ಮೆಟಾದಲ್ಲಿ ಭಾರೀ ಉದ್ಯೋಗ ಕಡಿತ; 7,000 ಸಿಬ್ಬಂದಿ AI ವಿಭಾಗಕ್ಕೆ ವರ್ಗಾವಣೆ!

Date:

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾತೃ ಸಂಸ್ಥೆ ʼಮೆಟಾʼ (Meta), ತನ್ನ ಕಂಪನಿಯಲ್ಲಿ ಮತ್ತೊಂದು ಸುತ್ತಿನ ಭಾರೀ ಉದ್ಯೋಗ ಕಡಿತ ಹಾಗೂ ಸಾಂಸ್ಥಿಕ ಬದಲಾವಣೆಗೆ ಮುಂದಾಗಿದೆ. ಕಂಪನಿಯ ಕೃತಕ ಬುದ್ಧಿಮತ್ತೆ (AI) ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ, ಜಾಗತಿಕವಾಗಿ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಜೊತೆಗೆ, ಸುಮಾರು 7,000ಕ್ಕೂ ಹೆಚ್ಚು ಸಿಬ್ಬಂದಿಯನ್ನು AI ಸಂಬಂಧಿತ ಹೊಸ ಯೋಜನೆಗಳಿಗೆ ವರ್ಗಾಯಿಸಲು ಕಂಪನಿ ಸಜ್ಜಾಗಿದೆ.

- Advertisement -

ಸೋಮವಾರ ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಲಾದ ಆಂತರಿಕ ಮೆಮೊದಲ್ಲಿ ಮೆಟಾ ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (Chief People Officer) ಜಾನೆಲ್ ಗೇಲ್ ಈ ವಿಷಯವನ್ನು ಖಚಿತಪಡಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

AI ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ

ಕಂಪನಿಯ ಆಂತರಿಕ ರಚನೆಯನ್ನು ಸರಳಗೊಳಿಸಲು ಮತ್ತು AI ತಂತ್ರಜ್ಞಾನಕ್ಕೆ ಹೆಚ್ಚಿನ ವೇಗ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. “ಹಲವು ವಿಭಾಗಗಳ ಮುಖ್ಯಸ್ಥರು ತಮ್ಮ ಹೊಸ ಸಾಂಸ್ಥಿಕ ರಚನೆಯಲ್ಲಿ ‘ AI ಆಧಾರಿತ ವಿನ್ಯಾಸ’ಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಸಣ್ಣ ತಂಡಗಳು ಹೆಚ್ಚು ಸ್ವತಂತ್ರವಾಗಿ ಮತ್ತು ವೇಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಮಧ್ಯಂತರ ಮ್ಯಾನೇಜರ್ ಹುದ್ದೆಗಳನ್ನು ಕಡಿತಗೊಳಿಸಲಾಗುತ್ತಿದೆ” ಎಂದು ಜಾನೆಲ್ ಗೇಲ್ ತಿಳಿಸಿದ್ದಾರೆ.

ಈ ಉದ್ಯೋಗ ವಜಾ ಮತ್ತು ವರ್ಗಾವಣೆ ಪ್ರಕ್ರಿಯೆಯು ಕಂಪನಿಯ ಒಟ್ಟು ಉದ್ಯೋಗಿಗಳ ಶೇಕಡಾ 20 ರಷ್ಟು ಭಾಗದ ಮೇಲೆ ಪರಿಣಾಮ ಬೀರಲಿದೆ. ಮಾರ್ಚ್ ಅಂತ್ಯದ ವೇಳೆಗೆ ಮೆಟಾ ಸಂಸ್ಥೆಯು ಒಟ್ಟು 77,986 ಉದ್ಯೋಗಿಗಳನ್ನು ಹೊಂದಿತ್ತು. ಈ ನಡುವೆ, ಕಂಪನಿಯು ಈಗಾಗಲೇ ಭರ್ತಿ ಮಾಡಬೇಕಾಗಿದ್ದ ಸುಮಾರು 6,000 ಪ್ರಮುಖ ಹುದ್ದೆಗಳ ನೇಮಕಾತಿಯನ್ನು ರದ್ದುಗೊಳಿಸಿದೆ.

ಮಾನವ ಉದ್ಯೋಗಿಗಳ ಸ್ಥಾನ ತುಂಬಲಿವೆಯೇ AI ಏಜೆಂಟ್‌ಗಳು?

ವರ್ಗಾವಣೆಗೊಳ್ಳುತ್ತಿರುವ 7,000 ಉದ್ಯೋಗಿಗಳನ್ನು ಪ್ರಮುಖವಾಗಿ ‘ಅಪ್ಲೈಡ್ AI ಇಂಜಿನಿಯರಿಂಗ್’ (AAI) ಮತ್ತು ‘ಏಜೆಂಟ್ ಟ್ರಾನ್ಸ್‌ಫಾರ್ಮೇಶನ್ ಆಕ್ಸಿಲರೇಟರ್’ (ATA) ನಂತಹ ಹೊಸ ವಿಭಾಗಗಳಿಗೆ ನಿಯೋಜಿಸಲಾಗುತ್ತಿದೆ. ಈ ವಿಭಾಗಗಳು ಪ್ರಸ್ತುತ ಮನುಷ್ಯರು ಮಾಡುವ ಕೆಲಸಗಳನ್ನು ಸ್ವತಂತ್ರವಾಗಿ ಮಾಡಬಲ್ಲ ‘AI ಏಜೆಂಟ್‌ಗಳನ್ನು’ (AI Agents) ಅಭಿವೃದ್ಧಿಪಡಿಸುವ ಗುರಿ ಹೊಂದಿವೆ.

