ಮತಹರಣದ ಮಹಾ ದುರಂತ: ನ್ಯಾಯಾಲಯದ ಮೆಟ್ಟಿಲೇರಿದ 34 ಲಕ್ಷ ಮಂದಿ, ಹಕ್ಕು ಸಿಕ್ಕಿದ್ದು 1468 ಜನರಿಗೆ

Date:

ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗವು ಇಂದು ತನ್ನ ಹೊಣೆಗಾರಿಕೆಯನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವದ ಕಗ್ಗೊಲೆಗೆ ನೇರ ಹೊಣೆಯಾಗಿದೆ. 89 ಲಕ್ಷ ಮತಗಳಿಗೆ ಕತ್ತರಿ ಹಾಕಿ, ನ್ಯಾಯ ಕೇಳಿ ಬಂದ 34 ಲಕ್ಷ ಜನರ ಪೈಕಿ ಕೇವಲ 1468 ಜನರಿಗೆ ಹಕ್ಕು ನೀಡಿ ಕೈತೊಳೆದುಕೊಂಡಿರುವ ಆಯೋಗದ ಈ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ

- Advertisement -

ಮಹಾ ಬಂಗಾಳ ಮತಹರಣ ಹಗರಣ ಪಟ್ಟಿಯಿಂದ ಕೈ ಬಿಟ್ಟಿದ್ದ 89 ಲಕ್ಷ ಮತದಾರರ ಪೈಕಿ 34 ಲಕ್ಷ ಮಂದಿ ಮೇಲ್ಮನವಿ ನ್ಯಾಯಮಂಡಳಿಗಳ ಕಟ್ಟೆಹತ್ತಿದ್ದರು. ಈ ಪೈಕಿ ಮಂಡಳಿಗಳು ಮೊದಲ ಹಂತದಲ್ಲಿ 134 ಮಂದಿ ಮತ್ತು ಎರಡನೆಯ ಹಂತದಲ್ಲಿ 1468 ಮಂದಿಗೆ ಮತ ಚಲಾವಣೆಗೆ ಅವಕಾಶ! ಇದು ಕೇವಲ ಅಂಕಿ-ಅಂಶಗಳಲ್ಲ, ಬದಲಾಗಿ ಭಾರತದ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಮೂಲಭೂತ ಆಶಯಗಳನ್ನೇ ಬುಡಮೇಲು ಮಾಡಿರುವ ಅಮಾನವೀಯ ಮತ್ತು ಪೂರ್ವಯೋಜಿತ ಷಡ್ಯಂತ್ರದ ಕಟು ವಾಸ್ತವ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಪಶ್ಚಿಮ ಬಂಗಾಳದಲ್ಲಿ ನಡೆದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಎಂಬುದು ಒಂದು ಸಾಂವಿಧಾನಿಕ ಪ್ರಕ್ರಿಯೆಯಾಗಿ ಉಳಿಯದೆ, ಅದೊಂದು ಸಾಂಸ್ಥಿಕ ದಬ್ಬಾಳಿಕೆಯಾಗಿ ಮಾರ್ಪಟ್ಟಿದೆ. ಬರೋಬ್ಬರಿ 89 ಲಕ್ಷ ಹೆಸರುಗಳನ್ನು ನಿರ್ದಾಕ್ಷಿಣ್ಯವಾಗಿ ಅಳಿಸಿಹಾಕಿದ ಆಯೋಗದ ಕ್ರಮವು ಅದರ ಕಾರ್ಯವೈಖರಿಯ ಪಾರದರ್ಶಕತೆಯನ್ನೇ ಬೆತ್ತಲಾಗಿಸಿದೆ. ಕೇವಲ ಕಾಗುಣಿತ ದೋಷಗಳು, ಉಪನಾಮ ಹೊಂದಿಕೆಯಾಗದಿರುವುದು ಮುಂತಾದ “ತಾರ್ಕಿಕ ವ್ಯತ್ಯಾಸ”ಗಳ (Logical discrepancy) ಕುಂಟುನೆಪವೊಡ್ಡಿ 27 ಲಕ್ಷ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿರುವುದು ಆಯೋಗದ ನಿರ್ಲಕ್ಷ್ಯ ಮತ್ತು ದಾರ್ಷ್ಟ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ತಮ್ಮ ಸಂವಿಧಾನದತ್ತ ಹಕ್ಕನ್ನು ಉಳಿಸಿಕೊಳ್ಳಲು 34 ಲಕ್ಷಕ್ಕೂ ಹೆಚ್ಚು ಜನ ಸಾಮಾನ್ಯರು ಸುಪ್ರೀಂ ಕೋರ್ಟ್ ಸೂಚಿತ ಮೇಲ್ಮನವಿ ನ್ಯಾಯಮಂಡಳಿಗಳ ಮೆಟ್ಟಿಲೇರಿ ನಿಂತಿದ್ದು ಆಯೋಗದ ಸಂಪೂರ್ಣ ವೈಫಲ್ಯಕ್ಕೆ ಹಿಡಿದ ಕನ್ನಡಿ. ತಾವು ಬದುಕಿದ್ದೇವೆ, ಇದೇ ಊರಿನಲ್ಲಿದ್ದೇವೆ, ನಮ್ಮ ಬಳಿ ಸೂಕ್ತ ದಾಖಲೆಗಳಿವೆ ಎಂದು ದೃಢೀಕರಿಸಲು ಲಕ್ಷಾಂತರ ಜನ ನ್ಯಾಯಕ್ಕಾಗಿ ಅಂಗಲಾಚುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲೇ ಒಂದು ಕಪ್ಪುಚುಕ್ಕೆ. ಆಯೋಗವು ಮತದಾರರ ಹಕ್ಕುಗಳನ್ನು ರಕ್ಷಿಸುವ ಬದಲು, ಅವರನ್ನೇ ಅಪರಾಧಿಗಳಂತೆ ನಡೆಸಿಕೊಂಡಿದೆ.

