ಬದಲಾಗುತ್ತಿದೆಯೇ ಯುವಜನರ ರಾಜಕೀಯ ಚಿತ್ತ; ಲೋಕನೀತಿ ಅಧ್ಯಯನ ಹೇಳುವುದೇನು?

Date:

ಇತ್ತೀಚೆಗೆ ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆ, ಉಪಚುನಾವಣೆಯ ಫಲಿತಾಂಶಗಳು ದೇಶದ ಯುವಜನರ ರಾಜಕೀಯ ಚಿತ್ತ ಬದಲಾಗುತ್ತಿರುವಂತೆ ತೋರುತ್ತಿದೆ. ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆಗಳ ದತ್ತಾಂಶವನ್ನು ಆಳವಾಗಿ ವಿಶ್ಲೇಷಿಸಿದರೆ ದೇಶದಲ್ಲಿ ಏಕರೂಪದ 'ಯುವ ಮತಬ್ಯಾಂಕ್' ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶೈಕ್ಷಣಿಕ ಕ್ಷೇತ್ರದ ಹಲವು ಅಧ್ವಾನಗಳ ವಿರುದ್ಧವಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್‌ಮಂತರ್‌ನಲ್ಲಿ ನಡೆಸಿದ ಹಲವು ದಿನಗಳ ಧರಣಿಯು ದೇಶದಲ್ಲಿ ಜೆನ್‌-ಝೀ ಯುವಜನತೆಯ ರಾಜಕೀಯ ಚಿತ್ತವು ಬದಲಾಗುತ್ತಿದೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ. ಹಾಗೆಯೇ ಇತ್ತೀಚೆಗೆ ನಡೆದ ಹಲವು ಉಪಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ತೀವ್ರ ಹಿನ್ನಡೆ ಕಂಡಿರುವುದು ಈ ರಾಜಕೀಯ ಚರ್ಚೆಗೆ ಇನ್ನಷ್ಟು ಪುಷ್ಠಿಯನ್ನು ನೀಡಿದೆ. ಬಿಜೆಪಿಯ ಸಾಂಪ್ರದಾಯಿಕ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವ ಸಾಮರ್ಥ್ಯ ಈ ಯುವ ಶಕ್ತಿಗೆ ಇದೆಯೇ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ.

- Advertisement -

ಶೀಘ್ರವೇ ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಮಧ್ಯೆ ಇಂದಿನ ಯುವಜನ ಶಕ್ತಿಯು ಚುನಾವಣಾ ಫಲಿತಾಂಶವನ್ನು ಹೇಗೆ ಬದಲಾವಣೆ ಮಾಡಬಹುದು ಎಂಬ ಬಗ್ಗೆ ವ್ಯಾಪಕ ಕುತೂಹಲವೂ ಇದೆ. ಈ ನಿಟ್ಟಿನಲ್ಲಿ ಲೋಕನೀತಿ-ಸಿಎಸ್‌ಡಿಎಸ್‌ನಂತಹ ನಂಬಿಕಾರ್ಹ ಚುನಾವಣಾ ವಿಶ್ಲೇಷಣಾ ಸಂಸ್ಥೆಗಳ ದತ್ತಾಂಶ ಹಾಗೂ ರಾಜಕೀಯ ಅಧ್ಯಯನಗಳ ಆಧಾರದ ಮೇಲೆ ಯುವ ಮತದಾರರ ನಡವಳಿಕೆಯನ್ನು ಕೂಲಂಕಷವಾಗಿ ವಿಶ್ಲೇಷಿಸುವುದು ಅಗತ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನೂ ಓದಿ: ನಂಬಿಕೆಯ ನೆರಳಲ್ಲಿ: ಪ್ರೀತಿ, ಸಮ್ಮತಿ ಮತ್ತು ಯುವಜನರ ಬದುಕು

