ಪಂಚಮಸಾಲಿಗಳ ‘ಫಜೀತಿ’: ಧರ್ಮದರ್ಶಿ ಬಿ ಸಿ ಉಮಾಪತಿಯವರು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವರೇ?

Date:

ನಾನೊಬ್ಬ ಸಾಮಾನ್ಯ ನಾಗರಿಕನಾಗಿ ಗಮನಿಸಿದಂತೆ, ಈ ಹಣಕಾಸಿನ ವ್ಯವಹಾರವು ಗಂಭೀರವಾದ ಆರ್ಥಿಕ ಅಪರಾಧ (Economic Offense) ಮತ್ತು ಹಣ ವರ್ಗಾವಣೆ (Money Laundering) ವ್ಯಾಪ್ತಿಗೆ ಬರುತ್ತದೆ. ಕಪ್ಪು ಹಣವನ್ನು (Unaccounted Cash) ಬೇರೆಯವರ ಮೂಲಕ ಬಿಳಿ ಹಣವಾಗಿ (Cheque) ಪರಿವರ್ತಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ

- Advertisement -

ಇಂದು ಬೀದಿ ಕಾಳಗಕ್ಕೆ ಇಳಿದ ಪಂಚಮಸಾಲಿ ಸಮಾಜದ ಹುಟ್ಟು ಹೋರಾಟಗಾರರ ‘ಬಿಟ್ಟಿ ಮನರಂಜನೆಯನ್ನು’ ಇಡೀ ಕನ್ನಡ ನಾಡು ನೋಡಿತು. ಒಂದು ಕಡೆ ಸಮಾಜದ ಮುಖಂಡರ ಬೀದಿ ಕಾಳಗ ನಡೆಯುತ್ತಿದ್ದರೆ, ಅದೇ ಮಠದ ಇನ್ನೊಂದು ಬದಿಯಲ್ಲಿ ಹಾಕಿದ್ದ ದೊಡ್ಡ ಪೆಂಡಾಲ್‌ನಲ್ಲಿ ನೆರೆದ ಜನರೆದುರು ಟ್ರಸ್ಟಿನ ಧರ್ಮದರ್ಶಿಗಳು ಹಾಗೂ ದಾವಣಗೆರೆಯ ಪ್ರಸಿದ್ಧ ಜವಳಿ ವ್ಯಾಪಾರಿಗಳು ಸತತ ಎರಡೂವರೆ ಗಂಟೆಗಳ ಕಾಲ ಮಠದ ಕಳೆದ ಹದಿನೆಂಟು ವರ್ಷಗಳ ₹27 ಕೋಟಿ ಹಣಕಾಸಿನ ವ್ಯವಹಾರವನ್ನು ಮಂಡಿಸುತ್ತಾ,ಪಂಚಮಸಾಲಿ ಪೀಠಕ್ಕೆ ದೇಣಿಗೆ ನೀಡಿದವರ ವಿವರವಾದ ಪಟ್ಟಿಯನ್ನು ಓದುತ್ತಾ, ಅದರಲ್ಲಿ ಮಾಜಿ ಮುಖ್ಯಮಂತ್ರಿಗಳ, ಮಾಜಿ ಮತ್ತು ಹಾಲಿ ಸಚಿವರ, ಸಂಸದರ ಹಾಗೂ ಶಾಸಕರ ಹೆಸರುಗಳನ್ನು ಬಹಿರಂಗಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಅವರಲ್ಲಿ ಪ್ರಮುಖವಾಗಿ ದಾವಣಗೆರೆಯ ಸಾಹುಕಾರರಾಗಿದ್ದ ದಿವಂಗತ ಶ್ರೀ ಶಾಮನೂರು ಶಿವಶಂಕರಪ್ಪನವರು ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದನ್ನು ಸ್ಮರಿಸಿದರು. ಇದಲ್ಲದೆ, ಒಬ್ಬ ಸಂಸದರು ₹50 ಲಕ್ಷ ಹಾಗೂ ಇನ್ನೊಬ್ಬ ಸಂಸದರು ₹30 ಲಕ್ಷ ನಗದು ಹಣ ನೀಡಿದ್ದನ್ನು ಬಹಿರಂಗಪಡಿಸಿದರು. ನಾಡಿನಾದ್ಯಂತ ಇರುವ ಪಂಚಮಸಾಲಿಗಳು ₹10,೦೦೦ ದಿಂದ ಹಿಡಿದು ₹5 ಲಕ್ಷದವರೆಗೆ ನೀಡಿದ ದೇಣಿಗೆಯನ್ನು ಕೊಂಡಾಡುತ್ತಾ ದಾನಿಗಳ ಪಟ್ಟಿಯನ್ನು ವಾಚಿಸಿದರು.