ನ್ಯಾಯಾಲಯದ ಮೊರೆ ಹೋದ ಆ 34 ಲಕ್ಷ ಮಂದಿಗೆ ಸಿಕ್ಕಿರುವ ನ್ಯಾಯವಾದರೂ ಎಂತಹದ್ದು? ಮೊದಲ ಹಂತದಲ್ಲಿ ಕೇವಲ 134 ಹಾಗೂ ಎರಡನೇ ಹಂತದಲ್ಲಿ ಕೇವಲ 1468 ಮಂದಿಗೆ ಮಾತ್ರ ನ್ಯಾಯಮಂಡಳಿಗಳು ಹಕ್ಕು ಮರುಸ್ಥಾಪಿಸಿವೆ. ಲಕ್ಷಾಂತರ ಅರ್ಜಿಗಳ ಎದುರು ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮತದಾನದ ಹಕ್ಕು ನೀಡಿ, ಉಳಿದವರ ಭವಿಷ್ಯವನ್ನು ಕಮರಿಸಲಾಗಿದೆ. ಈ 115:1 ಅನುಪಾತದ ಅಳಿಸುವಿಕೆ ಮತ್ತು ಮರುಸ್ಥಾಪನೆಯ ಅಂಕಿ-ಅಂಶವು ಆಯೋಗದ ಪೂರ್ವಗ್ರಹ ಪೀಡಿತ ನಿಲುವನ್ನು ಜಗಜ್ಜಾಹೀರು ಮಾಡಿದೆ.

ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ

‘ಮೃತಪಟ್ಟವರ ಮತ್ತು ಊರು ಬಿಟ್ಟವರ ಹೆಸರುಗಳನ್ನು ಮಾತ್ರ ಅಳಿಸಲಾಗಿದೆ’ ಎಂಬ ಚುನಾವಣಾ ಆಯೋಗದ ಸಮರ್ಥನೆ ಅಪ್ಪಟ ಸುಳ್ಳು ಎಂಬುದು ಇಲ್ಲಿ ರುಜುವಾತಾಗಿದೆ. ಒಂದು ವೇಳೆ ಆಯೋಗದ ವಾದವೇ ಸರಿ ಇದ್ದರೆ, ಬರೋಬ್ಬರಿ 34 ಲಕ್ಷ ಜೀವಂತ ಮನುಷ್ಯರು ಮೇಲ್ಮನವಿ ಸಲ್ಲಿಸಲು ಹೇಗೆ ಸಾಧ್ಯವಾಯಿತು? ಈ ಪ್ರಶ್ನೆಗೆ ಆಯೋಗದ ಬಳಿ ಉತ್ತರವಿಲ್ಲ. ವಾಸ್ತವದಲ್ಲಿ ಇದು ಮತದಾರರ ಪಟ್ಟಿಯ ಕೇವಲ ಶುದ್ಧೀಕರಣವಲ್ಲ, ಬದಲಾಗಿ ಲೆಕ್ಕಾಚಾರದ ಮತ್ತು ವ್ಯವಸ್ಥಿತವಾದ ‘ಮತಹರಣ’ ಹಗರಣವಾಗಿದೆ.

ಎರಡನೇ ಹಂತದ ಚುನಾವಣೆಗೂ ಮುನ್ನ ಸೇರ್ಪಡೆಯಾದ 1468 ಜನರ ಪೈಕಿ ಕೋಲ್ಕತ್ತಾ ದಕ್ಷಿಣದಲ್ಲಿ 677, ಕೋಲ್ಕತ್ತಾ ಉತ್ತರದಲ್ಲಿ 596 ಜನರಿಗೆ ಮಾತ್ರ ಅವಕಾಶ ಸಿಕ್ಕಿದೆ. ಇನ್ನುಳಿದ ಕ್ಷೇತ್ರಗಳ ಲಕ್ಷಾಂತರ ಜನರ ಪಾಡೇನು? ಆಯೋಗದ ಈ ಬೇಜವಾಬ್ದಾರಿಯಿಂದಾಗಿ ಅಸಂಖ್ಯಾತ ಅರ್ಹ ಮತದಾರರು ತಮ್ಮ ಪ್ರತಿನಿಧಿಗಳನ್ನು ಆರಿಸುವ ಹಕ್ಕಿನಿಂದ ವಂಚಿತರಾಗಿದ್ದಾರೆ. ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ಸೇರ್ಪಡೆಗೊಂಡಿದ್ದ ಆರು ಜನರನ್ನು ಮತ್ತೆ ಎರಡನೇ ಹಂತದಲ್ಲಿ ಕೈಬಿಟ್ಟಿರುವ ಆಯೋಗದ ನಡೆ ತೀರಾ ಖಂಡನೀಯ ಹಾಗೂ ಸಂಶಯಾಸ್ಪದ.

ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗವು ಇಂದು ತನ್ನ ಹೊಣೆಗಾರಿಕೆಯನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವದ ಕಗ್ಗೊಲೆಗೆ ನೇರ ಹೊಣೆಯಾಗಿದೆ. 89 ಲಕ್ಷ ಮತಗಳಿಗೆ ಕತ್ತರಿ ಹಾಕಿ, ನ್ಯಾಯ ಕೇಳಿ ಬಂದ 34 ಲಕ್ಷ ಜನರ ಪೈಕಿ ಕೇವಲ 1468 ಜನರಿಗೆ ಹಕ್ಕು ನೀಡಿ ಕೈತೊಳೆದುಕೊಂಡಿರುವ ಆಯೋಗದ ಈ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಬಂಗಾಳದ ಈ ಚುನಾವಣೆಯು ಚುನಾವಣಾ ಆಯೋಗದ ಘೋರ ವೈಫಲ್ಯದ ಸಂಕೇತವಾಗಿ ಇತಿಹಾಸದಲ್ಲಿ ದಾಖಲಾಗಲಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಗೆಲುವು

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ದ್ವೈವಾರ್ಷಿಕ ಚುನಾವಣೆ-2026ರ ಬೆಂಗಳೂರು...

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...