ಮತದಾನ ಪ್ರಮಾಣದಲ್ಲಿನ ವೈವಿಧ್ಯತೆ

ಯುವಜನರು ಚುನಾವಣೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಎಂಬ ಸಾರ್ವತ್ರಿಕ ನಂಬಿಕೆ ಇದೆ. ಆದರೆ ಯುವಜನರ ಪಾಲ್ಗೊಳ್ಳುವಿಕೆ ದೇಶಾದ್ಯಂತ ಏಕರೂಪವಾಗಿಲ್ಲ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ದತ್ತಾಂಶವನ್ನು ನಾವು ಗಮನಿಸಿದರೆ, ಯುವಕರ ಮತದಾನದ ಪ್ರಮಾಣವು ಆಯಾ ರಾಜ್ಯದ ರಾಜಕೀಯ ವಾತಾವರಣಕ್ಕೆ ತಕ್ಕಂತೆ ತೀವ್ರ ವ್ಯತ್ಯಾಸಗಳನ್ನು ಕಾಣುತ್ತದೆ.

ಉದಾಹರಣೆಗೆ ಉದಾಹರಣೆಗೆ, ಉತ್ತರ ಭಾರತದ ಬಿಹಾರ (ಶೇ. 41) ಮತ್ತು ಉತ್ತರ ಪ್ರದೇಶದಂತಹ (ಶೇ. 51) ರಾಜ್ಯಗಳಲ್ಲಿ 18 ರಿಂದ 21 ವರ್ಷದ ಹೊಸ ಮತದಾರರ ಭಾಗವಹಿಸುವಿಕೆ ಆಯಾ ರಾಜ್ಯಗಳ ಒಟ್ಟು ಸರಾಸರಿ ಮತದಾನಕ್ಕಿಂತ ಗಣನೀಯವಾಗಿ ಕಡಿಮೆಯಿದೆ. ಆದರೆ, ಮಧ್ಯಪ್ರದೇಶ (ಶೇ. 89), ಪಂಜಾಬ್ (ಶೇ. 77) ಹಾಗೂ ಗುಜರಾತ್ (ಶೇ. 78) ರಾಜ್ಯಗಳಲ್ಲಿ ಯುವಕರು ಸಾಮಾನ್ಯ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದಿದ್ದಾರೆ.

ತಮಿಳುನಾಡು (ಶೇ. 90) ಮತ್ತು ಪಶ್ಚಿಮ ಬಂಗಾಳದಂತಹ (ಶೇ. 93) ರಾಜ್ಯಗಳಲ್ಲಿ ಯುವಜನರ ಭಾಗವಹಿಸುವಿಕೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಇದು ಯುವಕರ ಮತದಾನದ ಪ್ರಮಾಣವು ಸ್ಥಳೀಯ ರಾಜಕೀಯ ಜಾಗೃತಿ ಮತ್ತು ಚುನಾವಣಾ ಪ್ರಚಾರ, ತೀವ್ರತೆ ಆಧಾರದಲ್ಲಿ ಬದಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಯುವಜನರ ಪಕ್ಷಗಳ ಆಯ್ಕೆಯಲ್ಲಿ ಬದಲಾವಣೆಯಿದೆಯೇ?

ದೇಶದ ಚುನಾವಣಾ ರಾಜಕೀಯದಲ್ಲಿ ಯುವ ಮತದಾರರನ್ನು ‘ಏಕರೂಪದ ಮತಬ್ಯಾಂಕ್’ ಎಂದು ಪರಿಗಣಿಸಲಾಗದು. ಯುವಜನರ ರಾಜಕೀಯ ಒಲವು ಕಾಲಕಾಲಕ್ಕೆ ಮತ್ತು ವಯೋಮಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. 18ರಿಂದ 21 ವರ್ಷದ ಹೊಸ ಮತದಾರರ ಆಲೋಚನೆ ಮತ್ತು 22ರಿಂದ 25 ವರ್ಷದ ಯುವಕರ ರಾಜಕೀಯ ತೀರ್ಮಾನಗಳ ನಡುವೆ ಬಹಳ ವ್ಯತ್ಯಾಸಗಳಿರುತ್ತವೆ.

