್ಪ, ಸರ್ದಾರ್ ಗುರುಸಿದ್ಧಪ್ಪ, ರಾಯಣ್ಣ ಮುಂತಾದ ಸಾಹಸಿಗಳಿದ್ದರೂ ವೆಂಕಟರಾವ್ ಹಾವೇರಿಯಂತಹ ನಾಡದ್ರೋಹಿ ಬ್ರಾಹ್ಮಣನಿಂದ ಕಿತ್ತೂರು ಸಂಸ್ಥಾನದ ಅವಸಾನವಾಗುತ್ತದೆ.

ಮುಂದುವರೆಯುವುದು….

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಿವಮೊಗ್ಗ | ರಂಗದಸರಾ ಪ್ರಯುಕ್ತ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ಕಾರ್ಯಕ್ರಮ

ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ-2026ರ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ 15...