ಉದ್ಯೋಗಿಗಳಿಂದ ತೀವ್ರ ಆಕ್ರೋಶ, ಪ್ರತಿಭಟನೆ

ಮೆಟಾ ಸಂಸ್ಥೆಯ ಈ ದಿಢೀರ್ ನಿರ್ಧಾರಗಳು ಕಂಪನಿಯ ಒಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ. ಕಂಪನಿಯ ಆಂತರಿಕ ಸಂವಹನ ವೇದಿಕೆಯಾದ ‘ವರ್ಕ್‌ಪ್ಲೇಸ್’ (Workplace) ನಲ್ಲಿ ಉದ್ಯೋಗಿಗಳು ಆಡಳಿತ ಮಂಡಳಿಯ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: ಯುಪಿ: ಸಾರ್ವಜನಿಕ ನಳದಲ್ಲಿ ನೀರು ಕುಡಿದ ದಲಿತ ಬಾಲಕನ ಬೆತ್ತಲೆಗೊಳಿಸಿ, ಶೂ ನೆಕ್ಕಿಸಿದ ದುಷ್ಕರ್ಮಿಗಳು!

ಮನುಷ್ಯರು ಕಂಪ್ಯೂಟರ್ ಬಳಸುವ ಶೈಲಿಯನ್ನು AI ಮಾದರಿಗಳಿಗೆ ಕಲಿಸಲು (Training) ಉದ್ಯೋಗಿಗಳ ಮೌಸ್ ಚಲನೆಯನ್ನು ಟ್ರ್ಯಾಕ್ ಮಾಡುವ ‘ಮೌಸ್-ಟ್ರಾಕಿಂಗ್ ಸಾಫ್ಟ್‌ವೇರ್’ ಅನ್ನು ಮೆಟಾ ಅಳವಡಿಸಿದೆ. ಇದರ ವಿರುದ್ಧ 1,000ಕ್ಕೂ ಹೆಚ್ಚು ಉದ್ಯೋಗಿಗಳು ಸಹಿ ಸಂಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇದು ಉದ್ಯೋಗಿಗಳ ಖಾಸಗಿತನದ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.

ಉದ್ಯೋಗ ಕಡಿತದ ಭೀತಿ ಮತ್ತು ಆಡಳಿತ ಮಂಡಳಿಯ ಮೌನದಿಂದ ಬೇಸತ್ತಿದ್ದ ನೌಕರರು, ಕಚೇರಿಗಳಲ್ಲಿ ಫ್ಲೈಯರ್‌ಗಳನ್ನು ಹಂಚುವ ಮೂಲಕ ಹಾಗೂ ಆಂತರಿಕ ಗ್ರೂಪ್‌ಗಳಲ್ಲಿ ಆನೆಗಳ (Elephant- ಸಮಸ್ಯೆಯನ್ನು ಮೌನವಾಗಿ ಮುಚ್ಚಿಡುವ ಸಂಕೇತ) ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಪ್ರತಿರೋಧ ದಾಖಲಿಸುತ್ತಿದ್ದಾರೆ. ಉದ್ಯೋಗ ಕಡಿತದ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಅಮೆರಿಕದ ಪ್ರಮುಖ ಕಚೇರಿಗಳ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು (Work from home) ಸೂಚಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಪ್ರತಿಭಟನೆ ವೇಳೆ ಪೊಲೀಸರಿಂದ ಲೈಂಗಿಕ ಕಿರುಕುಳ: ಮೂವರು ಪತ್ರಕರ್ತೆಯರ ಆರೋಪ

ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್ ಬಳಿ ನಡೆದ ಪ್ರತಿಭಟನೆಯ ವರದಿಗಾರಿಕೆಯಲ್ಲಿ...

ಸುಂಟರಗಾಳಿ ಚಿತ್ರದ ಲೇಡಿ ವಿಲನ್, ‘ಸಾರಾಯಿ ಶಾರದೆ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, 'ಸುಂಟರಗಾಳಿ' ಸಿನಿಮಾದ...

ಹಳೆಯ ಪ್ರಕರಣ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳ ಸರ್ಕಾರ ಆದೇಶ

20೦6ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಾಲಿ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್...

ಗಣೇಶ ವಿಸರ್ಜನೆ ಮುಗಿಯಿತು, ಇನ್ನು ಸಿಇಸಿ ಗ್ಯಾನೇಶ್ ಕುಮಾರ್ ವಿಸರ್ಜನೆ ಬಾಕಿ: ನಟ ಪ್ರಕಾಶ್ ರಾಜ್

ದೇಶಾದ್ಯಂತ ಗಣೇಶ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಮುಖ್ಯ ಚುನಾವಣಾ ಆಯುಕ್ತ...