ಇದನ್ನೂ ಓದಿ: ಮಹಿಳಾ ಸಶಕ್ತೀಕರಣದ ವೇಗ ಹೆಚ್ಚಿಸಿದ ಶಕ್ತಿ ಯೋಜನೆ; ಉಡಾಫೆ ಹೇಳಿಕೆಗಳಿಗೆ ತಕ್ಕ ಉತ್ತರ

ಈ ವಿಚಾರದಲ್ಲಿ ನಾವು ಪಶ್ಚಿಮ ಬಂಗಾಳವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಕಸರತ್ತಿನಿಂದ ಅರ್ಹರೂ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ ಎಂಬುದು ವಾಸ್ತವ. ಮತಕ್ಕಾಗಿ ಬಿಜೆಪಿ ಬಂಗಾಳದಲ್ಲಿ ಹಲವು ಕುತಂತ್ರಗಳನ್ನು ಮಾಡಿದೆ. ಅವೆಲ್ಲವನ್ನು ಬದಿಗೊತ್ತಿ ಲೋಕನೀತಿ ವರದಿ ಆಧಾರದಲ್ಲಿ ನಾವು ಒಟ್ಟಾರೆ ಮತದಾನದ ಪ್ರಮಾಣವನ್ನು ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಯುವಕರ ಬೆಂಬಲವು ಅತ್ಯಂತ ವೇಗವಾಗಿ ಒಂದು ರಾಜಕೀಯ ಶಕ್ತಿಯಿಂದ ಮತ್ತೊಂದಕ್ಕೆ ಸ್ಥಳಾಂತರಗೊಳ್ಳಬಲ್ಲದು ಎಂಬುದು ಸ್ಪಷ್ಟವಾಗುತ್ತದೆ.

ಅದೇ ರೀತಿಯಲ್ಲಿ ನಾವು 2022ರ ಉತ್ತರ ಪ್ರದೇಶದ ಬಿಜೆಪಿ ಮೈತ್ರಿಕೂಟ ಗಳಿಸಿರುವ ಸ್ಪಷ್ಟ ಬಹುಮತದತ್ತ ಕೊಂಚ ಗಮನ ಹರಿಸಬೇಕಾಗುತ್ತದೆ. ಯುಪಿಯಲ್ಲಿ ಬಿಜೆಪಿ ಬಹುಮತ ಗಳಿಸಿದ್ದರೂ ಯುವ ಮತದಾರರ ವಲಯದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಬಿಜೆಪಿಗೆ ತೀವ್ರ ಪೈಪೋಟಿ ನೀಡಿದೆ. ಬಿಜೆಪಿ 18-21 ವರ್ಷ ಮತ್ತು 22-25 ವರ್ಷದ ಯುವಜನತೆಯ 44% ಮತವನ್ನು ಪಡೆದಿದೆ. ಆದರೆ ಬಿಜೆಪಿಗೆ ಪೈಪೋಟಿ ನೀಡಿರುವ ಎಸ್‌ಪಿ 18-21 ವರ್ಷದ ಯುವಜನರ 38% ಮತ್ತು 22-25 ವರ್ಷದ ಯುವಜನತೆಯ 39% ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಅಂದರೆ ಎಸ್‌ಪಿ ಸಾಕಷ್ಟು ಯುವ ಮತದಾರರನ್ನು ತನ್ನತ್ತ ಸೆಳೆದುಕೊಂಡಿದೆ. ಯುವಕರು ಕಾಲ ಕಳೆದಂತೆ ಬಿಜೆಪಿಯ ಅದೇ ಕೋಮುವಾದ ಮಾತಿಗೆ ಬೇಸತ್ತು ತಮಗೆ ಸರಿಹೊಂದುವ ರಾಜಕೀಯ ಪರ್ಯಾಯಗಳನ್ನು ಹುಡುಕುತ್ತಾರೆ ಎಂಬುದಕ್ಕೆ ಉತ್ತರ ಪ್ರದೇಶ ಚುನಾವಣೆಯೇ ಉದಾಹರಣೆ.