ನಾನಿಂದು ಟ್ರಸ್ಟಿನ ಧರ್ಮದರ್ಶಿಗಳು ನೀಡಿದ ರಾಮ, ಕೃಷ್ಣರ ಲೆಕ್ಕಗಳ ಪರಿಶೀಲನೆಗೆ ಇಳಿಯದೆ, ಸಭೆಯಲ್ಲಿ ಅವರು ಅವರಾಗಿ ಎದುರಾಳಿಗಳಿಗೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ವಿಷಯವನ್ನು ತಮ್ಮೆದುರು ಮಂಡಿಸಲು ಬಯಸುವೆ.

ದಾವಣಗೆರೆಯ ಪ್ರಸಿದ್ಧ ವ್ಯಾಪಾರಿಗಳು ಭಾರತದ ಹಣ ವರ್ಗಾವಣೆ ತಡೆ ಕಾಯ್ದೆ 2002 (PMLA Act 2002), ಆದಾಯ ತೆರಿಗೆ ಕಾಯ್ದೆ 1961 (Income Tax Act1961), ಬೇನಾಮಿ ವಹಿವಾಟುಗಳ ನಿಷೇಧ (ತಿದ್ದುಪಡಿ) ಕಾಯ್ದೆ 2016, ಭ್ರಷ್ಟಾಚಾರ ತಡೆ ಕಾಯ್ದೆ 1988 ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಬರುವ ‘ಕ್ರಿಮಿನಲ್ ಪಿತೂರಿ’ (Criminal Conspiracy) ಹಾಗೂ ‘ಲೆಕ್ಕಪತ್ರಗಳ ವಂಚನೆ’ (Falsification of Accounts) ಕಾನೂನುಗಳನ್ನು ಮರೆತಂತೆ ಕಾಣುವುದು.

ಮಾನ್ಯ ಸಂಸದರಿಂದ ಪಡೆದ ₹80 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದಾಗಿ ಹೇಳುತ್ತಾ, ಆ ಕಪ್ಪು ಹಣವನ್ನು ಕಾನೂನುಬದ್ಧವಾಗಿ ಪರಿವರ್ತಿಸಿದ ಮಾರ್ಗವನ್ನು ಅವರೇ ಎಳೆಯೆಳೆಯಾಗಿ ಸಭೆಯಲ್ಲಿ ಬಿಚ್ಚಿಟ್ಟರು. ಕೃಷಿಕ ಪಂಚಮಸಾಲಿಗಳು ವ್ಯಾಪಾರಿಗಳಾಗಲು ಅಸಮರ್ಥರು ಎಂಬುದನ್ನು ದಾವಣಗೆರೆಯ ಪ್ರಸಿದ್ಧ ಸೀರೆ ವ್ಯಾಪಾರಿಗಳು ಹೇಗೆ ಮರೆತರು?ವರ್ಷಕ್ಕೆ ₹30 ಕೋಟಿ ತೆರಿಗೆ ಕಟ್ಟುವ ಉದ್ಯಮಿಗಳು ಭಾರತದ ಅನೇಕ ಕಾನೂನುಗಳನ್ನು ಮೀರಿ ಲೆಕ್ಕ ನೀಡಿದ್ದು ವಿಚಿತ್ರ ಮತ್ತು ಆಘಾತಕಾರಿ.

