ʼಜಗತ್ತಿನ ಎಲ್ಲ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೆʼ ಎಂಬ ಭಾವದೊಂದಿಗೆ ನಾವು ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತ ಇದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಹೇಳಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಚರಿಸಲಾದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಹೇಶ ದೊಡಮನಿ, ಸಮಿಯುಲ್ಲಾ ಕಾಖಂಡಕಿ, ಮಹಾಂತೇಶ ಗಚ್ಚಿನಮನಿ, ಮಹೇಂದ್ರ ಸರಸಂಗಿ, ಸಲೀಮ ಸೌದಾಗರ ಮುಂತಾದ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
“ನಾವು ಐಷರಾಮಿ ಮನೆ ನಿರ್ಮಿಸಿ ಸಂತೋಷದಿಂದ ಜೀವಿಸುತ್ತಿರಲು ಕಾರಣ ಕಾರ್ಮಿಕರ ಬೆವರು. ನಮಗೆ ಬಗೆಬಗೆಯ ಆಹಾರವನ್ನು ಉಣಬಡಿಸುವವರು ಕಾರ್ಮಿಕರು, ನಿತ್ಯ ನಾವು ಓಡಾಡಲು ಬಳಸುವ ವಾಹನಗಳ ನಿರ್ಮಾಣದಲ್ಲಿ ಕಾರ್ಮಿಕರ ಪರಿಶ್ರಮವಿದೆ. ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ನಮ್ಮ ಜೀವವನ್ನು ರಕ್ಷಿಸುತ್ತಿರುವವರು ಕಾರ್ಮಿಕರು. ರೈಲ್ವೇ ಇಲಾಖೆ, ನೇಯ್ಗೆ, ಇಟ್ಟಿಗೆ ಕಾರ್ಖಾನೆಗಳಲ್ಲೂ ಕಾರ್ಮಿಕರ ಶ್ರಮವಿದೆ. ದೇಶ ನಿರ್ಮಾಣಕ್ಕಾಗಿ ಮಾರ್ಗದರ್ಶನ ಮಾಡುವ ಪತ್ರಿಕಾ ಮಾಧ್ಯಮ, ದೇಶವನ್ನು ಶುಚಿಯಾಗಿರಿಸುವ ಪೌರ ಕಾರ್ಮಿಕರು ಹೀಗೆ ಅನೇಕ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಸುಖ ಸಂತೋಷಕ್ಕಾಗಿ ಪ್ರಾರ್ಥನೆ ಮಾಡಬೇಕು” ಎಂದರು.
ಈ ಸುದಿ ಓದಿದ್ದೀರಾ? ಹಾವೇರಿ | ಪರಿಸರ ಸಂರಕ್ಷಣೆ ನಮ್ಮೆಲ್ಲರ ಮೂಲಭೂತ ಕರ್ತವ್ಯ: ನ್ಯಾಯಾಧೀಶ ಬಿರಾದಾರ ದೇವಿಂದ್ರಪ್ಪಾ ಎನ್. ಕರೆ
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಕಾಂಗ್ರೆಸ್ ಮುಖಂಡರಾದ ಎಫ್ಎಚ್ ಅಂಕಲಗಿ, ವಿದ್ಯಾವತಿ ಅಂಕಲಗಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಎಂ ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ ಬಕ್ಷಿ, ಜಿಲ್ಲಾ ಯುವ ಮಜ್ದುರ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ದುಲಪೀರಾಂ ಜಮಖಂಡಿ, ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಹನೀಫ ಮಕಾಂದಾರ, ಶರಣಪ್ಪ ಯಕ್ಕುಂಡಿ, ಅಬುಬಕರ ಕಂಬಾಗಿ, ಖ್ವಾಜಾ ಆರ್ ಬಾಗವಾನ, ಅಸಂಘಟಿತ ಕಾರ್ಮಿಕ ರಾಜ್ಯ ಕಾರ್ಯದರ್ಶಿಗಳಾದ ರಜಾಕಸಾಬ ಕಾಖಂಡಕಿ, ರಾಜ್ಯ ಒ ಬಿ ಸಿ ವಿಭಾಗದ ಕಾರ್ಯದರ್ಶಿ ಸತೀಶ ಅಡವಿ, ಶಿಡ್ಲಪ್ಪ ತಳಗೇರಿ, ಬಾಬಾಜಾನ ಬಾಗವಾನ, ಶರಣಕುಮಾರ ಹೊನಮೋಡೆ, ಲುಕ್ಮಾನ ಮುಲ್ಲಾ, ನತೀಬಶರೀಫ ಮುಲ್ಲಾ ಹಾಗೂ ಇತರ ಕಾರ್ಯಕರ್ತರು ಇದ್ದರು.