ಈ ವೇಳೆ ಯುವಜನರ ಒಲವು ಗೆಲ್ಲುವ ಪಕ್ಷದತ್ತವೇ ವಾಲುತ್ತದೆಯೇ ಎಂಬ ಆಯಾಮವನ್ನೂ ನಾವು ನೋಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಯುವ ಜನತೆ ಚುನಾವಣೆಯಲ್ಲಿ ಗೆಲ್ಲುವ ಅಥವಾ ಆಡಳಿತಕ್ಕೆ ಬರುವ ಪಕ್ಷಕ್ಕೇ ಮತ ನೀಡುತ್ತಾರೆ ಎಂಬ ನಂಬಿಕೆಯೂ ಸುಳ್ಳಾಗುತ್ತದೆ. ಹಲವು ರಾಜ್ಯಗಳಲ್ಲಿ ಯುವಜನರು ಸೋಲುವ ಪಕ್ಷಗಳ ಪರವಾಗಿ ಭಾರಿ ಸಂಖ್ಯೆಯಲ್ಲಿ ಮತ ಚಲಾಯಿಸಿದ ಉದಾಹರಣೆಗಳಿವೆ.

2022ರ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ 18ರಿಂದ 21 ವರ್ಷದ ಶೇಕಡ 48ರಷ್ಟು ಯುವಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರು. ಆದರೆ ಅಂತಿಮವಾಗಿ ಬಿಜೆಪಿ ಸರ್ಕಾರ ರಚಿಸಿತು. ಬಿಹಾರದಲ್ಲೂ ಮಹಾಘಟಬಂಧನ ಸೋತರೂ, ಯುವ ಮತದಾರರ ಬೆಂಬಲವನ್ನು ಗಣನೀಯ ಪ್ರಮಾಣದಲ್ಲಿ ಪಡೆದುಕೊಂಡಿದೆ. ಅಂದರೆ, ಯುವ ಮತದಾರರು ಗೆಲುವಿನ ಅಲೆಯ ಆಧಾರದ ಮೇಲೆ ಮತ ಚಲಾಯಿಸದೆ, ತಮ್ಮದೇ ಆದ ಆದ್ಯತೆಗಳಿಗೆ ಅನುಗುಣವಾಗಿ ನಿರ್ಧಾರ ತಳೆಯುತ್ತಾರೆ ಎಂಬುದು ನಿಚ್ಚಳ.

ಇದನ್ನೂ ಓದಿ: ಯುವಜನರ ಮೌನ ಕೇಳಲೂ ಕಿವಿಬೇಕಿದೆ: ‘ಯುವಜನ ಆಯೋಗ’ ರಚನೆಗೆ ಆಗ್ರಹಿಸಿ ಯುವಧ್ವನಿ ಅಭಿಯಾನ

ರಾಜಕೀಯ ಬದಲಾವಣೆಗೆ ಯುವಜನರೇ ಕಾರಣ

ಕಳೆದ ಹತ್ತು ವರ್ಷಗಳಲ್ಲಿ ಕೆಲವು ರಾಜ್ಯಗಳಲ್ಲಿ ಆದ ರಾಜಕೀಯ ಬದಲಾವಣೆಗೆ ಯುವಜನರೇ ಕಾರಣ. ಹಲವು ರಾಜ್ಯಗಳಲ್ಲಿ ಸಾಂಪ್ರದಾಯಿಕ ರಾಜಕೀಯ ಪಕ್ಷಗಳನ್ನು ಮೂಲೆಗುಂಪು ಮಾಡಿ, ನವ ರಾಜಕೀಯ ಶಕ್ತಿಗಳು ಅಧಿಕಾರಕ್ಕೆ ಬರಲು ಯುವ ಮತದಾರರ ನಿರ್ಣಾಯಕ ಬೆಂಬಲವೇ ಕಾರಣ. ಮೊದಲನೆಯದಾಗಿ ನಾವು ಪಂಜಾಬ್‌ನತ್ತ ಗಮನಹರಿಸಿದರೆ ಅಲ್ಲಿದ್ದ ಕಾಂಗ್ರೆಸ್ ಸರ್ಕಾರವನ್ನು ಬದಲಾಯಿಸಿದ್ದು ಯುವಜನರೇ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ (AAP) ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು 18ರಿಂದ 25 ವರ್ಷದ ಯುವಕರ ಪೂರ್ಣ ಪ್ರಮಾಣದ ಬೆಂಬಲವೇ ಆಧಾರವಾಗಿತ್ತು. ಅದಕ್ಕೆ ದೆಹಲಿಯಲ್ಲಿ ಶೈಕ್ಷಣಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎಎಪಿ ಮಾಡಿದ್ದ ಅಭಿವೃದ್ಧಿಯೇ ಪ್ರಮುಖ ಕಾರಣ ಎನ್ನಬಹುದು. ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೂ ಮುನ್ನ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಎಎಪಿ ಯುವಜನರ ಬೆಂಬಲದ ಬಲದಲ್ಲೇ ರಾಜಕೀಯ ನೆಲೆಯನ್ನು ಗಟ್ಟಿಮಾಡಿಕೊಂಡಿತ್ತು.