ಕಾನೂನುಬದ್ಧ ವಿಶ್ಲೇಷಣೆ
ನಾನೊಬ್ಬ ಸಾಮಾನ್ಯ ನಾಗರಿಕನಾಗಿ ಗಮನಿಸಿದಂತೆ, ಈ ಹಣಕಾಸಿನ ವ್ಯವಹಾರವು ಗಂಭೀರವಾದ ಆರ್ಥಿಕ ಅಪರಾಧ (Economic Offense) ಮತ್ತು ಹಣ ವರ್ಗಾವಣೆ (Money Laundering) ವ್ಯಾಪ್ತಿಗೆ ಬರುತ್ತದೆ. ಕಪ್ಪು ಹಣವನ್ನು (Unaccounted Cash) ಬೇರೆಯವರ ಮೂಲಕ ಬಿಳಿ ಹಣವಾಗಿ (Cheque) ಪರಿವರ್ತಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.

ಈ ಘಟನೆಯಲ್ಲಿ ಈ ಕೆಳಗಿನ ಕಾನೂನುಗಳ ಅಡಿಯಲ್ಲಿ ಕೇಸ್ ದಾಖಲಿಸಲು ಅವಕಾಶವೂ ಇದೆ.
ಅ) ಹಣ ವರ್ಗಾವಣೆ ತಡೆ ಕಾಯ್ದೆ (PMLA) 2002: ಅಕ್ರಮವಾಗಿ ಗಳಿಸಿದ ಅಥವಾ ಲೆಕ್ಕವಿಲ್ಲದ ಹಣದ ಮೂಲವನ್ನು ಮರೆಮಾಚಿ, ಅದನ್ನು ಕಾನೂನುಬದ್ಧ ಹಣದಂತೆ ತೋರಿಸುವುದು ಇದರ ಅಡಿಯಲ್ಲಿ ಬರುತ್ತದೆ.

ಸೆಕ್ಷನ್ 3: ಮನಿ ಲಾಂಡರಿಂಗ್ ವ್ಯಾಖ್ಯಾನ.

ಸೆಕ್ಷನ್ 4: ಈ ಅಪರಾಧಕ್ಕೆ 3 ರಿಂದ 7 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಬ) ಆದಾಯ ತೆರಿಗೆ ಕಾಯ್ದೆ 1961: ನಗದು ರೂಪದಲ್ಲಿ ಹಣ ಪಡೆಯುವುದು ಮತ್ತು ತೆರಿಗೆ ವಂಚಿಸುವುದು ಈ ಕಾಯ್ದೆಯಡಿ ಅಪರಾಧ.

ಸೆಕ್ಷನ್ 269SS: ಯಾವುದೇ ವ್ಯಕ್ತಿ ₹20,೦೦೦ ಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸಾಲ ಅಥವಾ ಠೇವಣಿಯಾಗಿ ಪಡೆಯುವಂತಿಲ್ಲ. ಇಲ್ಲಿ ₹80 ಲಕ್ಷ ನಗದು ಪಡೆದಿರುವುದು ಸ್ಪಷ್ಟ ಉಲ್ಲಂಘನೆ.

ಸೆಕ್ಷನ್ 271D: ಈ ನಿಯಮ ಉಲ್ಲಂಘಿಸಿದರೆ, ಪಡೆದ ನಗದು ಮೊತ್ತಕ್ಕೆ ಸಮನಾದ (ಅಂದರೆ ₹80 ಲಕ್ಷ) ದಂಡವನ್ನು ವಿಧಿಸಬಹುದು.

ಕ) ತೆರಿಗೆ ವಂಚನೆ (Tax Evasion): ಆದಾಯ ಮರೆಮಾಚಿದ್ದಕ್ಕಾಗಿ ಸೆಕ್ಷನ್ 276 ಸಿ ಅಡಿಯಲ್ಲಿ ಕ್ರಮ ಜರುಗಿಸಬಹುದು.