ಅದನ್ನು ಹೊರತುಪಡೆಸಿದರೆ ಇತ್ತೀಚಿಗೆ ನಡೆದ ತಮಿಳುನಾಡು ಚುನಾವಣೆಯಂತೂ ನಾವು ಮರೆಯುವಂತಿಲ್ಲ. ಡಿಎಂಕೆ-ಕಾಂಗ್ರೆಸ್ ಮೈತ್ರಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಸ್ಪಷ್ಟ ನಂಬಿಕೆಯಲ್ಲಿ ಟಿವಿ ಎದುರು ಕೂತು ಚುನಾವಣಾ ಫಲಿತಾಂಶ ವಿವರ ನೋಡುತ್ತಿದ್ದ ನಮಗೆ ಅಚ್ಚರಿ ಮೂಡಿಸಿದ್ದು ಹೊಸದಾದ ಟಿವಿಕೆ ವಿಜಯ. ನಟ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಎಂಬ ಹೊಸ ರಾಜಕೀಯ ವೇದಿಕೆಯು ಹಿರಿಯ ಮತದಾರರಿಗಿಂತ ಹೆಚ್ಚಾಗಿ 18ರಿಂದ 25 ವರ್ಷದ ಯುವಜನರನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ಆಕರ್ಷಿಸಿದೆ.

ಹೀಗೆ ನಮಗೆ ವಿವಿಧ ಸಂಶೋಧನಾ ಮೂಲಗಳು ಮತ್ತು ದತ್ತಾಂಶಗಳು ಸೂಚಿಸುವಂತೆ, ದೇಶದಲ್ಲಿ ಯುವ ಮತದಾರರು ಯಾವುದೇ ಒಂದು ಪಕ್ಷಕ್ಕೆ ಕಟ್ಟುಬಿದ್ದ ಮತಬ್ಯಾಂಕ್ ಅಲ್ಲ. ಯುವಜನತೆ ಇಂದು ತೀವ್ರವಾಗಿ ಬದಲಾಗಬಲ್ಲ, ಸನ್ನಿವೇಶಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಕ್ರಿಯಾಶೀಲ ರಾಜಕೀಯ ಶಕ್ತಿಯಾಗಿದ್ದಾರೆ. ಶಿಕ್ಷಣ, ಉದ್ಯೋಗ, ಆಡಳಿತ ವಿರೋಧಿ ಅಲೆ ಮತ್ತು ಸ್ಥಳೀಯ ನಾಯಕತ್ವದ ಸ್ವರೂಪಗಳು ಯುವಜನರ ನಿರ್ಧಾರವನ್ನು ಪ್ರಭಾವಿಸುತ್ತವೆ. ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಈ ಯುವ ಶಕ್ತಿಯು ರಾಜಕೀಯ ದಿಕ್ಸೂಚಿಯನ್ನು ನಿರ್ಧರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ.

ಮಾಹಿತಿ: ದಿ ಹಿಂದೂ ಲೇಖನ, ಲೋಕನೀತಿ-ಸಿಡಿಎಸ್‌ಸಿ, ADR (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...