ಡ) ಬೇನಾಮಿ ವಹಿವಾಟುಗಳ (ನಿಷೇಧ) ತಿದ್ದುಪಡಿ ಕಾಯ್ದೆ 2016: ಒಬ್ಬರ ಹಣವನ್ನು ಇನ್ನೊಬ್ಬರ ಹೆಸರಿನಲ್ಲಿ ಅಥವಾ ಇನ್ನೊಬ್ಬರ ಬ್ಯಾಂಕ್ ಖಾತೆಯ ಮೂಲಕ ವರ್ಗಾವಣೆ ಮಾಡುವುದು ‘ಬೇನಾಮಿ ವಹಿವಾಟು’ ಎನಿಸಿಕೊಳ್ಳುತ್ತದೆ. ಇದರ ಅಡಿಯಲ್ಲಿ ಹಣ ಮುಟ್ಟುಗೋಲು ಮತ್ತು ಜೈಲು ಶಿಕ್ಷೆಗೆ ಅವಕಾಶವಿದೆ.

ಸ) ಭ್ರಷ್ಟಾಚಾರ ತಡೆ ಕಾಯ್ದೆ 1988: ರಾಜಕಾರಣಿಗಳು ಅಕ್ರಮವಾಗಿ ಹಣ ನೀಡುವುದು ಅಥವಾ ಪಡೆಯುವುದು ಮತ್ತು ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದಂತೆ ಸೆಕ್ಷನ್ 7, 11 ಮತ್ತು 13ರ ಅಡಿಯಲ್ಲಿ ಕೇಸ್ ದಾಖಲಿಸಬಹುದು.

ಸಾ) ಭಾರತೀಯ ನ್ಯಾಯ ಸಂಹಿತೆ (BNS) A:Criminal Conspiracy (ಸಂಚು): ಹಲವರು ಸೇರಿ ಹಣವನ್ನು ಕಾನೂನುಬಾಹಿರವಾಗಿ ವರ್ಗಾವಣೆ ಮಾಡಲು ಸಂಚು ರೂಪಿಸಿರುವುದು.

B: Falsification of Accounts (ಲೆಕ್ಕಪತ್ರ ವಂಚನೆ): ಸುಳ್ಳು ಲೆಕ್ಕಪತ್ರಗಳನ್ನು ಸೃಷ್ಟಿಸಿರುವುದಕ್ಕಾಗಿ ಕ್ರಮ ಜರುಗಿಸಬಹುದು. ಇಂತಹ ಘಟನೆಗಳ ಬಗ್ಗೆ ಈ ಕೆಳಗಿನ ಸಂಸ್ಥೆಗಳಿಗೆ ದೂರು ನೀಡಬಹುದು:

ಜಾರಿ ನಿರ್ದೇಶನಾಲಯ (ED): ಹಣ ವರ್ಗಾವಣೆ ಪ್ರಕರಣಗಳ ತನಿಖೆಗೆ.

ಆದಾಯ ತೆರಿಗೆ ಇಲಾಖೆ (Income Tax Department): ತೆರಿಗೆ ವಂಚನೆಯ ಬಗ್ಗೆ.

ಲೋಕಾಯುಕ್ತ: ರಾಜಕಾರಣಿಗಳ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿನಂತಿಸಿಕೊಳ್ಳಬಹುದು.

ಇದೆಲ್ಲವನ್ನು ಅರಿತ ಕೇಂದ್ರ ಸಚಿವರಾದ ಶ್ರೀ ಸೋಮಣ್ಣನವರು ದಾವಣಗೇರೆಯ ತಮ್ಮ ಬೀಗರಿಗೆ ಸಭೆ ನಡೆಯುವ ಸಂದರ್ಭದಲ್ಲಿಯೇ ಶಾಂತವಾಗಿರಲು ವಿನಂತಿಸಿಕೊಳ್ಳುತ್ತಿದ್ದದನ್ನು ಇಲ್ಲಿ ಮರೆಯುವಂತಿಲ್ಲ.

ಪಿಕ್ಚರ್ ಬಾಕಿ ಹೈ; ಏ ಜಸ್ಟ್ ಟ್ರೇಲರ್ ಹೈ.

IMG 20260430 WA0003
ಜಿ ಬಿ ಪಾಟೀಲ್‌
+ posts

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಜಿ ಬಿ ಪಾಟೀಲ್‌
ಜಿ ಬಿ ಪಾಟೀಲ್‌
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...